ಬಿಗ್-ಬಿ ಕುರ್ಚಿಯಲ್ಲಿ ಭಾರತ ಕೂರುವುದೇ?
ಕೊರೊನಾದ ಎರಡನೇ ಅಲೆ ದಾಂಗುಡಿ ಇಟ್ಟಾಗ ಅದು ಕಣ್ಣೀರು ಹಾಕಿಸಿತ್ತು. ಪ್ರತಿಪಕ್ಷಗಳಿಗೆ ಅದು ಹಬ್ಬ. ಜನರ ಸಾವಿಗೆ ಮೋದಿಯೇ ಕಾರಣ ಎನ್ನುತ್ತಾ ಅನೇಕ ಕಡೆ ಆಮ್ಲಜನಕದ ಕೊರತೆ ಎಂಬ ಸುದ್ದಿಯನ್ನು ಕೃತಕವಾಗಿ ಹಬ್ಬಿಸಿ, ಕಂಗೆಟ್ಟ ಜನರ ಆರ್ತನಾದದ ಸೆರಗಿನಲ್ಲಿ ನಿಂತು ಮೊದಿಯ ಮೇಲೆ ಕಲ್ಲೆಸೆಯುತ್ತಿದ್ದರು. ಆ ಸಂದರ್ಭದಲ್ಲಿ ಉಂಟಾದ ಗೊಂದಲಗಳಿಂದ ಬೇಸತ್ತು ಮೋದಿ ಒತ್ತಡ ತಡೆಯಲಾಗದೇ ತಪ್ಪುಗಳ ಮೇಲೆ ತಪ್ಪು ಮಾಡುತ್ತಾರೆ ಎಂದು ಅವರು ಕನಸು ಕಾಣುತ್ತಲಿದ್ದರು. ಒಳಗಿರುವ ದೇಶಭಕ್ತಿ ಮತ್ತು ರಾಷ್ಟ್ರನಿರ್ಮಾಣದ ತುಡಿತದ ಸಾಮಥ್ರ‍್ಯ ಎಂಥದ್ದೆಂದರೆ ಯಾವಾಗಲೂ ಮಾಡುತ್ತಿದ್ದ ಕೆಲಸಕ್ಕಿಂತಲೂ ಹೆಚ್ಚು ಕೆಲಸ ಮಾಡಿ ಆ ಮನುಷ್ಯ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಅಚ್ಚರಿಗೆ ದೂಡಿಬಿಟ್ಟ. ಅಂದಿನ ದಿನಗಳಲ್ಲಿ ಮೋದಿಯವರ ಗುಜರಾತಿನ ಚಟುವಟಿಕೆಗಳನ್ನು ಆಡಿಕೊಳ್ಳುತ್ತಿದ್ದ ಕಾಂಗ್ರೆಸ್ಸಿಗರ ಪುಂಗಿ ಇಂದು ಪರಿಪೂರ್ಣ ನಿಂತೇಹೋಗಿದೆ. ಇದನ್ನು ನಾನು ಹೇಳಬೇಕಿಲ್ಲ, ಸ್ವತಃ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಪ್ರಕಟಿಸಿರುವ ವರದಿ ಹೇಳುತ್ತಿದೆ. ಅಮೇರಿಕಾ ನೆಲೆ ಹೊಂದಿರುವ ಈ ಡಾಟಾ ಇಂಟೆಲಿಜೆನ್ಸ್ ಕಂಪೆನಿ ಪ್ರತಿದಿನ ಹನ್ನೊಂದು ಸಾವಿರಕ್ಕೂ ಹೆಚ್ಚು ಜನರ ಸಂದರ್ಶನ ನಡೆಸುತ್ತದೆ. ಅಮೇರಿಕಾ ಒಂದರಲ್ಲಿಯೇ ನಾಲ್ಕು ಸಾವಿರಕ್ಕೂ ಹೆಚ್ಚು ದಾಖಲು ಮಾಡಿಕೊಂಡ ಜನರ ವಿಚಾರಣೆ ನಡೆಸುತ್ತದೆ. ಅದರ ಆಧಾರದ ಮೇಲೆಯೇ ಹೊರಬಿದ್ದಿರುವ ಈ ವರದಿಯ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನರ ಆದರಕ್ಕೆ ಒಳಗಾಗಿರುವ ನಾಯಕ ನರೇಂದ್ರಮೋದಿಯೇ. ೨೦೨೦ರ ಜನವರಿಯಿಂದ ೨೦೨೧ರ ನವೆಂಬರ್ನವರೆಗೂ ನರೇಂದ್ರಮೋದಿಯವರ ಮೆಚ್ಚುಗೆಯ ಅಂಶಗಳು ಜನರಿಂದ ಮಾಸಿಯೇ ಇಲ್ಲ. ಎರಡನೇ ಅಲೆಯ ವೇಳೆಗೆ ಸ್ವಲ್ಪ ಕುಸಿದಿರುವಂತೆ ಕಂಡಿತ್ತಾದರೂ ಈಗ ಮತ್ತೆ ಇದು ಶೇಕಡಾ ೭೦ನ್ನು ದಾಟಿದೆ. ಸ್ವತಃ ಅಮೇರಿಕಾದ ಅಧ್ಯಕ್ಷ ಬೈಡೆನ್ ಋಣಾತ್ಮಕವಾದ ರೇಟಿಂಗ್ ಅನ್ನು ಪಡೆದಿದ್ದು ಮೋದಿ ಜಾಗತಿಕವಾಗಿ ಸಿಕ್ಸರ್ಗಳ ಮೇಲೆ ಸಿಕ್ಸರ್ ಬಾರಿಸುತ್ತಲೇ ಇದ್ದಾರೆ. ಕಾಂಗ್ರೆಸ್ಸಿಗರದ್ದು ಈಗ ಒಂದೇ ಕಣ್ಣಿನ ರೋದನ!
ಎರಡನೇ ಅಲೆಯ ನಂತರ ಪ್ರತಿಪಕ್ಷಗಳಿಗಿದ್ದ ಏಕೈಕ ಮಂತ್ರ ಪೆಟ್ರೋಲ್-ಡೀಸೆಲ್ನ ಬೆಲೆ ಏರಿಕೆಯದ್ದು ಮಾತ್ರ. ಸಾಕಷ್ಟು ದಿನಗಳ ಕಾಲ ಅದರ ಕುರಿತಂತೆ ತಲೆಕೆಡಿಸಿಕೊಳ್ಳದ ಮೋದಿ ಜಿಎಸ್ಟಿ ತೆರಿಗೆ ಹಣ ಹೆಚ್ಚು-ಕಡಿಮೆ ಹಳೆಯದರ ಗರಿಷ್ಠ ಮಟ್ಟವನ್ನು ಮುಟ್ಟುತ್ತಿದ್ದಂತೆ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಜನರಿಗೆ ನೆಮ್ಮದಿ ತಂದಿದ್ದಾರೆ. ಮೋದಿಯಿಂದ ಈ ನಡೆಯನ್ನು ನಿರೀಕ್ಷಿಸದಿದ್ದ ಕಾಂಗ್ರೆಸ್ಸಿಗೆ ಈಗ ಧರ್ಮಸಂಕಟ. ಬಿಜೆಪಿ ಶಾಸಿತ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾಕಷ್ಟು ಇಳಿಕೆ ಕಂಡಿದ್ದು ಪ್ರತಿಪಕ್ಷಗಳ ಮೇಲೆ ಎಲ್ಲಿಲ್ಲದ ಒತ್ತಡ ಹಬ್ಬಿಬಿಟ್ಟಿದೆ. ಇಂಧನದ ಬೆಲೆ ಹೆಚ್ಚಾಗಿದೆ. ಅದಕ್ಕೆ ಮೋದಿಯೇ ಕಾರಣ ಎಂದು ಪ್ರಚಾರ ಮಾಡಿದ ಪ್ರತಿಪಕ್ಷಗಳಿಗೆ ಈಗ ಬಿಜೆಪಿಯೇತರ ರಾಜ್ಯಗಳಲ್ಲಿ ಅದು ಕಡಿತವಾಗದಿರುವುದಕ್ಕೆ ಪ್ರತಿಪಕ್ಷಗಳೇ ಕಾರಣ ಎಂಬ ಸಂದೇಶವನ್ನು ಸದ್ದಿಲ್ಲದೇ ರವಾನಿಸಿಬಿಟ್ಟಿದ್ದಾರೆ. ಈ ಒತ್ತಡದಿಂದ ಸುಧಾರಿಸಿಕೊಂಡು ಹೊರಬರಲು ಸಾಕಷ್ಟು ಕಾಲವೇ ಬೇಕು. ಹಾಗಂತ ಮೋದಿ ಇವಿಷ್ಟೇ ಚಟುವಟಿಕೆಗಳಲ್ಲಿ ಮೀಸಲಾಗಿಲ್ಲ. ಶಾಂತವಾಗಿ ಭಾರತವನ್ನು ಆಂತರಿಕವಾಗಿ ಕಟ್ಟುವ ಮತ್ತು ಹೊರ ಜಗತ್ತಿನಲ್ಲಿ ಭಾರತದ ಛವಿಯನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಜಾಗತಿಕ ನಾಯಕರು ಮೋದಿಯೊಂದಿಗೆ ನಡೆದುಕೊಂಡ ರೀತಿಯನ್ನು ಗಮನಿಸಿದರೆ ಭಾರತ ಅವರಿಗೆಲ್ಲ ಎಷ್ಟು ಅನಿವಾರ್ಯವಾಗಿದೆ ಎಂಬುದನ್ನು ಬಿಂಬಿಸುವಂತಿತ್ತು. ಮನಮೋಹನ ಸಿಂಗರೇ ಮಾತನಾಡಿಸಿದರೂ ತಲೆಕೆಡಿಸಿಕೊಳ್ಳದಿದ್ದ ನಾಯಕರೆಲ್ಲ ಮೋದಿಯ ಮೈಮೇಲೆ ಬಿದ್ದು ಮಾತನಾಡಿಸುತ್ತಾರೆ. ಇಂಗ್ಲೆಂಡಿನ ಪ್ರಧಾನಿಯಂತೂ ಜಾಗತಿಕ ವೇದಿಕೆಯ ಮೇಲೆ ಮೋದಿಯನ್ನು ಹೊಗಳಿದ ರೀತಿ ಎಂಥವನಿಗೂ ಅಚ್ಚರಿ ತರುವಂಥದ್ದು. ಇವೆಲ್ಲವೂ ಸುಮ್ಮ-ಸುಮ್ಮನೆ ಆಗುವಂಥದ್ದಲ್ಲ. ಅದರ ಹಿಂದಿನ ಪರಿಶ್ರಮ ಮತ್ತು ಪರದೆಯ ಹಿಂದೆ ಅವರು ಮಾಡಬಹುದಾಗಿರುವ ಕೂಟನೀತಿಗಳೂ ಕಾರಣವೇ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹೀಗೆ ಭಾರತ ಮುನ್ನಡೆದರೆ ಅಮೇರಿಕಾದ ಬಿಗ್ ಬಿ ಅಥವಾ ದೊಡ್ಡಣ್ಣ ಎಂಬ ಪಟ್ಟವನ್ನು ಕಸಿದುಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ. ಅತಿಶಯೋಕ್ತಿ ಎನಿಸಿದರೆ ಮುಂದೆ ಹೇಳಲಿರುವ ಕೆಲವು ಸಂಗತಿಗಳನ್ನು ಗಮನಿಸಿ.
ಮೊನ್ನಿನ ಅಂತರ್ರಾಷ್ಟ್ರೀಯ ಸಭೆಯಲ್ಲಿ ಹವಾಮಾನ ಬದಲಾವಣೆಯ ಕುರಿತಂತೆ ಜಗತ್ತಿನ ಗಮನ ಸೆಳೆದಿದ್ದು ಭಾರತವೇ. ೨೦೭೦ರ ವೇಳೆಗೆ ಜಗತ್ತನ್ನು ವಾಸಯೋಗ್ಯವಾಗಿಸುವ ಹೊಣೆಗಾರಿಕೆ ತಮ್ಮೆಲ್ಲರದ್ದೂ ಎಂದು ಹೇಳಿದ ಮೋದಿ ಅದಕ್ಕೆ ಮೊದಲ ಹೆಜ್ಜೆ ತಾವೇ ಇಡುವುದಾಗಿ ಮಾತುಕೊಟ್ಟು ಭಾರತದ ನಿಶ್ಚಿತ ಗುರಿಯನ್ನು ಘೋಷಿಸಿಬಿಟ್ಟರು. ಹಾಗಂತ ಇದು ಸೋತವನ ದನಿಯಂತಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಇಂಗಾಲವನ್ನು ಹೊರಹಾಕುವ ರಾಷ್ಟ್ರವಾದರೂ ಅದನ್ನೂ ಕಡಿತಗೊಳಿಸುವ ಭರವಸೆ ನೀಡುತ್ತಿದ್ದೇವೆ ಎಂಬುದನ್ನು ನೆನಪಿಸಿಯೇ ಈ ಕೆಲಸ ಮಾಡಲಾಯ್ತು. ಅಷ್ಟೇ ಅಲ್ಲ, ಮುಂದುವರೆದ ರಾಷ್ಟ್ರಗಳು ವಾತಾವರಣವನ್ನು ಹಾಳುಗೆಡವಿದ್ದರ ಪರಿಣಾಮವಾಗಿ ಸಣ್ಣ-ಪುಟ್ಟ ದ್ವೀಪ ರಾಷ್ಟ್ರಗಳು ದುಃಖಕಾರಿ ಸನ್ನಿವೇಶದಲ್ಲಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ ಮೋದಿ ಈ ರೀತಿಯ ಬಡ ದ್ವೀಪ ರಾಷ್ಟ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಭಾರತ ಹೊರಲಿದೆ ಎಂದು ಹೇಳಲು ಮರೆಯಲಿಲ್ಲ. ಇದು ವಸುಧೈವ ಕುಟುಂಬಕಂ ಎಂಬ ಭಾರತದ ನೀತಿಗೆ ಪೂರಕವಾಗಿಯೇ ಇದೆ. ವಾಸ್ತವವಾಗಿ ಸಿರಿವಂತ ರಾಷ್ಟ್ರಗಳು ಈ ಬಡ ರಾಷ್ಟ್ರಗಳ ಕುರಿತಂತೆ ಕಾಳಜಿ ವಹಿಸಬೇಕಿತ್ತು. ಮೋದಿ ಅದನ್ನು ತನ್ನ ಹೆಗಲಿಗೆ ವರ್ಗಾಯಿಸಿಕೊಳ್ಳುವುದರ ಮೂಲಕ ಭಾರತದ ದೃಷ್ಟಿ ಎತ್ತಲಿದೆ ಎಂಬುದನ್ನು ಸೂಚ್ಯವಾಗಿ ವಿವರಿಸಿದರು. ಹಾಗಂತ ಇದು ಬರಿ ಶಾಂತಿಯ ಕಾಲದ ಕೆಲಸವೇನೂ ಅಲ್ಲ. ಬುದ್ಧನ ಶಾಂತಿಮಂತ್ರವನ್ನು ಜಪಿಸುತ್ತಲೇ ಮೋದಿ ಕೃಷ್ಣನ ಯುದ್ಧತಂತ್ರವನ್ನು ತಮ್ಮದಾಗಿಸಿಕೊಂಡುಬಿಟ್ಟಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ತೆಕ್ಕೆಗೆ ಹಾಕಿಕೊಂಡ ನಂತರ ಪಾಕಿಸ್ತಾನದ ಮೆರೆದಾಟ ಕೈಮೀರಿ ಹೋಗಿತ್ತು. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಸಹನೆಯ ಮಿತಿ ತಪ್ಪಿದೆ. ಈಗ ಇರುವ ಪರಿಹಾರ ಎರಡೇ. ಮೊದಲನೆಯದು ನೇರ ಯುದ್ಧಕ್ಕಿಳಿಯುವುದು ಅಥವಾ ಪಾಕಿಸ್ತಾನವನ್ನು ಒಳಗಿನಿಂದಲೇ ಬೆಂದು, ಬಸವಳಿಯುವಂತೆ ಮಾಡುವುದು. ಎರಡಕ್ಕೂ ಬೇಕಾದ ಸಿದ್ಧತೆ ಭಾರತ ಮಾಡುತ್ತಿದೆ. ಕಾಕತಾಳೀಯವೆನಿಸಿದರೂ ಕಳೆದ ಕೆಲವಾರು ದಿನಗಳಿಂದ ಪಾಕಿಸ್ತಾನದೊಳಗೆ ನೆಮ್ಮದಿಯೇ ಇಲ್ಲ. ಅಲ್ಲಿನ ತೆಹರೀಕ್-ಎ-ಲಬ್ಬಾಯ್ಕ್ ಪಾಕಿಸ್ತಾನ ದಿನ ಬೆಳಗಾದರೆ ಸರ್ಕಾರದ ವಿರುದ್ಧ ಮುರಕೊಂಡು ಬೀಳುತ್ತಿದೆ. ಅದರ ಒತ್ತಡಕ್ಕೆ ಮಣಿದು ಅನೇಕ ಬಂಧಿತ ಜಿಹಾದಿ ಸೈನಿಕರನ್ನು ಪಾಕಿಸ್ತಾನ ಸರ್ಕಾರ ಬಿಡಬೇಕಾಗಿ ಬಂದಿದೆ.
ಯಾವ ತಾಲಿಬಾನೀ ಸರ್ಕಾರದ ಅಹಂಕಾರದ ಮೇಲೆ ಭಾರತವನ್ನು ಅಲುಗಾಡಿಸುವ ಮಾತುಗಳನ್ನು ಪಾಕಿಸ್ತಾನ ಆಡುತ್ತಿತ್ತೋ ಈಗ ಅದೇ ತಾಲಿಬಾನ್ ಪಾಕಿಸ್ತಾನಕ್ಕೆ ಮುಳುವಾಗುವಂತೆ ಕಾಣುತ್ತಿದೆ. ಏಕಾಏಕಿ ಇವೆಲ್ಲ ಆಗಲು ಕಾರಣವೇನು? ಯಾರಿಗೂ ಅಂದಾಜಾಗುತ್ತಿಲ್ಲ. ಆದರೆ ಒಂದಂತೂ ಸತ್ಯ. ಪಾಕಿಸ್ತಾನ ತಂಟೆ ಮಾಡಲು ಬಂದರೆ ಅದನ್ನು ನಾಲ್ಕು ಚೂರು ಮಾಡುವುದು ನಿಶ್ಚಿತ ಎಂದು ಹೇಳಿದ್ದ ಅಜಿತ್ ದೋವೆಲ್ರ ಮಾತನ್ನು ನೆನಪಿಸಿಕೊಳ್ಳಬೇಕು ಅಷ್ಟೇ! ಪಾಕಿಸ್ತಾನದ ವಿರುದ್ಧ ಯುದ್ಧಕ್ಕೂ ಭಾರತ ಪೂರ್ಣ ತಯಾರಾಗಿರುವಂತೆ ಕಾಣುತ್ತದೆ. ತೈವಾನಿನ ಮೇಲೆ ಏರಿಹೋಗಿ ಅದನ್ನು ನುಂಗಿ ನೀರ್ಕುಡಿಯಬೇಕೆಂಬ ಚೀನಾದ ಹೆಬ್ಬಯಕೆಯನ್ನು ತಡೆಯಲು ಸದ್ಯಕ್ಕೆ ಸಾಧ್ಯವಿರೋದು ಭಾರತಕ್ಕೆ ಮಾತ್ರ. ಇನ್ನೆಲ್ಲ ರಾಷ್ಟ್ರಗಳೂ ಮನಸ್ಸು ಮಾಡಿದರೂ ಭೌಗೋಳಿಕವಾಗಿ ಕೈಗೆ ಸಿಗದಷ್ಟು ದೂರದಲ್ಲಿವೆ. ಭಾರತ ಚೀನಾಕ್ಕೆ ಹೊಂದಿಕೊಂಡ ತನ್ನ ಗಡಿಯೊಳಗೆ ಚಟುವಟಿಕೆಯನ್ನು ತೀವ್ರಗೊಳಿಸಿ ಅದರ ಗಮನ ಅತ್ತ ಹರಿಯದಂತೆ ಮಾಡುವ ಸಾಮಥ್ರ‍್ಯ ಹೊಂದಿದೆ. ಮೊದಲೆಲ್ಲ ಚೀನಾ ಈ ಕೆಲಸ ಮಾಡುತ್ತಿತ್ತು. ಭಾರತ ಪಾಕಿಸ್ತಾನದ ಮೇಲೆ ಏರಿ ಹೋಗುವಂತೆ ಕಂಡಾಗಲೆಲ್ಲ ಅರುಣಾಚಲ ಪ್ರದೇಶದಲ್ಲಿ ಕಿರಿಕಿರಿ ಶುರುಮಾಡುತ್ತಿತ್ತು. ಈ ಬಾರಿ ಆ ಕೆಲಸವನ್ನು ನಾವೇ ಮಾಡುತ್ತಿದ್ದೇವೆ. ಇತ್ತೀಚೆಗೆ ಪ್ರಯೋಗ ಮಾಡಿದ ಖಂಡಾಂತರ ಕ್ಷಿಪಣಿಗಳು ಈ ಹಿನ್ನೆಲೆಯಲ್ಲಿ ಬಹು ಮಹತ್ವವಾದವು. ಗಡಿರಾಜ್ಯಗಳಿಗೆ ಉಪರಾಷ್ಟ್ರಪತಿಗಳು ಭೇಟಿಕೊಟ್ಟಿದ್ದು ಈ ಹಿನ್ನೆಲೆಯಿಂದ ಬಹು ಮಹತ್ವದ ಸಂಗತಿ. ಸ್ವತಃ ನರೇಂದ್ರಮೋದಿ ಪಾಕಿಸ್ತಾನಕ್ಕೆ ಹೊಂದಿಕೊಂಡ ಗಡಿಯಲ್ಲಿ ದೀಪಾವಳಿ ಆಚರಿಸುವ ಮೂಲಕ ಕೊಟ್ಟದ್ದು ಗಂಡುಗಲಿತ್ವದ ಸಂದೇಶ. ಮನೆಯಿಂದ ಹೊರಬರಲು ಹೆದರುತ್ತಿದ್ದ ಹಿಂದಿನ ಕೆಲವು ಪ್ರಧಾನಿಗಳು, ಸಚಿವರುಗಳ ಮಧ್ಯೆ ಮೋದಿ ಬಲು ವಿಭಿನ್ನ.
ಮೋದಿಯ ಸಾಹಸಗಾಥೆ ಇಲ್ಲಿಗೇ ನಿಲ್ಲುವುದಿಲ್ಲ. ಕೆಲವಾರು ತಿಂಗಳುಗಳ ಹಿಂದೆ ಆಟದ ಸಾಮಾನುಗಳಲ್ಲಿ ಭಾರತೀಯತೆಯನ್ನು ತುಂಬುವ ಕರೆಯನ್ನು ಅವರು ಕೊಟ್ಟಿದ್ದು ನಿಮಗೆ ನೆನಪಿರಬೇಕು. ಇಂದು ಅದರ ಪ್ರಯತ್ನವಾಗಿ ಚಟುವಟಿಕೆಗಳು ಗರಿಗೆದರಿಬಿಟ್ಟಿವೆ. ಭಾರತೀಯ ಪೌರಾಣಿಕ ಚಿತ್ರಣ ಕೊಡಬಲ್ಲ ಆಟಿಕೆಗಳು ತಯಾರಾಗಿ ಮಾರುಕಟ್ಟೆಗೆ ಬರುತ್ತಿವೆ. ಮುಂದಿನ ಯುಗದ ಅವಶ್ಯಕತೆಗಳಿಗೆಂದೇ ಮೋದಿ ಅದಾಗಲೇ ೨೨ ಜನರ ತಂಡವೊಂದನ್ನು ನಿಮರ್uಟಿಜeಜಿiಟಿeಜಣ ಮಾಡಿ ೬ಜಿ ತಂತ್ರಜ್ಞಾನದ ಕುರಿತಂತೆ ತೀವ್ರಗತಿಯ ಕೆಲಸವನ್ನು ಆರಂಭಿಸಿಬಿಟ್ಟಿದ್ದಾರೆ. ೫ಜಿ ತರಂಗಗಳನ್ನು ಹರಾಜು ಕೂಗಿ ಭಾರತವನ್ನು ಅದಕ್ಕೆ ಸಿದ್ಧಗೊಳಿಸುವಲ್ಲಿ ಹೆಣಗಾಡುತ್ತಿರುವ ನಾವು ಅದಾಗಲೇ ೬ಜಿ ತಂತ್ರಜ್ಞಾನದ ಕುರಿತಂತೆ ಆಲೋಚನೆ ಆರಂಭಿಸಿಬಿಟ್ಟಿರುವುದು ಮೆಚ್ಚಬೇಕಾದ ಸಂಗತಿಯೇ. ಇದು ಬರಲಿರುವ ದಿನಗಳಲ್ಲಿ ನಾವು ನೇತೃತ್ವ ವಹಿಸಬೇಕಾಗಿರುವ ರೀತಿ ಎಂಥದ್ದು ಎಂಬುದನ್ನು ನಿಸ್ಸಂಶಯವಾಗಿ ನಿರ್ಧರಿಸಲಿದೆ. ಮೋದಿಯವರು ಜಾರಿಗೆ ತಂದಿರುವ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ ಯೋಜನೆ ನಿಜಕ್ಕೂ ಮಹತ್ವಪೂರ್ಣವಾದ್ದು. ಅದಾಗಲೇ ಅನೇಕ ನಿರ್ಧಾರಿತ ಗುರಿಗಳನ್ನು ಈ ಯೋಜನೆಯಡಿ ಹಾಕಿಕೊಂಡಿರುವ ಸರ್ಕಾರ ಏರ್ ಕಂಡೀಷನರ್, ಫ್ರಿಡ್ಜ್, ವಾಷಿಂಗ್ ಮೆಷಿನ್ಗಳೇ ಮೊದಲಾದ ವೈಟ್ ಗೂಡ್ಸ್ಗಳಲ್ಲದೇ ಎ???ಡಿ ಲೈಟುಗಳಿಗಾಗಿ ಈ ಯೋಜನೆಯನ್ನು ವಿಸ್ತರಿಸಿದೆ. ಈ ಯೋಜನೆಯ ಪ್ರಕಾರ ನಿರ್ಧಾರಿತ ಅವಧಿಯೊಳಗೆ ಉತ್ಪಾದನೆಯನ್ನು ಮಾಡಿ ಮುಗಿಸಿದರೆ ಅದಕ್ಕೆ ಸಾಕಷ್ಟು ರಿಯಾಯಿತಿಯನ್ನು ಸರ್ಕಾರವೇ ನೀಡುತ್ತದೆ. ಇದು ಆಯಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರುವಂತೆ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಯಾವುದನ್ನು ಇಷ್ಟು ದಿನ ಚೀನಾದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತೋ ಈಗ ಭಾರತವೇ ಅದನ್ನು ಉತ್ಪಾದಿಸಲಿದೆ. ಚೀನಾವನ್ನು ಈ ವಿಚಾರಗಳಲ್ಲಿ ಸ್ಥಾನಪಲ್ಲಟಗೊಳಿಸುವುದು ಸುಲಭವಲ್ಲವಾದರೂ ಈ ವೇಗದಲ್ಲಿ ಹೋದರೆ ಅಸಾಧ್ಯವಂತೂ ಅಲ್ಲ. ಅದಾಗಲೇ ಶ್ರೀಲಂಕಾ ಚೀನಾದ ರಸಗೊಬ್ಬರಗಳಲ್ಲಿ ವಿಷಕಾರಿ ಅಂಶಗಳಿವೆ ಎಂಬುದನ್ನು ಅರಿತು ಕೊನೆಯ ಕ್ಷಣದಲ್ಲಿ ದೊಡ್ಡದ್ದೊಂದು ಸರಕನ್ನು ನಿರಾಕರಿಸಿಬಿಟ್ಟಿದೆ. ಆಗ ಅದರ ನೆರವಿಗೆ ಬಂದಿದ್ದು ಸ್ವತಃ ಭಾರತವೇ. ಭಾರತೀಯ ವಾಯುಸೇನೆ ಒಂದು ಲಕ್ಷ ಕೆಜಿಯಷ್ಟು ನ್ಯಾನೊ ಸಾರಜನಕ ರಸಗೊಬ್ಬರಗಳನ್ನು ಏರ್ಲಿಫ್ಟ್ ಮಾಡಿ ಶ್ರೀಲಂಕಾಕ್ಕೆ ಮುಟ್ಟಿಸಿದೆ. ಇದು ಚೀನಾದ ವಿಸ್ತರಣಾ ನೀತಿಗೆ ಬಲುದೊಡ್ಡ ಹೊಡೆತವೇ! ಇಷ್ಟೇ ಅಲ್ಲದೇ ಇತ್ತೀಚೆಗೆ ಚೀನಾದ ಕಸ್ಟಮ್ ವಿಭಾಗ ಕೊಟ್ಟಿರುವ ಹೇಳಿಕೆಯನ್ನು ಒಪ್ಪುವುದೇ ಆದರೆ ೩೨ಕ್ಕೂ ಹೆಚ್ಚು ರಾಷ್ಟ್ರಗಳು ಚೀನಾಕ್ಕೆ ಕೊಟ್ಟಿದ್ದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಿವೆ. ಈ ವಿಶೇಷ ಸ್ಥಾನಮಾನದ ಆಧಾರದ ಮೇಲೆ ಚೀನಾಕ್ಕೆ ತೆರಿಗೆ ರಹಿತ ವ್ಯಾಪಾರ ಮಾಡುವ ಅವಕಾಶಗಳಿದ್ದವು. ಇನ್ನು ಮುಂದೆ ಇರಲಾರದು. ೨೭ ಯುರೋಪಿಯನ್ ಯುನಿಯನ್ ರಾಷ್ಟ್ರಗಳು ಈ ಸಾಲಿನಲ್ಲಿರುವುದು ಚೀನಾದ ಪಾಲಿಗೆ ಒಳ್ಳೆ ಸುದ್ದಿಯಲ್ಲ.
ಇದರೊಟ್ಟಿಗೆ ನರೇಂದ್ರಮೋದಿಯವರು ಅಹ್ಮದಾಬಾದ್ನಿಂದ ಮುಂಬೈನವರೆಗೂ ಬುಲೆಟ್ ಟ್ರೆöÊನಿನ ನಿರ್ಮಾಣಕ್ಕೆ ಬೇಕಾದ ತಯಾರಿಯನ್ನು ತೀವ್ರಗೊಳಿಸಿರುವುದು ಪ್ರತಿಪಕ್ಷಗಳಿಗೆ ಬೆಂಕಿ ಹಚ್ಚಿಕೊಳ್ಳಲು ಸಾಕು. ಚೆನ್ನಾಗಿ ಉರಿಯಲೆಂದು ಪೆಟ್ರೋಲ್ ಬೇರೆ ಕಡಿಮೆ ಬೆಲೆಗೆ ಕೊಡುತ್ತಿದ್ದಾರಲ್ಲ, ಸಹಿಸಿಕೊಳ್ಳುವುದು ಹೇಗೆ? ಒಂದನ್ನಂತೂ ನೀವು ಗಮನಿಸಲೇಬೇಕು ಎರಡನೇ ಅಲೆ ಎಂದು ಬೊಬ್ಬಿಟ್ಟರು, ಮೋದಿಯೇ ಕಾರಣ ಎಂದರು. ಭಾರತ ಆ ಅಲೆಯನ್ನು ಗೆದ್ದಾಗ ಅನಿವಾರ್ಯವಾಗಿ ಮೋದಿಯೇ ಗೆದ್ದರು ಎಂದು ಒಪ್ಪಿಕೊಳ್ಳಬೇಕಾಯ್ತು. ಪೆಟ್ರೋಲ್ ಬೆಲೆ ಏರಿಕೆಗೆ ಮೋದಿಯೇ ಕಾರಣ ಎಂದರು, ಅದು ಇಳಿದಾಗ ಅನಿವಾರ್ಯವಾಗಿ ಅದಕ್ಕೂ ಮೋದಿಯೇ ಕಾರಣ ಎಂದು ಒಪ್ಪಿಕೊಳ್ಳಬೇಕಾಯ್ತು. ನಿಂದಕರು ಮೋದಿಗೆಂದು ರಾತ್ರಿ ಹಳ್ಳ ತೋಡಿ, ಬೆಳಿಗ್ಗೆ ಹೋಗಿ ತಾವೇ ಹಳ್ಳದೊಳಗೆ ಬೀಳುತ್ತಿದ್ದಾರೆ. ಅವರು ಗಲಾಟೆ ಮಾಡುವ ಪ್ರತಿ ಸಂಗತಿಯೂ ಮೋದಿಯ ಪಾಲಿಗೆ ಹೂವಿನ ಹಾಸಿಗೆಯಾಗುತ್ತಿದೆ. ನೀವು ಒಪ್ಪಿಕೊಳ್ಳಿ, ಬಿಡಿ. ಮೋದಿ ಗೆಲ್ಲುತ್ತಾರೆಂದರೆ ಭಾರತ ಗೆಲ್ಲುತ್ತದೆ ಎಂದೇ ಅರ್ಥ.
No comments:
Post a Comment