`ಶಿವಲಿಂಗ ೧೪೩' ಬಗ್ಗೆ ಎಕ್ಸೈಟ್‌ಮೆಂಟ್‌ಗಿಂತ ಹೆಚ್ಚು ಭಯವಿದೆ: ಮಾನ್ವಿತಾ ಕಾಮತ್
ಕೆಂಡಸಂಪಿಗೆ ಮತ್ತು ಟಗರು ಚಿತ್ರಗಳ ನಂತರ ಸ್ವಲ್ಪ ದಿನಗಳ ಕಾಲ ಸ್ಯಾಂಡಲ್ ವುಡ್ ನಿಂದ ದೂರವಿದ್ದ ನಟಿ ಮಾನ್ವಿತಾ ಕಾಮತ್ ಅವರ ಮುಂದಿನ ಚಿತ್ರ ಶಿವ ೧೪೩ ರಿಲೀಸ್ ಗೆ ರೆಡಿಯಾಗಿದೆ. ಅನಿಲ್ ಕುಮಾರ್ ನಿರ್ದೇಶನದ, ಜಯಣ್ಣ ಫಿಲಂಸ್ ನಿರ್ಮಾಣದ ಈ ಚಿತ್ರ ಈ ವಾರ ತೆರೆಗೆ ಅಪ್ಪಳಿಸಲಿದೆ.ನನ್ನ ವಿಷಯದಲ್ಲಿ ಚಿತ್ರೀಕರಣದ ಸಮಯದಲ್ಲಿ ಇದ್ದ ಆತಂಕ ಚಿತ್ರದ ಬಿಡುಗಡೆಗೂ ವಿಸ್ತರಿಸುತ್ತದೆ ಎಂದನಿಸುತ್ತಿದೆ. ಕೋವಿಡ್-೧೯ ಪ್ರಪಂಚದ ಮೇಲೆ ಪ್ರಭಾವ ಬೀರಿದ್ದರೂ, ಅದು ನನಗೆ ಬಹಳಷ್ಟು ಕಲಿಸಿದೆ. ಕಳೆದ ಎರಡು ವರ್ಷಗಳು ನನಗೆ ಕಲಿಕೆಯ ಪಾಠ. ಅದೃಷ್ಟವಶಾತ್, ಈ ಸಮಯದಲ್ಲಿ ನಾನು ನನ್ನ ಅಧ್ಯಯನವನ್ನು ಪೂರ್ಣಗೊಳಿಸಲು ತೆಗೆದುಕೊಂಡಿದ್ದೇನೆ ಮತ್ತು ಪರ್ಯಾಯವಾದದ್ದನ್ನು ಯೋಚಿಸಲು ಇದು ನನಗೆ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ.
ಅಂತಿಮವಾಗಿ ಶಿವ ೧೪೩ ಚಿತ್ರ ಬಿಡುಗಡೆಯಾಗುತ್ತದೆ. ಹೇಗನಿಸುತ್ತಿದೆ? ಶಿವ ೧೪೩ ಬಗ್ಗೆ ಎಕ್ಸೈಟ್ ಮೆಂಟ್ ಗಿಂತ ಹೆಚ್ಚಾಗಿ ಭಯವೂ ಇದೆ. ಅತ್ಯಂತ ಬೋಲ್ಡ್ ಪಾತ್ರದಲ್ಲಿ ಮಾಡಿದ್ದೇನೆ. ತೆರೆಯ ಮೇಲೆ ನನನ್ನು ನೋಡಲು ಕಾಯುತ್ತಿದ್ದೇನೆ. ನನ್ನ ಪಾತ್ರದ ಬಗ್ಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡುವ ಕುತೂಹಲವಿದೆ. ಕನ್ನಡ ಇಂಡಸ್ಟ್ರಿ ಇಂತಹ ಬೋಲ್ಡ್ ಹಿರೋಯಿನ್ ನೋಡಿಲ್ಲದ ಕಾರಣ ಭಯವೂ ಇದೆ. ಬೋಲ್ಡ್ ಅಂದರೆ ಎಕ್ಸ್ ಪೋಸ್ ಮಾತ್ರವಲ್ಲ, ವರ್ತನೆ ಕೂಡಾ ಆಗಿರುತ್ತದೆ ಎಂದರು.
ಸ್ಯಾಂಡಲ್ ವುಡ್ ನಿಂದ ಬರುವ ಅನೇಕ ಹಿರೋಯಿನ್ ಗಳು ಮುಂದೆ ಬಬ್ಲಿ ಗರ್ಲ್ ಇಮೇಜ್ ಬಯಸುತ್ತಾರೆ. ಆದರೆ, ೧೪೩ ಶಿವದಲ್ಲಿ ಎಲ್ಲರೂ ದ್ವೇಷಿಸುತ್ತಾರೆ ಎಂದು ನಿರೀಕ್ಷಿಸಿದ್ದೇನೆ. ಒಂದು ವೇಳೆ ಪ್ರೇಕ್ಷಕರು ನನನ್ನು ದ್ವೇಷಿಸುವಂತೆ ಮಾಡಿದರೆ, ನಂತರ ಪಾತ್ರಕ್ಕೆ ನ್ಯಾಯ ನೀಡಿದ ಪ್ರಯತ್ನವಾಗಲಿದೆ. ಮುಂದಿನ ದಿನಗಳಲ್ಲಿ ದ್ವೇಷವನ್ನು ಅಳಿಸುವುದು ಸವಾಲಿನ ಕೆಲಸವಾಗಿರುತ್ತದೆ. ಆದ್ದರಿಂದ ನನ್ನ ಹೆಸರಿನೊಂದಿಗೆ 'ಕೆಟ್ಟ ಟ್ಯಾಗ್ ಅಂಟಿಕೊಳ್ಳುವ ಸಾಧ್ಯತೆಯಿದೆ. ಶಿವ ೧೪೩ ತೆಲುಗಿನ ಆರ್ ಎಕ್ಸ್ ೧೦೦ ಸೂಪರ್ ಹಿಟ್ ಚಿತ್ರದ ರಿಮೇಕ್ ಆಗಿದೆ. ಆದ್ದರಿಂದ ಪಾಯಲ್ ರಜಪೂತ್ ಜೊತೆಗೆ ಹೋಲಿಕೆಯಿಂದಾಗಿ ಮಾನ್ವಿತ್ ಆತಂಕಗೊಂಡಿದ್ದಾರೆ.
ಪ್ರೇಕ್ಷಕರು ಸಿನಿಮಾ ನೋಡಿದ ನಂತರ, ನಾನು ಯಾರನ್ನೂ ಅನುಕರಿಸಿಲ್ಲ ಎಂಬುದು ಗೊತ್ತಾಗಲಿದೆ. ವಿಭಿನ್ನವಾದ ಪಾತ್ರವಾಗಿದೆ. ಶಿವ ೧೪೩ ರಾಜ್ ಕುಮಾರ್ ಮೊಮ್ಮಗ ಧೀರನ್ ರಾಮ್ ಕುಮಾರ್ ಅವರ ಚೊಚ್ಚಲ ಚಿತ್ರವಾಗಿದೆ. ಕೆಂಡಸಂಪಿಗೆ ಚಿತ್ರದ ಮುಹೂರ್ತ ಸಮಯದಲ್ಲಿ ಅವರ ಫೋಟೋ ನೋಡಿದ್ದೆ. ಹಿರೋ ಆಗುವ ಎಲ್ಲಾ ಅರ್ಹತೆಗಳು ಅವರಿಗಿವೆ ಎಂದೆನಿಸಿತು. ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದರು. ಶಿವಲಿಂಗ ೧೪೩ ಪಾತ್ರಗಳು ಭಿನ್ನ ರೀತಿಯಲ್ಲಿ ನಮಗೆ ಹೇಳುತ್ತವೆ. ಪಾತ್ರ ನಿರ್ವಹಣೆಯಲ್ಲಿ ಅರ್ಧದಷ್ಟು ಯಶಸ್ವಿಯಾದರೂ ನನಗೆ ಸಂತೋಷವಾಗುತ್ತದೆ. ನನ್ನ ಇಮೇಜ್ ಸುಧಾರಿಸಿಕೊಳ್ಳಲು ಪ್ಲಾನ್ ಮಾಡಬಹುದು ಎಂದು ಹೇಳುವ ಮಾನ್ವಿತ ಅವರ ರಾಜಸ್ಥಾನ ಡೈರಿಸ್ ಚಿತ್ರ ಕೂಡಾ ಸದ್ಯದಲ್ಲೇ ರಿಲೀಸ್ ಆಗಲಿದ್ದು, ಅದನ್ನು ಎದುರು ನೋಡುತ್ತಿದ್ದಾರೆ.
No comments:
Post a Comment