ಐತಿಹಾಸಿಕವಾಗಿ ಯಹೂದಿಗಳು ವಿಶ್ವದೆಲ್ಲೆಡೆ ಮಾಧ್ಯಮ, ಹಣಕಾಸು ವ್ಯವಹಾರ ಮತ್ತು ರಾಜಕೀಯ ವಲಯಗಳಲ್ಲಿ ಪ್ರಭಾವಗಳಿಸಿದ್ದ ಒಂದು ಜನಾಂಗ. ಅದೇ ಯೂರೋಪಿಯನ್ ಕ್ರಿಶ್ಚಿಯನ್ನರಿಗೆ ಅರಗಿಸಿಕೊಳ್ಳಲಾರದ ವಿಷಯ. ಹೇಗಾದರೂ ಮಾಡಿ ಇವರನ್ನು ಯೂರೋಪಿನಿಂದ ಹೊಡೆದೋಡಿಸುವ ಹುನ್ನಾರ ಅಲ್ಲಲ್ಲಿ ನಡೆಯುತ್ತಲೇ ಇತ್ತು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಹಿಟ್ಲರ್ ಯಹೂದಿಗಳ ಮೇಲೆ ನರಮೇಧ ಯಾಗವನ್ನೇ ನಡೆಸಿಬಿಟ್ಟ. ಹೀಗೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಯಾರೂ ಅವರ ಸಹಾಯಕ್ಕೆ ಮುನ್ನುಗ್ಗಲಿಲ್ಲ. ಅವರಿಗೆ ತಮ್ಮದೇ ಆದ ದೇಶವೆನ್ನುವುದೇ ಇರಲಿಲ್ಲ. ಅವರ ದೇಶ ಇಸ್ರೇಲ್.. ಅಸ್ಥಿತ್ವಕ್ಕೆ ಬಂದದ್ದು ೧೯೪೮ರಲ್ಲಿ. ಅಷ್ಟರಲ್ಲಾಗಲೇ ಸುಮಾರು ೬೦ ಲಕ್ಷ ಯಹೂದಿಗಳನ್ನು ಜರ್ಮನಿಯಲ್ಲಿ ಮತ್ತು ಜರ್ಮನಿಯ ಆಡಳಿತಕ್ಕೊಳಪಟ್ಟ ಇತರೆ ಯೂರೋಪಿನ ದೇಶಗಳಲ್ಲಿ ಕೊಲ್ಲಲಾಯಿತು. ೧೯೪೮ ರಲ್ಲಿ ಇಸ್ರೇಲಿಗೆ ಬಂದ ಯಹೂದಿಗಳು ಪ್ರತೀಕಾರದ ಸೇಡಿನಿಂದ ಕುದಿಯುತ್ತಿದ್ದ ಎರಡನೇ ತಲೆಮಾರಿನವರು.
ಅಸಲಿಗೆ ಇಸ್ರೇಲೆಂದರೆ ಎಷ್ಟಿದೆ? ಬೆಂಗಳೂರಿನಿಂದ ದಾವಣಗೆರೆಯಷ್ಟು, ಕರ್ನಾಟಕದ ಮೂರನೇ ಒಂದು ಭಾಗ! ಆದರೆ ಅದನ್ನು ಸುತ್ತುವರೆದಿರುವ ಏಳು ಮುಸ್ಲಿಂ ದೇಶಗಳಿಗೆ ಇಸ್ರೇಲ್ ಎಂದರೆ ಸಿಂಹಸ್ವಪ್ನ. ವಿಶ್ವದಲ್ಲೇ ಅತ್ಯಂತ ಸಾಹಸಿ ದೇಶ. ಇಲ್ಲಿರುವ ಅತ್ಯಾಧುನಿಕ ಯುಧ್ಧ ವಿಮಾನಗಳು,ಯುಧ್ಧ ಸಾಮಗ್ರಿಗಳು ಭಾರತದಲ್ಲಿಯೂ ಇಲ್ಲ. ಹಾಗಾದರೆ ಇವರ ಭೂಸೇನೆ, ವಾಯುಸೇನೆ ಅಷ್ಟು ದೊಡ್ಡದೇ? ಉಹುಂ ಇಲ್ಲವೇ ಇಲ್ಲ.. ಯಾಕೆಂದರೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸೈನಿಕ. ಡಾಕ್ಟರ್, ಇಂಜಿನಿಯರ್, ಲಾಯರ್, ಕ್ಲರ್ಕ್, ಕ್ಷೌರಿಕ ಎಲ್ಲರಿಗೂ ತಮ್ಮ ಮೂಲ ಕಸುಬಿನ ಜೊತೆ ಮಿಲಿಟರಿ ತರಬೇತಿ ಕಡ್ಡಾಯ. ‘ಡಿಕ್ರೀ - ೮ ‘ ಎನ್ನುವ ರಹಸ್ಯ ಸಂದೇಶದ ಮೂಲಕ ಇಂತಹ ಸ್ಥಳಕ್ಕೆ ಬರಬೇಕೆಂಬ ಆದೇಶ ಸಿಗುತ್ತದೆ. ಅಲ್ಲಿಂದ ಅವರಿಗೆ ಕೊಟ್ಟ ಕಾರ್ಯಾಚರಣೆ ಮುಗಿಯುವತನಕ ಅವರು ಸೈನಿಕ, ಅದು ಮುಗಿದ ಮೇಲೆ ವಾಪಸ್ ತಮ್ಮ ತಮ್ಮ ಕಸುಬಿಗೆ.
೮೦ ರ ದಶಕದಲ್ಲಿ ಇರಾಕಿನ ಐಲು ದೊರೆ ಸದ್ದಾಂ ಹುಸೇನ್, ಇಸ್ರೇಲಿನ ಅಸ್ತಿತ್ವವನ್ನು ಸಹಿಸಲಾಗದೆ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾನೆ. ಫ್ರಾನ್ಸ್ ದೇಶದಿಂದ ಅಣುಬಾಂಬು ತಯಾರಿಸುವ ಒಂದು ಪರಮಾಣು ಸ್ಥಾವರವನ್ನು ಖರೀದಿಸುತ್ತಾನೆ. ಬಾಗ್ದಾದ್ ನ ಹೊರವಲಯದಲ್ಲಿ ಒಸಿರಾಕ್ ಎನ್ನುವ ಪ್ರದೇಶದಲ್ಲಿ ಈ ರಿಯಾಕ್ಟರನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗುತ್ತದೆ.
“ನಮ್ಮ ಅಣು ಬಾಂಬು ತಯಾರಾಗುತ್ತಿದೆ...ಯಹೂದಿಗಳೇ ಇನ್ನೊಂದು ಮಾರಣ ಹೋಮಕ್ಕೆ ಸಿದ್ದರಾಗಿರಿ..ಒಂದೊಂದು ಅಣು ಬಾಂಬಿಗೂ ೫೦೦೦೦ ಇಸ್ರೇಲಿಯರನ್ನು ಕೊಲ್ಲುವ ಸಾಮರ್ಥ್ಯವಿದೆ”
ಎಂದು ವಿಶ್ವದೆಲ್ಲೆಡೆ ಕೊಚ್ಚಿಕೊಳ್ಳಲು ಶುರು ಮಾಡುತ್ತಾನೆ. ಇಸ್ರೇಲ್, ಫ್ರಾನ್ಸ್ ದೇಶಕ್ಕೆ ಮನವಿ ಮಾಡಿಕೊಳ್ಳುತ್ತದೆ, ದಯವಿಟ್ಟು ಈ ಅಣು ಸ್ಥಾವರವನ್ನು ಇರಾಕಿಗೆ ಮಾರಬೇಡಿ ಎಂದು. ಆದರೆ ಈ ಗುಳ್ಳೇನರಿಯಂತ ಯೂರೋಪಿನ ದೇಶಗಳನ್ನು ನಂಬಲಾಗದೆಂದು ಮನವರಿತುಕೊಂಡು ಈ ಸಮಸ್ಯೆಯ ಪರಿಹಾರಕ್ಕೆ ತನ್ನ ತಯಾರಿಯನ್ನು ನಡೆಸತೊಡಗಿತು.
ಅಂದಿನ ಇಸ್ರೇಲಿನ ಪ್ರಧಾನಿ ಮತ್ತು ವಾಯುಸೇನೆಯ ಅಧ್ಯಕ್ಷ, ಇವರಿಬ್ಬರಿಗೇ ಮಾತ್ರ ಗೊತ್ತಿರುವ ಒಂದು ರಣತಂತ್ರ ನಿರ್ಮಿತವಾಗುತ್ತದೆ ಅದರ ಹೆಸರೇ “ ಆಪರೇಷನ್ ಒಪೇರ”. ಈ ಯೋಜನೆಯ ಪ್ರಕಾರ ಅಲ್ಲಿ ಇರಾಕಿನಲ್ಲಿ ನಿರ್ಮಾಣವಾಗುತ್ತಿರುವ ಅಣು ಸ್ಥಾವರದ ಅದೇ ಗಾತ್ರದ ಮರಳಿನ ಮಾದರಿಯನ್ನು ಸಿನಾಯಿ ಮರುಭೂಮಿಯಲ್ಲಿ ನಿರ್ಮಿಸಲಾಗುತ್ತದೆ. ಯುಧ್ಧವಿಮಾನದ ಹಾರಾಟದಲ್ಲಿ ಅತಿ ಕುಶಲತೆಯನ್ನು ಪಡೆದ ಸುಮಾರು ೨೦ ಪೈಲಟ್ಟುಗಳನ್ನು ಈ ತರಬೇತಿಗೆ ನಿಯಮಿಸಲಾಗುತ್ತದೆ. ಎಂಟು ಈ-೧೬ ಮತ್ತು ಆರು ಈ-೧೫ ವಿಮಾನಗಳನ್ನು ಈ "ಆಪರೇಶನ್ ಒಪೇರ" ದಲ್ಲಿ ಬಳಸಲಾಗುತ್ತದೆ. ಪೈಲಟ್ಟುಗಳಿಗೆ ಎಷ್ಟು ಬೇಕೊ ಅಷ್ಟು ವಿಷಯವನ್ನು ಮಾತ್ರ ತಿಳಿಸಿರುತ್ತಾರೆ. ಒಂದು ಗೋಲಾಕಾರವಾಗಿ ಕಾಣುವ ಈ ಕೃತಕ ಸ್ಥಾವರದ ಮೇಲಷ್ಟೇ ಬಾಂಬುಗಳ ದಾಳಿ ನಡೆಸಬೇಕು. ಪ್ರತಿಯೊಬ್ಬ ಪೈಲಟ್ಟಿಗೆ ಗುರುತು ಹಾಕಿಕೊಟ್ಟ ಜಾಗಕ್ಕೆ ಮಾತ್ರ ಬಾಂಬ್ ಹಾಕಬೇಕು ಎನ್ನುವ ನಿರ್ದೇಶವಿರುತ್ತದೆ. ಭೂಮಿಯಿಂದ ನೂರು ಅಡಿ ಮೇಲೆ ಅದೂ ೧೨೦೦ ಕಿಮೀ ವೇಗದಲ್ಲಿ ಸರಿ ಸುಮಾರು ಒಂದೂವರೆ ಘಂಟೆ ವಿಮಾನ ಹಾರಿಸುವುದು ಸಾಮಾನ್ಯದ ವಿಷಯವಲ್ಲ, ಅದರ ತರಬೇತಿಯೂ ನಡೆಯುತ್ತದೆ. ಇನ್ನು ಹೆಚ್ಚಿನ ಅಪಾಯಕಾರಿ ವಿಷಯವೆಂದರೆ ಇರಾಕಿನ ಈ ಸ್ಥಾವರವನ್ನು ತಲುಪಲು ಈ ಹದಿನಾಲ್ಕು ವಿಮಾನಗಳು ಇಸ್ರೇಲಿನ ಬದ್ದ ವೈರಿಗಳಾದ ಜೋರ್ಡನ್, ಸೌದಿ ಅರೇಬಿಯ ಮತ್ತು ಇರಾಕ್ ದೇಶಗಳ ಮೇಲೆ ಹಾರಿ ಹೋಗಬೇಕು. ವಿಮಾನಗಳು ರಾಡಾರುಗಳಿಗೆ
ಕಾಣಿಸಿಕೊಳ್ಳಬಾರದೆಂದರೆ ಹೀಗೇ ಭೂಮಿಯನ್ನು ತಬ್ಬಿಕೊಂಡು ಹೋಗಬೇಕು. ಅದರ ತರಬೇತಿಯೂ ನಿರಂತರವಾಗಿ ನಡೆಯುತ್ತದೆ.
ಜೂನ್ ೭,೧೯೮೧, ಅಂದು ಭಾನುವಾರ ಸಂಜೆ "ಒಸಿರಾಕ್ ರೈಡ್" ನ ಕಾರ್ಯಾಚರಣೆ ಶುರುವಾಗುತ್ತದೆ. ಭಾನುವಾರ ಎಲ್ಲಾ ಕಡೆ ಒಂದು ವಿಶ್ರಾಮದ ವಾತಾವರಣವಿರುವುದರಿಂದ ಈ ದಿನವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಒಂದೂವರೆ ಗಂಟೆಗಳ ಹಾರಾಟದ ನಂತರ ಇರಾಕನ್ನು ತಲುಪಿದಾಗ ಅಲ್ಲಿಯ ಸೈನಿಕರ ಶಿಫ್ಟ್ ಬದಲಾಯಿಸುವ ಸಮಯ, ವಿರಾಮದ ಮಾತು ಕಥೆಯ ಸಮಯ , ಈ ಯುಧ್ಧ ವಿಮಾನಗಳನ್ನು ರಡಾರಿನಲ್ಲಿ ಕಂಡರೂ ಕೂಡಲೇ ಅವರು ಪ್ರತಿಕ್ರಿಯಿಸುವ ಮುನ್ನವೇ ತಮ್ಮ ಕೆಲಸ ಮುಗಿಸಿ ಬಿಡುವ ಒಂದು ಸಂಕ್ಷಿಪ್ತವಾದ ಯೋಜನೆ. ಒಂದೊಂದು ವಿಮಾನವೂ ಸುಮಾರು ಎರಡು ಟನ್ನುಗಳಷ್ಟು ಬಾಂಬುಗಳನ್ನು ಹೊತ್ತುಕೊಂಡಿರುತ್ತದೆ. ಈ ಎಲ್ಲಾ ವಿಮಾನಗಳನ್ನು ಗಡಿಪ್ರದೇಶದ ಒಂದು ರಹಸ್ಯ ವಾಯುನೆಲೆಗೆ ಸಾಗಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಇಂಧನವನ್ನು ತುಂಬಲಾಗುತ್ತದೆ. ಅಗತ್ಯವಿದ್ದರೆ ಆಕಾಶದಲ್ಲಿ ಇಂಧನ ತುಂಬಲು ಕೆಂಪು ಸಮುದ್ರದ ಮೇಲೆ ಇಂಧನದ ಟ್ಯಾಂಕರ್ ವಿಮಾನ ಒಂದು ಗುಸ್ತು ಹೊಡೆಯುತ್ತಾ ಹಾರಾಡುತ್ತಿರುವ ವ್ಯವಸ್ಥೆ ಮಾಡಲಾಗುತ್ತದೆ. ನಾಲ್ಕು ನಾಲ್ಕು ಗುಂಪಿನ ಯುಧ್ಧ ವಿಮಾನಗಳ ಜಿoಡಿmಚಿಣioಟಿ ಸಾಯಂಕಾಲದ ಸಮಯಕ್ಕೆ ಅಲ್ಲಿಂದ ನಿರ್ಗಮಿಸಬೇಕು ಎಂದು ನಿರ್ಧರಿಸಲಾಗುತ್ತದೆ.
ಪೈಲಟ್ಟುಗಳಿಗೆ ಒಂದು ಗಂಟೆಯ ಸಮಯವಿದೆ. ಯಾರಿಗಾದರೂ ಈ ಕೊನೆಯ ಗಳಿಗೆಯಲ್ಲಿ ತಾವು ಕೈಗಳ್ಳುತ್ತಿರುವ missioಟಿ ನಲ್ಲಿ ಏನಾದರೂ ಸಂದೇಹವಿದ್ದರೆ ಪರಿಹರಿಸಿಕೊಳ್ಳಲು..ಏಕೆಂದರೆ ಮುಂದಿನ ಮೂರು ನಾಲ್ಕು ತಾಸು ಸಂಪೂರ್ಣ ನಿಶಬ್ದ..ಯಾರೂ ಮಾತನಾಡುವ ಹಾಗಿಲ್ಲ. ಅomಠಿಟeಣe ಡಿಚಿಜio siಟeಟಿಛಿe!. ಎಲ್ಲರೂ ಶಾಂತವಾಗೇ ಇರುತ್ತಾರೆ ಮತ್ತು ತಮ್ಮೊಳಗೇ ಆತ್ಮಾವಲೊಕನ ಮಾಡಿಕೊಳ್ಳತ್ತಾರೆ. ಏನೇ ಆಗಲಿ ಇಸ್ರೇಲಿಗಳ ಮೇಲೆ ಇನ್ನೊಂದು ಮಾರಣಹೋಮವಾಗಲು ಬಿಡಬಾರದು.
ಈ ಆಕ್ರಮಣದ ತಂಡದ ಮುಖಂಡ ಕಮಾಂಡರ್ ಜೀ಼ವ್ ರಜ಼್ ಬಹಳ ದೈವೀಭಕ್ತ. ನಾಝಿಗಳ ನರಮೇಧದಲ್ಲಿ ಸತ್ತು ಹೋದ ಅಜ್ಜನಿಗೆ ಮನಸ್ಸಿನಲ್ಲೇ ನಮನ ಸಲ್ಲಿಸಿ;
'ಅಜ್ಜಾ ಇದು ನಿನ್ನ ಸಾವಿನ ಪ್ರತೀಕಾರಕ್ಕೆ...ಆಶೀರ್ವದಿಸು’
ಎಂದು ಎದ್ದು ವಿಮಾನದ ಕಡೆ ತೆರಳುತ್ತಾನೆ, ಇನ್ನುಳಿದ ಪೈಲಟ್ಟುಗಳೂ ತಮ್ಮ ಕಮಾಂಡರನ್ನೇ ಹಿಂಬಾಲಿಸುತ್ತಾರೆ. ಹದಿನಾಲ್ಕು ಜೆಟ್ ವಿಮಾನಗಳ ಕಿವಿಗಡಚಿಕ್ಕುವ ಶಬ್ದ ಇಸ್ರೇಲಿನ ಆ ರಹಸ್ಯ ವಾಯುನೆಲೆಯನ್ನಾವರಿಸುತ್ತದೆ. ತ್ವರಿತ ಗತಿಯಿಂದ ಹಾರಾಟಕ್ಕೆ ಸಿಧ್ಧವಾಗುತ್ತವೆ. ಅಂತಿಮವಾಗಿ ವಿಮಾನದ ಪರಿಶೀಲನೆ ನಡೆಸಿ ಶಿಸ್ತಿನ ಒಂದು ಸಲ್ಯೂಟ್ ಹೊಡೆದ ಇಂಜಿನಿಯರುಗಳು ಗದ್ಗದರಾಗುತ್ತಾರೆ..ಎಲ್ಲರೂ ಮರಳಿಬರುತ್ತಾರಾ?
ಎರಡು ನಿಮಿಷದಲ್ಲೇ ಚಕಚಕನೆ ಡೈಮಂಡ್ ವಿನ್ಯಾಸದಲ್ಲಿ ಒಂದುಗೂಡಿ ನೆಲದಿಂದ ಕೇವಲ ನೂರು ಅಡಿಗಳಷ್ಟು ಮೇಲೆ ಒಂದು ಸಾವಿರ ಕಿಮೀ ವೇಗದಲ್ಲಿ ಇಸ್ರೇಲಿ ಆಕಾಶದಿಂದ ಜೋರ್ಡಾನಿನ ಆಕಾಶವನ್ನು ಪ್ರವೇಶಿಸುತ್ತವೆ...ಅಲ್ಲೆ ಕಾದಿರುತ್ತದೆ ಮೊದಲನೆ ಗಂಡಾಂತರ.
ಜೋರ್ಡಾನಿನ ದೊರೆ ತನ್ನ ವೈಭವೋತೇಪ ಹಡಗಿನಲ್ಲಿ ಆ ಭಾನುವಾರ ತನ್ನ ಪರಿವಾರ ಸಮೇತ ಮೋಜಿನಲ್ಲಿ ಮೈಮರೆತಿರುವಾಗ, ಗುಂಡಿಗೆಯನ್ನೇ ಅಲ್ಲಾಡಿಸಿದ ಈ ಜೆಟ್ ವಿಮಾನಗಳ ಶಬ್ದ ಕೇಳಿ ತತ್ತರಿಸಿ ಹೋಗುತ್ತಾನೆ. ವಿಮಾನಗಳು ಎಷ್ಟು ಕೆಳಗೆ ಹಾರುತ್ತಿದ್ದವೆಂದರೆ ಹಡಗಿನಲ್ಲಿದ್ದ ಎಲ್ಲರಿಗೂ ವಿಮಾನದ ಮೇಲಿದ್ದ ಇಸ್ರೇಲಿ ಲಾಂಛನಗಳು ಕಂಡವು. ನನ್ನ ದೇಶದ ಮೇಲೆ ಇಸ್ರೇಲಿ ವಿಮಾನಗಳು....ದೊರೆಗೆ ಶಾಕ್. ಜಗತ್ತಿನಲ್ಲೇ ಅತ್ಯಾಧುನಿಕ ಯುಧ್ಧ ವಿಮಾನಗಳ ದಂಡು ಈ ಪರಿ ಪೂರ್ವ ದಿಕ್ಕಿನಲ್ಲಿ ಅಂದರೆ ಕೆಲವೇ ನಿಮಿಷಗಳಲ್ಲಿ ಸೌದಿ ಅರೇಬಿಯದ ಕಡೆ....ಆದರೆ ಅಲ್ಲೇಕೆ? ಉಹುಂ...ಇದೇನೊ ದೊಡ್ಡ ಮಟ್ಟದ ದಾಳಿ. ಅನುಮಾನವೇ ಇಲ್ಲ ಇದು ಇರಾಕಿನ ಮೇಲೇ ದಾಳಿಮಾಡಲು ಹೊರಟ ವಿಮಾನಗಳು ಎಂದು ಊಹಿಸುತ್ತಾನೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ದೊರೆ ಕೂಡಲೇ ಹಡಗಿನ ಸಂಪರ್ಕಾಧಿಕಾರಿಯನ್ನು ಕರೆದು ಇರಾಕಿಗೆ ಈ ವಿಮಾನಗಳ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ತ್ವರಿತವಾಗಿ ಕಳುಹಿಸಲು ಆದೇಶಿಸುತ್ತಾನೆ.
ಈ ಹದಿನಾಲ್ಕು ಯುಧ್ಧವಿಮಾನಗಳು ಒಂದೇ ದೇಹದ ವಿವಿಧ ಅಂಗಗಳಂತೆ ವೇಗವಾಗಿ ಇರಾಕಿನ ದಿಕ್ಕಿನಲ್ಲಿ ಹಾರಿಸುತ್ತಿದ್ದ ಈ ಪೈಲಟ್ಟುಗಳು ಮಾಡಬೇಕಾದ ಕೆಲಸ ಮಾತ್ರ ವಿಭಿನ್ನ. ಈ ಸಾಹಸ ತಂಡದ ಅತಿ ಹಿಂದೆ ಇದ್ದ ಎರಡು ಈ-೧೫ ವಿಮಾನಗಳ ಕೆಲಸವೇನೆಂದರೆ, ಹದ್ದಿನ ಕಣ್ಣಗಳಿಂದ ಸುತ್ತಲಿನ ಆಕಾಶವನ್ನು ಶತ್ರುಗಳ ಯುಧ್ಧವಿಮಾನದ ಚಲನವಲನದ ಬಗ್ಗೆ ವೀಕ್ಷಿಸುವುದು. ಹಾಗೇನಾದರೂ ಅರಬ್ಬರ ವಿಮಾನಗಳು ಕಂಡುಬಂದಲ್ಲಿ ಅವುಗಳ ಹಿಂದೆಬಿದ್ದು ಅವುಗಳನ್ನು ನಿಷ್ಕ್ರಿಯೆಗೊಳಿಸುವುದು.
ಇನ್ನೆರಡು ಏರೋಪ್ಲೇನುಗಳ ಕೆಲಸವೆಂದರೆ ರಡಾರುಗಳನ್ನು ಮಧ್ಯ ಮಧ್ಯ ಕೆಕ್ಕರು ಬಿಕ್ಕರು ಮಾಡಿ ಇಡುವುದು. ಇನ್ನಿಬ್ಬರು ಕೆಳಗಿನಿಂದ ಗನ್ನುಗಳ ಫೈರಿಂಗ್ ಏನಾದರೂ ಶುರುವಾದರೆ ಅವರನ್ನು ನಿಷ್ಕ್ರಿಯೆಗೊಳಿಸುವುದು. ಈ ಚಕ್ರವ್ಯೂಹದ ನಡು ಮಧ್ಯದಲ್ಲಿರುವ ಆರು ಈ-೧೬ ವಿಮಾನಗಳೇ ಆ ಅಣು ಕೇಂದ್ರದ ಮೇಲೆ ಬರೋಬ್ಬರಿ ತಲಾ ಎರಡೆರಡು ಟನ್ ಮಿಸೈಲುಗಳ ದಾಳಿ ಮಾಡಬೇಕಾಗಿರುವುದು. ಯುಧ್ಧವಿಮಾನಗಳು ಯಾವಾಗಲೂ ಒಂದು ವಿನ್ಯಾಸವನ್ನು ರಚಿಸಿಕೊಂಡು ಹಾರುತ್ತವೆ. ಈ ತಂಡ ತರಬೇತಿ ಸಮಯದಲ್ಲಿ ಒಂದು ಹೊಸದೇ ವಿನ್ಯಾಸವನ್ನು ಅವಿಷ್ಕಾರಗೊಳಿಸಿತು. ಈ ವಿನ್ಯಾಸವನ್ನು ರಡಾರಿನಲ್ಲಿ ನೋಡಿದವರಿಗೆ ಒಂದು ದೊಡ್ಡ ಪ್ರಯಾಣಿಕರ ವಿಮಾನ ಜಂಬೊ ಜೆಟ್ಟಿನಂತೆ ಕಾಣುತ್ತಿತ್ತು, ಯುಧ್ಧವಿಮಾನದಂತಲ್ಲ!
ಸೌದಿ ಅರೇಬಿಯಾದ ವಿಮಾನಯಾನ ನಿಯಂತ್ರಕರೊಂದಿಗೆ ಇಸ್ರೇಲ್ ಕಮಾಂಡರ್ ಜೀ಼ವ್ ರಜ಼್ ಅರೇಬಿ ಭಾಷೆಯಲ್ಲಿ ಸಲೀಸಾಗಿ ಸಂಭಾಷಿಸಿ ನಮಗೆ ಇರಾಕಿನ ಬಾಗ್ದಾದಿಗೆ ಡೈರೆಕ್ಟ್ ರೂಟಿಂಗ್ ಕೊಡಿ ಎಂಬ ಕೋರಿಕೆಗೆ ಅರಬ್ಬೀ ನಿಯಂತ್ರಕರು ಅನುಮತಿಯನ್ನೂ ನೀಡಿದರು!
ಈ ತೊಂಬತ್ತು ನಿಮಿಷಗಳ ನಿಶಬ್ದ ವಾಯುಯಾನದಲ್ಲಿ ಹೆಲ್ಮಟ್ಟುಗಳ ಮೇಲೆ ಬರೆದಿರುವ ಹೆಸರುಗಳನ್ನು ಓದುವಷ್ಟು ಹತ್ತಿರಿದಲ್ಲಿದ್ದರೂ ಮಾತಾಡುವ ಹಾಗಿಲ್ಲ,ಅದಕ್ಕೇ ಆಗಾಗ ಎಲ್ಲಾ ಸರಿ ಇದೆ ಎನ್ನುವಂತೆ ತಲೆಯಾಡಿಸುತ್ತಿದ್ದರು.
ಎಲ್ಲಾ ...ಸರಿಯಿತ್ತಾ?
ಕೆಲವೇ ನಿಮಿಷಗಳಲ್ಲಿ ಇರಾಕಿನ ಗಡಿಯನ್ನು ದಾಟಿ, ಬಾಗ್ದಾದ್ ಇನ್ನೇನು ಹದಿನೈದು ಮೈಲುಗಳಿದೆ ಎನ್ನುವಷ್ಟರಲ್ಲಿ ಪ್ಲಾನಿನ ಪ್ರಕಾರ ಎಲ್ಲರೂ ಚದರಿಕೊಂಡು ಒಂದೊಂದು ದಿಕ್ಕಿಗೊಬ್ಬರಂತೆ ಹಾರುತ್ತಾ ಮೇಲೇರತೊಡಗಿದರು. ಆಗ ಕಾಣಿಸಿತು ನೋಡಿ ಅಣು ಕೇಂದ್ರದ ಅರ್ಧ ಗೋಲಾಕಾರದ ಗೋಪುರ ! ಇಸ್ರೇಲಿಯರ ಸರ್ವನಾಶದ ಅಣುಬಾಂಬಿನ ತವರು. ಮೊದಲು ಡೈವ್ ಹೊಡೆದು ಅಣುಸ್ಥಾವರದ ಮಧ್ಯದ ಭಾಗಕ್ಕೆ ಬಾಂಬು ಹಾಕಿದ್ದು ಕಮಾಂಡರ್ ಜೀ಼ವ್ ರಜ಼್, ಇನ್ನೊಮ್ಮೆ;
'ಅಜ್ಜಾ ಇದು ನಿನಗೆ' ಎನ್ನುತ್ತಾ.
ಹತ್ತು ಸೆಕೆಂಡಿನ ಅಂತರದಲ್ಲಿ ಇನ್ನೊಂದು...ಮತ್ತೊಂದು, ಹೀಗೆ ಕೇವಲ ಎಂಬತ್ತು ಸೆಕೆಂಡಿನಲ್ಲಿ ಆ ಅಣುಸ್ಥಾವರದ ಅವಶೇಷವೂ ಉಳಿಯದಂತೆ, ಈ ಭೂಪಟದಿಂದಲೇ ಶಾಶ್ವತವಾಗಿ ಅಳಿಸಿಹೋಯಿತು ಇರಾಕಿನ ಒಸಿರಾಕ್ ಪರಮಾಣು ಸ್ಥಾವರ. ಹಿಂದಿನಿಂದ ಬಂದ ಎರಡು ಈ-೧೫ ವಿಮಾನಗಳು ಒಂದಿಂಚೂ ಬಿಡದೆ ಚಕಚಕನೆ ಫೋಟೊ ತೆಗೆದುಬಿಟ್ಟವು. ಕೂಡಲೇ ಎಲ್ಲಾ ವಿಮಾನಗಳು ನಾಲ್ಕು ನಿಮಿಷದಲ್ಲಿ ನಲವತ್ತು ಸಾವಿರ ಅಡಿಗೆ ಜಿಗಿದವು. ಅಲ್ಲಿಂದ ಪುನಃ ಮೂರು ಶತ್ರುದೇಶದ ಆಕಾಶವನ್ನು ಸೀಳಿಕೊಂಡು ವಾಪಸ್ ಇಸ್ರೇಲಿಗೆ!. ಸುರಕ್ಷಿತವಾಗಿ ತಲುಪಿದ ಈ ಆಕ್ರಮಣದ ತಂಡದ ನಾಯಕ ಮೌನವನ್ನು ಮುರಿದಿದ್ದು ಯಹೂದಿಗಳ ಪ್ರಾರ್ಥನೆಯೊಂದಿಗೆ, ಆ ಪ್ರಾರ್ಥನೆ ಮುಗಿದನಂತರವೇ ಅವರು ಪೈಲಟ್ಟುಗಳ ಭಾಷೆಯಲ್ಲಿ ಮಾತಾಡಲು ಶುರುಮಾಡಿಕೊಂಡಿದ್ದು.
ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಇಸ್ರೇಲಿನ ಪ್ರಧಾನಿ ಖುದ್ದಾಗಿ ಬರುತ್ತಾರೆ ಈ ಗಂಡುಗಲಿಗಳನ್ನು ಭೇಟಿಮಾಡಲು. ಅರ್ಧ ಗಂಟೆಯ ನಂತರ ನಡೆದ ಪತ್ರಿಕಾ ಸಮ್ಮೇಳನದಲ್ಲಿ ಧ್ವಂಸಗೊಂಡ ಒಸಿರಾಕಿನ ಅಣುಸ್ಥಾವರದ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಡೀ ಪ್ರಪಂಚವೇ ಬೆಕ್ಕಸ ಬೆರಗಾಗುತ್ತವೆ. ಮಸ್ಲೀಮ್ ದೇಶಗಳು ಅವಮಾನದಿಂದ ಕುದ್ದು ಹೋಗುತ್ತವೆ. ಅಮೆರಿಕವೇನೋ ಮೇಲ್ನೋಟಕ್ಕೆ ವಿಶ್ವಸಂಸ್ಥೆಯಲ್ಲಿ ವಿರೋಧ ವ್ಯಕ್ತಪಡಿಸುತ್ತದಾದರೂ ಒಳಗೊಳಗೆ ಇಸ್ರೇಲಿಯರಿಗೆ ದೊಡ್ಡ ಧನ್ಯವಾದಗಳನ್ನು ಹೇಳುತ್ತದೆ. ಈoಡಿಣuಟಿe ಜಿಚಿvoಡಿs ಣhe bಡಿಚಿve ಎನ್ನುವ ಹಾಗೆ, ಜೋರ್ಡಾನಿನ ದೊರೆ ಕಳುಹಿಸಿದ ಎಚ್ಚರಿಕೆಯ ಸಂದೇಶ ಇರಾಕನ್ನು ತಲುಪುವುದೇ ಇಲ್ಲ. ಟನ್ನುಗಟ್ಟಲೇ ಬಾಂಬು ಅಣು ಸ್ಥಾವರದ ಮೇಲೆ ಸುರಿದರೂ ಇರಾಕಿನ ನಾಗರೀಕರಿಗೆ ಕಿಂಚಿತ್ತೂ ಹಾನಿಯಾಗುವುದಿಲ್ಲ. ಎಲ್ಲದಿಕ್ಕಿಂತ ಮುಖ್ಯವಾಗಿ ದಾಳಿಯ ಸಮಯ..ಇನ್ನು ಕೇವಲ ಹತ್ತು ದಿನಗಳಲ್ಲಿ ಅಣು ಬಾಂಬುಗಳನ್ನು ತಯಾರಿಸುವ ಸಾಮರ್ಥ್ಯ ಪಡೆಯಲಿದ್ದ ಈ ಅಣುಸ್ಥಾವರವನ್ನು ನಾಶಮಾಡಿದ್ದು...ವಿಷದ ಮೊಳಕೆಯನ್ನು ಹೊಸಕಿ ಹಾಕಿದ್ದು. ಮತ್ತೊಮ್ಮೆ ಇಸ್ರೇಲಿನ ಈ ಸಾಹಸಗಾಥೆ ಹಲವಾರು ಮಿಲಿಟರಿ ಕಾಲೇಜುಗಳ ಪಠ್ಯಕ್ರಮಕ್ಕೆ ಸೇರ್ಪಡೆಗೊಂಡಿತು.
-ವಿಂಗ್ ಕಮಾಂಡರ್ ಸುದರ್ಶನ್
No comments:
Post a Comment