Monday, September 26, 2022

A slave can become a master... But, the mindset never changed...!!

ಗುಲಾಮನೊಬ್ಬ ಮಾಲೀಕನಾಗಿ ಬದಲಾಗಬಹುದು...  ಆದರೆ, ಮನಸ್ಥಿತಿ ಎಂದಿಗೂ ಬದಲಾಗೋದಿಲ್ಲ...!!

 ಈಗಿನ್ನೂ ದೇಶದ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ ವನ್ನು ವಾರಗಳ ಕಾಲ ಮನೆ ಮುಂದೆ ಬಾವುಟವೆಲ್ಲಾ ಹಾರಿಸಿಕೊಂಡು ಇನ್ನಿಲ್ಲದಂತೆ ಸಂಭ್ರಮದಿಂದ ಆಚರಿಸಿಕೊಂಡಿದ್ದೇವೆ.

ಎಷ್ಟೋ ಮನೆಗಳ ಮೇಲಿನ ಬಾವುಟಗಳನ್ನೂ ಇನ್ನೂ ಕೆಳಗಿಳಿಸಿಲ್ಲ...

ಇವತ್ತು...

ನಮ್ಮನ್ನು ಶತಮಾನಗಳ ಕಾಲ ಬೇಡಿ ತೊಡಿಸಿ ಜೀತದಾಳುಗಳಂತೆ ಗುಲಾಮಗಿರಿ ಮಾಡಿಸಿಕೊಂಡ, ನಮ್ಮ ಸ್ವಾತಂತ್ರ‍್ಯವನ್ನು ಕಿತ್ತುಕೊಂಡು ಅಹಂಕಾರದಿಂದ ಮೆರೆದ, ಮಹಾಕ್ರೂರಿ ಬ್ರಿಟಿಷ್ ರಾಜಮನೆತನದ ರಾಣಿಯೊಬ್ಬಳು ಸತ್ತಿದ್ದಕ್ಕೆ ತಮ್ಮದೇ ಹೆತ್ತ ತಾಯಿಯೋ ಅಜ್ಜಿಯೋ ಸತ್ತಿದಾಳೇನೋ ಎನ್ನುವಂತೆ ಉದ್ದುದ್ದದ ಕಣ್ಣೀರಿನ ಕಥೆ ಕವನಗಳು ಬರೆದುಕೊಂಡು ಮತ್ತೆ ಹುಟ್ಟಿ ಬಾ ಅಂತೆಲ್ಲಾ ಬಳೆ ಒಡೆದುಕೊಂಡು ಅಳ್ತಾ ಕೂತಿದೀರಲ್ರೀ ಹಾವ್ರಾಣಿಮಕ್ಳೆಲ್ಲಾ.

ಇದಕ್ಕಿಂತಾ ಗುಲಾಮಗಿರಿ ಮನಸ್ಥಿತಿ ಮತ್ತೊಂದಿದ್ಯಾ?

ನಿಮ್ಗೆ ಗೊತ್ತಿರ್ಲಿ...

ನಮ್ಗೆ ಸ್ವಾತಂತ್ರ‍್ಯ ಸಿಗಲಿ ಅಂತ ಅದೆಷ್ಟೋ ಲಕ್ಷಾಂತರ ಜನರು ತಮ್ಮ ಜೀವ ಕೊಟ್ರಲ್ಲ, ಬ್ರಿಟಿಷರ ಗುಂಡುಗಳಿಗೆ ಲಾಠಿ ಚಾಟಿ ಏಟುಗಳುಗೆ ಎದೆ ಕೊಟ್ರಲ್ಲ. ಅದೆಲ್ಲಾ ಇನ್ಯಾರದ್ದೋ ಅಲ್ಲ, ಈಗ ಸತ್ತಿರೋ ರಾಣಿಯ ಕುಟುಂಬದ್ದೇ ಜನರದ್ದಾಗಿತ್ತು.

ಬೋರಾಯ್ತು ಅಂದಾಗೆಲ್ಲಾ ಭಾರತೀಯರನ್ನು ಮೈದಾನದೊಳಗೆ ಅವರವರನ್ನೇ ಅಥವಾ ಪ್ರಾಣಿಗಳ ಜೊತೆ ಬಡಿದಾಡಲು ಬಿಟ್ಟು ಎತ್ತರದಲ್ಲಿ ಕೂತು ವೈನ್ ಕುಡಿಯುತ್ತಾ, ಭಾರತೀಯರ ಮೈ ಇಂದ ರಕ್ತ ಇಳೀತಿದ್ರೆ ಅದನ್ನೇಮಜಾ ತೆಗೆದುಕೊಳ್ತಿದ್ರಲ್ಲಾ ಅವ್ರೆಲ್ಲ ಇನ್ಯಾರೋ ಅಲ್ಲ, ಈಕೆಯ ಅಣ್ತಮ್ಮ ಅಕ್ತಂಗಿಗಳೇ ಆಗಿತ್ತು...

೧೯೫೨ರಲ್ಲಿ ಈಕೆ ರಾಣಿಯಾಗ್ತಿದ್ದ ಹಾಗೆಯೇ ಮಾಡಿದ ಮೊದಲ ಕೆಲಸವೇ,

ದಶಕಗಳಿಂದ ಕೀನ್ಯಾದಲ್ಲಿ ಕ್ರಾಂತಿಕಾರಿಗಳು ನಡೆಸ್ತಿದ್ದ ಸ್ವಾತಂತ್ರ‍್ಯದ ಹೋರಾಟವನ್ನು ಮಟ್ಟಹಾಕಿ ತನ್ನೆಲ್ಲಾ ಬಲ ಪ್ರಯೋಗಿಸಿ ಇಡೀ ದೇಶವನ್ನೇ ರಕ್ತಸಿಕ್ತಗೊಳಿಸಿ ಸಾವಿರಾರು ಆದಿವಾಸಿಗಳನ್ನು ಹೀನಾಯವಾಗಿ ಚಿತ್ರಹಿಂಸೆಯ ಮೂಲಕ ಸಾಮೂಹಿಕ ಹತ್ಯೆ ನಡೆಸಿ ಆ ರಕ್ತದಿಂದಲೇ ತನ್ನ ಕಿರೀಟ ತೊಳೆದುಕೊಂಡು ಮುಡಿಗೇರಿಸಿಕೊಂಡಿದ್ದು.

ಹಿಟ್ಲರ್ ಯಹೂದಿಗಳ ಮೇಲೆ ನಡೆಸಿದ ಕ್ರೌರ್ಯಕ್ಕಿಂತಲೂ ಸಾವಿರ ಪಟ್ಟು ಕ್ರೂರವಾಗಿತ್ತು ಇದು.

ಹೀಗೆ ಶುರುವಾಗಿತ್ತು ಆಕೆಯ ರಾಜ್ಯಭಾರ...

ಎಂದಿಗೂ ಗುಲಾಮಗಿರಿ, ಜೀತದಾಳು, ರಾಜ ಸೇವಕ ಇತ್ಯಾದಿ ಪದ್ದತಿಗಳ ತೆರವಿಗಾಗಿ ಒಂದೇ ಒಂದು ಕ್ರಮ ತೆಗೆದುಕೊಳ್ಳಲಿಲ್ಲ. ವರ್ಣ ಭೇದ ನೀತಿ ಕೊನೆಯಾಗಿಸೋ ಕಾರ್ಯಕ್ಕೆ ಕೈ ಹಾಕಲಿಲ್ಲ. ಮೊನ್ನೆ ರಿಷಿ ಸುನಕ್ ಎದುರು ಪ್ರಧಾನಮಂತ್ರಿ ರೇಸಲ್ಲಿ ಗೆದ್ದ ಮೇರಿ ಎಲಿಜಬೆತ್ ಟ್ರಸ್ ಕೊನೆಯ ದಾಳವಾಗಿ ಉರುಳಿಸಿದ್ದೇ ಜಾತಿ ವಾದ ಹಾಗೂ ವರ್ಣಭೇದ ನೀತಿ. ಅದೇ ಈಕೆಯ ಗೆಲುವಿಗೂ ಕಾರಣವಾಗಿದ್ದು. ಇಂತದ್ದು ಇನ್ನೂ ಜೀವಂತವಾಗಿದೆ ಅಂದ್ರೆ ಅದಕ್ ಕಾರಣವೇ ಈ ರಾಜಮನೆತನ.

ಇಂತಾ ರಾಣಿ ಸತ್ತಮೇಲೂ ಹಾಡಿಹೊಗಳುತ್ತಾ ಆಕೆಯ ಬೂಟು ನೆಕ್ಕಲು ಕುಳಿತು ಬಿಡುತ್ತೇವೆ ಎಂದರೆ,

ಅದಿನ್ನೆಷ್ಟು ಆಳಕ್ಕೆ ಇಳಿದಿರಬಹುದು ನಮ್ಮೊಳಗೆ ಗುಲಾಮ ಮನಸ್ಥಿತಿಯ ಬೇರುಗಳು? 

ಇದಕ್ಕಿಂತಾ ದುರಂತ ಏನ್ ಗೊತ್ತಾ...

ಬ್ರಿಟಿಷ್ ರಾಜ ಓಡಾಡಿದ ಅನ್ನೋ ಒಂದೇ ಕಾರಣಕ್ಕೆ ರೋಡಿಗೇ ಕಿಂಗ್'ಸ್ ವೇ(ರಾಜ ಪಥ) ಅಂತ ಹೆಸರಿಟ್ಟು, ಸ್ವಾತಂತ್ರ‍್ಯದ ದಶಕಗಳ ನಂತರವೂ ಆ ಗುಲಾಮಗಿರಿಯ ಕುರುಹಾಗಿಯೇ ಉಳಿದಿದ್ದ ರಸ್ತೆಯ ಹೆಸರನ್ನು ಅಳಿಸಿ...

ದೇಶದಿಂದ ಬ್ರಿಟಿಷರನ್ನು ಒದ್ದೋಡಿಸಲು ತನ್ನ ಜೀವವನ್ನೇ ತೆತ್ತಿದ್ದೂ ಅಲ್ಲದೆ, ಯಾವ ಬ್ರಿಟಿಷರಿಂದ ದೇಶದ್ರೋಹಿ ಎಂಬ ಪಟ್ಟವನ್ನೂ ಹೊತ್ತಿದ್ದರೋ ಅದೇ ನೇತಾಜಿ ಸುಭಾಷ್ ಚಂದ್ರ ಬೋಸರ ಪ್ರತಿಮೆಯನ್ನು ಅದೇ ಜಾಗದಲ್ಲಿ ನಿರ್ಮಿಸಿ ಆತನದ್ದೇ ಘೋಷವಾಕ್ಯವಾದ "ಕರ್ತವ್ಯ" ಪಥವೆಂದು ನಾಮಕರಣ ಮಾಡಿ ಇನ್ನೂ ದಿನ ಕಳೆದಿಲ್ಲ.

ನಮ್ಮ ಗುಲಾಮ ಜನಗಳು ಮತ್ತದೇ ಬ್ರಿಟಿಷ್ ರಾಜ ಮನೆತನದವರ ಬೂಟು ನೆಕ್ಕುತ್ತಾ ಕೂತಿದ್ದಾರೆ.

ಇದ್ರ ಜೊತೆಗೆ...

ನೀವು ಸತ್ತಿದೀರಿ ಅನ್ನೋದು ನಂಬೋಕೆ, ಜೀರ್ಣಿಸಿಕೊಳ್ಳೋಕೇ ಆಗ್ತಿಲ್ಲ ಅಂತ ಡಿಂಗಾಣಿಡವ್ ಬೇರೆ. 

ಲೇಯ್... ೯೬ವರ್ಷ ಕಣ್ರೋ ಆಕೆಗೆ ೧೬ ಅಲ್ಲ. 

ಚೆನ್ನಾಗ್ ನೆನಪಲ್ ಇಟ್ಕೊಳೀ...

ಆಕೆ ದೇವತೆ ಅಲ್ಲ,

ನಮ್ಮಂತೆಯೇ ಹಲವಾರು ದೇಶಗಳ ಲಕ್ಷಾಂತರ ಜನರ ಪೂರ್ವಜರ ಸಾವು ನೋವುಗಳ ಮೂರ್ತರೂಪದ ಮಹಾಪಾಪಿ ವ್ಯಕ್ತಿತ್ವಕ್ಕೊಂದು ಜೀವಂತ ಉದಾಹರಣೆ ಆಕೆ ಹಾಗೂ ಆಕೆಯ ರಾಜಮನೆತನ ಕಣ್ರೋ.

-ಸುದೀರ್ ಸಾಗರ್ ನೊಂದು ಬೆಂದಿರೋ ಕೂಲಿ ಕಾರ್ಮಿಕ

No comments:

Post a Comment