Sunday, February 11, 2024

Financial issues

ಲಕ್ಷಾಂತರ ಸಂಪಾದಿಸಿದರೂ ತೃಪ್ತಿ ಸಿಗದೆ ಸಮಸ್ಯೆಗಳು ಬೆಳೆದಿರುವುದು ಯಾಕೆ?



ಕೋಟಿ ವಿದ್ಯೆಗಿಂತ ಮೇಟಿವಿದ್ಯೆಯೇ ಮೇಲು ಎಂದಿದ್ದರು.

ಇಂದು ವಿದ್ಯೆ ಹಣಸಂಪಾದನೆಯ ಗುರಿ ಕಡೆಗೆ ತಂತ್ರದ ಕಡೆಗೆ ನಡೆದಿದೆ. ಇದಕ್ಕೆ ತಕ್ಕಂತೆ  ತಂತ್ರಜ್ಞಾನ ಬೆಳೆದಿದೆ. ತಂತ್ರ ಯಾವತ್ತೂ ಸತ್ಯವಿರದು.ಧರ್ಮ ರಕ್ಷಣೆಗೆ  ತಾತ್ಕಾಲಿಕ ಪರಿಹಾರ ತಂತ್ರವಿದ್ಯೆ ನೀಡಿದರೂ ಸ್ವತಂತ್ರ ಜ್ಞಾನವನ್ನು ಪಡೆಯಲಾಗದು. ಹೀಗಾಗಿ ಕಷ್ಟಪಟ್ಟು ನೂರು ರೂ ಸತ್ಕರ್ಮ ಸ್ವಧರ್ಮ ಸದಾಚಾರ ಸತ್ಯದಿಂದ ಗಳಿಸಿದರೆ ಸಿಗುವ ತೃಪ್ತಿ  ಪರರ ವಶದಲ್ಲಿ ‌ ಪರತಂತ್ರದಲ್ಲಿ ಪರದೇಶದಲ್ಲಿ ಲಕ್ಷ ಕೋಟಿ ಹಣ ಗಳಿಸಿದರೂ ಅದು ಪರಮಾತ್ಮನ ಕಡೆಗೆ ಮನಸ್ಸನ್ನು ಎಳೆಯಲಾಗದು.ಹೀಗಾಗಿ ಅತಿಯಾದ  ಹಣದ ಶ್ರೀಮಂತರ  ಊಟ ನಿದ್ರೆಗೂ ಬಡವನ ಊಟ ನಿದ್ರೆಗೂ ಅಂತರವಿದೆ.

ಬಡವನ ಹೊಟ್ಟೆಯ ಹಸಿವು  ಅನ್ನದಲ್ಲಿದ್ದರೆ ಶ್ರೀಮಂತ ನ ಹಸಿವು ಹಣದಲ್ಲಿರುತ್ತದೆ.ಎಷ್ಟು ದುಡಿದರೂ ತೃಪ್ತಿ ಸಿಗದೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವೂ ಇರದೆ ದುಂದುವೆಚ್ಚ ಮಾಡುವುದಲ್ಲದೆ ಅಡ್ಡದಾರಿಯಲ್ಲಿ ಭ್ರಷ್ಟಾಚಾರದಲ್ಲಿಯೇ  ಜೀವನ ಮುಗಿದಿರುತ್ತದೆ.ಇಂತಹವರ ಹಿಂದೆ ಬಡವ ನೆಡೆದರೆ‌ ಮುಗಿಯಿತು ಕಥೆ. ಭ್ರಷ್ಟಾಚಾರ ಹಂಚಿಕೊಂಡು ಇರುವ ಸುಖನಿದ್ರೆಯನ್ನೂ ಕಳೆದುಕೊಂಡು ತನ್ನೊಳಗೆ ಇದ್ದ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಸೋತು ಋಣಭಾರದಿಂದ ನರಳಬೇಕು.

ಇದೇ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು  ಜ್ಞಾನದಿಂದ ಹಣಸಂಪಾದಿಸಿ ತಮ್ಮ ಧರ್ಮ ಕರ್ಮ ಗಳಲ್ಲಿಯೇ ಪರಮಾತ್ಮನ ಸೇವೆ ಮಾಡುತ್ತಾ ಸಂಸಾರದ ಜೊತೆಗೆ ಸಮಾಜದ ಋಣವನ್ನು ತೀರಿಸುವವರಾಗಿ ಮುಕ್ತಿ ಮಾರ್ಗ ಹಿಡಿದಿದ್ದರು.ಈಗ ಪರದೇಶದ ವ್ಯಾಮೋಹದಲ್ಲಿ ಪರಮಾತ್ಮನ ಹೆಸರಿನಲ್ಲಿ ದೇಶಭ್ರಷ್ಟರಾದವರಿಗೆ ಸ್ವಾಗತಿಸುವ ವರಿಗೇ  ಹೆಚ್ಚಿನ ಬೆಲೆ ಎಂದರೆ ಅಜ್ಞಾನ ಮಿತಿಮೀರಿದೆ. ಇದಕ್ಕೆ ಕಾರಣವೇ ಮೂಲ ಶಿಕ್ಷಣ ನೀತಿ. 

ಮಕ್ಕಳಿಗೆ ಆಸ್ತಿ ಮಾಡಲು ಹಣಮಾಡುವ ಮೊದಲು ಮಕ್ಕಳನ್ನೇ ದೇಶದ  ಆಸ್ತಿ ಯಾಗಿಸುವ‌ಸಾತ್ವಿಕ ಶಿಕ್ಷಣ ಮನೆಮನೆಯೊಳಗೆ ‌ನೀಡಿದಾಗಲೇ ಹಿಂದಿನ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.ಹಾಗಂತ ಹಣ ಬೇಡವೆಂದಿಲ್ಲ ಅದರ ಸದ್ಬಳಕೆ ಸದ್ವಿನಿಯೋಗದ ಅಗತ್ಯವಿದೆ.ಹೊರಗಿನ ಕಾರ್ಯಕ್ರಮಕ್ಕೆ ಪ್ರತಿಮೆಗಳಿಗೆ ಸಮಾರಂಭ ಸಮಾವೇಷ,ವೇಷಭೂಷಣ,ನಾಟಕಗಳಿಗೆ ಬಳಸುವ  ಹಣವೂ ದೇಶದ ಸಾಲವೇ ಆಗಿದ್ದು ಜನಸಾಮಾನ್ಯರಿಗೆ  ಮೋಸ ಮಾಡಿಗಳಿಸಿದ್ದರೆ ಅದರಿಂದ ಆತ್ಮತೃಪ್ತಿ ಸಿಗೋದಿಲ್ಲ.ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮ ನಿಗೇ ಮೋಸ ಮಾಡಿದರೆ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗದು.ಇದನ್ನು ಮಹಾತ್ಮರುಗಳು ಹಿಂದೆಯೂ ಹೇಳಿದ್ದರು ಈಗ ಹೇಳುವವರು ಮಹಾತ್ಮರಂತೆ ನಡೆಯುವವರಿಲ್ಲದೆ  ಜನರು ದಾರಿತಪ್ಪಿದ್ದಾರೆ. ಹಿಂದೆ ಪರದೇಶಿ ಪದವನ್ನು ಬೈಗಳಕ್ಕೆ ಬಳಸಿದ್ದರು.ಈಗಿದು‌ ಪ್ರತಿಷ್ಠೆಯ ಪದವಾಗುತ್ತಿದೆ.ಇಷ್ಟೇ ವ್ಯತ್ಯಾಸ.

ಹಣದ ಶ್ರೀಮಂತಿಕೆಗೂ ಜ್ಞಾನದ ಶ್ರೀಮಂತಿಕೆಗೂ ವ್ಯತ್ಯಾಸ ವಿಷ್ಟೆ.ಹಣ ಕಣ್ಣಿಗೆ ಕಾಣುತ್ತದೆ ಅದರ ಹಿಂದೆ ಋಣವೂ ಇರುತ್ತದೆ ಕಾಣೋದಿಲ್ಲ.ಹಾಗೆ ಜ್ಞಾನ ಕಣ್ಣಿಗೆ ಕಾಣೋದಿಲ್ಲ ಹಿಂದೆ ಋಣ ತೀರುತ್ತಿರುತ್ತದೆ.

ಇದರಲ್ಲಿ  ಎರಡೂ ಮಾನವನ ಜೀವನಕ್ಕೆ ಮುಖ್ಯ. ಮೊದಲು ಜ್ಞಾನ ನಂತರ ಜ್ಞಾನದಿಂದ ಹಣ ಬಳಸಿದರೆ ಋಣ ಸಂದಾಯ.

 ಹಿಂದೆ ರಾಜಾಧಿರಾಜರ ಕಾಲದಲ್ಲಿದ್ದ  ಐಶ್ವರ್ಯ ಇಂದು ಕೆಲವೇ ಕೆಲವರ ಪಾಲಾಗಿದೆ.ಅಂದಿನ ರಾಜಪ್ರಭುತ್ವದಲ್ಲಿದ್ದ ಧರ್ಮ ಶಿಕ್ಷಣವೂ ಕೆಲವೇ ಕೆಲವರ ವಶದಲ್ಲಿದೆ. ಆದರೆ ಇದು ಸಮಾಜಕ್ಕೆ  ಯಾವ ಕೊಡುಗೆ ಕೊಟ್ಟಿದೆ? ಪ್ರಜಾಪ್ರಭುತ್ವ ದಲ್ಲಿ  ಎಲ್ಲರ ಸಹಕಾರವಿಲ್ಲದೆ ಏನೂ ನಡೆಯದು. ಹಾಗಂತ ಕಾಣದ ದೇವರ ಹೆಸರಿನಲ್ಲಿ ‌ ಕಾಣದ ಕೈಗಳು ಕೆಲಸ ಮಾಡಿದರೆ ಯಾರಿಗೂ ಕಾಣಿಸೋದಿಲ್ಲವೆಂದು ಹಣಗಳಿಸಿ ಶ್ರೀಮಂತ ರಾದರೆ  ಮೇಲಿರುವ  ಪರಮಾತ್ಮನೇ ಕಾಣೋದಿಲ್ಲ. ಇದೇ ಹಿಂದಿರುಗಿ ಬರೋವಾಗ  ಬಡತನದ ಅನುಭವಾಗೋದು.ಇಲ್ಲಿ  ತೃಪ್ತಿಯಿಲ್ಲದ ಜೀವನವೇ ನಿಜವಾದ ಬಡತನವಾಗಿದೆ. ಹಾಗಾದರೆ ತೃಪ್ತಿ ಹಣದಿಂದ ಖರೀದಿಸಬಹುದೆ? ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವೆ?

ವಿದ್ಯೆಗೂ ಜ್ಞಾನಕ್ಕೂ ವ್ಯತ್ಯಾಸವಿಲ್ಲವೆ? ವಿದ್ಯೆ ಹೊರಗಿನಿಂದ ಕಲಿತರೆ ಜ್ಞಾನ ಒಳಗಿನಿಂದ ಬೆಳೆಯುತ್ತದೆ. ಆದರೆ ಒಳಗಿರುವ ಜ್ಞಾನವೇ‌ಬೇರೆ ವಿದ್ಯೆಯೇ ಬೇರೆಯಾದಾಗಲೇ ಬಡತನ ಹೆಚ್ಚಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ  ಜ್ಞಾನದ ಶಿಕ್ಷಣದಿಂದ  ಮಹಾತ್ಮರಾಗಿಸಬಹುದೆ ಹೊರತು ಸಂಸ್ಕಾರವಿಲ್ಲದ ವಿದ್ಯೆಯಿಂದ ಹಣಗಳಿಸಿದರೂ ಆತ್ಮ ಕ್ಕೆ ತೃಪ್ತಿ ಸಿಗದು. ಇದೇ ಕಾರಣಕ್ಕಾಗಿ ಭಾರತೀಯರ ಸಮಸ್ಯೆ ಹೊರಗಿನಿಂದ ಒಳಗೆ ಹೆಚ್ಚಾಗಿ ಬೆಳೆಯುತ್ತಿದೆ. ಅದಕ್ಕೆ ಪರಿಹಾರವಾಗಿ ಹೊರಗಿನ ಸಾಲ ಬೆಳೆಯುತ್ತಿದೆ. ಸಾಲ ತೀರಿಸಲು ಮನೆ ಬಿಟ್ಟು ದೇಶ ಬಿಟ್ಟು ಮಕ್ಕಳು  ಯುವಕರು ಮಹಿಳೆಯರು ಹೊರಗೆ ಬರುತ್ತಿರುವುದರಿಂದ  ಯಾರಿಗೆ ಲಾಭ? ಯಾರಿಗೆ ನಷ್ಟ?

ಶ್ರೀಮಂತ ರು ಯಾರು? ಬಡತನ ಯಾವುದು? ಸರಳವಾಗಿದೆ ಉತ್ತರ‌ಇದನ್ನೇ ಮಹಾತ್ಮರುಗಳು ತಿಳಿದು ತಿಳಿಸಿರೋದು.

ಅಲ್ಲಿ ಯಾವ ಧರ್ಮ, ಜಾತಿ,ಪಕ್ಷ,ದೇವರಲ್ಲಿ ಬೇದವಿರಲಿಲ್ಲ.

ಇದನ್ನು ಅಪಾರ್ಥ ಮಾಡಿಕೊಂಡು ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ನಿಜವಾದ ಜ್ಞಾನವನ್ನು ಕೊಡದೆ  ದ್ವೇಷ ಬೆಳೆಸಿ  ಹಣದಿಂದ ಶ್ರೀಮಂತ ರಾದರು. ಈಗಲೂ ಇದು ರಾಜಾರೋಷವಾಗಿ ನಡೆದಿದ್ದರೂ ಜನರ ಕಣ್ಣಿಗೆ ಕಾಣೋದು  ಕೇವಲ ಹಣ ಮಾತ್ರ. ಯಾರದ್ದೋ ದುಡ್ಡು ಯಲ್ಲಮ್ಮ ನ ಜಾತ್ರೆ. ದೈವತ್ವ ಪಡೆಯಲು ಬೇಕಾದ ಶಿಕ್ಷಣ ಕೊಡುವುದರಿಂದ  ಮಾನವ ಮಹಾತ್ಮನಾಗಲು ಸಾಧ್ಯ.

ಹೊರಗಿನ‌  ಶಿಕ್ಷಣ ಹಣಕ್ಕಾಗಿ ಒಳಗಿನ ಶಿಕ್ಷಣ ಜ್ಞಾನಕ್ಕಾಗಿ‌

ಜ್ಞಾನದಿಂದ‌ ಗಳಿಸಿದ ಹಣದಿಂದ ಋಣ ತೀರುತ್ತದೆ ಎಂದಾಗ  ನಮ್ಮಲ್ಲಿ  ನಮ್ಮ ಜ್ಞಾನವಿದೆಯೆ?

ಯಾರದ್ದೋ ಜ್ಞಾನದಲ್ಲಿ ನಮ್ಮ ಋಣ ತೀರಿಸುತ್ತಿದ್ದೇವೆಯೆ?

ಹಿಂದೂ ಧರ್ಮ ನಿಂತಿರೋದೇ ಹಿಂದಿನ ಸಾತ್ವಿಕ ತಾತ್ವಿಕ ನೈತಿಕ ಶಿಕ್ಷಣದಲ್ಲಿ ಎಂದಾಗ ಹಿಂದೂ ಮಕ್ಕಳಿಗೆ  ನಮ್ಮ ದೇಶದಲ್ಲಿ ಎಂತಹ ಶಿಕ್ಷಣ  ಸಿಗುತ್ತಿದೆ? ಪ್ರತಿಯೊಬ್ಬರಲ್ಲಿಯೂ

ವಿಶೇಷ ಜ್ಞಾನವಿದೆ. ಗುರುತಿಸುವ ಗುರುವಿಲ್ಲದೆ ಗುರಿತಪ್ಪಿ ನಡೆದಿರೋದು ದುರಂತ. 

"ಕೃಷ್ಣಂವಂದೆ ಜಗದ್ಗುರುಂ" ಎಂದರು ಭಗವದ್ಗೀತೆಯ  ಯೋಗವನ್ನು  ಅಲ್ಲಗೆಳೆದರು. ಅಂದರೆ ಪರಮಸತ್ಯ ಧರ್ಮ ದಿಂದ ಮಾತ್ರ ಯೋಗಿಯಾಗಲು ಸಾಧ್ಯ. ಜ್ಞಾನಯೋಗಿ,ರಾಜಯೋಗಿ,ಭಕ್ತಿಯೋಗಿ,ಕರ್ಮಯೋಗಿ ಎಲ್ಲಾ  ಪರಮಾತ್ಮನೇ ‌ ಆದಾಗ ಬೇರೆ ಹೇಗಾದರು,?

ಶಿವನೇ ಶ್ರೇಷ್ಠ ವೆಂದವರು ಜೊತೆಗಿದ್ದ ಶಕ್ತಿಯನ್ನು ಮರೆತರು.

ಒಟ್ಟಿನಲ್ಲಿ ಭೂಮಿ  ಮೇಲಿದ್ದು ತಿಳಿಯಬೇಕಾದ ಸದ್ವಿಚಾರ ಬಿಟ್ಟು  ದುಷ್ಟರ ಭ್ರಷ್ಟರ ವಿಚಾರವೇ ಪ್ರಚಾರವಾದಾಗ ಬೆಳೆಯೋದು ಯಾರು?

ಮಾನವ ಏನನ್ನು ಕೇಳುವನೋ ಹೇಳುವನೋ ಮಾಡುವನೋ ನೋಡುವನೋ  ಅದೇ ಆಗಿರುವನು. ಇಲ್ಲಿ ಒಳ್ಳೆಯದಿದ್ದರೆ ಯೋಗವಾಗುತ್ತದೆ ಯೋಗ್ಯ ಜೀವನವಾಗಿರುತ್ತದೆ. ತುಂಬಾ ಕಷ್ಟವಿದೆ ಸತ್ಯ ದ ಹುಡುಕಾಟ ಕಾರಣ ಇದು ಒಳಗೇ ಅಡಗಿದೆ..ಹೊರಗಿಲ್ಲ.

"ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ..."

ಎಲ್ಲಾ ನಿನ್ನೊಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗೋದು ಸತ್ಯವಲ್ಲ ಅಸತ್ಯ. ಆದರೂ ಜೀವನ ನಡೆಸಲು  ಪೂರ್ಣ ಸತ್ಯದಿಂದ ಕಷ್ಟ.ಅದರಲ್ಲೂ ಸಂಸಾರ ನಡೆಸಲು ಸಾಧ್ಯವೇ ಇಲ್ಲ.ಹಾಗಂತ  ಸಂಪೂರ್ಣ ಅಸತ್ಯ  ಜೀವನವಾಗಿರದು. 

ಮಾತಿಗಿಂತ ಕೃತಿಯೇ ಮೇಲೆಂದರು.ಕೃತಿಯ ಜೊತೆಗೆ ಪ್ರಕೃತಿ ಇದ್ದರೆ ಇತಿಮಿತಿಯಿರುತ್ತದೆ.ವಿಕೃತಿಯಿದ್ದರೆ  ಬಡತನ ಅತಿಯಾಗುತ್ತದೆ. ಪ್ರಕೃತಿ  ಉಚಿತವಾಗಿಯೇ ಎಲ್ಲವನ್ನೂ ಕೊಟ್ಟರೂ  ಅದನ್ನು ವಿಕೃತಿ ಮಾನವ ತನ್ನ ವಶಕ್ಕೆ ಬಳಸಿ ಸಂಸ್ಕೃತಿ ಮರೆತು ಹಣ ಮಾಡಿದರೆ  ಅದೇ ಮುಂದೆ ಮಾರಕವಾಗುತ್ತದೆ. ಜನನ ಮರಣದ ನಡುವಿನ ಜೀವನದ ರಹಸ್ಯವರಿತರೆ ತೃಪ್ತಿ ಸಿಗುವುದು.

ದೇವರು ಕೊಟ್ಟರೂ ಪೂಜಾರಿ ಬಿಡೋದಿಲ್ಲವೆಂದರೆ  ಏನರ್ಥ?

ಭ್ರಷ್ಟಾಚಾರ ವೆಂದು ತಿಳಿದವರೂ ಭ್ರಷ್ಟರ ಹಣಕ್ಕಾಗಿ ಸತ್ಯ ಧರ್ಮ ಮರೆತರೆ  ಬೇಲಿಯೇ ಎದ್ದು ಹೊಲಮೇಯ್ದಂತೆ.

ವಿನಾಶಕಾಲೇ ವಿಪರೀತ ಬುದ್ದಿ. ಕಲಿಯುವ ಕಾಲ ಕಲಿಗಾಲ.

ಉತ್ತಮವಾದದ್ದನ್ನು ಕಷ್ಟಪಟ್ಟು ಕಲಿತಾಗಲೇ ಕಾಲ ಉತ್ತಮವಾಗಿರೋದು. ಅನಾವಶ್ಯಕ ವಿಷಯದೊಳಗೇ ವಿಷವಿದ್ದರೆ  ಅಮೃತಕ್ಕೆ ಸ್ಥಾನವಿರದು.ಒಟ್ಟಿನಲ್ಲಿ ಎಲ್ಲರೂ ಅಮೃತ ಪುತ್ರರೆ ಆಗಿದ್ದರೂ  ಅಮೃತದಂತಹ ವಿಚಾರಗಳ ಶಿಕ್ಷಣ ಕೊಡದೆ ಆಳಿದವರೆ ಶ್ರೀಮಂತರಾದರು. ವಿಷ ಯಾವತ್ತೂ  ವಿಷವೇ. ಅತಿಯಾದ ಅಮೃತವೂ ವಿಷವಾಗಬಹುದು.ಅದಕ್ಕಾಗಿ  ಎರಡರಲ್ಲಿ ಅಡಗಿರುವ ತತ್ವ ಒಂದೇ ಎಲ್ಲಾ ಭೂಮಿ ಪುತ್ರರು. ಸುಜ್ಞಾನದಿಂದ ಮಾತ್ರ ಭೂ ಋಣ ತೀರಿಸಬಹುದು. ಅಜ್ಞಾನದ  ಹಣದಿಂದ ಸಾಲವೇ ಬೆಳೆಯೋದು. 

- ಅರುಣ ಉದಯಭಾಸ್ಕರ್


No comments:

Post a Comment