Friday, February 16, 2024

Srimad Bhagavad Gita

ಶ್ರೀಮದ್ಭಗವದ್ಗೀತೆ - ಹತ್ತನೇ  ಅಧ್ಯಾಯ ಶ್ಲೋಕ 6


ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ ।

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ॥೬॥

ಮೊದಲ ಮನ್ವಂತರದ ಏಳು ಮಂದಿ ಮಹರ್ಷಿಗಳು [ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ ], ಮೊದಲ ನಾಲ್ವರು ಮನುಗಳು [ಸ್ವಾಯಂಭುವ, ಸ್ವಾರೋಚಿಷ, ಉತ್ತಮ ಮತ್ತು ರೈವತ], ಚತುರ್ಮುಖನ ಮಾನಸ ಪುತ್ರರಾದ ಇವರು ನನ್ನಿಂದಲೆ ಆದವರು.[ನಾಲ್ಕು ವರ್ಣಗಳ ನಿಯಾಮಕರಾಗಿ ನಾಲ್ಕು ಪಂಗಡದಲ್ಲಿ ಸೇರಿದ, ವಿಶೇಷ ಅರಿವಿನ ಕಾರಣ ‘ಮನು’ಗಳೆನಿಸಿದ ಎಲ್ಲ ದೇವತೆಗಳು ನನ್ನಿಂದಲೆ ಆದವರು; ನನ್ನ ಇಚ್ಛೆಯಿಂದಲೆ ಹುಟ್ಟಿ ಬಂದವರು.] ವಿಶ್ವದ ಈ ಜನರೆಲ್ಲ ಅವರದೇ ಸಂತತಿ.

ವಿಶ್ವಸೃಷ್ಟಿಯ ರಹಸ್ಯವನ್ನು ಬ್ರಹ್ಮಜ್ಞಾನಿಗಳಾದ ಮಹರ್ಷಿಗಳು ಹೊರಹಾಕಿರುವುದನ್ನು ನಾವೆಲ್ಲರೂ ಮನುಕುಲದವರಾಗಿದ್ದು ತಿಳಿದು ಭೂಮಿಗೆ ಬಂದಿರುವ ಉದ್ದೇಶವನರಿತು ನಡೆಯುವಾಗ ಅದ್ವೈತ  ಎಲ್ಲೆಡೆಯೂ ಇದೆ ಆದರೆ ಆ ಮೂಲ ಸತ್ಯ ಧರ್ಮ ಇಲ್ಲದೆ  ಹೊರಗಿನ ವಿಜ್ಞಾನ ಜಗತ್ತು ಬೆಳೆಯುತ್ತಿದೆ. ಆಕಾಶದೆತ್ತರ ಹರಡಿರುವ ಸತ್ಯ ಭೂಮಿಯಲ್ಲಿಲ್ಲದೆ ಮನುಕುಲ ಸತ್ಯದ ಹುಡುಕಾಟಕ್ಕೆ ಮನೆಯಿಂದ ಹೊರಗೆ ಬಂದಿರೋದು  ದುರಂತವೆ ಆದರೂ ಮಹರ್ಷಿಗಳು  ಮನೆಯಿಂದ ದೂರವಿದ್ದರೂ ಅವರ ಮನಸ್ಸು ಪರಮಾತ್ಮನೆಡೆಗೆ  ಇದ್ದ ಕಾರಣ ಸತ್ಯದರ್ಶನ ಮಾಡಿಕೊಂಡರು.ಹೆಣ್ಣುಹೊನ್ನು ಮಣ್ಣಿನ ಋಣ ತೀರಿಸಲು ಮನಸ್ಸಿನ  ಶುದ್ದೀಕರಣ  ಅಗತ್ಯವಿದೆ ಎಂದರುಆಗಲೇ ಯೋಗಿ ಆಗುವುದು. ದೈಹಿಕವಾಗಿ ಸಬಲರಾದರೂ ಮಾನಸಿಕ ದುರ್ಭಲತೆಯಿಂದ  ಸ್ವಾವಲಂಬನೆ ಸ್ವತಂತ್ರ. ಜ್ಞಾನ, ಸ್ವಾಭಿಮಾನ ಆತ್ಮನಿರ್ಭರತೆಗೆ  ಕೊರತೆಯಾಗುತ್ತದೆನ್ನುವ ಕಾರಣಕ್ಕಾಗಿ ಮಹರ್ಷಿಗಳ ಆಹಾರ ವಿಹಾರವೂ ಕಟ್ಟುನಿಟ್ಟಾಗಿತ್ತು. ಇದನ್ನು ಭಗವದ್ಗೀತೆ ಬಹಳ ಚೆನ್ನಾಗಿ ತಿಳಿಸುತ್ತದೆ. ಏನನ್ನಾದರೂ ಸಾಧನೆ ಮಾಡಬೇಕಾದರೆ  ಜ್ಞಾನವೇ ಪ್ರಧಾನ. ಇದರಲ್ಲಿ ಸ್ವತಂತ್ರ ಜ್ಞಾನದಿಂದ  ಯೋಗಿಯಾದಾಗಲೇ ಪರಮಾತ್ಮನ ಸತ್ಯದರ್ಶನ. ಯಾರೋ ಯಾವುದೋ ಕಾಲದಲ್ಲಿ ಯಾವುದೋ ಪರಿಸ್ಥಿತಿಯಲ್ಲಿ  ಅರ್ಥ ಮಾಡಿಕೊಂಡಿರೋ ಸತ್ಯ ಇಂದಿಗೂನಮಗೆ ಅನ್ವಯಿಸುತ್ತದೆ ಎಂದಾಗ ಅದೇ ಸತ್ಯ.

ಕಾರಣ ಸತ್ಯ ಒಂದೇ. ಎಲ್ಲಾ ಕಾಲಕ್ಕೂ  ಅದು ಸ್ಥಿರ ವಾಗಿದೆ..ಪರಮಾತ್ಮನ  ಕಾಣೋದಕ್ಕೆ ಆ ಒಂದೇ ಅ ಸತ್ಯದ ಕಡೆಗೆ  ಮನಸ್ಸನ್ನು  ಹೊರಳಿಸಲು ಎಲ್ಲರಿಗೂ ಕಷ್ಟ.ಸತ್ಯ ಕೇಳಿ ತಿಳಿಯಬಹುದು.ಆದರೆ ಅದೇ ಸತ್ಯವನ್ನು ಪರಾಮರ್ಷಿಶಿ ಅರ್ಥ ಮಾಡಿಕೊಳ್ಳಲು  ಯೋಗಮಾರ್ಗದಲ್ಲಿ ನಡೆದವರನ್ನು ಮಹಾತ್ಮರೆಂದರು. ಈಗಲೂ ಇದ್ದಾರೆ ಆದರೆ ಸತ್ಯ ಕಾಣದ. ಕಾರಣ  ಅವರಿಗೆ ಯಾವ ರಾಜಕೀಯದ  ಅಗತ್ಯವಿಲ್ಲದೆ ಸ್ಥಿತಪ್ರಜ್ಞವಂತರಾಗಿ ತಮ್ಮ ನ್ನು ತಾವರಿತು  ಒಂಟಿಯಾಗಿದ್ದಾರೆ.  ದೇವನೊಬ್ಬನೆ ನಾಮ ಹಲವು ,ಹಲವು ನಾಮಗಳಲ್ಲಿರುವ. ಒಬ್ಬನೇ ದೇವರನ್ನು ಕಂಡವರು ವಿರಳ.

ಇದನ್ನು ಅಧ್ವೈತ ವೆಂದರು. ಭೂಮಿ ಒಂದೇ, ದೇಶ ಒಂದೇ,  ಎನ್ನುವ ಸಾಮಾನ್ಯ ಜ್ಞಾನ ಎಲ್ಲರಿಗೂ ತಿಳಿಸುವ ಅಗತ್ಯವಿಲ್ಲ ಆದರೂ  ಇದನ್ನು ಒಪ್ಪಿ ನಡೆಯೋ ಮಾನವರು ಎಲ್ಲರೂ ಆಗೋದಿಲ್ಲ.ಕಾರಣ ನಮ್ಮೊಳಗೇ ಅಡಗಿರುವ ದೇವಾಸುರ ಶಕ್ತಿಯ ನಡುವಿರುವ ಅಂತರದಲ್ಲಿ ಬೆಳೆದು ನಿಂತಿರುವ ಅರ್ಧ ಸತ್ಯದ ರಾಜಕೀಯದ ದಾಳದಲ್ಲಿ ಸಿಲುಕಿರುವ ಕಾಲಾಳುಗಳಿಗೆ ಗೊತ್ತಿಲ್ಲ. ನಮ್ಮಲ್ಲಿ ರಾಜನನ್ನೂ ಬದುಕಿಸುವ ಶಕ್ತಿ ಒಳಗಿದೆ ಎಂದು. ಹೀಗಾಗಿ ಅಧರ್ಮ ವನ್ನು  ನೋಡಿ ಯೂ ತನ್ನ ಮತದಾನವನ್ನು ದಾನವರಿಗೇ ದಾನ ಮಾಡಿ ನಂತರ  ಬೇಡೋ ಪರಿಸ್ಥಿತಿ ಬಂದಿದೆ. 

ಇದಕ್ಕೆ ಕಾರಣ ಅಜ್ಞಾನ.ಅಜ್ಞಾನಕ್ಕೆ ಕಾರಣ ಶಿಕ್ಷಣ. ಯಾರು ಶಿಕ್ಷಣ ನೀಡಿ ಜ್ಞಾನ ತುಂಬಬೇಕಿತ್ತೋ  ಅವರು  ನಮಗೇನೂ ಸಾಧ್ಯವಿಲ್ಲವೆಂದೋ ಅಥವಾ ರಾಜಕೀಯ ಬೇರೆ ಧರ್ಮ ಬೇರೆ ಎಂದೋ‌ನಿರ್ಲಕ್ಷಿಸಿ ಹೊರಗಿನ‌ವ್ಯವಹಾರಕ್ಕೆ ಧರ್ಮಕ್ಕೆ  ಸಹಕಾರ ಕೊಟ್ಟು  ಹಣಗಳಿಸಿದ್ದರೂ ಒಳಗೇ ಅಡಗಿದ್ದ ದೈವತ್ವಕ್ಕೆ  ಸರಿಯಾದ ಶಿಕ್ಷಣವಿಲ್ಲದ ದೇಹಕ್ಕೆ  ಆತ್ಮಜ್ಞಾನದ ಕೊರತೆ ಕಾಡುತ್ತಿದೆ.ಮನಸ್ಸೇ  ದಾರಿತಪ್ಪಿರುವಾಗ‌ ಅದನ್ನು ತಡೆಹಿಡಿದು ಯೋಗ ಮಾರ್ಗದಲ್ಲಿ ನಡೆಸುವುದೆ ಗುರು. 

ಗುರುವಿನ‌ಕೃಪಾಶಿರ್ವಾದವಿಲ್ಲದೆ ಏನೂ  ನಡೆಯದು.

ಅರಿವನ್ನು  ಹಣದಿಂದ ಖರೀದಿಸಿದರೆ  ತಾತ್ಕಾಲಿಕ ತೃಪ್ತಿ. ಹಾಗಾಗಿ ಮಾನವನೊಳಗೇ ಅಡಗಿರುವ ಶಾಶ್ವತವಾದ ಜ್ಞಾನವನ್ನು ಕಷ್ಟಪಟ್ಟು ಯೋಗ ಮಾರ್ಗದಿಂದ  ಗಳಿಸಿದವರು ಮಹರ್ಷಿಗಳು. ಇವರ ಸಂತಾನವೇ ನಾವೆಲ್ಲರೂ ಎಂದಾಗ  ಪರಮಾತ್ಮನ  ಅರಿವಿನೆಡೆಗೆ  ಹೋಗೋದಕ್ಕೆ ಒಳಗಿನ ಜ್ಞಾನವೇ ಬಂಡವಾಳ. ಬಂಡವಾಳವನ್ನು ಸುಶಿಕ್ಷಣ,ಸದ್ಗುರು, ಸತ್ಯ ಧರ್ಮ ದಿಂದ  ಮಾತ್ರ ಸಾಧ್ಯವೆಂದು ಸನಾತನ ಧರ್ಮ ತಿಳಿಸಿದೆ. ಇದರಲ್ಲಿ ರಾಜಕೀಯವಿರದೆ ರಾಜಯೋಗವಿದ್ದರೆ ಯೋಗ. ಇಲ್ಲವಾದರೆ ವೈಭೋಗದ ಜೀವನ.ವೈಭೋಗದಲ್ಲಿ ಸತ್ವ ಸತ್ಯ ತತ್ವಕ್ಕೆ ಬೆಲೆಯಿರದು.ಅದಕ್ಕಾಗಿ ಭ್ರಷ್ಟಾಚಾರದ ರೋಗ ಬೆಳೆದಿದೆ.

No comments:

Post a Comment