Sunday, January 21, 2024

ಮನೆಯಲ್ಲಿ ಶ್ರೀರಾಮನಿಗೆ ಈ ರೀತಿ ಪೂಜೆ ಮಾಡಿ


ಜನವರಿ ೨೨ ರಂದು ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಅಯೋಧ್ಯೆಗೆ ಹೋಗಲು ಸಾಧ್ಯವಾಗದವರು ಮನೆಯಲ್ಲಿ ಶ್ರೀರಾಮನಿಗೆ ಪೂಜೆ ಮಾಡಿ ಆಶರ‍್ವಾದ ಪಡೆಯಬಹುದು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಹುನಿರೀಕ್ಷಿತ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮೂಲಕ ಕೋಟಿ ಕೋಟಿ ಭಾರತೀಯರ ಕನಸು ನನಸಾಗಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿವೆ. ರಾಮನ ನಾಮಸ್ಮರಣೆಯಿಂದ ಇಡೀ ದೇಶ ಗಮನ ಸೆಳೆಯುತ್ತಿದೆ. ನಾಳೆ (ಜನವರಿ ೨೨, ಸೋಮವಾರ) ಇತಿಹಾಸದಲ್ಲಿ ಸುರ‍್ಣಾಕ್ಷರಗಳಲ್ಲಿ ಬರೆಯಲ್ಪಡುವ ದಿನ. ಈ ವಿಶೇಷ ದಿನದಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ರಾಮಲಲ್ಲಾ ಪ್ರತಿಮೆಯ ಪ್ರಾಣ ಪ್ರತಿಷ್ಠೆ ನಡೆಯಲಿದೆ.

ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಬಹುತೇಕರಿಗೆ ಅದು ಸಾಧ್ಯವಾಗುತ್ತಿಲ್ಲ. ಆದರೆ ನೀವು ಅಯೋಧ್ಯೆಗೆ ಹೋಗದೆ ರಾಮನ ಆಶರ‍್ವಾದವನ್ನು ಪಡೆಯಬಹುದು. ಮನೆಯಲ್ಲಿಯೇ ರಾಮನ ಮರ‍್ತಿಯನ್ನು ಪೂಜಿಸಿದರೆ ಭಗವಂತನ ಕೃಪೆಗೆ ಪಾತ್ರರಾಗಬಹುದು. ಶ್ರೀರಾಮನ ಪೂಜಾ ವಿಧಾನವನ್ನು ತಿಳಿಯಿರಿ.

ಮನೆಯಲ್ಲಿ ಶ್ರೀರಾಮನ ಪೂಜೆ ವಿಧಾನ

ಜನವರಿ ೨೨ ರಂದು ಬೇಗ ಎದ್ದು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಪೀಠವನ್ನು ಇಟ್ಟು ಅದರ ಮೇಲೆ ಹಳದಿ ಬಟ್ಟೆಯನ್ನು ಹಾಕಿ. ನಂತರ ಅದರ ಮೇಲೆ ಶ್ರೀರಾಮನ ವಿಗ್ರಹವನ್ನು ಇಡಿ. ದೇವರಿಗೆ ಪಂಚಾಮೃತ ಅಭಿಷೇಕ ಮಾಡಬೇಕು. ಪೂಜೆ ಮಾಡುವಾಗ ಪರ‍್ವಾಭಿಮುಖವಾಗಿ ಕುಳಿತುಕೊಳ್ಳಲು ಮರೆಯಬೇಡಿ.

ಧೂಪ ಮತ್ತು ದೀಪವನ್ನು ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗಲು ಹೂವುಗಳನ್ನು ರ‍್ಪಿಸಿ, ನೈವೇದ್ಯ ಸಲ್ಲಿಸಬೇಕು. ಶ್ರೀರಾಮನ ಜೊತೆಗೆ ಆತನ ಪರಮ ಭಕ್ತನಾದ ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಒಳ್ಳೆಯದು. ಈ ಮಂಗಳಕರ ದಿನದಂದು ರಾಮ ಚರಿತ ಮಾನಸ್, ಶ್ರೀ ರಾಮ ರಕ್ಷಾ ಸ್ತೋತ್ರ ಮತ್ತು ಮಂತ್ರ ಪಠಣಗಳನ್ನು ಮಾಡಬೇಕು. ಅಯೋಧ್ಯೆಗೆ ಹೋಗದಿದ್ದರೂ ಮನೆಯಲ್ಲಿ ರಾಮನ ಮರ‍್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಅಲ್ಲಿಗೆ ಹೋದಷ್ಟೇ ಪುಣ್ಯ ಸಿಗುತ್ತದೆ.

ನಾಳೆ (ಜನವರಿ ೨೨, ಸೋಮವಾರ) ಅಯೋಧ್ಯೆಯಲ್ಲಿ ನಡೆಯಲಿರುವ ಎಲ್ಲಾ ಪೂಜಾ ಕರ‍್ಯಕ್ರಮಗಳನ್ನು ದೂರರ‍್ಶನ ಚಾನೆಲ್‌ನಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ರವರೆಗೆ ನೇರ ಪ್ರಸಾರ ಮಾಡಲಾಗುತ್ತದೆ. ವಿಧಿ ವಿಧಾನಗಳ ಪೂಜಾ ಕರ‍್ಯಕ್ರಮಗಳು ನಡೆಯಲಿವೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಈಗಾಗಲೇ ವಿಧಿ ವಿಧಾನಗಳು ಆರಂಭವಾಗಿವೆ. ರ‍್ಭ ಗುಡಿಯಲ್ಲಿ ಬಾಲ ರಾಮ ವಿಗ್ರಹವನ್ನು ಇರಿಸಲಾಗಿದ್ದು, ಜನವರಿ ೨೦ ರಂದು ಸರಯು ಪವಿತ್ರ ನದಿ ನೀರಿನಿಂದ ದೇವಾಲಯದ ರ‍್ಭಗುಡಿಯನ್ನು ಸ್ವಚ್ಛಗೊಳಿಸಲಾಗಿದೆ. ಇಂದು (ಜನವರಿ ೨೧, ಭಾನುವಾರ) ಬಾಲ ರಾಮನಿಗೆ ೧೨೫ ಕಲಶಗಳನ್ನಿಟ್ಟು ವಿವಿಧ ಪುಣ್ಯಕ್ಷೇತ್ರಗಳಿಂದ ತಂದ ಪುಣ್ಯಜಲದಿಂದ ಸ್ನಾನ ಮಾಡಲಾಗುತ್ತಿದೆ. ಜನವರಿ ೨೨ರಂದು ಮಧ್ಯಾಹ್ನ ೧೨.೩೦ಕ್ಕೆ ರಾಮಲಲ್ಲಾ ಪ್ರಾಣ ಪ್ರತಿಮೆ ಉದ್ಘಾಟನೆಯಾಗಲಿದೆ.

ಜನವರಿ ೨೨ರ ಮತ್ತೊಂದು ವಿಶೇಷ ದಿನ

ಅಯೋಧ್ಯೆಯಲ್ಲಿ ರಾಮಲಲ್ಲಾ ಮರ‍್ತಿ ಪ್ರತಿಷ್ಠಾಪನಾ ದಿನಕ್ಕೆ ಮತ್ತೊಂದು ಮಹತ್ವವಿದೆ. ಅಂದು ಕರ‍್ಮ ದ್ವಾದಶಿ ಇದೆ. ಕ್ಷೀರಸಾಗರದ ಮಂಥನದ ಸಮಯದಲ್ಲಿ, ಭಗವಾನ್ ವಿಷ್ಣುವು ಕರ‍್ಮಾವತಾರ ರೂಪವನ್ನು ಪಡೆಯುತ್ತಾರೆ. ಆದ್ದರಿಂದ ಕರ‍್ಮ ದ್ವಾದಶಿಯ ದಿನವನ್ನು ಭಗವಾನ್ ವಿಷ್ಣುವಿಗೆ ಸರ‍್ಪಿಸಲಾಗಿದೆ. ವಿಷ್ಣುಸಹಸ್ರ ನಾಮಸ್ಮರಣೆ ಮತ್ತು ಪೂಜೆಯನ್ನು ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.

No comments:

Post a Comment