Saturday, February 10, 2024

Can we surrender to god?

ಭಗವಂತನಿಗೆ ಶರಣಾಗಲು ಸಾಧ್ಯವಿದೆಯೆ?



ಪುರಾಣಗಳಲ್ಲಿ ಕೆಲವು ಸೂಕ್ಷ್ಮ ಸತ್ಯ ಗಮನಿಸಿದರೆ ಎಲ್ಲಿಯವರೆಗೆ ಭಕ್ತರು ನೀನೇ ಸರಿ ಎಂದು ಭಗವಂತನಿಗೆ ಶರಣಾಗುವುದಿಲ್ಲವೋ ಅಲ್ಲಿಯವರೆಗೆ  ಭಗವಂತ ಹತ್ತಿರ ಬರದೆ ದೂರವಿರುವನು. ನಮ್ಮ ಹೋರಾಟ ಹೊರಗಿನ ವ್ಯಕ್ತಿಯೊಂದಿಗಿದ್ದಷ್ಟೂ ಒಳಗಿರುವ ಶಕ್ತಿಯ ಪರಿಚಯವಾಗದು. ಹಾಗಾಗಿ ನಾವು ಹೊರಗಿನ ವ್ಯಕ್ತಿ ಯನ್ನು  ಆಶ್ರಯಿಸಿಕೊಂಡೇ ಇರುತ್ತೇವೆ. ಎಲ್ಲರ ಮೂಲಕ ಕೆಲಸ ಮಾಡಿಸೋದು ಬುದ್ದಿ ಕಲಿಸೋದು ಜ್ಞಾನ ಕೊಡೋದು ಎಲ್ಲಾ ಪರಮಾತ್ಮನೇ ಆದರೂ  ಎಲ್ಲರ ಮನಸ್ಸು ದೇವರಂತಿರದು. ಅಂದರೆ ನಿಸ್ವಾರ್ಥ ನಿರಹಂಕಾರ. ಪ್ರತಿಫಲಾಪೇಕ್ಷೆ ಇಲ್ಲದೆ ಯಾವ ವ್ಯಕ್ತಿಯೂ ಸಹಕಾರ ಸಹಾಯ ಮಾಡೋದಿಲ್ಲವಾದ್ದರಿಂದ  ಒಬ್ಬರು ಇನ್ನೊಬ್ಬರ ಗುಲಾಮರೆ. ಗುಲಾಮಗಿರಿ ಹೆಚ್ಚಾದಾಗಲೇ ಮೇಲಿರುವ ಆ ಭಗವಂತನಿಗೆ ಶರಣಾಗೋದು. 

ದ್ರೌಪದಿಯ ವಸ್ತ್ರ ಅಪಹರಣ, ಕುಚೇಲನಿಗೆ ಕೃಷ್ಣನ ಕೃಪೆ, ಕುಬೇರನ  ಪರೀಕ್ಷೆ, ದಾಸ ಸಂತ ಶರಣರ ಅನುಭವ, ಕನಕನ ಭಕ್ತಿ, ಗಜೇಂದ್ರಮೋಕ್ಷ‌ ಇದರಲ್ಲಿ  ಹೊರಗಿನ ವ್ಯಕ್ತಿಯನ್ನು ನಂಬದೆ ಒಳಗಿನ ಶಕ್ತಿಯನ್ನೇ  ಆಶ್ರಯಿಸಿದ್ದರು. ಇದರರ್ಥ ನಮ್ಮ ಆತ್ಮಜಾಗೃತವಾಗಿದ್ದಷ್ಟೂ ನಾವು ಹೊರಗಿರುವ ವ್ಯಕ್ತಿಗಳ ಹಿಂದೆ  ಹೆಚ್ಚು ಬೀಳೋದಿಲ್ಲ.

ಹಾಗೆಯೇ ನಮ್ಮ ದೇಶದ ಸಮಸ್ಯೆಗೆ  ದೇಶದವರಲ್ಲಿಯೇ ಪರಿಹಾರ ಕಂಡುಕೊಂಡರೆ  ಸಮಸ್ಯೆಯಿಂದ ಮುಕ್ತಿ. ವಿದೇಶದೊಂದಿಗೆ‌  ಒಪ್ಪಂದ ಮಾಡಿಕೊಂಡರೆ  ಕಷ್ಟವಿದೆ.  ಒಳಗಿನ ಸಮಸ್ಯೆಗೆ ಪರಿಹಾರ ಒಳಗಿನ‌ಜ್ಞಾನದಿಂದಲೇ ಪಡೆದಾಗ ಉತ್ತಮ ಶಾಂತಿ ತೃಪ್ತಿ.

ಹೊರಗೆ ಕಂಡುಕೊಳ್ಳಲು  ಹೊರಗೆ ನಡೆದಷ್ಟೂ ಮುಗಿಯದ ಕಥೆ. ಪುರಾಣ ಕಾಲದ ಸತ್ಯಕ್ಕೆ ಪುರಾಣವೇ ಸಾಕ್ಷಿ. ಹಿಂದಿನ  ಧರ್ಮ ವನರಿತರೆ ಹಿಂದೂ ಧರ್ಮ ಸುರಕ್ಷಿತ.

ಇದನ್ನರಿಯದೆ ಮುಂದೆ ನಡೆದಷ್ಟೂ ಹಿಂದೆ ಬರೋದು ಕಷ್ಟ.

ರಾಜಕೀಯ ಪಕ್ಷಗಳಲ್ಲಿ ನಡೆದಿರುವ ಪಕ್ಷಾಂತರದಿಂದ   ಜಾತ್ಯಾಂತರವಾಗಲಿ,ಧರ್ಮಾಂತರವಾಗಲಿ  ಮತಾಂತರವಾಗಲಿ ದೇಶಾಂತರವಾಗಲಿ  ತಡೆಯಲಾಗದು ಇದರಿಂದ ಇನ್ನಷ್ಟು ಅಂತರಗಳೇ ಹೆಚ್ಚಾಗುತ್ತಾ  ಒಗ್ಗಟ್ಟು ಮರೆಯಾಗಿ ಬಿಕ್ಕಿಟ್ಟಿನ ಸಮಸ್ಯೆಗಳಿಗೆ ಅವಕಾಶ ಕೊಡುತ್ತದೆನ್ನುವ  ಕಾರಣಕ್ಕಾಗಿ ಮಾಡು ಇಲ್ಲ ಮಡಿ ಎಂದು ತಮ್ಮ ಧರ್ಮ ದೇಶವನ್ನು  ಬಿಡದೆ  ಯಾವ ರಾಜಕೀಯಕ್ಕೆ ಒಳಗಾಗದೆ ಸ್ವತಂತ್ರವಾಗಿ ನಮ್ಮ ಮಹಾತ್ಮರುಗಳು  ದೇವರ ಭಕ್ತರಾಗಿದ್ದೂ ದೇಶಭಕ್ತಿಯೆಡೆಗೆ ನಡೆದರು.ಈಗ ಅಸಂಖ್ಯಾತ ದೇವರಿದ್ದರೂ ಒಂದು ದೇಶವನ್ನು  ಒಗ್ಗಟ್ಟಿನಿಂದ  ಸರಿಪಡಿಸಲಾಗದಿರೋದೆ ದುರಂತ. ಇದಕ್ಕೆ ಕಾರಣವೇ ನಮ್ಮೊಳಗಿರುವ ಸ್ವಾರ್ಥ ಅಹಂಕಾರದ ರಾಜಕೀಯ ಪ್ರಜ್ಞೆ. ಇದರಲ್ಲಿ ಭಗವಂತನಿಗೆ ಶರಣಾಗಲು ಸಾಧ್ಯವಿದೆಯೆ? ನಾನಿರುವಾಗ ಭಗವಂತ ಕಾಣೋದಿಲ್ಲ. ನಾನು ಹೋದಾಗ  ಭಗವಂತನೊಬ್ಬನೆ.ಹಾಗೆ ದೇಶದ ಒಂದು ಸಣ್ಣ ಬಿಂದುವಾಗಿರುವ ನನ್ನಲ್ಲಿ ದೇಶಭಕ್ತಿ ಇದ್ದರೆ ದೇಶ ಕಾಣುತ್ತದೆ. ಭಕ್ತಿಯೇ ಇಲ್ಲದೆ ದೇಶವನ್ನು  ನಡೆಸಲು ಹೋದರೆ ನಾನೇ  ವಿನಾಶಕ್ಕೆ ಕಾರಣವಾಗಬಹುದು ಇದನ್ನು ಪ್ರತಿಯೊಬ್ಬರೂ  ಅರ್ಥ ಮಾಡಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ತಿಳಿದು ಧರ್ಮ ದೆಡೆಗೆ ನಡೆದರೆ ಉತ್ತಮ ಬದಲಾವಣೆ ಸಾಧ್ಯವಿದೆ. ಬದಲಾವಣೆ ಜಗದ ನಿಯಮ.ಆ ಜಗತ್ತನ್ನು ಬದಲಾಯಿಸುವ ಮೊದಲು ಒಳಗಿರುವ ಜಗತ್ತನ್ನು ಅರ್ಥ ಮಾಡಿಕೊಂಡರೆ  ಉತ್ತಮ ಫಲ.

- ಅರುಣ ಉದಯಭಾಸ್ಕರ್



No comments:

Post a Comment