Wednesday, September 21, 2022

Gandhi's philosophy is the solution to all the world's problems

ಜಗತ್ತಿನ ಎಲ್ಲ ಸಮಸ್ಯೆಗೂ ಗಾಂಧಿ ತತ್ವ ಪರಿಹಾರ


ಮಹಾತ್ಮ ಗಾಂಧೀಜಿ ಈ ದೇಶದ ಆತ್ಮ, ಅಂತಃಶಕ್ತಿ. ಜಗತ್ತಿನ ಸರ್ವ ಸಮಸ್ಯೆಗಳಿಗೂ ಗಾಂಧಿ ತತ್ವಗಳು ಪರಿಹಾರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಾಂಧೀಜಿಯವರ ೧೫೦ನೇ ಜನ್ಮದಿನದ ನಿಮಿತ್ತ ನ್ಯೂಯಾರ್ಕ್ ಟೈಮ್ಸ್ಗೆ ಬರೆದಿರುವ 'ವೈ ಇಂಡಿಯಾ ಆ್ಯಂಡ್ ದಿ ವರ್ಲ್ಡ್ ನೀಡ್ ಗಾಂಧಿ' (ಭಾರತ ಮತ್ತು ವಿಶ್ವಕ್ಕೆ ಗಾಂಧಿ ಏಕೆ ಬೇಕು) ಲೇಖನದಲ್ಲಿಮೋದಿ ಅವರು ಮಹಾತ್ಮನ ಬೋಧನೆಗಳು ಇಂದಿಗೂ ನಮಗೆ ದಾರಿದೀಪವಾಗಿವೆ. ಮುಂದಿನ ಪೀಳಿಗೆಗೆ ಅವರ ತತ್ವಾದರ್ಶಗಳನ್ನು ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರನ್ನು ಉಲ್ಲ್ಟೇಖಿಸುವ ಮೂಲಕ 'ಐನ್‌ಸ್ಟ್ಟೀನ್ ಚಾಲೆಂಜ್' ಮೂಲಕ ಮಹಾತ್ಮನಿಗೆ ಗೌರವ ಸಲ್ಲಿಸುವಂತೆ ಕರೆ ನೀಡಿದ್ದಾರೆ. ''ಮಹಾತ್ಮನ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೂ ಹೇಗೆ ಕೊಂಡೊಯ್ಯತ್ತ್ಟೀರಿ ಎಂದರೆ ಇದಕ್ಕೆ ನಾನು ಐನ್‌ಸ್ಟ್ಟೀನ್ ಚಾಲೆಂಜ್ ಎಂದು ಕರೆಯುತ್ತ್ಟೇನೆ. ಅಂದರೆ ಗಾಂಧಿ ಅವರ ವಿಚಾರಧಾರೆಗಳನ್ನು ಹೊಸ ಹೊಸ ಅನ್ವ್ಟೇಷಣೆಗಳ ಮೂಲಕ ಹೇಗೆ ಮುಂದಿನ ಜಗತ್ತಿಗೆ ಪರಿಚಯಿಸಬಹುದು ಎಂಬ ಚಿಂತನೆಯೇ ಐನ್‌ಸ್ಟ್ಟೀನ್ ಚಾಲೆಂಜ್ ಎನಿಸಿಕೊಳ್ಳುತ್ತದೆ,'' ಎಂದಿರುವ ಮೋದಿ ಅವರು ಈ ನಿಟ್ಟಿನಲ್ಲಿಚಿತ್ತ ಹರಿಸುವಂತೆ ಚಿಂತಕರಿಗೆ, ಉದ್ಯಮಿಗಳಿಗೆ ಹಾಗೂ ಟೆಕ್ ದಿಗ್ಗಜರಿಗೆ ಕರೆ ನೀಡಿದ್ದಾರೆ. ದಂಡಿ ಯಾತ್ರೆಯನ್ನು ಸ್ಮರಿಸಿರುವ ಮೋದಿ ಅವರು, ''ಒಂದು ಹಿಡಿ ಉಪ್ಪು ಹಿಡಿದು ಇಡೀ ದೇಶವನ್ನ್ಟೇ ಆವರಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ಮಹಾನ್ ಚೇತನ ಗಾಂಧಿ,'' ಎಂದು ಹಾಡಿ ಹೊಗಳಿದ್ದಾರೆ. ಗಾಂಧಿ ಅವರ ಅಹಿಂಸಾ ತತ್ವವನ್ನು ಸ್ಮರಿಸಿದ್ದಾರೆ.

No comments:

Post a Comment