Friday, December 27, 2024

Guru Nanak Childhood Story

 ರೈತನ ಕಾಳು, ದೇವರ ಕಾಳು. ಗುರುನಾನಕರ ಬಾಲ್ಯದ ಕಥೆ


ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ ಕಾಳುಗಳನ್ನು ತಿನ್ನತೊಡಗಿದವು.

ಒಂದೂರಿನಲ್ಲಿ ಒಬ್ಬ ಬಾಲಕ. ಅವನು ವ್ಯವಹಾರ ಜ್ಞಾನ ಕಲಿಯಲೆಂದು ತಂದೆ ಶಾಲೆಗೆ ಸೇರಿಸಿದರು. ಅವನು ತಪ್ಪಿಸಿಕೊಂಡು ಕಾಡು ಸೇರುತ್ತಿದ್ದ, ಭಗವಂತನನ್ನು ಧ್ಯಾನಿಸುತ್ತಾ ಕುಳಿತುಬಿಡುತ್ತಿದ್ದ. ಒಮ್ಮೆ ಅದೇ ಊರಿನ ವೃದ್ಧನೊಬ್ಬ ತರ‍್ಥಯಾತ್ರೆ ಹೊರಟ. ತನ್ನ ಗದ್ದೆ ನೊಡಿಕೊಳ್ಳಲು ಒಂದು ಜನ ಬೇಕಾಗಿತ್ತು. ಆ ಬಾಲಕ ಬಹಳ ಒಳ್ಳೆಯ, ವಿನಯವಂತ ಹುಡುಗನೆಂದು ಹೆಸರಾಗಿದ್ದ. ವೃದ್ಧ ಅವನ ಬಳಿ ಹೋಗಿ, ನೋಡು..! ನಾನು ತರ‍್ಥಯಾತ್ರೆಗೆ ಹೋಗುತ್ತಿದ್ದೇನೆ. ನಾಲ್ಕೈದು ದಿನಗಳಲ್ಲಿ ಮರಳಿ ಬಂದುಬಿಡುತ್ತೇನೆ. ಅಲ್ಲಿಯವರೆಗೆ ನನ್ನ ಹೊಲವನ್ನು ಕಾಯುತ್ತಿರು. ನಿನಗೆ ಚೀಲದ ತುಂಬ ಗೋಧಿ ಕೊಡುತ್ತೇನೆ. ನನ್ನ ಹೊಲದಲ್ಲಿ ಹತ್ತು ಚೀಲ ಗೋಧಿ ಬೆಳೆಯುತ್ತದೆ ಎಂದ.

ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ ಕಾಳುಗಳನ್ನು ತಿನ್ನತೊಡಗಿದವು. 

ಬಾಲಕನಿಗೆ ಅವನ್ನು ಓಡಿಸಲು ಮನಸ್ಸಾಗಲಿಲ್ಲ. ಆಕಾಶದೆಡೆ ಮುಖ ಮಾಡಿ ಕಣ್ಮುಚ್ಚಿದ. ದೇವರೇ, ರೈತನ ಗೋಧಿಯ ರಕ್ಷಣೆ ಮಾಡು. ಹಕ್ಕಿಗಳಿಗೆ ನಿನ್ನ ಕಾಳುಗಳನ್ನು ತಿನ್ನಿಸು ಎಂದು ಪ್ರರ‍್ಥನೆ ಮಾಡಿದ. ಹೀಗೇ ನಾಲ್ಕು ದಿನ ಕಳೆಯಿತು. ಹಕ್ಕಿಗಳು ಪ್ರತಿ ದಿನವೂ ಬಂದು ಪ್ರತಿದಿನ ಕಾಳು ತಿನ್ನುತ್ತಿದ್ದವು. ನಾಲ್ಕು ದಿನಗಳ ನಂತರ ರೈತನು ಮರಳಿ ಬಂದ. ಹೊಲದಲ್ಲಿನ ಬೆಳೆಯ ಮೇಲಿನ ಹಕ್ಕಿಗಳ ಗುಂಪನ್ನು ನೋಡಿ ಅವನಿಗೆ ವಿಪರೀತ ಕೋಪ ಬಂತು. ಬಾಲಕ ಅವನನ್ನು ಸಮಾಧಾನಪಡಿಸುತ್ತಾ, ಅಜ್ಜ..! ಕೋಪ ಬೇಡ..... ಪೈರು ಕೊಯ್ದು, ಕಾಳಿನ ಎಣಿಕೆ ಮಾಡಿ. ನಾನು ದೇವರ ಕಾಳನ್ನು ಹಕ್ಕಿಗಳಿಗೆ ತಿನಿಸಿದ್ದೇನೆ. ನಿಮ್ಮ ಕಾಳು ಹಾಗೇ ಇದೆ ಎಂದ. ಅದರಂತೆ ರೈತ ಹೊಲದ ಬೆಳೆಯನ್ನು ಕೊಯ್ದು. ಕಾಳುಗಳನ್ನು ಬರ‍್ಪಡಿಸಿ, ಅಳೆದು ನೋಡಿದ. ಏನಾಶ್ರ‍್ಯ..! ಹನ್ನೊಂದು ಗೋಧಿಯ ಚೀಲಗಳು ತುಂಬಿದ್ದವು..! 

ಬಾಲಕ ಹೇಳಿದಂತೆಯೇ ಹಕ್ಕಿಗಳು ತಿಂದಿದ್ದು ದೇವರ ಕಾಳು. ರೈತನಿಗೆ ಒಂದು ಮೂಟೆ ಹೆಚ್ಚು ಪಾಲು..! ಇದು ಸಾಧ್ಯವಾಗಿದ್ದು ಬಾಲಕನ ಶ್ರದ್ಧೆಯಿಂದ. ಈ ಬಾಲಕ ಯಾರು ಗೊತ್ತೆ..? ಸಿಕ್ಖ್ ಮತದ ಸ್ಥಾಪಕ ಗುರು ನಾನಕ್..!

ನಮ್ಮ ಶರೀರ ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೇ ಈ ಹೊಲದಲ್ಲಿ ಬಿತ್ತುವ ಬೀಜಗಳು. ಈ ಬೀಜಗಳು ಮೊಳಕೆ ಒಡೆಯುವುದು ಪ್ರೇಮದಿಂದ. ಅರಳಿ ಫಲ ನೀಡುವುದೂ ಪ್ರೇಮದಿಂದಲೇ. ನಮ್ಮ ಹೊಲದಿಂದ ಈ ರೀತಿಯಲ್ಲಿ ಕುಟುಂಬವನ್ನು ಪೊರೆಯುವಷ್ಟು ಆದಾಯ ಹೊಂದಿಸುವ ಫಸಲು ತೆಗೆಯಬಹುದು ಎನ್ನುತ್ತಿದ್ದ ಗುರು ನಾನಕ್, ಬದುಕಿದ್ದು ಅಕ್ಷರಶಃ ಹಾಗೆಯೇ..

 ಸಂಗ್ರಹ: ಶ್ರೀ ಮಹೇಶ ಹೊಸಮನಿ

Wednesday, December 18, 2024

ಭ್ರಷ್ಟಾಚಾರ, ಲಂಚ, ಸ್ವಜನ ಪಕ್ಷಪಾತ, ಕರ್ತವ್ಯಲೋಪ...



ತೀರಾ ಇತ್ತೀಚಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿರುವ ವಾದಿರಾಜ್ ಫೋನ್ ಮಾಡಿದರು. ನಾನಾಗ ಪ್ರಯಾಣದಲ್ಲಿದ್ದೆ. ಸವಿಸ್ತಾರವಾಗಿ ಮಾತನಾಡಲಾಗಲಿಲ್ಲ. ಅವರ ಬ್ಯಾಂಕ್‌ನಲ್ಲಿ ಒಂದು ಕಾರ್ಯಕ್ರಮ ಇರುವುದಾಗಿಯೂ, ಅದರಲ್ಲಿ ಅತಿಥಿಯಾಗಿ ಭಾಗವಹಿಸಬೇಕೆಂದು ತಿಳಿಸಿದರು. ನಾನು ಒಪ್ಪಿಗೆ ಕೊಟ್ಟೆ. ಅವರ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಕಾರ್ಯಕ್ರಮ ರೂಪಿಸಿದರು. ಎರಡು ದಿನಗಳ ನಂತರ ಸಾಯಂಕಾಲ ತೀರಾ ಅನಿರೀಕ್ಷಿತವಾಗಿ ದಾರಿಯಲ್ಲಿ ಸಿಕ್ಕರು. ಅವರೇನು ನನಗೆ ಹೊಸಬರಲ್ಲ. ಇಪ್ಪತ್ತು ವರ್ಷಗಳ ಸಂಪರ್ಕ. ಕಾರಣ, ನಾನು ಎಸ್. ಬಿ.ಐ.ನ ಗ್ರಾಹಕ ಇಲ್ಲವೆ ಖಾತೆದಾರ. ಅದಕ್ಕಿಂತಲೂ ಮೀರಿದ್ದು ನಮ್ಮಿಬ್ಬರ ಆಪ್ತತೆ. ದಾರಿಯಲ್ಲಿ ಸಿಕ್ಕಾಗ ಮಾತನಾಡುತ್ತಾ ವಿಷಯಕ್ಕೆ ಬಂದೆವು. ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಕೇಂದ್ರ ಸರ್ಕಾರದ ಜಾಗೃತಿ ದಳದಿಂದ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಸಾರ್ವಜನಿಕರೂ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ. ವಿಷಯ ಕುರಿತು ಹಲವಾರು ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆಯೂ ಇತ್ತು. ಸಂಜೆ ಐದೂವರೆ ಗಂಟೆಗೆ ಬರಲು ಹೇಳಿದ್ದರಾದರೂ ಬ್ಯಾಂಕ್ ಸಿಬ್ಬಂದಿಯ ಕೆಲಸ ಸಾಮಾನ್ಯರು ತಿಳಿದುಕೊಮಡಷ್ಟು ಸುಲಭವಾಗಿಲ್ಲ. ರಾತ್ರಿ ಏಳೂವರೆ-ಎಂಟು ಗಂಟೆಯಾದರೂ ಮುಗಿಯದಷ್ಟು ಕಾರ್ಯ.

ಬ್ಯಾಂಕ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರೇ ಸಭಿಕರು. ನಾನಾದರೋ ಎಂಟು ಗಂಟೆಗೆ ಬೇರೊಂದು ಕಾರ್ಯಕ್ರಮಕ್ಕೆ ತೆರಳಲೇಬೇಕಾದ ಅನಿವಾರ್ಯತೆ. ಪ್ರಯುಕ್ತ, ಗಡಿಬಿಡಿಯಲ್ಲಿ ನನ್ನ ಮಾತು ಮುಗಿಸಿದೆ. ಒಂದು ರೀತಿ ಪುರೋಹಿತರ ಶೈಲಿಯಲ್ಲಿ. ಪುರೋಹಿತರನ್ನೇ ನೋಡಿ. ಬೇರೆಡೆ  ಯಾವುದೇ ಕಾರ್ಯ ಇಲ್ಲದೇ ಹೋದರೆ ನಿಧಾನವಾಗಿ ಪ್ರತಿಯೊಂದು ಶಾಸ್ತçವನ್ನು ಮಾಡಿ ಮುಗಿಸುತ್ತಾರೆ. ಒಂದೇ ಒಂದು ಮಂತ್ರವನ್ನೂ ಬಿಡುವುದಿಲ್ಲ. ಈ ಮಧ್ಯೆ ಅಲ್ಲಲ್ಲಿ ಗಾಯಿತ್ರಿ ಮಂತ್ರ. ಬಹಳ ನಿಧಾನವಾಗಿ ಕಾರ್ಯ ಮುಗಿಸಿ ತಾಂಬೂಲದೊAದಿಗೆ ಕಾಣಿಕೆ ಪಡೆದು ಮಂತ್ರಾಕ್ಷತೆ ಹಾಕಿ ಆಶೀರ್ವಾದ ಮಾಡಿ ತೆರಳುತ್ತಾರೆ. ಒಂದೇ ದಿನ ಎರಡು ಕಾರ್ಯಗಳಿದ್ದರೆ ಮುಗಿದೇ ಹೋಯಿತು. ಅಗತ್ಯವಿರುವಷ್ಟು ಮಂತ್ರ. ಕೆಲವೊಂದು ವಸ್ತುಗಳು ಕಡಿಮೆ ಇದ್ದರೂ ಇಲ್ಲವೇ ಇಲ್ಲದೇ ಹೋದರೂ ಮಾಫಿ. ಕಾಣಿಕೆ ಪಡೆದು ಓಡುತ್ತಾರೆ. ಅಂದು ನಾನು ಮಾಡಿದ್ದು ಅದನ್ನೆ. ಅಂದು ಸವಿಸ್ತಾರವಾಗಿ ಹೇಳದೇ ಇದ್ದುದರಿಂದ ಇಲ್ಲಿ ಬರೆಯಬೇಕಾಯಿತು.

ಲಂಚ, ಭ್ರಷ್ಟಾಚಾರ, ಸೃಜನ ಪಕ್ಷಪಾತ ಇವುಗಳು ಅಸಹ್ಯ ಹುಟ್ಟಿಸುತ್ತವೆ. ಕರ್ತವ್ಯಲೋಪ ಸಿಟ್ಟು ತರಿಸುತ್ತದೆ.

ಒಬ್ಬ ಹಿರಿಯ ಪ್ರಾಮಾಣಿಕ ಐ.ಎ.ಎಸ್. ಅಧಿಕಾರಿಯಿದ್ದ. ಕುಡಿಯುವ ನೀರನ್ನು ಮನೆಯಿಂದ ತರುತ್ತಿದ್ದ. ಅವನ ಪ್ರಾಮಾಣಿಕತೆ ನೂರಕ್ಕೆ ಇನ್ನೂರರಷ್ಟು. ಅದು ಅವನಿಗೆ, ಹೆಮ್ಮೆಯೇನೋ ತಿಳಿಯದು. ಒಮ್ಮೆ ಅವನದೇ ಇಲಾಖೆಯ ನೂರಾರು ನೌಕರರ ಭಡ್ತಿಗೆ ಸಂಬAಧಿಸಿದ ಕಡತವೊಂದು ಆತನ ಬಳಿ ಬಂದಿತು.ಆ ವೇಳೆಗೆ ಎಲ್ಲಾ ಹಂತಗಳಲ್ಲಿ ಪರಿಶೀಲನೆಗೊಳಗಾಗಿ ಅಲ್ಲಿಗೆ ತಲುಪಿರುತ್ತದೆ. ಆತ ಒಂದು ಸಹಿ ಹಾಕಿದರೆ ಎಲ್ಲರಿಗೂ ಬಡ್ತಿಯ ಅವಕಾಶ. ಆದರೆ ಮೂರು ತಿಂಗಳಾದರೂ ಸಹಿ ಮಾಡಲಿಲ್ಲ. ನೌಕರರು ಚಿಂತೆಗೊಳಗಾದರು. ಐ.ಎ.ಎಸ್. ಅಧಿಕಾರಿಯ ಆಪ್ತರೊಬ್ಬರಿಗೆ ಅರಿಕೆ ಮಾಡಿಕೊಂಡರು. ಆದರೆ ಪ್ರಾಮಾಣಿಕ ಅಧಿಕಾರಿಯ ಉತ್ತರ “ನಾನೇನು ಲಂಚ ಪಡೆದಿದ್ದೇನೆಯೆ?  ಮಾಡಿದರಾಯಿತು ಬಿಡಿ” ಎಂದು ಬಿಟ್ಟರು. ಕೆಲವರು ನಿವೃತ್ತಿಗೆ  ತಿಂಗಳುಗಳು ಹಾಗೂ ವರ್ಷವಷ್ಟೇ ಇದ್ದವರು. ಎಲ್ಲರೂ ಸೇರಿ ಐ.ಎ.ಎಸ್. ಅಧಿಕಾರಿಯನ್ನೇ ವರ್ಗಾವಣೆ ಮಾಡಿಸಿದರು. ಅವರ ಸ್ಥಾನಕ್ಕೆ ಬಂದ ಹೊಸ ಅಧಿಕಾರಿ ತಕ್ಷಣವೇ ಬಡ್ತಿಗೆ ಸಹಿ ಹಾಕಿದರು. ಎಲ್ಲವೂ ಸರಿ ಇದ್ದು ಹಣ ಪಡೆದು ಕೆಲಸ ಮಾಡಿಕೊಟ್ಟರೆ ಅದು ಲಂಚ.

ಐ.ಎ.ಎಸ್. ಅಧಿಕಾರಿ ಪ್ರಾಮಾಣಿಕನೆ. ಆದರೆ ಮಾಡಬೇಕಾದ ಕೆಲಸ ಮಾಡಲಿಲ್ಲ. ವಿಷಯ ಲೋಕಾಯುಕ್ತ ಗಮನಕ್ಕೆ ಬಂದಿತು. ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಪ್ರಾಮಾಣಿಕ ಐ.ಎ.ಎಸ್. ಅಧಿಕಾರಿಯ ಮೇಲೆ ಪ್ರಕರಣ ದಾಖಲಾಯಿತು. ಮಾಡಬೇಕಾದ ಕೆಲಸ ಮಾಡದೇ ಹೋದರೂ ಭ್ರಷ್ಟಾಚಾರವೆ. ಇದೇ ಕಾರಣಕ್ಕೆ ಎನ್. ವೆಂಕಟಾಚಲಯ್ಯನವರು ಲೋಕಾಯುಕ್ತರಾಗಿದ್ದ ಸಂದರ್ಭದಲ್ಲಿ ಎಲ್ಲೆಡೆ ಸುತ್ತಿ ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿದ್ದರು. ಆ ಮೂಲಕ ಜನರಿಗೆ ತ್ವರಿತ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದರು. ಲೋಕಾಯುಕ್ತರ ಮೂಲ ಆಶಯ ಅದೆ ನೀರಾವರಿ ಇಲಾಖೆಯಲ್ಲಿ ಒಂದು ಯೋಜನೆ ಕೈಗೆತ್ತಿಕೊಂಡರು. ನಾಲೆ ನಿರ್ಮಾಣದ ಯೋಜನೆ. ಅಂದಾಜು ವೆಚ್ಚ ತಯಾರಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಯಿತು. ಎಂಜಿನಿಯರ್ ಒಬ್ಬ ಒಂದು ನೂರು ಕೋಟಿ ರೂಪಾಯಿಗಳ ಯೋಜನಾ ವೆಚ್ಚ ಸಿದ್ಧಪಡಿಸಿದ. ಆದರೆ ಸಚಿವರಿಗೆ ಒಪ್ಪಿಗೆಯಾಗಲಿಲ್ಲ. ಮನ್ನೂರು ಕೋಟಿಗೆ ಏರಿಸಲು ಸುಚಿಸಿದರು. ಅಧಿಕಾರಿ ಒಪ್ಪಲಿಲ್ಲ. ಯಥಾಪ್ರಕಾರ ವರ್ಗಾವಣೆ. ಅದೇ ಜಾಗಕ್ಕೆ ಬಂದ ಮತ್ತೊಬ್ಬ ಅಧಿಕಾರಿ ನಾಲ್ಕು ನೂರು ಕೋಟಿಗಳ ಅಂದಾಜು ವೆಚ್ಚ ರೂಪಿಸಿದ  ಆತ ಮಾಡಿದ್ದಿಷ್ಟೆ. ಅಂತಹ ಕಲ್ಲು ಮಿಶ್ರಿತವಲ್ಲದ ಭೂಮಿಯಾದರು ಬಂಡೆಯಿAದ ಕೂಡಿದ ಭೂಮಿಯೆಂದು ವಿವರಿಸಿದ. ಸಹಜವಾಗಿಯೇ ಬಂಡೆ ಸಿಡಿಸುವುದು, ಇತ್ಯಾದಿ ಯೋಜನಾವೆಚ್ಚ ಏರಿತು. ಇಲ್ಲಿ ಮಾಡಬಾರದ್ದನ್ನು ಮಾಡಿದ್ದರಿಂದ ಇದು ಭ್ರಷ್ಟಾಚಾರ. ಕೃಷ್ಣ ಮೇಲ್ದಂಡೆಯ ವಿಷಯದಲ್ಲಿ ಇದೇ ಆಗಿರುವುದು. ಇಂದಿಗೂ ಸಿ.ಐ.ಡಿ ಯಲ್ಲಿ ಪ್ರಕರಣ ಬಾಕಿ ಇದೆ. ಸಂಬAಧಿಸಿದವರೆಲ್ಲರೂ ಕಾಲವಾದ ಮೇಲೆ ಷೆರಾ ಬರೆದರೆ ಮುಗಿಯಿತು.

ಮಾಡಬೇಕಾದುದ್ದನ್ನು ಮಾಡದೇ ಹೋದರೆ, ಹಾಗೆಯೆ ಮಾಡಬಾರದ್ದನ್ನು ಮಾಡಿದರೆ ಅದು ಭ್ರಷ್ಟಾಚಾರ.

ಒಬ್ಬರು ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರು ತಮ್ಮ ಸಮಯ ಮುಗಿಯಿತೆಂದು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅದು ಭ್ರಷ್ಟಾಚಾರ. ಅಗತ್ಯ ಸೇವೆಗಳಿಗೆ ಸಮಯವೆಂಬುದಿಲ್ಲ. ಆದರೆ ವೈದ್ಯನೊಬ್ಬ ಶಸ್ತçಚಿಕಿತ್ಸೆ ಮಾಡುವಾಗ ಕತ್ತರಿಯನ್ನೋ ಇಲ್ಲವೆ ಉಪಕರಣವನ್ನೋ ಹೊಟ್ಟೆಯೊಳಗೆ ಬಿಟ್ಟು ಹೊಲಿಗೆ ಹಾಕಿದ ಪ್ರಸಂಗಗಳನ್ನು ಓದಿದ್ದೇವೆ. ಅದು ಭ್ರಷ್ಟಾಚಾರವಲ್ಲ. ಅದು ಕರ್ತವ್ಯಲೋಪ. ಒತ್ತಡದಿಮದಲೋ, ಕೆಲವೊಮ್ಮೆ ಉದಾಸೀನದಿಂದಲೋ ಆಗುವ ತಪ್ಪುಗಳು. ಅಂತಹ ಸಂದರ್ಭಗಳಲ್ಲಿ ಸಂಬAಧಿಸಿದವರ ಮೇಲೆ ಕ್ರಮ ಕೈಗೊಳ್ಳುವುದೂ ಉಂಟು.

ಶಿಕ್ಷಕರನ್ನೇ ತೆಗೆದುಕೊಳ್ಳಿ ಮೌಲ್ಯಮಾಪನಕ್ಕಾಗಿ ತೆರಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದು ಕಾಕತಾಳೀಯವೂ ಆಗಿರುತ್ತದೆ. ಉದಾಹರಣೆಗೆ ಕೇವಲ ಐದಾರು ದಿನಗಳಲ್ಲಿ ಮೌಲ್ಯ ಮಾಪನ ಮುಗಿಯುವ ಸಂದರ್ಭ ಬರುತ್ತದೆ. ಅಂತಹ ಸಂದರ್ಭದಲ್ಲಿ ಮೊದಲಿನ ಹಾಗೂ ಕಡೆಯ ದಿನವನ್ನು ಹೊರತು ಪಡಿಸಿದರೆ ಉಳಿಯುವುದು ಮೂರರಿಂದ ನಾಲ್ಕು ದಿನ. ಆ ಮರ‍್ನಾಲ್ಕು ದಿನಗಳಲ್ಲಿ ಭಾನುವಾರವೋ ಇಲ್ಲ ಮತ್ಯಾವುದೋ ರಜೆ ಬಂದರೆ ಮುಗಿದೇ ಹೋಯಿತು. ಇದರ ಜೊತೆಗೆ ಕಾಕತಾಳೀಯವೆಂಬAತೆ ಒಬ್ಬ ಶಿಕ್ಷಕನಿಗೆ ಬರುವ ಎಲ್ಲ ಉತ್ತರ ಪತ್ರಿಕೆಗಳು ಎಂಭತ್ತಕ್ಕೂ ಹೆಚ್ಚು ಅಂಕಗಳನ್ನು ಪಡೆಯುವಂತಿದ್ದರೆ ಕತೆ ಮುಗಿದಂತೆ. ಆಗ ಸಹಜವಾಗಿಯೇ ಒತ್ತಡ ಉಂಟಾಗುತ್ತದೆ. ಉತ್ತರ ಪತ್ರಿಕೆಗಳಲ್ಲಿನ  ಉತ್ತರಗಳನ್ನು ನೋಡುವುದಕ್ಕಿಂತ ಹೆಚ್ಚಿನದಾಗಿ ಗಡಿಯಾರದ ಕಡೆ ಕಣ್ಣು ಹೊರಳುತ್ತದೆ. ಸಹಜವಾಗಿಯೇ ಎಣಿಕೆಯಲ್ಲಿಯೋ ಇಲ್ಲವೇ ಮೌಲ್ಯಮಾಪನದಲ್ಲಿಯೇ ಏರು ಪೇರಾಗಿರುತ್ತದೆ. 

ಅಭ್ಯರ್ಥಿಗಳು ಮರು ಎಣಿಕೆಗೋ ಇಲ್ಲವೇ ಮರು ಮೌಲ್ಯ ಮಾಪನಕ್ಕೋ ಅರ್ಜಿ ಸಲ್ಲಿಸುತ್ತಾರೆ. ತಪ್ಪುಗಳು ಹೊರ ಬರುತ್ತವೆ. ಸಂಬAಧಿಸಿದ ಶಿಕ್ಷಕ ವಿವರಣೆ ಕೊಡಬೇಕು. ದಂಡ ಇತ್ಯಾದಿ ಇದ್ದದ್ದೇ. ಇದೂ ಕೂಡ ಕರ್ತವ್ಯಲೋಪ. ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪಲ್ಲ.

ಭ್ರಷ್ಟಾಚಾರದ ಪ್ರಕರಣಗಳು ಯಾವಾಗ ಬೇಕಾದರೂ ಹೊರಬರಬಹುದು. ಮಾಹಿತಿ ಹಕ್ಕಿನ ಮೂಲಕ ಅಗತ್ಯ ಮಾಹಿತಿ ಪಡೆದು ಲೋಕಾಯುಕ್ತಕ್ಕೆ ಪ್ರಕರಣ ದಾಖಲಿಸಿದರೆ ಮುಗಿಯಿತು. ಅದೆಷ್ಟೇ ಹಳೆಯ ಪ್ರಕರಣವಾದರೂ ಜೀವ ಪಡೆದುಕೊಳ್ಳುತ್ತದೆ. ತನಿಖೆ ವಿಚಾರಣೆೆ, ಅಗತ್ಯ ಬಿದ್ದರೆ ಆರೋಪ ಪಟ್ಟಿ, ನ್ಯಾಯಾಲಯ, ವಾದ, ವಿವಾದ, ತೀರ್ಪು.

ಲಂಚದ ವಿಷಯವೇ ಬೇರೆ. ಒಬ್ಬ ನೌಕರ ನಿವೃತ್ತಿಯಾಗುತ್ತಾನೆ. ನಿವೃತ್ತಿಯ ದಿನವೇ ತನಗೆ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ. ಆದರೆ ಇಡೀ ಕರ್ನಾಟಕ ಸರ್ಕಾರ ದ ಇತಿಹಾಸದಲ್ಲಿ ಸಿರಾ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನ ಪಿ.ಎಚ್. ಮಹೇಂದ್ರಪ್ಪ ಒಬ್ಬರು ಮಾತ್ರ ನಿವೃತ್ತಿ ದಿನವೇ ಎಲ್ಲವನ್ನೂ ಪಡೆದು ದಾಖಲೆ ಮಾಡಿದ್ದಾರೆ. ನಿವೃತ್ತ ವೇತನವೇನು ತಾನಾಗಿಯೇ ಬರುವುದಿಲ್ಲ. ನಿವೃತ್ತಿಗೆ ಮೂರು ತಿಂಗಳ ಮುಂಚಿತವಾಗಿ ಬಟವಾಡೆ ಅಧಿಕಾರಿ ಸೇವಾ ಪುಸ್ತಕ ಹಾಗೂ ಅಗತ್ಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕು. ದಾಖಲೆಗಳನ್ನು ಯಾರೊಬ್ಬರೂ ತಿದ್ದಲಾಗಲೀ ಇಲ್ಲವೇ ಇಲ್ಲದ್ದನ್ನು ಸೇರಿಸಲಾಗಲಿ ಸಾಧ್ಯವಿಲ್ಲ. ಆದರೂ ಬಟವಾಡೆ ಅಧಿಕಾರಿ ಸಹಿ ಮಾಡದೆ ಕೆಲಕಾಲ ಇಟ್ಟುಕೊಳ್ಳಬಹುದು. ಖಾಸಗಿ ಶಾಲಾ ಕಾಲೇಜುಗಳಾದರೆ ಆಡಳಿತ ಮಂಡಳಿಯವರೇ ತಡೆ ಹಿಡಿಸಬಹುದು. ಉದ್ದೇಶ ನಷ್ಟ ವಸೂಲಿ ಅಂದರೆ ಲಂಚ.

ಎರಡನೇ ಹಂತದಲ್ಲಿ ಇಲಾಖಾ ಕಚೇರಿಯ ನೌಕರರು ನಂತರ ಅಧಿಕಾರಿ. ನಿವೃತ್ತಿ ವೇತನದ ಜೊತೆಗೆ ಲಕ್ಷ ಲಕ್ಷ ಹಣ ಬರುವುದರಿಂದ ಎಲ್ಲರ ಕಣ್ಣು ಅದರ ಮೇಲೆ. ಕೆಲವೊಮ್ಮೆ ನಿವೃತ್ತರು ತಮ್ಮ ಮಕ್ಕಳ ಮದುವೆಗೋ ಮನೆ ನಿರ್ಮಿಸಲೋ ತೊಡಗಿದ್ದರೆ ಅವರ ಕಷ್ಟ ಹೇಳತೀರದು. ಹೀಗಾಗಿ ಲಂಚ ಕೊಟ್ಟು ಆದಷ್ಟು ಬೇಗೆ ಕಡತಗಳನ್ನು ದಾಟಿಸುತ್ತಾರೆ. ಇಲ್ಲಿ ಯಾರೊಬ್ಬರೂ ಮಾಡಬಾರದ್ದನ್ನು ಮಾಡಿ ಅನುಕೂಲ ಮಾಡಿಕೊಡುತ್ತಿಲ್ಲ. ಎಲ್ಲವೂ ಕಾನೂನು ಪ್ರಕಾರವಾಗಿಯೇ ನಡೆಯುತ್ತದೆ. ಅಂದರೆ ಎಲ್ಲವೂ ಕ್ರಮಬದ್ದವಾಗಿದ್ದು. ಕ್ರಮಬದ್ದವಾಗಿ ಕೆಲಸ ಮಾಡುವುದಕ್ಕೆ ನೀಡುವುದೇ ಲಂಚ.

ನೌಕರರೂ ಕೂಡ ಮತ್ತೊಬ್ಬ ನೌಕರನಿಗೆ ತನ್ನ ಸಂಬಳ, ಭತ್ಯೆ, ಭತ್ಯೆ ಬಾಕಿ, ವೇತನ ಬಡ್ತಿ ಹೀಗೆ ನಿಯಮಾನುಸಾರ ಪಡೆಯುವ ಸೌಲಭ್ಯಕ್ಕೆ ನೀಡುವ ಹಣ ಲಂಚ. ಲಂಚ ಪಡೆಯುವಾಗ ಹಿಡಿದgಷ್ಟೆ ಪ್ರಕರಣ ದಾಖಲು. ಆ ಕ್ಷಣ ದಾಟಿದರೂ ಯಾವ ದಾಖಲೆಯೂ ಇರುವುದಿಲ್ಲ. ಅಂದರೆ ಭ್ರಷ್ಟಾಚಾರವನ್ನು ಯಾವಾಗ ಬೇಕಾದರೂ ಕೆದಕಲೂ, ಕೆಣಕಲೂ ಅವಕಾಶವಿದೆ. ಆದರೆ ಲಂಚದ ವಿಷಯದಲ್ಲಿ ಹಾಗಲ್ಲ. ಲಂಚದ ಹಣ ಕಲವೇ ರೂಪಾಯಿಗಳಂದ ಕೋಟಿ ಕೋಟಿ ರೂಪಾಯಿಗಳವರೆವಿಗೂ ನಡೆಯುತ್ತದೆ. ಲಂಚವನ್ನು ಕೆಲವೊಮ್ಮೆ ಕಂತುಗಳಲ್ಲಿ ಕೊಡುವುದು ಉಂಟು. ಮುಂಗಡ, ಕಡತ ಚಾಲ್ತಿಯಾಗುವಾಗ, ಅಂತಿಮವಾಗಿ ಆದೇಶವಾದಾಗ ಅಂದರೆ ಕೆಲಸವಾದಾಗ. ಕೆಲವೊಮ್ಮೆ ಕೆಲಸವಾದ ಮೇಲೆ ಕೈ ಕೊಡುವವರು ಉಂಟು. ಅದೇ ಕಾರಣಕ್ಕೆ ಇತ್ತೀಚೆಗೆ ಕೆಲಸಕ್ಕೂ ಮೊದಲೇ ಚುಕ್ತಾ ಮಾಡುತ್ತಾರೆ.

ಲಂಚಕ್ಕೆ ಸಂಬAಧಿಸಿದAತೆ ಒಂದು ಜೋಕ್ ನೆನಪಾಯಿತು. ಕೆಲವು ವರ್ಷಗಳ ಹಿಂದೆ ಕೈಗಾರಿಕೆ ಸ್ಥಾಪನೆಗೆ ಸಂಬAಧಿಸಿದAತೆ ಉದ್ಯಮಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಸಂಬAಧಪಟ್ಟ ಸಚಿವರಿಂದ ಅನುಮೋದನೆ ಪಡೆಯಬೇಕಾಗಿತ್ತು. ಆ ವೇಳೆಗಾಗಲೇ ಉದ್ದಿಮೆದಾರರು ಸಚಿವರೊಂದಿಗೆ ಮಾತುಕತೆ ಮುಗಿಸಿದ್ದರು. ಹಾಗೆಯೇ ಮುಂಗಡವನ್ನೂ ನೀಡಿದ್ದರು. ಉದ್ದಿಮೆದಾರ ಸಚಿವರ ಆಪ್ತಸಹಾಯಕನನ್ನು ಸಂಪರ್ಕಿಸಿ ತನ್ನಬ ಕಡತ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳುತ್ತಿದ್ದ. ಅಂದರೆ ಆಪ್ತ ಸಹಾಯಕನಿಗೆ ಕೈ ಬೆಚ್ಚಗೆ ಮಾಡಿದ್ದ. ಒಂದು ದಿನ ಸಚಿವರು ಸಂಬAಧಿಸಿದ ಕಡತದ ಮೇಲೆ “ಚಿಠಿಠಿಡಿoveಜ ಎಂದು ಬರೆದು ಅದರ ಕೆಳಗಡೆ ಸಹಿ ಮಾಡಿದರು. ಸಚಿವರ ಆಪ್ತ ಸಹಾಯಕ ಉದ್ದಿಮೆದಾರನಿಗೆ ವಿಷಯ ಮುಟ್ಟಿಸಿದ. ಉದ್ದಿಮೆದಾರ ಕಿಲಾಡಿ ಮನುಷ್ಯ. ಹೇಗಿದ್ದರೂ ಚಿಠಿಠಿಡಿoveಆಗಿದೆ ಉಳಿದ ಹಣ ನೀಡುವುದೇ ಬೇಡವೆಂದು ದುರಾಸೆಗೆ ಬಿದ್ದ. ಸಚಿವರೂ ಕೂಡ ಒಂದು ವಾರ ಕಾದರು. ಉದ್ಯಮಿ ತಲೆ ಹಾಕಲಿಲ್ಲ. ಆಪ್ತ ಸಹಾಯಕನನ್ನು ಕರೆದು ಸಂಬAಧಿಸಿದ ಕಡತ ತೆಗೆಸಿದರು. ಚಿಠಿಠಿಡಿoveಜ ಎನ್ನುವ ಪದದ ಹಿಂದೆ ಟಿoಣ ಸೇರಿಸಿದರು. ಅಲ್ಲಿಗೆ ಟಿoಣ ಚಿಠಿಠಿಡಿoveಜ ಎಂದಾಯಿತು. ಸಹಾಯಕನ ಮೂಲಕ ವಿಷಯ ತಿಳಿದ ಉದ್ದಿಮೆದಾರ ಅನಿವಾರ್ಯವಾಗಿ ಹಣದೊಂದಿಗೆ ಸಚಿವರ ಮುಂದೆ ಹೋಗಲೇಬೇಕಾಯಿತು. ತಾನು ಊರಿನಲ್ಲಿ ಇರಲಿಲ್ಲವೆಂದು ಅದೇನೋ ಸಬೂಬು ಹೇಳಿದ. ಉಳಿದ ಹಣವನ್ನು ಸಂದಾಯ ಮಾಡಿದ. ಅಂದು ಸಂಜೆಯೆ ಸಂಬAಧಿಸಿದ ಕಡತ ವಿಲೇವಾರಿಯಾಗುವುದಾಗಿ ಸಚಿವರು ತಿಳಿಸಿದರು. ಸಂಬAಧಿಸಿದ ಕಡತ ತರಿಸಿಕೊಂಡ ಸಚಿವರು ‘ಟಿoಣ ಚಿಠಿಠಿಡಿoveಜ’ ಎಂದಿದ್ದುದರಲ್ಲಿ ಟಿoಣ ಎಂಬ ಪದಕ್ಕೆ ‘e’  ಸೇರಿಸಿ ಟಿoಣe ಎಂಬುದಾಗಿ ಬರೆದರು. ಅಲ್ಲಿಗೆ 'ಟಿoಣ ಚಿಠಿಠಿಡಿoveಜ' ಇದ್ದದ್ದು ‘ಟಿoಣe ಚಿಠಿಠಿಡಿoveಜ’ ಆಗಿ ಹೋಯಿತು. ಇದಕ್ಕೆಲ್ಲ ಪಡೆದದ್ದು ಅಕ್ಷರಷಃ ಲಂಚ.

ಎಪ್ಪತ್ತರ ದಶಕಕ್ಕೂ ಮೊದಲು ನೌಕರರ ಬದುಕಿಗೂ ಸಾಮಾನ್ಯ ಜನರ ಬದುಕಿಗೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಕೊಂಚ ಮಟ್ಟಿಗೆ ರೈತರೇ ಸುಖವಾಗಿದ್ದರು. ವರ್ತಕರು ದಿವಿನಾಗಿದ್ದರು. ಆದರೆ ಎಪ್ಪತ್ತರ ದಶಕದಿಂದ ಆರಂಭವಾದ ಲಂಚ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ... ಸಾಮಾನ್ಯ ಜನರ ಜೀವನವನ್ನೇ ಮಣ್ಣು ಪಾಲು ಮಾಡಿದವು. ಅಂದಿಗೆ ಸಾವಿರಗಳೇ ದೊಡ್ಡ ಮೊತ್ತ. ಇಂದು ಕೋಟಿ ಲೆಕ್ಕದಲ್ಲಿ ಮಾತನಾಡುವುದು ಸಾಮಾನ್ಯವಾಗಿದೆ.

ಲಂಚದ ಪರಿಣಾಮವನ್ನು ಒಮ್ಮೆ ಯೋಚಿಸಿ. ಲಂಚದ ಹಣವನ್ನು ಹಾಗೆಯೇ ಇಡಲು ಯಾರೂ ಬಯಸುವುದಿಲ.್ಲ ಇಂತಹವರಿAದಲೇ ಜಮೀನು ಹಾಗೂ ನಿವೇಶನಗಳ ಬೆಲೆ ಗಗನಕ್ಕೇರಿರುವುದು. ಭೋಗದ ಜೀವನ ಶೈಲಿ; ಅದಕ್ಕೊಂದಿಷ್ಟು ಖರ್ಚು. ಉಳಿದ ಹಣ;? ಹೂಡಿಕೆ. ಸೈಟು, ಜಮೀನು, ಷೇರು ಇತ್ಯಾದಿ. ಯಾವಾಗ ಲಂಚದ ಹಣ ಕೈ ಸೇರಿತೋ ಜಮೀನಿನ ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಷ್ಟೇ ಆಗಲಿ ಎನ್ನುವಷ್ಟರ ಮಟ್ಟಿಗೆ. ಒಮ್ಮೆ ಒಂದು ಜಮೀನು ದೊಡ್ಡ ಮೊತ್ತಕ್ಕೆ ಮಾರಾಟ ವಾಯಿತೆಂದರೆ ಅಲ್ಲಿಗೆ ಮುಗಿಯಿತು.ಇನ್ನು ನಿವೇಶನಗಳ ಬೆಲೆಯೂ ಅಷ್ಟೆ. ಇಂದು ನಿವೇಶನಗಳ ಬೆಲೆ ಗಗನಕ್ಕೇರಲು ಮುಖ್ಯವಾದ ಕಾರಣ ದಾಖಲೆ ಇಲ್ಲದ ಹಣ. ಅಂದರೆ ಕಪ್ಪು ಹಣ. ಆದರೆ ನೋಟು ಅಮಾನೀಕರಣದಿಂದ ತಕ್ಷಣಕ್ಕೆ ನಿವೇಶನದ ಬೆಲೆ ಸ್ಥಿರವಾಗಿದೆ. ಒಮ್ಮೆ ಕಪ್ಪು ಹಣ ಶೇಖರಣೆ ಯಾದರೆ ಮತ್ತದೇ ಕತೆ. ಸಾಮಾನ್ಯ ಜನರ ಬದುಕು ಬರ್ಬಾದ್ ಆಗಿರುವುದೇ ಈ ಲಂಚ ಹಾಗೂ ಭ್ರಷ್ಟಾಚಾರದಿಂದ.

ಕರ್ನಾಟಕ ಸರ್ಕಾರದಲ್ಲಿ ಅರವತ್ತಕ್ಕೂ ಅಧಿಕ ಇಲಾಖೆಗಳೂ ಹಾಗೂ ಮುವತ್ತಕ್ಕೂ ಅಧಿಕ ನಿಗಮ ಮಂಡಳಿಗಳಿವೆ. ಕರ್ನಾಟಕದಲ್ಲಿ ಮುನ್ನೂರು ಜನ ಶಾಸಕರು, ಸಾವಿರಾರು ಅಧಿಕಾರಿಗಳು, ಲಂಚ ಪಡೆಯಲು ಅವಕಾಶವಿರುವ ಸುಮಾರು ಅರವತ್ತು ಸಾವಿರ ನೌಕರರು. ಅಂದರೆ ನಮ್ಮ ರಾಜ್ಯದ ಒಟ್ಟು ಜನರಲ್ಲಿ ಈ ರೀತಿ ಅಕ್ರಮ ಸಂಪಾದನೆ ಮಾಡುವವರು ಸರಾಸರಿ ಸಾವಿರಕ್ಕೆ ಒಬ್ಬ. ಕೇವಲ ಇಷ್ಟು ಜನ ಇಡಿ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಸಾಮಾನ್ಯ ಜನರ ಬದುಕಿಗೆ ಕೊಳ್ಳಿ ಇಡುತ್ತಾರೆಂದರೆ ನಂಬುತ್ತೀರಾ? ಅನುಮಾನವೇ ಬೇಡ. ಇದು ಸತ್ಯ.

ಲಂಚವಿಲ್ಲದೆ ಬದುಕಲು ಸಾಧ್ಯವಿಲ್ಲವೆ?

ಈಗಾಗಲೇ ಹೇಳಿರುವಂತೆ ಸರಿ ಸುಮಾರು ಒಂದು ನೂರು ಇಲಾಖೆಗಳಿವೆ. ಎಲ್ಲಕ್ಕೂ ಕೇಂದ್ರ ಸ್ಥಾನ ವಿಧಾನ ಸೌಧ. ಅಲ್ಲಿಯೂ ಭ್ರಷ್ಟಾಚಾರ, ಲಂಚ, ಸ್ವಜನ ಪಕ್ಷಪಾತ ನಡೆದಿರುವ ಪ್ರಕರಣಗಳು ದಾಖಲಾಗಿವೆ. ಇನ್ನು ಉದ್ಯೋಗ ಸೌಧ ವೊಂದಿದೆ. ಅಂದರೆ ಕೆ.ಪಿ.ಎಸ್.ಸಿ. ಇಲ್ಲಿಯೂ ಲಂಚ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಡೆದಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ನೇಮಕಾತಿಗಾಗಿ ಲಕ್ಷ ಲಕ್ಷ ಲಂಚ ಕೊಟ್ಟ ವ್ಯಕ್ತಿ ಅದನ್ನು ಮರಳಿ ಪಡೆಯಲು ಅನುಸರಿಸಬೇಕಾದ ವಿಧಾನವೇ ಲಂಚ.

ವಿಧಾನ ಸೌಧದÀ ಪಶ್ಚಿಮ ಗೇಟ್‌ನ ಎದುರಿಗೆ ಹಾಗೆಯೇ ಉದ್ಯೋಗ ಸೌಧದ ಎದುರಿಗೆ ಒಂದು ಕಚೇರಿ ಇದೆ. ಅದು ಅಕೌಂಟೆAಟ್ ಜನರಲ್ ಕಚೇರಿ. ಇಡೀ ಕರ್ನಾಟಕ ಸರ್ಕಾರಿ ನೌಕರರ ನಿವೃತ್ತ ವೇತನ ಹಾಗೂ ಇತರ ಸೌಲಭ್ಯಗಳು ಅಂತಿಮಗೊಳ್ಳುವುದೇ ಅಲ್ಲಿ. ಅಲ್ಲಿನ ನೌಕರರು ಮನಸ್ಸು ಮಾಡಿದರೆ ದಿನವೊಂದಕ್ಕೆ ಲಕ್ಷ ಲಕ್ಷ ಲಂಚ ಪಡೆಯಬಹುದು. ಆದರೆ  ಒಂದೇ ಒಂದು ಕಾಫಿ ಕುಡಿಸಿ ನೋಡಿ. ಅಸಾಧ್ಯದ ಮಾತು.ಅಷ್ಟರ ಮಟ್ಟಿಗೆ ನಿಷ್ಕಳಂಕ ಸೇವೆ ಸಲ್ಲಿಸುವ ಸಂಸ್ಥೆ ಅದು. ಅವರೂ ಬೆಂಗಳೂರಿನಲ್ಲಿಯೇ ಇರುವುದು. ಎಲ್ಲರಂತೆಯೇ ಅವರಿಗೂ ಹೆಂಡತಿ, ಮಕ್ಕಳು, ಅವರ ವಿದ್ಯಾಭ್ಯಾಸ, ಮನೆ, ಇತ್ಯಾದಿ. ಆದರೂ ಲಂಚಕ್ಕೆ ಕೈ ಒಡ್ಡುವುದಿಲ್ಲವೆಂದರೆ ಅದು ಅವರ ಮನಸ್ಥಿತಿ. ಅವರಿಗೊಂದು ಸಲಾಂ. ಇಡೀ ಕರ್ನಾಟಕ ಸಕಾರಿ ನೌಕರರಲ್ಲಿ ನೂರಕ್ಕೆ ನೂರರಷ್ಟು ಲಂಚಮುಕ್ತ ಕಚೇರಿ ಎಂದರೆ ಎ.ಜಿ.ಸ ಒಂದೆ.

ಅAದಿನ ಕಾರ್ಯಕ್ರಮದ ಮೂಲ ಆಶಯವೇ ಭ್ರಷ್ಟಾಚಾರ ನಿಮೂರ್ಲನೆ. ಇದು ಸಾಧ್ಯವೇ? ನೂರಕ್ಕೆ ನೂರರಷ್ಟು ಸಾಧ್ಯ. ಆದರೆ ಇಚ್ಛಾಶಕ್ತಿ ಬೇಕು. ಲಕ್ಕವಿಲ್ಲದೆ ಹಣ ಹೇಗೆ ಪಡೆಯುತ್ತಾರೆ ಎನ್ನುವುದು ಬಹುತೇಕರಿಗೆ ತಿಳಿದಿದೆ. ಆದರೆ ಅದರ ನಿಯಂತ್ರಣಕ್ಕೆ ಪ್ರಾಮಾಣಿಕ ದಕ್ಷ ಹಾಗೂ ತೀರಾ ವೇಗವಾಗಿ ಪ್ರತಿಕ್ರಿಯಿಸುವ ವ್ಯಕ್ತಿಗಳ ಅಗತ್ಯವಿದೆ. ಉದಾ: ಹರೀಶ್‌ಗೌಡ, ಮದನ್‌ಗೋಪಾಲ್, ಚಿರಂಜೀವಿ ಸಿಂಗ್, ಟೈಗರ್ ಅಶೋಕ್ ರಂತಹ ನೂರಾರು ನಿವೃತ್ತ ಅಧಿಕಾರಿಗಳಿದ್ದಾರೆ. ಅಂತಹವರ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಅವರನ್ನು ನೇಮಿಸಿ. ಅವರ ಫೋನ್ ನಂಬರ್‌ಗಳನ್ನು ಪ್ರತಿದಿನ ಪ್ರಕಟಿಸಿ. ಸಾಮಾನ್ಯ ಜನ ಯಾವ ಯಾವ ನೌಕರ ಇಲ್ಲವೇ ಅಧಿಕಾರಿ ಯಾವ ಯಾವ ಕೆಲಸಕ್ಕೆ ಎಷ್ಟು ವಸೂಲು ಮಾಡುತ್ತಾನೆ ಎನ್ನುವುದನ್ನುಉ ತಿಳಿಸುತ್ತಾರೆ. ಅಂತಹ ಲಂಚಕೋರರನ್ನು ನೇರವಾಗಿ ಸಂಪರ್ಕಿಸಿ ಚಳಿ ಬಿಡಿಸುವ ಪ್ರಾಮಾಣಿಕ ಅಧಿಕಾರಿಗಳು ಕ್ಷಣ ಕ್ಷಣಕಕ್ಕೂ ಬೆನ್ನು ಹತ್ತುತ್ತಾರೆ. ಇಷ್ಟಾದ ಮೇಲೂ ಲಂಚ ಪಡೆಯುವುದು ಸಾಧ್ಯವೇ? ಆದರೆ ಮಾಡಬೇಕಾದವರು ಯಾರು? ರಾಷ್ಟçಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ. ಅಂತಹ ದಿನವನ್ನು ನಿರೀಕ್ಷಿಸಬಹುದೇ?

Sunday, November 24, 2024

ಬೆಂಬಿಡದೆ ಕಾಡುವ ಕರ್ಮಫಲ:-

 



ಮಹಾಭಾರತದಲ್ಲಿ ಎಷ್ಟೊ ಯೋಧರು ನಿಸ್ವಾರ್ಥದಿಂದ, ಲೋಕಕಲ್ಯಾಣಕ್ಕಾಗಿ ಒಳ್ಳೆಯದು ಮಾಡಿ, ಧರ್ಮದಿಂದ,  ವೀರ ಮರಣವನ್ನು ಹೊಂದಿರುತ್ತಾರೆ. ಅಂಥವರಲ್ಲಿ, ಧರ್ಮದ ಒಳಿತಿಗಾಗಿ, ಹಸ್ತಿನಾಪುರದ ರಕ್ಷಣೆಗಾಗಿ, ಆಜನ್ಮ ಬ್ರಹ್ಮಚಾರಿ, ಸೋಲಿಲ್ಲದ ಸರದಾರ, ಇಚ್ಛಾಮರಣಿ, ಪರಾಕ್ರಮಿ, ಅಜೇಯರೆ ನಿಸಿಕೊಂಡ ಮೊದಲಿಗರು ಕುರುವಂಶದ ಪಿತಾಮಹ, ಗಂಗಾ ಪುತ್ರ ಭೀಷ್ಮರು ಸಿಂಹಾಸನಕ್ಕಾಗಲಿ, ಅಧಿಕಾರಕ್ಕಾಗಲೀ, ಆಸೆಪಡದೆ, ಕೊಟ್ಟ ಮಾತಿಗೆ ತಪ್ಪದಂತೆ  ಕುರುವಂಶದ ಉನ್ನತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ, ಹಸ್ತಿನಾಪುರದ ರಕ್ಷಣೆ ಮಾಡುವ ಪಣತೊಟ್ಟು, ಹೋರಾಡಿ ಕೊನೆಗೆ ರಕ್ತಸಿಕ್ತ ದೇಹದ,  ಬಾಣಗಳ ಹಾಸಿಗೆ ಮೇಲೆ ೫೮ ದಿನಗಳ ಯಾತನೆ,  ನೋವುಗಳನ್ನು ಸಹಿಸಿಕೊಂಡು ಇಚ್ಛಾಮರಣವನ್ನು ಪಡೆದ ಪಿತಾಮಹ ಭೀಷ್ಮರು. 

ಪಿತಾಮಹ ಭೀಷ್ಮರು  ಮಾಡಿದ ಪಾಪ ಪುಣ್ಯಗಳನ್ನು ಲೆಕ್ಕ ಹಾಕಿದರೆ ಪಾಪಗಳ ಲೆಕ್ಕ ಹುಡುಕಿದರೂ ಒಂದೇ ಒಂದು  ಸಿಗುವುದಿಲ್ಲ. ಪುಣ್ಯ ಹಾಗೂ ಧರ್ಮ ಮಾರ್ಗದಲ್ಲಿ ನಡೆದು ಎಲ್ಲರಿಗೂ ಒಳಿತನ್ನೇ ಬಯಸುತ್ತಿದ್ದು, ಅಪಾರ ಪುಣ್ಯ ಕೆಲಸಗಳನ್ನು ಮಾಡಿದ ಭೀಷ್ಮರಿಗೆ ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸುವ ಶಿಕ್ಷೆ ಯಾಕೆ ಬಂದಿತು ಎಂಬ ಪ್ರಶ್ನೆಗೆ ಕೃಷ್ಣನೇ ಉತ್ತರ ಕೊಟ್ಟಿದ್ದಾನೆ. 

ಮಹಾಭಾರತದ ಯುದ್ಧದ ಸಮಯದಲ್ಲಿ ಅಧರ್ಮದ ಪಕ್ಷ ಎಂದು ಗೊತ್ತಿದ್ದರೂ ಅವರ ಪರವಾಗಿ ನಿಂತ ಪಿತಾಮಹ ಭೀಷ್ಮರು ವೀರಾವೇಶದಿಂದ ಹೋರಾಡಿ  ಯುದ್ಧವನ್ನು ಮಾಡಿದರು. ಕೊನೆಗೆ ಶಿಖಂಡಿ ಎದುರು ಬಂದಾಗ ಕತ್ತಿಯನ್ನು ಬಿಟ್ಟು ನಿಶಸ್ತ್ರರಾಗಿ ನಿಂತಾಗ ಅರ್ಜುನನು ಬಹಳ ದುಃಖದಿಂದ ಕರ್ತವ್ಯ ಪಾಲಿಸುವ ಸಲುವಾಗಿ ತನ್ನ ಬಾಣಗಳಿಂದ ಪಿತಾಮಹರನ್ನು ಹೊಡೆದು ಕೆಳಗೆ ಬೀಳಿಸಿದ. ನಂತರ ಪಿತಾಮಹರ ಆಸೆಯಂತೆ, ದಕ್ಷಿಣಾಯನ ಮುಗಿದು ಉತ್ತರಾಯಣ ಪುಣ್ಯಕಾಲ  ಬಂದ ಮೇಲೆ  ಪ್ರಾಣೋತ್ಕ್ರ್ ಕ್ರಮಣ  ಮಾಡುವೆ ಎಂಬ ಭೀಷ್ಮರ ಮಾತಿನಂತೆ  ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದನು. ಉತ್ತರಾಯಣ ಬರಲು ೫೮ ದಿನಗಳ ಕಾಲ ಬಾಣಗಳ ಹಾಸಿಗೆಯ ಮೇಲೆ  ನೋವು ಹಾಗೂ ಯಾತನೆಯನ್ನು ಅನುಭವಿಸಿದರು. 

ಬಾಣಗಳ ಹಾಸಿಗೆಯ ಮೇಲೆ ಮಲಗಿದ ಪಿತಾಮಹರನ್ನು ಉಪಚರಿಸಲು ದೇಶದ ಮೂಲೆ ಮೂಲೆಯಿಂದ ವೈದ್ಯ ಪಂಡಿತರುಗಳನ್ನು ಕರೆಸುತ್ತಿದ್ದರು. ಆದರೆ ಅವೆಲ್ಲವನ್ನು ನಿರಾಕರಿಸಿದರು. ಉಳಿದ ಸಮಯದಲ್ಲಿ ಅವರನ್ನು ಕಂಡು ಮಾತನಾಡಿಸಿ ಆಶೀರ್ವಾದ ಪಡೆಯಲು ನೂರಾರು ಜನ ನಿತ್ಯವೂ ಬರುತ್ತಿದ್ದರು. ಎಲ್ಲರೊಂದಿಗೆ ಸಂತೋಷದಿಂದ ಮಾತನಾಡಿದ ಭೀಷ್ಮ ಪಿತಾಮಹರಿಗೆ ಚಿಂತೆಯೊಂದು ಕಾಡುತ್ತಿತ್ತು. ಇಚ್ಛಾಮರಣಿಯಾದ ನಾನು ಯಾವಾಗ ಬೇಕಾದರೂ ದೇಹತ್ಯಾಗ ಮಾಡಬಹುದಿತ್ತು. ಆದರೆ ಹೀಗೇಕೆ ಬಾಣಗಳ ಹಾಸಿಗೆಯ ಮೇಲೆ ಮಲಗಿ ನೋವನ್ನು ಅನುಭವಿಸುವಂತಹ ಶಿಕ್ಷೆ ನನಗೇಕೆ ಬಂದಿತು ಎಂದುಕೊಳ್ಳುತ್ತಿದ್ದ ಭೀಷ್ಮರ ಬಳಿ ಒಂದು ದಿನ ಶ್ರೀಕೃಷ್ಣ ಬಂದನು. 

ಶ್ರೀಕೃಷ್ಣನು ಬಂದಾಗ ಅವರ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಕೃಷ್ಣನ ಬಳಿ ಕೇಳಿದರು. ಹೇ ವಾಸುದೇವ, ನನಗೆ ನೆನಪಿರುವಂತೆ ನನ್ನ ಹಿಂದಿನ ಹತ್ತು  ಜನ್ಮಗಳನ್ನು ನೋಡಿದಾಗ ಆ ಹತ್ತು ಜನ್ಮದಲ್ಲೂ ಒಂದೇ ಒಂದು ಪಾಪ ಕಾರ್ಯವನ್ನು ಮಾಡಿಲ್ಲ ಹೀಗಿರುವಾಗ ಇಚ್ಛಾಮರಣಿಯಾದ ನಾನು ಸಾಯುವ ಸಮಯದಲ್ಲಿ ಬಾಣಗಳ ಹಾಸಿಗೆಮೇಲೆ ಮಲಗಿ ಯಾತನೆ ಹಾಗೂ ಆಗುವ ನೋವನ್ನು ಸಹಿಸಿಕೊಳ್ಳುವಂಥ ಶಿಕ್ಷೆ ನನಗೇಕೆ ಬಂದಿದೆ ಎಂದು ನೊಂದು ಕೇಳಿದರು.  ಮುಗುಳ್ನಗುತ್ತಾ ಕೃಷ್ಣನು, ಪಿತಾಮಹ ನಿಮಗೆ ನೆನಪಿರುವಂತೆ ಹತ್ತು ಜನ್ಮಗಳಲ್ಲಿ ನೀವು ಒಂದೇ ಒಂದು ಪಾಪವನ್ನು ಮಾಡಿಲ್ಲ. ಆದರೆ ನಿಮಗೆ ಗೊತ್ತಿರದ ೧೦ ಜನ್ಮದ ಹಿಂದಿನ ಹನ್ನೊಂದನೇ ಜನ್ಮದಲ್ಲಿ ನೀವೊಬ್ಬ ರಾಜರಾಗಿದ್ದೀರಿ. ನೀವು ಶಿಕಾರಿ ಪ್ರಿಯರು ಆಗಿದ್ದಿರಿ ನಿಮ್ಮ ಹೆಚ್ಚಿನ ಸಮಯವನ್ನು ಕಾಡಿನಲ್ಲಿ ಬೇಟೆಯಾಡುವುದರಲ್ಲಿ ಕಳೆಯುತ್ತಿದ್ದಿರಿ. ಒಂದು ದಿನ ಬೇಟೆಯಾಡಲು ಹೋಗುತ್ತಿದ್ದಾಗ ನಿಮಗೆ ಅಡ್ಡವಾಗಿ ಒಂದು ಸರ್ಪ ಬರುತ್ತದೆ ಹೀಗೆ ಅಡ್ಡಬಂದ ಸರ್ಪವನ್ನು ಯಾವ ಯೋಚನೆಯನ್ನೂ ಮಾಡದೆ ಎತ್ತಿ ಅದನ್ನು ಒಂದು ಬದಿಗೆ ಬಿಸಾಡಿದಿರಿ.

ಹಾಗೆ ಬಿಸಾಕಿದ ಸರ್ಪವು ಮುಳ್ಳುಗಳಿರುವ ಪೊದೆಗಳ ಮೇಲೆ ಬಿತ್ತು. ಅದು ಮುಳ್ಳಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟು ಪೊದೆಗಳಲ್ಲಿದ್ದ ಮುಳ್ಳುಗಳು ಚುಚ್ಚಿ ನೋವಾಗುತ್ತಿತ್ತು. 

ಈ ರೀತಿಯಾಗಿ ಅದಕ್ಕೆ ಮುಳ್ಳಿನಿಂದ ಚುಚ್ಚಿ ಯಾತನೆ ಯಾಗುತ್ತಿದ್ದಾಗ  ಪರಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿತ್ತು. ಹೇ ಪರಮೇಶ್ವರ ನನ್ನ ನೋವಿಗೆ ಕಾರಣವಾದ ರಾಜನು ಸಹ ನನ್ನ ಹಾಗೆ ಮುಳ್ಳುಗಳಿಂದ ಚುಚ್ಚಿಸಿಕೊಂಡು ಯಾತನೆ ಅನುಭವಿಸುವಂತಾಗಲಿ ಎಂದು ಬೇಡುತ್ತಿತ್ತು.

ಹೀಗೆ ಪರಶಿವನನ್ನು ಪ್ರಾರ್ಥಿಸುತ್ತಲೇ ಯಾತನೆ ಅನುಭವಿಸುತ್ತಾ ೧೮ ದಿನಗಳ ಕಾಲ ಕಳೆದ ಮೇಲೆ ಪ್ರಾಣಬಿಟ್ಟಿತು. 

ಕೃಷ್ಣನಿಂದ ಈ ಕಥೆ ಕೇಳಿದ ಪಿತಾಮಹರು ಹತ್ತು ವರ್ಷಗಳ ಹಿಂದಿನ ಪಾಪ ಸುಳ್ಳೋ, ನಿಜವೋ, ಎಂಬ ಅನುಮಾನದಿಂದ ಕೃಷ್ಣನನ್ನು ನೋಡುತ್ತಾ ಕೇಳಿದರು. ವಾಸುದೇವ ಹತ್ತು ಜನ್ಮಗಳ ಹಿಂದಿನ ಶಾಪ ಅಂದರೆ ಶಿಕ್ಷೆಯಾದ ಮುಂದಿನ ಜನ್ಮದಲ್ಲೇ ಈ ಶಿಕ್ಷೆಯನ್ನು ಅನುಭವಿಸಬೇಕಿತ್ತು. ಹತ್ತು ಜನ್ಮಗಳ ನಂತರ ಅನುಭವಿಸುವುದು ಎಂದರೆ ಹೇಗೆ ಎಂದು ಕೇಳಿದರು.

ಪಿತಾಮಹ ಮುಂದಿನ ಹತ್ತು ವರ್ಷದಲ್ಲಿ  ಪಾಪದ ಕೊಡ ತುಂಬುವಂಥ ಒಂದೇ ಒಂದು ಪಾಪದ ಕೆಲಸವನ್ನು ನೀವು ಮಾಡಲಿಲ್ಲ. ಹೀಗಾಗಿ ನೀವು ಪುಣ್ಯ ಜೀವಿಗಳು ಆದಿರಿ. ಹಾಗಾಗಿ ಅದೆಲ್ಲ ಈ ಜನ್ಮದಲ್ಲಿ ನಿಮಗೆ ಸಿಕ್ಕಿತು. 

ಮತ್ತೂ ಆಶ್ಚರ್ಯದಿಂದ ಭೀಷ್ಮರು, ಹೇ ವಾಸುದೇವ ಈ ಜನ್ಮದಲ್ಲಿ ನನಗೆ ನೆನಪಿರುವಂತೆ ಒಂದೇ ಒಂದು ಅಪರಾಧವನ್ನು ನಾನು ಮಾಡಿಲ್ಲ ಧರ್ಮಮಾರ್ಗದಲ್ಲಿ ನಡೆದಿದ್ದೇನೆ. ಅದಕ್ಕೆ ಕೃಷ್ಣನು ಪಿತಾಮಹ ಯಾಕೆ ಪಾಪ ಮಾಡಿಲ್ಲವೇ? ನೆನಪಿಸಿಕೊಳ್ಳಿ ಹಸ್ತಿನಾಪುರದ ಅಧರ್ಮಿ ರಾಜನ ಪರ ನಿಂತು, ಸಿಂಹಾಸನವನ್ನು ಕೊನೆ ಉಸಿರಿರುವರೆಗೂ ರಕ್ಷಿಸುತ್ತೇನೆ ಎಂದು ಮಾತುಕೊಟ್ಟು, ಅಧರ್ಮಕ್ಕೆ ಟೊಂಕಕಟ್ಟಿ ನಿಲ್ಲಲಿಲ್ಲವೇ? ತುಂಬಿದ ಸಭೆಯಲ್ಲಿ ಕುಲವಧುವಿನ ಮಾನ ಹೋಗುತ್ತಿದ್ದರೂ ಅದನ್ನು ತಡೆಯದೆ ಸಹಿಸಲಿಲ್ಲವೇ? 

ಅಧರ್ಮಿಗಳಾದ ದುರ್ಯೋಧನ, ಅವನ ಅಪ್ಪ ದೃತರಾಷ್ಟ್ರ ಮಾಡುವ ಅಧರ್ಮವನ್ನು ಕಂಡು ಕಾಣದಂತೆ ಅವರ ಪಕ್ಷದಲ್ಲಿ ನಿಂತು ಹಸ್ತಿನಾಪುರದ ಸಿಂಹಾಸನವನ್ನು ರಕ್ಷಿಸುತ್ತೇನೆ ಎಂದು ಮಾತು ಕೊಟ್ಟಿರಿ. ಅವರಿಗೆ ಬೆಂಬಲವಾಗಿ ನಿಂತು ಧರ್ಮದ ವಿರುದ್ಧ ಹೋರಾಟಕ್ಕೆ ಇಳಿದಿರಿ.

ಅದೆಷ್ಟು ಅಮಾಯಕರನ್ನು ಅಧರ್ಮದ ಪರವಾಗಿ ನಿಂತು ಕೊಂದುಹಾಕಿದಿರಿ.

ನಿಮ್ಮ ಪಾಪದ ಕೊಡ ತುಂಬಲು ಇಷ್ಟು ಸಾಲದೇ ಎಂದು ಕೇಳಿದನು. 

ಪಶ್ಚಾತಾಪದಿಂದ ಕಣ್ಣೀರು ಹರಿಸುತ್ತ ಎಲ್ಲವನ್ನೂ ಕೇಳಿಸಿಕೊಳ್ಳುವ ವೇಳೆಗೆ ಅವರ ಪಾಪದ ಶಿಕ್ಷೆಗಳÀÄ ಮುಗಿದಿತ್ತು ಅವರ ಮುಖದಲ್ಲಿ ತೇಜಸ್ಸು ಮಾಘಮಾಸದ ಶುಕ್ಲ ಪಕ್ಷ ಉತ್ತರಾಯಣದ ಸೂರ್ಯನು ಬಂದಿದ್ದ. ಸಾಕ್ಷಾತ್ ಭಗವಂತನಾದ ಶ್ರೀಕೃಷ್ಣನ ದರ್ಶನ ಭಾಗ್ಯದಿಂದ. ಅವಶೇಷದ ಪಾಪಗಳೆಲ್ಲವು ಸುಟ್ಟು ಭಸ್ಮವಾಯಿತು. ಭಗವಂತನನ್ನು ಕಣ್ತುಂಬಾ ನೋಡುತ್ತಾ ಇಚ್ಛಾಮರಣಿಯಾದ ಭೀಷ್ಮರು  ಪ್ರಾಣೋತ್ಕ್ರಮಣಗೈದು ಪರಮಾತ್ಮನ ಸಾನಿಧ್ಯವಾದ ವೈಕುಂಟಕ್ಕೆ ಹೋದರು. 

ಯತೇಂದ್ರಿಯ ಮನೋ ಬುದ್ದಿ, ಮುನಿರ್ಮೋಕ್ಷ ಪರಾಯಣ!

ವಿಗತೇಚ್ಚಾಭಯ ಕ್ರೋದ, ಯ ಸದಾ ಮುಕ್ತ ಏವ ಸಹ! 

ಇಂದ್ರಿಯಗಳನ್ನೂ ಮನಸ್ಸು ಮತ್ತು ಬುದ್ಧಿಯನ್ನೂ  ಯಾವಾಗಲೂ ತನ್ನ ವಶದಲ್ಲಿಟ್ಟುಕೊಂಡು, ಮೋಕ್ಷವನ್ನೇ ತನ್ನ  ಪರಮ ಗುರಿಯನ್ನಾಗಿ ಮಾಡಿಕೊಂಡು ಬಯಕೆ, ಭಯ  ಮತ್ತು  ಕ್ರೋಧಗಳಿಂದ ಬಿಡುಗಡೆ ಹೊಂದಿರುವ ಆ ಮುನಿಯು. ಮೋಕ್ಷವನ್ನು ಪಡೆಯುತ್ತಾನೆ.

ಎಂ.ಕೆ. ಇಂದಿರಾ ಹೇಳಿದ ಕಾಫಿಯ ಕಥೆ...


ಕೆಲದಿನ ಅದು ಮಡಿವಂತರಿಗೆ ನಿಷೇಧವಾಗಿತ್ತು. ಅದರಲ್ಲೂ ಮಡಿ ಹೆಂಗಸರು ಕುಡಿಯಲೇಬಾರದು. ಆದರೆ ಅಮಲು ಹತ್ತಿಯಾಗಿತ್ತು. ಕಡೆಗೆ ಅದರ ಚಟ ಪೂರಾ ಹತ್ತಿದವರೊಬ್ಬರು ಅದಕ್ಕೆ "ಕೈಲಾಸದ ಕಷಾಯ" ಎಂದು ಹೆಸರಿಟ್ಟು ವೇದ_ವ್ಯಾಸರಂತೆ ಅದಕ್ಕೊಂದು ಪೌರಾಣಿಕ ಕಥೆಯನ್ನು ಕಲ್ಪಿಸಿ ಹೇಳಿದರು. ಅದು ಕಲ್ಪನೆಯಾದರೂ ಸ್ವಾರಸ್ಯವೂ ಸಹಜವೂ ಆಗಿ ಕಾಣಿಸುತ್ತೆ.

"ಭಗೀರಥನ ಪ್ರಾರ್ಥನೆಯ ಮೇರೆಗೆ ಗಗನಾಂತರದಿಂದ  ಧುಮುಕಿದ ಗಂಗೆಯನ್ನು ಪರಶಿವ ತಡೆದು ಜಟೆಯಲ್ಲಿ ಬಿಗಿದು ಕೂರಿಸಿಕೊಂಡ. ಮುಂದೆ ಗಂಗೆ ಸಾವಧಾನವಾಗಿ ಹರಿದು ಭಾಗೀರಥಿ ಎನಿಸಿಕೊಂಡಳು.

ಸಗರಪುತ್ರರೇನೋ ಮುಕ್ತಿ ಪಡೆದರು, ಆದರೆ ಕೈಲಾಸದಲ್ಲಿ ಗಂಗೆಯನ್ನು ತಲೆಯಲ್ಲಿ ಹೊತ್ತ  ಪರಮೇಶ್ವರನಿಗೆ  ಅಸಾಧ್ಯ ನೆಗಡಿ ಪ್ರಾರಂಭವಾಯ್ತು. ಏನು ಮಾಡಿದರೂ ನೆಗಡಿ ನಿಲ್ಲಲೊಲ್ಲದು. ಶಿವನ ಜಟೆಯಿಂದ ಧುಮುಕುತ್ತಿದ್ದುದಲ್ಲದೆ  ಗಂಗೆ ಆತನ ಮೂಗಿನಿಂದಲೂ ದ್ವಿಧಾರೆಯಾಗಿ ಇಳಿಯತೊಡಗಿದಳು. ತಲೆನೋವು, ಮೈ ನೋವು, ಜ್ವರ ಎಲ್ಲಾ ಹೊಡೆದು ಬಾರಿಸಿತು ಹರನಿಗೆ. ಮೂಗು ಒರೆಸಿಕೊಳ್ಳಲು ಅವನಲ್ಲಿ ಒಂದು ತುಂಡು ಬಟ್ಟೆಯಿಲ್ಲ. ಕಡೆಗೆ ವಿಧಿಯಿಲ್ಲದೆ ಪಾರ್ವತಿಯ ಪೀತಾಂಬರದ ಸೆರಗನ್ನೇ ಮೂಗಿಗೆ ಒತ್ತಿ ಹಿಡಿದ.

ಹರನ ಕಾಯಿಲೆಯ ವಿಷಯ ತಿಳಿದು ಅಗ್ನಿದೇವ ಓಡಿ ಬಂದು ಕೈಲಾಸದಲ್ಲಿ ಧಗೆ ಎಬ್ಬಿಸಿ ಎಲ್ಲರಿಗೂ ಬೆಚ್ಚಗೆ ಮಾಡಿದ. ಉಹೂಂ !  ಜಗ್ಗಲಿಲ್ಲ. ಮುಂದೇನೆಂದು  ದೇವಾಧಿದೇವತೆಗಳಿಗೆ  ಚಿಂತೆಯಾಗಿ ಕಡೆಗೆ ದೇವವೈದ್ಯನಾದ ಧನ್ವಂತರಿಯನ್ನು ಕರೆಸಿದರು.

ಅವನು ಪರಶಿವನ ನಾಡಿ ಹಿಡಿದು ನೋಡಿದ. ಶಿವನ ಮೈಯ್ಯ ಜ್ವರದ ಜೊತೆಗೆ  ಅಗ್ನಿಯ  ಶಾಖವೂ ಸೇರಿ ಶಿವನ ಜ್ವರ ನೂರಾಹತ್ತು ಡಿಗ್ರಿಯಾಗಿತ್ತು. ಧನ್ವಂತರಿ ಇದುವರೆಗೆ ಯಾರಿಗೂ ಕೊಡದ ಒಂದು ಔಷಧಿಯನ್ನು ಈಗ ಜಗದೀಶನಿಗೆ ಕೊಡಲೇಬೇಕಾಯ್ತು. 

ಸಂಜೀವಿನಿ ಪರ್ವತದಿಂದ ಆ ಬೀಜವನ್ನು ತರಬೇಕು. ಅದಕ್ಕೆ ಯಾರು ಸಮರ್ಥರು ಎಂದು ಯೋಚಿಸಿ ಕಡೆಗೆ ಆ ಕೆಲಸಕ್ಕೆ ವಾಯುಪುತ್ರನೇ ಸರಿಯೆಂದು ಭುಲೋಕದ ಋಷ್ಯಮೂಕ ಪರ್ವತದ ಕೋಡುಗಲ್ಲಿನ ಮೇಲೆ ಕೂತಿದ್ದ ಮಾರುತಿಯನ್ನು ಕರೆತರಲಾಯ್ತು. ಪರಮೇಶ್ವರನ ಫಜೀತಿ ನೋಡಿ ಅವನಿಗೂ ಗಾಬರಿಯಾಗಿತ್ತು. 

ಧನ್ವಂತರಿಯ ಆಜ್ಞೆಯ ಮೇರೆಗೆ ಹನುಮಂತ ಹಾರಿದ ಸಂಜೀವಿನಿ ಪರ್ವತಕ್ಕೆ.’ ಕೆಂಪು ಸಣ್ಣ ಹಣ್ಣು, ತಿನ್ನಲು ಸಿಹಿ ಸಿಹಿ, ಒಳಗೆ ದಪ್ಪ ಬೀಜ ಇರುತ್ತೆ. ಅದನ್ನ ಜಾಗ್ರತೆ ತೆಗೆದುಕೊಂಡು ಬಾ' ಎಂದು ಹೇಳಿದ್ದ ಧನ್ವಂತರಿ. ಸರಿ, ಸಂಜೀವಿನಿ ಪರ್ವತವನ್ನು ಗರಪಾಡಿದ ಪ್ರಾಣೇಶ. ಅಲ್ಲಿ ಆ ಹಣ್ಣಿನ ಗಿಡಗಳ ವನವೇ ಇದೆ. ಮೊದಲು ತಾನು ತಿಂದು ರುಚಿ ನೋಡಿದ. ಬಹು ರುಚಿಯಾಗಿತ್ತು. ಹಸಿಬೀಜವನ್ನೇ ನುಂಗಿಬಿಟ್ಟ. ಹನುಮನ ಬಲ ನೂರ್ಮಡಿಯಾಯ್ತು.

ಗಿಡಗಳನ್ನೇ ಕಿತ್ತು ಹೊರೆಕಟ್ಟಿ ಹೊತ್ತ ಹನುಮ. ಅವನು ಅಂತರಿಕ್ಷ ಮಾರ್ಗದಲ್ಲಿ ರಭಸದಿಂದ ಹಾರಿ ಬರುತ್ತಿದ್ದಾಗ ಪಕ್ವವಾದ ಕೆಲವು ಹಣ್ಣುಗಳು ಭರತಖಂಡದ ಮೇಲೆ ಅಲ್ಲಲ್ಲಿ ಉದುರಿದವು. ಕ್ರಮೇಣ ಅವು ಭೂಮಿಯಲ್ಲಿ ಸಮೃದ್ಧವಾಗಿಯೇ ಬೆಳೆದವು. 

ಅತ್ತ ಕೈಲಾಸದಲ್ಲಿ ಕೂಡಲೇ ಧನ್ವಂತರಿ ಒಣಗಿದ ಹಣ್ಣನ್ನು ಒಡೆದು, ಬೀಜ ತೆಗೆದು ಅಗ್ನಿಗೆ ಕೊಟ್ಟ. ಅಗ್ನಿ ಹದವಾಗಿ  ಹುರಿದು ಕೊಟ್ಟ. ಅದನ್ನು ಅರೆದು ಪುಡಿಮಾಡಿ ಕಷಾಯಕ್ಕಿಟ್ಟಾಯಿತು. ಅದಕ್ಕೆ ಹಾಲು_ಸಕ್ಕರೆ ಬೇಕು. ಸರಿ, ಗಣಪ, ಸುಬ್ರಹ್ಮಣ್ಯರು  ಓಡಿದರು. ದೇವಲೋಕದಿಂದ  ಸಕ್ಕರೆ ಬಂತು. ವೈಕುಂಠದ ಕ್ಷೀರಸಾಗರದಿಂದ ಹಾಲು ಬಂತು. ಘಂ ಎನ್ನುವ ಕಷಾಯ ತಯಾರಾಯಿತು. 

ದೊಡ್ಡ ಕರಂಡದ ತುಂಬಾ ಕಷಾಯ ತುಂಬಿ ಪರಮೇಶ್ವರನಿಗೆ ಕೊಟ್ಟ  ಧನ್ವಂತರಿ. ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಉಮೆ ಶಂಕರನ ಮುಖವನ್ನೇ ನೋಡುತ್ತಿದ್ದಳು. ಆರು ಗಳಿಗೆಯಲ್ಲಿ ಹರನ ಮೂಗಿನ ಗಂಗಾಪ್ರವಾಹ ನಿಂತಿತು. ಮೈ ಹಗುರವಾಗಿ ಜ್ವರಬಿಟ್ಟು ಪರಮೇಶ್ವರ ಪ್ರಸನ್ನನಾದ.

ಈ ಪವಾಡವನ್ನು ಕಂಡು ದೇವತೆಗಳು ವಿಸ್ಮಯಪಟ್ಟರು. ಉಳಿದ ಕಷಾಯವನ್ನು ಧನ್ವಂತರಿ ನೆರೆದವರೆಲ್ಲರಿಗೂ ಬಿಸಿಬಿಸಿಯಾಗಿ ಕೊಟ್ಟ. ಅಮೃತ ಕುಡಿದು ಕುಡಿದು ಸೀ ಬಡಿದು ಹೋದ ಬಾಯಿಗೆ ಈ ಕಷಾಯ ಅಮೃತಕ್ಕಿಂತ ರುಚಿಯಾಗಿ ಕಂಡಿತು. ಎಲ್ಲರಿಗೂ ಮೈ ಹುರುಪು ಬಂದಿತು. ನಂತರ ದೇವತೆಗಳು ಕೇಳಿದರು ಆ ಬೀಜದ ಹೆಸರೇನು..ಎಂದು?.

ಧನ್ವಂತರಿ ಯೋಚಿಸಿದ. ಇವರಿಗೆ ತಿಳಿದರೆ ಸಂಜೀವಿನಿ ಪರ್ವತವೇ ಖಾಲಿಯಾದೀತು  ಎಂದುಕೊಂಡು, ಯಾವಾಗಲೂ ಕೆಲವು ಮಹತ್ವದ ಔಷಧಿಗಳ ಹೆಸರು ಹೇಳಬಾರದು. ಹೇಳಿದರೆ ಅದರ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ನೀವೆಲ್ಲ ಕೇಳಿದರೆ ಸಂಜೀವ ಇದನ್ನು ಕೊಟ್ಟಾನೆ..? ಬೀಜವನ್ನು ಕಪಿರಾಜ ತಂದುಕೊಟ್ಟಿದ್ದರಿಂದ  ನೀವು  ಕಪಿಬೀಜ ಎಂದು ಕರೆಯಿರಿ. ಇಷ್ಟು ಸಾಕು, ಇನ್ನು ಹೊರಡಿ ಎಂದಾಗ ಎಲ್ಲರೂ ಹೊರಟರು.

ಮೊದಮೊದಲು ಕಲಿಯುಗದಲ್ಲಿ ಆ ಕಪಿಬೀಜದ ಹಣ್ಣುಗಳನ್ನು ಮಂಗಗಳೇ ತಿನ್ನುತ್ತಿದ್ದವು. ಮಾರುತಿಯ ಅಂಶದಿಂದ ಹುಟ್ಟಿದ ಅಂದರೆ ಮಂಗನಮೂತಿಯ ಕೆಂಪು ಆಂಗ್ಲ ಜನ ಮೊಟ್ಟಮೊದಲು ಈ ಕಪಿಬೀಜವನ್ನು ಕಂಡುಹಿಡಿದರು... ಕಫಿ ಎಂದರು...

ಬರುಬರುತ್ತಾ 

ಅದು ಕಾಫಿಯಾಯಿತು....."

Sunday, February 18, 2024

youth in nation building

ದೇಶದ ಅಭಿವೃದ್ದಿಯಲ್ಲಿ ಯುವಕರು...


 ‘ರಾಷ್ಟ್ರ’ ಎಂದರೆ ಕೇವಲ ಉದ್ದಗಲಕ್ಕೂ ಹರಡಿದ ಭೂಮಿ, ಎತ್ತರವಾಗಿ ನಿಂತ ಪರ್ವತ ಮಾಲೆ, ಸುತ್ತಿಹರಿವ ನದಿಗಳು, ಹಾಗೂ ಹರಿಯುತ್ತಿರುವ ಹಳ್ಳ ಕೊಳ್ಳ -ಇತ್ಯಾದಿ ಭೌಗೋಲಿಕ ಲಕ್ಷಣಗಳಷ್ಟೇ ಅಲ್ಲ. ಅಲ್ಲಿ ಹುಟ್ಟಿ ಬೆಳೆದು ಜೀವಿಸುತ್ತಿರುವ ಸಹಸ್ರಾರು ಮಾನವ ಜೀವಿಗಳು ಒಂದು ರಾಷ್ಟ್ರವನ್ನು ರೂಪಿಸುತ್ತವೆ. ನಿಸರ್ಗ, ನೈಜವಾಗಿ ನೀಡಿದ ನೆಲ, ನೀರು, ನಿಕ್ಷೇಪಿತ ನಿಧಿಗಳೆಲ್ಲ ನಾಡಿನ ನಿಜವಾದ ನಿಧಿಗಳೇನೋ ಸರಿ. ಆದರೆ ಅವುಗಳ ನ್ಯಾಯಸಮ್ಮತ ನಿರ್ವಹಣೆ ನಾಡಿನ ನಿವಾಸಿಗಳ ನಿಪುಣತೆಯಲ್ಲಿದೆ. ಅಷ್ಟಕ್ಕೂ ರಾಷ್ಟ್ರಾಭಿವೃದ್ದಿ ಎಂದರೆ- ರಾಷ್ಟ್ರದ ಸರ್ವತೋಮುಖ  ಉತ್ಕರ್ಷ, ಉನ್ನತಿ, ಉತ್ಥಾನ, ಸರ್ವತೋಮುಖ  ಅಭಿವೃದ್ಧಿಯೆಂದರೆ ಆ ರಾಷ್ಟ್ರದ ಚಾರಿತ್ರö್ಯ ಶಿಕ್ಷಣ, ಉದ್ಯೋಗ, ವಿಜ್ಞಾನ, ಕಲೆ, ಕೌಶಲ್ಯ, ಕ್ರೀಡೆ ಹೀಗೆ ಅನೇಕ ಆಯಾಮಗಳಲ್ಲಿ ಸಾಧಿಸಿರುವ ಪರಿಣತಿ, ರಾಷ್ಟ್ರದ ಜನತೆಗಳಲ್ಲಿ ಈ ಎಲ್ಲ ಆಯಾಮಗಳ ಪರಿಣತಿ ಇದ್ದಾಗಲೇ ರಾಷ್ಟ್ರಾಭಿವೃದ್ಧಿ ರಾಷ್ಟ್ರದ ಅಭ್ಯುದಯ ಸಾಧ್ಯವಾಗುವುದು.

ಈ ಎಲ್ಲ ಆಯಾಮಗಳಲ್ಲಿ ಪರಿಣತಿ ಪಡೆಯಲು ನಾವು ಚಿಕ್ಕ ಮಕ್ಕಳಿದ್ದಾಗಲೇ ಅದಕ್ಕಾಗಿ ಪರಿಶ್ರಮಪಡಬೇಕಾಗುತ್ತದೆ. ಮಕ್ಕಳಿಗೆ ಈ ಸಂಸ್ಕಾರವನ್ನು ಕೊಡುವುದಕ್ಕಾಗಿ ನಾವು ಅನೇಕ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಅಲ್ಲದೆ ಆ ಯೋಜನೆಗಳ ಸಾಕ್ಷಾತ್ಕಾರಕ್ಕೆ ಶ್ರಮಿಸಬೇಕಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಯಾರೂ ಹುಟ್ಟಿದಾಗಿನಿಂದಲೇ ಹೊಂದಿರಲಾರರು. ಇವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಪಡೆದುಕೊಳ್ಳಬೇಕಾಗುತ್ತದೆ.  ಅಂತೆಯೇ ಮಕ್ಕಳಲ್ಲಿ ಅವರ ವಿದ್ಯಾರ್ಥಿ ಜೀವನದಲ್ಲಿಯೇ ಈ  ಎಲ್ಲ ಗುಣಗಳನ್ನೂ, ವಿದ್ಯೆಗಳನ್ನೂ, ಕಲೆಗಳನ್ನೂ ಅಳವಡಿಸಬೇಕಾ ಗುತ್ತದೆ.

ಮಕ್ಕಳನ್ನು ‘ಅವರಿನ್ನೂ ಚಿಕ್ಕವರು, ರಾಷ್ಟ್ರಾಭಿವೃದ್ಧಿಯಲ್ಲಿ ಅವರೇನು ಮಾಡಬಲ್ಲರು?’ ಎನ್ನಬೇಡಿ. ‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂದು ಗಾದೆಯಿದೆ. ಆದ್ದರಿಂದಲೇ ರಾಷ್ಟ್ರದ ಅಭ್ಯುದಯಕ್ಕೆ ಆವಶ್ಯಕವಾದ ಆಯಾಮಗಳ ಪರಿಣತಿ  ಪಡೆಯಲು ಈಗಿನಿಂದಲೇ ಅವರಿಗೆ ತರಬೇತಿ ನೀಡಬೇಕು. ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನೋಧರ್ಮ ರೂಪಗೊಳ್ಳಬೇಕು. ಅವರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ಅವರ ದೃಷ್ಟಿಕೋನವನ್ನು ಸಂಸ್ಕರಿಸಬೇಕು. ಅ ಎಳೆಯ ಮನಸ್ಸುಗಳಲ್ಲಿಯೇ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನವನ್ನು ಬಿತ್ತಿ ಪೋಷಿಸುತ್ತ ಬರಬೇಕು.

ವಿದ್ಯಾರ್ಥಿಗಳಲ್ಲಿ ಈ ಮನೋಧರ್ಮವನ್ನು ಮೂಡಿಸಲು ದೃಷ್ಟಿಕೋನವನ್ನು ಸೃಷ್ಟಿಸಲು ಶಾಲಾ ಕಾಲೇಜುಗಳು ಯೋಜನೆ ರಚಿಸಬೇಕಾಗಿದೆ. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕ್ರಿಯಾಶೀಲರಾಗಬೇಕಾಗಿದ್ದು, ಅಂತೆಯೇ ರಾಷ್ಟ್ರದ ಉನ್ನತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಖಂಡಿತವಾಗಿಯೂ ಪ್ರಮುಖವಾದದ್ದು, ವಿಶೇಷವಾದದ್ದು. ಅವರ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಲು ಶಾಲಾ, ಕಾಲೇಜುಗಳಲ್ಲದೆ ಶಿಕ್ಷಣ ವಿಭಾಗವೂ ಸಹ ಅತ್ಯಂತ ಗಹನವಾಗಿ ವಿಚಾರಶೀಲರಾಗಬೇಕು.  ವಿದ್ಯಾರ್ಥಿಗಳಿಗೆ ಈ ರೀತಿಯ ಯೋಗ್ಯ ತರಬೇತಿ ನೀಡಲು ಪೂರಕವಾದ ಪಾಠ್ಯಕ್ರಮ ತಯಾರಿಸುವುದು ಹಾಗೂ ಅವರ ಪಠ್ಯಪುಸ್ತಕಗಳಲ್ಲಿ ಈ ಪಾಠ್ಯಕ್ರಮವನ್ನು ಅಳವಡಿಸುವುದು ತುಂಬಾ ಅವಶ್ಯಕ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಒಳ್ಳೆ ಶಿಕ್ಷಣ ಪಡೆಯುವುದಲ್ಲದೆ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಅವರ ಚಾರಿತ್ರö್ಯ ಗೌರವಯುತವಾಗುತ್ತದೆ. ರಾಷ್ಟ್ರಾಭಿವೃದ್ದಿಗೆ ಕೆಲ ಅವಶ್ಯಕ ಮೌಲ್ಯಗಳನ್ನು ಈಗ ವಿವೇಚಿಸೋಣ -

ದೇಶಭಕ್ತಿ - ಚಿಕ್ಕಂದಿನಿಂದಲೂ ದೇಶಪ್ರೇಮ, ದೇಶಾಭಿಮಾನವನ್ನು ಮಕ್ಕಳ ನರ ನರಗಳಲ್ಲಿ ತುಂಬಬೇಕು.  ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಪರ್ವಗಳ ಕುರಿತು ಮಕ್ಕಳಲ್ಲಿ ಅಭಿಮಾನ ಹುಟ್ಟಿಸಬೇಕು. ಅವುಗಳ ವಿಷಯಕ್ಕೆ ಅರಿವನ್ನು ಮೂಡಿಸಬೇಕು. ದೇಶಭಕ್ತಿಗೆ ವಯಸ್ಸಿನ ಮಾನದಂಡ ಬೇಕಿಲ್ಲ. ಉದಾಹರಣೆಗೆ ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯ ಭಾಗವಹಿಸಿದ ಅನೇಕ ನಾಯಕರು ಶಾಲೆ, ಕಾಲೇಜ್‌ನಲ್ಲಿ ಇರುವಾಗಲೇ ಹೋರಾಟದಲ್ಲಿ ಭಾಗವಹಿಸಿದ್ದರು. 

ನನ್ನ ಬಾಲ್ಯದ ದಿನಗಳನ್ನು ನೆನೆದಾಗ ನನಗೆ ಅಭಿಮಾನ ಎನ್ನಿಸುವುದು, ನಾವೂ ಕೂಡ ಸ್ವಾತಂತ್ರö್ಯದ ಹೋರಾಟದಲ್ಲಿ ಅಳಿಲು ಸೇವೆ ಮಾಡಿದ್ದೇವೆ ಎಂದು. ನನಗಾಗ ಆರು ವರ್ಷ ಪ್ರತಿದಿನ ಬೆಳಗಿನ ಜಾವ ನಮ್ಮ ನೆರೆಯ ಮಕ್ಕಳೆಲ್ಲ ಸೇರಿ ರಾಷ್ಟ್ರಭಕ್ತಿ 

Dwajasthamba in temples

ಗುಡಿಯಲ್ಲಿ ಧ್ವಜಸ್ತಂಭ ಯಾಕೆ ಇರುತ್ತದೆ? 
ಧ್ವಜಸ್ತಂಭದ ಹಿಂದೆ ಒಂದು ಕಥೆ ಇದೆ....


 ನಮ್ಮಲ್ಲಿ ಬಹಳಷ್ಟು ಮಂದಿ ದೇವಸ್ಥಾನಕ್ಕೆ ಹೋಗಿ ಬರುತ್ತಿರುತ್ತೇವೆ.. ನಮ್ಮ ಕೋರಿಕೆಗಳನ್ನು ನೆರವೇರಿಸು ಎಂದು ದೇವರನ್ನು ಬೇಡಿಕೊಳ್ಳುತ್ತಿರುತ್ತೇವೆ... ಗುಡಿಗೆ ಹೋಗುವ ಮೊದಲು ನಮಗೆ ಧ್ವಜಸ್ತಂಭ ದರ್ಶನ ನೀಡುತ್ತದೆ. ನಾವು ಧ್ವಜಸ್ತಂಭಕ್ಕೆ ಕೈಮುಗಿದ ಬಳಿಕ ದೇವರ ಬಳಿಗೆ ಹೋಗುತ್ತೇವೆ. ಆದರೆ ಗುಡಿಯಲ್ಲಿ ಧ್ವಜಸ್ತಂಭ ಯಾಕೆ ಇರುತ್ತದೆ ಎಂಬುದನ್ನು ಎಂದಾದರೂ ಅಲೋಚಿಸಿದ್ದೀರಾ...? ಗುಡಿಯಲ್ಲಿರುವ ಧ್ವಜಸ್ತಂಭದ ಹಿಂದೆ ಒಂದು ಕಥೆ ಇದೆ.

ಕುರುಕ್ಷೇತ್ರದ ಬಳಿಕ ಧರ್ಮರಾಜ ಸಿಂಹಾಸನವನ್ನು ಏರಿ ರಾಜ್ಯವನ್ನು ಪರಿಪಾಲಿಸುತ್ತಿರುತ್ತಾನೆ. ಪ್ರಜೆಗಳ ಬಳಿ ಒಳ್ಳೆಯವನೆನಿಸಿಕೊಳ್ಳಲು ಧರ್ಮಮೂರ್ತಿಯಾಗಿ ಹೆಸರು ಮಾಡಲು ಅನೇಕ ದಾನ ಧರ್ಮಗಳನ್ನು ಮಾಡುತ್ತಿರುತ್ತಾನೆ. ಇದು ಸರಿಯಲ್ಲ ಎಂದು ಶ್ರೀಕೃಷ್ಣನು ಧರ್ಮರಾಜನಿಗೆ ಗುಣಪಾಠ ಕಲಿಸಬೇಕು ಎಂದುಕೊಳ್ಳುತ್ತಾನೆ. ಅದಕ್ಕಾಗಿ ಅಶ್ವಮೇಧ ಯಾಗ ಮಾಡಿ, ಶತ್ರು ರಾಜರನ್ನು ಗೆದ್ದು ದೇವತೆಗಳನ್ನು, ಬ್ರಾಹ್ಮಣರನ್ನು ಗೆದ್ದು ರಾಜ್ಯವನ್ನು ಸುಭಿಕ್ಷವಾಗಿ ಮಾಡಬೇಕೆಂದು ಕೋರುತ್ತಾನೆ. 

ಧರ್ಮರಾಜನು ಶ್ರೀಕೃಷ್ಣನ ಮಾತನ್ನು ಶಿರಸಾ ಪಾಲಿಸಿ ಅಶ್ವಮೇಧಕ್ಕೆ ತಯಾರು ಮಾಡಿ, ಯಾಗಾಶ್ವಕ್ಕೆ ರಕ್ಷಕರನ್ನಾಗಿ ನಕುಲ ಸಹದೇವರನ್ನು ಸೈನ್ಯದೊಂದಿಗೆ ಕಳುಹಿಸುತ್ತಾನೆ. ಆ ಯಾಗಾಶ್ವ ಎಲ್ಲಾ ರಾಜ್ಯಗಳನ್ನೂ ಸುತ್ತಿ ಕೊನೆಗೆ ಮಣಿಪುರ ರಾಜ್ಯ ಸೇರುತ್ತದೆ. ಆ ರಾಜ್ಯಕ್ಕೆ ರಾಜ ಮಯೂರ ಧ್ವಜ. ಅವನು ಮಹಾ ಪರಾಕ್ರಮಶಾಲಿ. ಭಾರಿ ಹೆಸರು ಮಾಡಿರುವಂತಹವನು. ಮಯೂರಧ್ವಜನ ಪುತ್ರ ತಾಮ್ರ ಧ್ವಜ ಪಾಂಡವರ ಯಾಗದ ಅಶ್ವವನ್ನು ಬಂಧಿಸುತ್ತಾರೆ.

ತಾಮ್ರ ಧ್ವಜನ ಜತೆಗೆ ಯುದ್ಧ ಮಾಡಿದ ನಕುಲ ಸಹದೇವರು, ಭೀಮಾರ್ಜುನರು ಸೋತುಹೋಗುತ್ತಾರೆ. ತಮ್ಮಂದಿರೆಲ್ಲಾ ಸೋತ ಸುದ್ದಿಯನ್ನು ತಿಳಿದುಕೊಂಡ ಧರ್ಮರಾಜ ಯುದ್ಧಕ್ಕಾಗಿ ಹೊರಡುತ್ತಾನೆ. ಆಗ ಶ್ರೀಕೃಷ್ಣನು ಆತನನ್ನು ತಡೆದು ಮಯೂರಧ್ವಜನನ್ನು ಯುದ್ಧದಲ್ಲಿ ಜಯಿಸುವುದು ಸಾಧ್ಯವಿಲ್ಲ, ಕುಟಿಲೋಪಾಯದಿಂದ ಮಾತ್ರ ಗೆಲ್ಲಬಹುದು ಎನ್ನುತ್ತಾನೆ.

ಶ್ರೀಕೃಷ್ಣನು, ಧರ್ಮರಾಜ ಜತೆಯಾಗಿ ವಯಸ್ಸಾದ ಬ್ರಾಹ್ಮಣರ ರೂಪದಲ್ಲಿ ಮಣಿಪುರಕ್ಕೆ ಹೋಗುತ್ತಾರೆ. ಅವರನ್ನು ನೋಡಿದ ಮಯೂರ ಧ್ವಜ ಅವರಿಗೆ ದಾನ ನೀಡಬೇಕೆಂದು ಏನು ಬೇಕು ಕೇಳಿಕೊಳ್ಳಿ ಎಂದು ಕೇಳುತ್ತಾನೆ. ಅದಕ್ಕೆ ಶ್ರೀಕೃಷ್ಣನು, "ರಾಜಾ! ನಿಮ್ಮ ದರ್ಶನಕ್ಕಾಗಿ ನಾವು ಬರುತ್ತಿದ್ದ ದಾರಿಯಲ್ಲಿ ಒಂದು ಸಿಂಹ ಅಡ್ಡ ಬಂದು ಈತನ ಪುತ್ರನನ್ನು ಹಿಡಿದುಕೊಂಡಿದೆ. ಮಗುವನ್ನು ಬಿಟ್ಟುಬಿಡುವಂತೆ ನಾವು ಪ್ರಾರ್ಥಿಸಿದೆವು. ಸಿಂಹ ಮಾನವ ಭಾಷೆಯಲ್ಲಿ, "ನಿಮ್ಮ ಪುತ್ರ ನಿಮಗೆ ಬೇಕಾದರೆ ಮಣಿಪುರ ರಾಜನಾದ ಮಯೂರಧ್ವಜನ ದೇಹದ ಅರ್ಧದಷ್ಟು ಭಾಗವನ್ನು ನನಗೆ ಆಹಾರವಾಗಿ ಆತನ ಪತ್ನಿ ಪುತ್ರರು ಸ್ವತಃ ಕೊಯ್ದು ಕೊಟ್ಟಿದ್ದನ್ನು ತಂದುಕೊಟ್ಟರೆ, ಈತನನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದಾಗಿ, ಆದಕಾರಣ ಪ್ರಭುಗಳು ನಮ್ಮ ಬಗ್ಗೆ ದಯ ತೋರಿ ತಮ್ಮ ದೇಹದ ಅರ್ಧ ಭಾಗವನ್ನು ದಾನ ನೀಡಿ ಇವರ ಕುಮಾರನನ್ನು ಕಾಪಾಡಬೇಕೆಂದು ಕೋರುತ್ತಾರೆ.

ಅವರ ಕೋರಿಕೆ ಕೇಳಿದ ಮಯೂರಧ್ವಜ ಅಂಗೀಕರಿಸಿ ಅದಕ್ಕೆ ಸೂಕ್ತ ಏರ್ಪಾಡುಗಳನ್ನು ಮಾಡಿಸಿ ಪತ್ನಿ ಪುತ್ರರಿಗೆ ಆತನ ದೇಹವನ್ನು ಮಧ್ಯಕ್ಕೆ ಕತ್ತರಿ ಕೊಡಬೇಕೆಂದು ಹೇಳುತ್ತಾನೆ. ಅವರು ಅವನ ದೇಹವನ್ನು ಅರ್ಧದಷ್ಟು ಕತ್ತರಿಸುವುದನ್ನು ನೋಡಿದ ಧರ್ಮರಾಜ ಆತನ ದಾನ ಗುಣಕ್ಕೆ ಬೆರಗಾಗುತ್ತಾನೆ. ಅಷ್ಟರಲ್ಲಿ ಮಯೂರ ಧ್ವಜನ ಎಡಗಣ್ಣಿನಿಂದ ನೀರು ಸೋರುವುದನ್ನು ನೋಡಿದ ಧರ್ಮರಾಜ "ತಾವು ಕಣ್ಣೀರು ಸುರಿಸುತ್ತಾ ಕೊಟ್ಟ ದಾನ ನಮಗೆ ಬೇಡ ಎಂದರೆ ಬೇಡ ಎನ್ನುತ್ತಾನೆ" ಅದಕ್ಕೆ ಮಯೂರಧ್ವಜ, "ಮಹಾತ್ಮಾ ತಾವು ತಪ್ಪಾಗಿ ಭಾವಿಸುತ್ತಿದ್ದೀರಾ. ನೋವಿನಿಂದ ನನ್ನ ದೇಹವನ್ನು ನಿಮಗೆ ನೀಡುತ್ತಿಲ್ಲ. ನನ್ನ ಬಲಭಾಗ ಪರೋಪಕಾರಕ್ಕೆ ಉಪಯೋಗವಾಯಿತು. ಆದರೆ ಆ ಭಾಗ್ಯ ತನಗಿಲ್ಲವಲ್ಲ ಎಂದು ಎಡಗಣ್ಣು ತುಂಬಾ ನೋವನ್ನನುಭವಿಸುತ್ತಾ ಕಣ್ಣೀರು ಹಾಕುತ್ತಿದೆ" ಎಂದು ವಿವರಿಸುತ್ತಾನೆ. ಮಯೂರ ಧ್ವಜನ ದಾನಶೀಲ ಗುಣವನ್ನು ಮೆಚ್ಚಿ ಶ್ರೀಕೃಷ್ಣನು ತನ್ನ ನಿಜ ರೂಪವನ್ನು ತೋರಿಸಿ "ಮಯೂರಧ್ವಜ, ನಿನ್ನ ದಾನ ಗುಣ ಅಮೋಘ... ಏನಾದರೂ ವರ ಕೋರಿಕೋ" ಎನ್ನುತ್ತಾನೆ.

"ಪರಮಾತ್ಮ, ನನ್ನ ದೇಹ ನಶಿಸಿದರೂ ನನ್ನ ಆತ್ಮ ಪರೋಪಕಾರಕ್ಕಾಗಿ ಉಪಯೋಗಪಡುವಂತೆ ನಿತ್ಯ ನಿಮ್ಮ ಮುಂದಿರುವಂತೆ ಅನುಗ್ರಹಿಸಿ" ಎಂದು ಕೋರಿಕೊಳ್ಳುತ್ತಾನೆ ಮಯೂರ ಧ್ವಜ. ಅದಕ್ಕೆ ಶ್ರೀಕೃಷ್ಣನು ತಥಾಸ್ತು ಎನ್ನುತ್ತಾನೆ. "ಮಯೂರ ಧ್ವಜ, ಇಂದಿನಿಂದ ಪ್ರತಿ ದೇವಾಲಯದ ಮುಂದೆ ನಿನ್ನ ನೆನಪಿಗಾಗಿ ಧ್ಜಜಸ್ತಂಭಗಳಿರುತ್ತವೆ. ಅದನ್ನು ಆಶ್ರಯಿಸಿದ ನಿನ್ನ ಆತ್ಮ, ನಿತ್ಯ ದೈವ ಸನ್ನಿಧಿಯಲ್ಲಿ ಇರುತ್ತದೆ. ಮೊದಲು ನಿನ್ನ ದರ್ಶನ ಪಡೆದು ಪ್ರದಕ್ಷಿಣಿ ನಮಸ್ಕಾರಗಳನ್ನು ಆಚರಿಸಿದ ಬಳಿಕವಷ್ಟೇ ಪ್ರಜೆಗಳು ತಮ್ಮ ಇಷ್ಟ ದೈವದ ದರ್ಶನ ಪಡೆಯುತ್ತಾರೆ. ಪ್ರತಿನಿತ್ಯ ನಿನ್ನ ದೇಹದಲ್ಲಿ ದೀಪ ಯಾರು ಇಡುತ್ತಾರೋ ಅವರ ಜನ್ಮ ಸಾರ್ಥಕವಾಗುತ್ತದೆ. ನಿನ್ನ ನೆತ್ತಿಯ ಮೇಲೆ ಇಟ್ಟ ದೀಪ ರಾತ್ರಿ ಹೊತ್ತು ದಾರಿಹೋಕರಿಗೆ ದಾರಿ ತೋರುವ ದೀಪವಾಗುತ್ತದೆ" ಎಂದು ಅನುಗ್ರಹಿಸುತ್ತಾನೆ.

ಅಂದಿನಿಂದ ಆಲಯಗಳ ಮುಂದೆ ಧ್ವಜಸ್ತಂಭಗಳನ್ನು ಕಡ್ಡಾಯವಾಗಿ ಪ್ರತಿಷ್ಠಾಪಿಸುವ ಆಚಾರ ಆರಂಭವಾಯಿತು. ಭಕ್ತರು ಮೊದಲು ಧ್ವಜಸ್ತಂಭಕ್ಕೆ ನಮಿಸಿ ಬಳಿಕ ಮೂಲವಿರಾಟ್ ದರ್ಶನ ಮಾಡಿಕೊಳ್ಳುವುದು ಸಾಂಪ್ರದಾಯಿಕವಾಗಿ ಬದಲಾಗಿದೆ

Kailasa Temple at Ellora

ಶ್ರೀ ಕೈಲಾಸನಾಥ ದೇವಸ್ಥಾನ ಎಲ್ಲೋರಾ 


“ದೇವಾಲಯದ ಸುತ್ತ ಸುತ್ತೋಣ ಬನ್ನಿ” 

“ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿ”ಯಲ್ಲಿ ಸ್ಥಾನ ಪಡೆದ, ಜಗದ್ವಿಖ್ಯಾತ ಎಲ್ಲೋರಾದ ಕೈಲಾಸನಾಥ ದೇವಸ್ಥಾನದ ಒಂದು ಕಿರುನೋಟ...

“ಹಿನ್ನೆಲೆ”

ವಿಶ್ವದ ಜೀವಕೋಟಿಗಳಲ್ಲಿ ಮಾನವನೇ ಅತೀ ಶ್ರೇಷ್ಠ ಎಂದು, ಆತನು ಮನಸ್ಸು ಮಾಡಿದಲ್ಲಿ ಯಾವ ಕೆಲಸವನ್ನಾದರೂ ಹಿಡಿದು ಸಾಧಿಸಬಲ್ಲ ಛಾತಿ ಆತನಿಗಿದೆ ಎಂಬುದು ಹಲವಾರು ಬಾರಿ ಸಾಬೀತುಗೊಂಡಿದೆ. ಇದು “ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರ (ಎಲ್ಲಾಪುರ)ದಲ್ಲಿರುವ ಕೈಲಾಸನಾಥ” ದೇವಾಲಯ ನೋಡಿದರೆ ತಿಳಿಯುತ್ತದೆ. ಯಾವುದೇ ಕಟ್ಟಡವನ್ನು ಕೆಳಗಿನಿಂದ ಅಂದರೆ  ಅಡಿಪಾಯದಿಂದ ಪ್ರಾರಂಭ ಮಾಡಿ ತುದಿಯ ತನಕ ಕಟ್ಟಿ ಮುಗಿಸುತ್ತಾರೆ. ಆದರೆ ಈ ದೇವಾಲಯವು ಸಹ್ಯಾದ್ರಿ ಶ್ರೇಣಿಯ ಚÀರಣಾದ್ರಿ ಬೆಟ್ಟದ ಏಕಬಂಡೆಯಲ್ಲಿ ಕೊರೆದಿದ್ದಾಗಿದೆ. ಇದರ ಕೆಲಸವನ್ನು ಪರ್ವತದ ತುದಿಯಲ್ಲಿ ಪ್ರಾರಂಭ ಮಾಡಿ “ಯು” ಆಕಾರದಲ್ಲಿ ಇಡೀ ಬೆಟ್ಟವನ್ನು ಕೊರೆದು ನಿರ್ಮಿಸಲಾಗಿದೆ. ಬರೀ ಸುತ್ತಿಗೆ ಮತ್ತು ಚಾಣು ಉಪಯೋಗಿಸಿ ನಿರ್ಮಿಸಿದ ಈ ದೇವಸ್ಥಾನದ ನಿರ್ಮಾಣ ಮತ್ತು ಅದರ ಕಾಲದ ಬಗ್ಗೆ ಬಹಳಷ್ಟು ಊಹಾ ಪೋಹಗಳು ಇಂದಿಗೂ ನಡೆಯುತ್ತಲೇ ಇದೆ. ಇದನ್ನು ರಾಷ್ಟ್ರಕೂಟರ ರಾಜನಾದ “ಕೃಷ್ಣ” ಸುಮಾರು ಕ್ರಿ.ಶ. ೭೫೦ರ ಆಸುಪಾಸಿನಲ್ಲಿ ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅಲ್ಲಿ ನೆಡೆದಿರುವ ಕೆಲಸದ ಪ್ರಮಾಣವನ್ನು ನೋಡಿದರೆ ಅದು ಬಹುಶಃ ಸುಮಾರು ಶತಮಾನಗಳಿಂದಲೇ ಆಗಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಏಕೆಂದರೆ ಸುಮಾರು ನಾಲ್ಕು ಲಕ್ಷ ಟನ್ನ್ಗಳಷ್ಟು ಬಂಡೆಯ ಚೂರುಗಳನ್ನು ಅಲ್ಲಿಂದ ತೆಗದಿರಬಹುದೆಂದು ಲೆಕ್ಕಿಸಲಾಗಿದೆ. ಹೀಗೆ ಭೂಮಿಯ ಮೇಲಿನ ಅತ್ಯಂತ ಗಟ್ಟಿಯಾದ ಪದಾರ್ಥವಾದ ಗ್ರಾನೈಟ್ ಶಿಲೆಯನ್ನು ಸ್ವಲ್ಪವೂ ಆಕಾರಕ್ಕೆ ಚ್ಯುತಿಬಾರದಂತೆ ಕತ್ತರಿಸಿ ತೆಗೆಯುವುದು ಇಂದಿನ ಲೇಸರ್ ಕಟಿಂಗ್ ತಂತ್ರಜ್ಞಾನದಿಂದಲೂ ಅಷ್ಟು ಸುಲಭ ಸಾಧ್ಯವಲ್ಲ. ಅಂತಹುದರಲ್ಲಿ ಸಾವಿರಾರು ವರ್ಷಗಳ ಹಿಂದೆ ಇಡೀ ಬಂಡೆಯನ್ನು ಕಲಾತ್ಮಕವಾಗಿ ಕೆತ್ತಿದ ಅಂದಿನ ಶಿಲ್ಪಿಗಳ ನೈಪುಣ್ಯತೆ, ಅರ್ಪಣಾ ಮನೋಭಾವ, ಏಕಾಗ್ರತೆ ಇವುಗಳು ನಮ್ಮ ಊಹೆಗೂ ನಿಲುಕದ್ದು. ಅದರಲ್ಲೂ ವಿಶೇಷವಾಗಿ ಇಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಮತ್ತು ನೆಲ ಮಟ್ಟದಿಂದ ಎರಡು ಅಡಿಗೂ ಕಡಿಮೆ ಎತ್ತರದಲ್ಲಿ ಕೊರೆಯಲಾಗಿರುವ ಹಲವಾರು ರಂಧ್ರಗಳು. ಇವುಗಳ ಕೊನೆ ಕಣ್ಣಿಗೆ ಕಾಣುವುದಿಲ್ಲ. ಕೈಗೆಟುಕದ ಆಳಕ್ಕೆ ಅಂತಹಾ ಗ್ರಾನೈಟ್ ಶಿಲೆಯನ್ನು ಸಾವಿರಾರು ವರ್ಷಗಳ ಹಿಂದೆ ಯಾವ ತಾಂತ್ರಿಕತೆ ಬಳಸಿ ಕೊರೆದಿರಬಹುದೆಂಬುದು ನಿಗೂಢವಾಗಿದೆ. 

ಮತ್ತೊಂದು ವಿಶೇಷವೆಂದರೆ, ಅಂದಿನ ದಿನಗಳಲ್ಲಿ ಇಲ್ಲಿ ಕೆತ್ತನೆ ಕಾರ್ಯಕ್ಕಾಗಿ ಬೆಳಕಿಗೆ ಏನು ವ್ಯವಸ್ಥೆ ಮಾಡಿಕೊಂಡಿರಬಹುದೆಂಬುದು. ಏಕೆಂದರೆ, ಈ ದಿನಗಳಲ್ಲೇ ಈ ದೇವಾಲಯದ ಒಳಗೆ ಬೆಳಕು ಕಡಿಮೆ ಎಂದೇ ಹೇಳಬಹುದು. ದೈವಕೃಪೆಯೊಂದೇ ಈ ಅಸಾಧ್ಯ ವಾದುದನ್ನು ಸಾಧ್ಯ ಮಾಡಿ ತನ್ನ ಇರುವಿಕೆಯನ್ನು ಪ್ರಕಟಿಸಿದ್ದಾನೆ. ಇದನ್ನು ಪರಶಿವನ ವಾಸಸ್ಥಾನವಾದ ಹಿಮಾಲಯದ ಕೈಲಾಸ ಪರ್ವತದ ಪ್ರತಿರೂಪವಾಗಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.

“ದೇವಾಲಯದ ಬಗ್ಗೆ ಮಾಹಿತಿ”

ಕೈಲಾಸನಾಥ ದೇವಾಲಯದ ಒಟ್ಟು ಉದ್ದ ೮೨ ಮೀಟರ್, ಅಗಲ ೪೬ ಮೀಟರ್. ಬಂಡೆಯ ಮೇಲಿಂದ ಸುಮಾರು ೧೫೦ ಅಡಿಗೂ ಹೆಚ್ಚು ಆಳ ಕೊರೆಯಲಾಗಿದೆ. ದೇವಾಲಯದ ಮುಖ್ಯ ದೇವತೆಯಾಗಿ ಲಿಂಗರೂಪಿಯಾದ ಶಿವನಿದ್ದು, ಅದರ ಎದುರಿಗೆ ನಂದಿಯಿದೆ. ದೇವಾಲಯಕ್ಕೆ ಹೋಲಿಸಿದರೆ ದೇವಾಲಯದ ಶಿಖರದ ಮೇಲಿನ ಕಳಶವು ಸ್ವಲ್ಪ ಚಿಕ್ಕದೆಂದು ಹೇಳಬಹುದು. ದೇವಾಲಯದ ಮುಂಭಾಗದಲ್ಲಿ ಆನೆಯ ಪ್ರತಿಮೆಗಳಿವೆ ಹಾಗೂ ದೇವಾಲಯದ ಸುತ್ತೆಲ್ಲಾ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಕೆತ್ತಲಾಗಿದೆ. ದೇವಾಲಯದ ತಳ ಭಾಗದಲ್ಲಿರುವ ಆನೆಗಳನ್ನು ಇಡೀ ದೇವಾಲಯದ ಭಾರವನ್ನು ಹೊತ್ತಿರುವುದೇನೋ ಎನ್ನುವಂತೆ ಕೆತ್ತಲಾಗಿದೆ. ಶಿವ ದೇವಾಲಯ ಮತ್ತು ನಂದಿ ಮಂಟಪ ಎರಡೂ ಸುಮಾರು ಏಳು ಮೀಟರ್‌ಗಳಷ್ಟು ಎತ್ತರವಿದೆ. ನಂದಿ ಮಂಟಪ ಮತ್ತು ಮುಖಮಂಟಪದ ಮಧ್ಯೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ದೇವಾಲಯದ ಎದುರಿಗೆ ಇರುವ ಸ್ತಂಭವು ಸುಮಾರು ನೂರು ಅಡಿಗೂ ಹೆಚ್ಚು ಎತ್ತರವಿದೆ. ಇದನ್ನು ಪಲ್ಲವ ಮತ್ತು ಚಾಲುಕ್ಯ ಶೈಲಿಯ ಶಿಲ್ಪಿಗಳು ನಿರ್ಮಿಸಿದ್ದಾರೆ. ಆ ಕಾಲದಲ್ಲಿ ಸಾವಿರಾರು ಜನ ಶಿವಭಕ್ತರು “ತಾವು ಶಿವನ ಸಾನಿಧ್ಯದಲ್ಲೇ ಇರಬೇಕೆಂದು, ತಮಗೆ ನಿತ್ಯವೂ ಆ ಪರಶಿವನ ದರ್ಶನವಾಗಿ, ಆತನ ಧ್ಯಾನದಲ್ಲಿಯೇ ಮುಳುಗಿರಬೇಕೆಂದು” ಬಯಕೆ ವ್ಯಕ್ತಪಡಿಸಿದಾಗ ಈ ದೇವಾಲಯವನ್ನು  ನಿರ್ಮಿಸಿ ಆ ಶಿವನ ಕೈಲಾಸವನ್ನೇ ಇಲ್ಲಿಗೆ ತರಲಾಯಿತೆಂದು ಪ್ರತೀತಿ ಇದೆ. ಇದನ್ನು ನಿಜವಾದ ಭೂ ಕೈಲಾಸವೆಂದೇ ಕರೆಯುತ್ತಾರೆ. ಇದನ್ನು ನೋಡಿದವರು ಮಾನವ ನಿರ್ಮಿತ ಎನ್ನುವುದರ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಾರೆ. ಇದನ್ನು ದೈವನಿರ್ಮಿತವೆಂದು ಭಾವಿಸುತ್ತಾರೆ. ಇದಕ್ಕೆ ಸರಿಯಾಗಿ ದೇವಾಲಯದ ನಿರ್ಮಾಣದ ಬಗ್ಗೆ ಐತಿಹಾಸಿಕವಾದ ಯಾವುದೇ ದಾಖಲೆಗಳು ದೊರಕುವುದಿಲ್ಲ.

ಈ ದೇವಾಲಯವು ಇರುವ ಸ್ಥಳ :

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿರುವ ೩೪ ಗುಹಾಂತರ ದೇವಾಲಯಗಳಲ್ಲಿ ಈ ದೇವಾಲಯವು ೧೬ನೇ ಗುಹೆಯಲ್ಲಿದೆ. ಔರಂಗಾಬಾದ್ ನಿಂದ ಸುಮಾರು ೩೦ ಕಿಲೋಮೀಟರ್ ಅಂತರದಲ್ಲಿರುವ ಇಲ್ಲಿಗೆ ಹೋಗಿ ಬರಲು ಬಸ್ ಮತ್ತು ಇತರೆ ವ್ಯವಸ್ಥೆಗಳಿವೆ. ಔರಂಗಾಬಾದ್ ಜಿಲ್ಲಾ ಸ್ಥಳವಾದುದರಿಂದ ಅಲ್ಲಿ ಉಳಿಯುವ ವ್ಯವಸ್ಥೆಯಿದೆ.

ಈ ದೇವಾಲಯದ ಮಹಿಮೆಯನ್ನು ಸಹಿಸದ ಮೊಗಲ್ ದೊರೆ ಔರಂಗಾಜೇಬನು ಇದರ ಮೇಲೆ ಹಲವಾರು ಬಾರಿ ದಾಳಿ ನಡೆಸಿದನೆಂದೂ ಮತ್ತು ಅಷ್ಟಕ್ಕೇ ತೃಪ್ತನಾಗದ ಅವನು ಸುಮಾರು ಒಂದು ಸಾವಿರ ಸೈನಿಕರನ್ನು ಬಿಟ್ಟು ದೇವಾಲಯವನ್ನು ದ್ವಂಸಗೊಳಿಸಲು ಬಿಟ್ಟಿದ್ದನೆಂದು ಹೇಳಲಾಗಿದೆ. ಆದರ ಸ್ವತಃ ಪರಶಿವನ ನೆಲೆಯಾದ ಈ ದೇವಾಲಯವು ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಹಾನಿಯಾಗಿದ್ದು ಬಿಟ್ಟರೆ ಮತ್ತೇನು ಹೆಚ್ಚಿನ ಹಾನಿಗೊಳಗಾಗಿಲ್ಲ. ಆದರೆ ಈ ದೇವಾಲಯದ ದ್ವಂಸದ ಯೋಚನೆ ಬಂದಾಗಿನಿಂದ, ಆತನಿಗೆ ಹಿನ್ನೆಡೆ ಆರಂಭವಾಗಿ ಇಡೀ ಸಾಮ್ರಾಜ್ಯವೇ ಪತನಗೊಂಡು ನಾಶವಾಯಿತು. ಇಂತಹ ಮಹಿಮೆಯ ಕ್ಷೇತ್ರಕ್ಕೆ ಒಮ್ಮೆಯಾದರೂ ಹೋಗಬೇಕೆನಿಸುತ್ತೆ ಅಲ್ಲವೇ...?

-ಕೃಪೆ

Vishnu Sahasranama

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ


೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣ ಮಾಡಿದÀರೆ ಒಳ್ಳೆಯದು.

೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲಾ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ.

೩.  ವಿಷ್ಣು ಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವುದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ  ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗಒಳಿಸುತ್ತದೆ.

೫.  ವಿಷ್ಣು ಸಹಸ್ರನಾಮ ಪಠಸುವ ಭಕ್ತರಿಗೆ ಎಂದು ಭಯವಿಲ್ಲ. ಇದರಿಂದ ವಿಶೇಷ ಶಾಂತಿ, ವಚ್ಸು÷್ಸ, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

೬.  ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

೭. ಶುದ್ಧ ಮನಸ್ಸಿನಿಂದ  ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆದಿ ದೈವಿಕ ಹಾಗೂ ಆದಿ ಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ. 

೮.  ವಿಷ್ಣು ಸಹಸ್ರನಾಮ ಅಂದರೆ ಮಾಹಾವಿಷ್ಣುವಿನ ಸಹಸ್ರನಾಮ ಪಠಣ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ.  ವಿಷ್ಣು ಸಹಸ್ರನಾಮ ಪಾರಾಯಣದಿಂದ ಕ್ಯಾನ್ಸರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತಾವರಣವೇ ಬದಲಾಗುತ್ತದೆ. ಮನೆಯಲ್ಲಿ ಮೈಯಲ್ಲಿ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ವಿಶೇಷ ಶಕ್ತಿ ಇದೆ.

೧೦.  ವಿಷ್ಣು ಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೂತ್ರವನö್ನೆಲ್ಲ ವರ್ಗದವರು ಮತ್ತು ಎಲ್ಲ ವಯಸ್ಸಿನವರು ಪಠಿಸಬಹುದಾಗಿದೆ.

೧೧. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪಠಣ ಮಾಡಿ ಬರಬಹುದು. ಸಮಯವಿಲ್ಲದವರು ತಮ್ಮ ತಮ್ಮö ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

೧೨. ಪ್ರಾಕೃತಿಕ ಸಮತೋಲನಕ್ಕಾಗಿ, ಗ್ರಾಮದ ಶಾಂತಿಗಾಗಿ, ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ ನಿತ್ಯ ಪಠಿಸೋಣ.

Is sugar a type of poison?

ಸಕ್ಕರೆ ಒಂದು ಪ್ರಕಾರದ ವಿಷ


 ೧. ಸಕ್ಕರೆ ಒಂದು ಪ್ರಕಾರದ ವಿಷ. ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿರ್ಮಾಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ. 

ಇದು ಹೇಗೆ, ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. 

೨. ಸಕ್ಕರೆ ತಯಾರಿಸುವ ಪ್ರಕ್ರಿಯೆ (ಠಿಡಿoಛಿess) ಯಲ್ಲಿ ಸರ್ವಾಧಿಕ ಪ್ಪಮಾಣದಲ್ಲಿ ಗಂಧಕ (suಟಠಿhuಡಿ) ಉಪಯೋಗಿಸುತ್ತಾರೆ. 

ಗಂಧಕ ಎಂದರೇನು? 

೩. ಇದು ಬಾಂಬ್ ತಯಾರಿಸಲು ಅಥವಾ ಸಿಡಿಮದ್ದು, ಪಟಾಕಿ ತಯಾರಿಸಲು ಉಪಯೋಗಿಸುವ ರಾಸಾಯನಿಕ ಪದಾರ್ಥ (ಛಿhemiಛಿಚಿಟ). ಈ ಗಂಧಕ ಅತ್ಯಂತ ಜಡ ಪದಾಥ೯. ಇದು ಒಮ್ಮೆ ಶರೀರದೊಳಗೆ ಹೋದರೆ, ಶರೀರದಿಂದ ಹೊರಬೀಳುವುದಿಲ್ಲ. 

೪. ಸಕ್ಕರೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಹೃದಯಾಘಾತ (sಣಡಿoಞe) ಆಗುತ್ತದೆ. 

೫. ದೇಹದಲ್ಲಿ ತೂಕ ಹೆಚ್ಚಲು ಕಾರಣಕೂಡ ಸಕ್ಕರೆ. 

೬. ದೇಹದಲ್ಲಿ ರಕ್ತದೊತ್ತಡಕ್ಕೆ (ಃ.P) ಕಾರಣ ಸಕ್ಕರೆ. 

೭. ಸಕ್ಕರೆಯಿಂದಾಗಿ ಮೆದುಳಿಗೆ ಸ್ಟ್ರೋಕ್ ಹೊಡೆಯುತ್ತದೆ. 

೮. ಸಕ್ಕರಯಿಂದಾಗಿ ಪಚನ ಶಕ್ತಿ ಕುಂದುತ್ತದೆ. 

೯. ಸಕ್ಕರೆ ತಯಾರಿಸುವಾಗ ೨೩ ಹಾನಿಕಾರಕ ರಸಾಯನಗಳ ಉಪಯೋಗ ಆಗುತ್ತದೆ. 

೧೦. ಸಕ್ಕರೆಯು ಛಿಚಿಟಿಛಿeಡಿ ಕಾರಕ. ಅಚಿಟಿಛಿeಡಿನ ಜೀವಾಣುಗಳು ಸಕ್ಕರೆ ಇಲ್ಲದೆ ಇರಲಾರವು ಎಂದು ಪ್ರಖ್ಯಾತ ತಜ್ಞರು ಕಂಡುಕೊಂಡಿದ್ದಾರೆ. 

೧೧. ಮನುಶ್ಯನಿಗೆ ಡಯಾಬಿಟೀಸ್ ಕಾಯಿಲೆಗೆ ಕಾರಣವೇ ಸಕ್ಕರೆ. 

೧೨. ಎಸಿಡಿಟಿ, ಹೈಪರ್ ಎಸಿಡಿಟಿ, ಹೊಟ್ಟೆಯಲ್ಲಿ ಉರಿ ಇತ್ಯಾದಿಗಳಿಗೆ ಒಂದು ಮುಖ್ಯ ಕಾರಣ ಸಕ್ಕರೆ. 

೧೩. ರಕ್ತದಲ್ಲಿ ಟ್ರೆöÊಗ್ಲಿಸರಿನ್ ಹೆಚ್ಚಲು ಕಾರಣ ಸಕ್ಕರೆ. 

೧೪. ಸಕ್ಕರೆಯ ಕೆಟ್ಟ ಪರಿಣಾಮಗಳಿಂದಾಗಿ ಪಾರ್ಶ್ವವಾಯು, ಪೆರಲಿಸಿಸ್ ಆಗಲು ಒಂದು ಮುಖ್ಯ ಕಾರಣ. 

೧೫. ಒಟ್ಟಾರೆ ಹೇಳುವುದಾದರೆ, ಸಕ್ಕರೆಯು ಕಾಯಿಲೆಗಳ ಉದ್ಭವ ಮತ್ತು ಉಲ್ಭಣಕ್ಕೆ ಮೂಲ. 

ಆತ್ಮೀಯರೇ, ನಿಮ್ಮಲ್ಲೊಂದು ಕಳಕಳಿಯ ವಿನಂತಿ. ಸಕ್ಕರೆ ಎಂಬ ನಿದಾನ ವಿಷ (sಟoತಿ ಠಿoisoಟಿ) ನಿಂದ ದೂರವಿದ್ದು, ನಮ್ಮ ಪೂರ್ವಜರಂತೆ ಬೆಲ್ಲದ ಉಪಯೋಗಕ್ಕೆ ಪರಿವರ್ತಿಸಿರಿ. ರೋಗ ಮುಕ್ತ ಜೀವನ ನಮ್ಮ, ನಿಮ್ಮೆಲ್ಲರದ್ದಾಗುವುದು. 

ಈ ಮಾಹಿತಿಯನ್ನು ನಿಮ್ಮ ಬಂದುಗಳಿಗೆ, ಮಿತ್ರರಿಗೆ, ಪರಿಚಯಸ್ಥರಿಗೆ, ಸಾದ್ಯವಾದಷ್ಟು ತಿಳಿಸಿ. ಯಾರಿಗಾದರೂ ಸಹಾಯ ಆಗುವುದಕ್ಕೆ ಸಹಕಾರ ಮಾಡಿದಂತಾಗಲಿ.

Friday, February 16, 2024

Srimad Bhagavad Gita

ಶ್ರೀಮದ್ಭಗವದ್ಗೀತೆ - ಹತ್ತನೇ  ಅಧ್ಯಾಯ ಶ್ಲೋಕ 6


ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ ।

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ॥೬॥

ಮೊದಲ ಮನ್ವಂತರದ ಏಳು ಮಂದಿ ಮಹರ್ಷಿಗಳು [ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ ], ಮೊದಲ ನಾಲ್ವರು ಮನುಗಳು [ಸ್ವಾಯಂಭುವ, ಸ್ವಾರೋಚಿಷ, ಉತ್ತಮ ಮತ್ತು ರೈವತ], ಚತುರ್ಮುಖನ ಮಾನಸ ಪುತ್ರರಾದ ಇವರು ನನ್ನಿಂದಲೆ ಆದವರು.[ನಾಲ್ಕು ವರ್ಣಗಳ ನಿಯಾಮಕರಾಗಿ ನಾಲ್ಕು ಪಂಗಡದಲ್ಲಿ ಸೇರಿದ, ವಿಶೇಷ ಅರಿವಿನ ಕಾರಣ ‘ಮನು’ಗಳೆನಿಸಿದ ಎಲ್ಲ ದೇವತೆಗಳು ನನ್ನಿಂದಲೆ ಆದವರು; ನನ್ನ ಇಚ್ಛೆಯಿಂದಲೆ ಹುಟ್ಟಿ ಬಂದವರು.] ವಿಶ್ವದ ಈ ಜನರೆಲ್ಲ ಅವರದೇ ಸಂತತಿ.

ವಿಶ್ವಸೃಷ್ಟಿಯ ರಹಸ್ಯವನ್ನು ಬ್ರಹ್ಮಜ್ಞಾನಿಗಳಾದ ಮಹರ್ಷಿಗಳು ಹೊರಹಾಕಿರುವುದನ್ನು ನಾವೆಲ್ಲರೂ ಮನುಕುಲದವರಾಗಿದ್ದು ತಿಳಿದು ಭೂಮಿಗೆ ಬಂದಿರುವ ಉದ್ದೇಶವನರಿತು ನಡೆಯುವಾಗ ಅದ್ವೈತ  ಎಲ್ಲೆಡೆಯೂ ಇದೆ ಆದರೆ ಆ ಮೂಲ ಸತ್ಯ ಧರ್ಮ ಇಲ್ಲದೆ  ಹೊರಗಿನ ವಿಜ್ಞಾನ ಜಗತ್ತು ಬೆಳೆಯುತ್ತಿದೆ. ಆಕಾಶದೆತ್ತರ ಹರಡಿರುವ ಸತ್ಯ ಭೂಮಿಯಲ್ಲಿಲ್ಲದೆ ಮನುಕುಲ ಸತ್ಯದ ಹುಡುಕಾಟಕ್ಕೆ ಮನೆಯಿಂದ ಹೊರಗೆ ಬಂದಿರೋದು  ದುರಂತವೆ ಆದರೂ ಮಹರ್ಷಿಗಳು  ಮನೆಯಿಂದ ದೂರವಿದ್ದರೂ ಅವರ ಮನಸ್ಸು ಪರಮಾತ್ಮನೆಡೆಗೆ  ಇದ್ದ ಕಾರಣ ಸತ್ಯದರ್ಶನ ಮಾಡಿಕೊಂಡರು.ಹೆಣ್ಣುಹೊನ್ನು ಮಣ್ಣಿನ ಋಣ ತೀರಿಸಲು ಮನಸ್ಸಿನ  ಶುದ್ದೀಕರಣ  ಅಗತ್ಯವಿದೆ ಎಂದರುಆಗಲೇ ಯೋಗಿ ಆಗುವುದು. ದೈಹಿಕವಾಗಿ ಸಬಲರಾದರೂ ಮಾನಸಿಕ ದುರ್ಭಲತೆಯಿಂದ  ಸ್ವಾವಲಂಬನೆ ಸ್ವತಂತ್ರ. ಜ್ಞಾನ, ಸ್ವಾಭಿಮಾನ ಆತ್ಮನಿರ್ಭರತೆಗೆ  ಕೊರತೆಯಾಗುತ್ತದೆನ್ನುವ ಕಾರಣಕ್ಕಾಗಿ ಮಹರ್ಷಿಗಳ ಆಹಾರ ವಿಹಾರವೂ ಕಟ್ಟುನಿಟ್ಟಾಗಿತ್ತು. ಇದನ್ನು ಭಗವದ್ಗೀತೆ ಬಹಳ ಚೆನ್ನಾಗಿ ತಿಳಿಸುತ್ತದೆ. ಏನನ್ನಾದರೂ ಸಾಧನೆ ಮಾಡಬೇಕಾದರೆ  ಜ್ಞಾನವೇ ಪ್ರಧಾನ. ಇದರಲ್ಲಿ ಸ್ವತಂತ್ರ ಜ್ಞಾನದಿಂದ  ಯೋಗಿಯಾದಾಗಲೇ ಪರಮಾತ್ಮನ ಸತ್ಯದರ್ಶನ. ಯಾರೋ ಯಾವುದೋ ಕಾಲದಲ್ಲಿ ಯಾವುದೋ ಪರಿಸ್ಥಿತಿಯಲ್ಲಿ  ಅರ್ಥ ಮಾಡಿಕೊಂಡಿರೋ ಸತ್ಯ ಇಂದಿಗೂನಮಗೆ ಅನ್ವಯಿಸುತ್ತದೆ ಎಂದಾಗ ಅದೇ ಸತ್ಯ.

ಕಾರಣ ಸತ್ಯ ಒಂದೇ. ಎಲ್ಲಾ ಕಾಲಕ್ಕೂ  ಅದು ಸ್ಥಿರ ವಾಗಿದೆ..ಪರಮಾತ್ಮನ  ಕಾಣೋದಕ್ಕೆ ಆ ಒಂದೇ ಅ ಸತ್ಯದ ಕಡೆಗೆ  ಮನಸ್ಸನ್ನು  ಹೊರಳಿಸಲು ಎಲ್ಲರಿಗೂ ಕಷ್ಟ.ಸತ್ಯ ಕೇಳಿ ತಿಳಿಯಬಹುದು.ಆದರೆ ಅದೇ ಸತ್ಯವನ್ನು ಪರಾಮರ್ಷಿಶಿ ಅರ್ಥ ಮಾಡಿಕೊಳ್ಳಲು  ಯೋಗಮಾರ್ಗದಲ್ಲಿ ನಡೆದವರನ್ನು ಮಹಾತ್ಮರೆಂದರು. ಈಗಲೂ ಇದ್ದಾರೆ ಆದರೆ ಸತ್ಯ ಕಾಣದ. ಕಾರಣ  ಅವರಿಗೆ ಯಾವ ರಾಜಕೀಯದ  ಅಗತ್ಯವಿಲ್ಲದೆ ಸ್ಥಿತಪ್ರಜ್ಞವಂತರಾಗಿ ತಮ್ಮ ನ್ನು ತಾವರಿತು  ಒಂಟಿಯಾಗಿದ್ದಾರೆ.  ದೇವನೊಬ್ಬನೆ ನಾಮ ಹಲವು ,ಹಲವು ನಾಮಗಳಲ್ಲಿರುವ. ಒಬ್ಬನೇ ದೇವರನ್ನು ಕಂಡವರು ವಿರಳ.

ಇದನ್ನು ಅಧ್ವೈತ ವೆಂದರು. ಭೂಮಿ ಒಂದೇ, ದೇಶ ಒಂದೇ,  ಎನ್ನುವ ಸಾಮಾನ್ಯ ಜ್ಞಾನ ಎಲ್ಲರಿಗೂ ತಿಳಿಸುವ ಅಗತ್ಯವಿಲ್ಲ ಆದರೂ  ಇದನ್ನು ಒಪ್ಪಿ ನಡೆಯೋ ಮಾನವರು ಎಲ್ಲರೂ ಆಗೋದಿಲ್ಲ.ಕಾರಣ ನಮ್ಮೊಳಗೇ ಅಡಗಿರುವ ದೇವಾಸುರ ಶಕ್ತಿಯ ನಡುವಿರುವ ಅಂತರದಲ್ಲಿ ಬೆಳೆದು ನಿಂತಿರುವ ಅರ್ಧ ಸತ್ಯದ ರಾಜಕೀಯದ ದಾಳದಲ್ಲಿ ಸಿಲುಕಿರುವ ಕಾಲಾಳುಗಳಿಗೆ ಗೊತ್ತಿಲ್ಲ. ನಮ್ಮಲ್ಲಿ ರಾಜನನ್ನೂ ಬದುಕಿಸುವ ಶಕ್ತಿ ಒಳಗಿದೆ ಎಂದು. ಹೀಗಾಗಿ ಅಧರ್ಮ ವನ್ನು  ನೋಡಿ ಯೂ ತನ್ನ ಮತದಾನವನ್ನು ದಾನವರಿಗೇ ದಾನ ಮಾಡಿ ನಂತರ  ಬೇಡೋ ಪರಿಸ್ಥಿತಿ ಬಂದಿದೆ. 

ಇದಕ್ಕೆ ಕಾರಣ ಅಜ್ಞಾನ.ಅಜ್ಞಾನಕ್ಕೆ ಕಾರಣ ಶಿಕ್ಷಣ. ಯಾರು ಶಿಕ್ಷಣ ನೀಡಿ ಜ್ಞಾನ ತುಂಬಬೇಕಿತ್ತೋ  ಅವರು  ನಮಗೇನೂ ಸಾಧ್ಯವಿಲ್ಲವೆಂದೋ ಅಥವಾ ರಾಜಕೀಯ ಬೇರೆ ಧರ್ಮ ಬೇರೆ ಎಂದೋ‌ನಿರ್ಲಕ್ಷಿಸಿ ಹೊರಗಿನ‌ವ್ಯವಹಾರಕ್ಕೆ ಧರ್ಮಕ್ಕೆ  ಸಹಕಾರ ಕೊಟ್ಟು  ಹಣಗಳಿಸಿದ್ದರೂ ಒಳಗೇ ಅಡಗಿದ್ದ ದೈವತ್ವಕ್ಕೆ  ಸರಿಯಾದ ಶಿಕ್ಷಣವಿಲ್ಲದ ದೇಹಕ್ಕೆ  ಆತ್ಮಜ್ಞಾನದ ಕೊರತೆ ಕಾಡುತ್ತಿದೆ.ಮನಸ್ಸೇ  ದಾರಿತಪ್ಪಿರುವಾಗ‌ ಅದನ್ನು ತಡೆಹಿಡಿದು ಯೋಗ ಮಾರ್ಗದಲ್ಲಿ ನಡೆಸುವುದೆ ಗುರು. 

ಗುರುವಿನ‌ಕೃಪಾಶಿರ್ವಾದವಿಲ್ಲದೆ ಏನೂ  ನಡೆಯದು.

ಅರಿವನ್ನು  ಹಣದಿಂದ ಖರೀದಿಸಿದರೆ  ತಾತ್ಕಾಲಿಕ ತೃಪ್ತಿ. ಹಾಗಾಗಿ ಮಾನವನೊಳಗೇ ಅಡಗಿರುವ ಶಾಶ್ವತವಾದ ಜ್ಞಾನವನ್ನು ಕಷ್ಟಪಟ್ಟು ಯೋಗ ಮಾರ್ಗದಿಂದ  ಗಳಿಸಿದವರು ಮಹರ್ಷಿಗಳು. ಇವರ ಸಂತಾನವೇ ನಾವೆಲ್ಲರೂ ಎಂದಾಗ  ಪರಮಾತ್ಮನ  ಅರಿವಿನೆಡೆಗೆ  ಹೋಗೋದಕ್ಕೆ ಒಳಗಿನ ಜ್ಞಾನವೇ ಬಂಡವಾಳ. ಬಂಡವಾಳವನ್ನು ಸುಶಿಕ್ಷಣ,ಸದ್ಗುರು, ಸತ್ಯ ಧರ್ಮ ದಿಂದ  ಮಾತ್ರ ಸಾಧ್ಯವೆಂದು ಸನಾತನ ಧರ್ಮ ತಿಳಿಸಿದೆ. ಇದರಲ್ಲಿ ರಾಜಕೀಯವಿರದೆ ರಾಜಯೋಗವಿದ್ದರೆ ಯೋಗ. ಇಲ್ಲವಾದರೆ ವೈಭೋಗದ ಜೀವನ.ವೈಭೋಗದಲ್ಲಿ ಸತ್ವ ಸತ್ಯ ತತ್ವಕ್ಕೆ ಬೆಲೆಯಿರದು.ಅದಕ್ಕಾಗಿ ಭ್ರಷ್ಟಾಚಾರದ ರೋಗ ಬೆಳೆದಿದೆ.

Sunday, February 11, 2024

Financial issues

ಲಕ್ಷಾಂತರ ಸಂಪಾದಿಸಿದರೂ ತೃಪ್ತಿ ಸಿಗದೆ ಸಮಸ್ಯೆಗಳು ಬೆಳೆದಿರುವುದು ಯಾಕೆ?



ಕೋಟಿ ವಿದ್ಯೆಗಿಂತ ಮೇಟಿವಿದ್ಯೆಯೇ ಮೇಲು ಎಂದಿದ್ದರು.

ಇಂದು ವಿದ್ಯೆ ಹಣಸಂಪಾದನೆಯ ಗುರಿ ಕಡೆಗೆ ತಂತ್ರದ ಕಡೆಗೆ ನಡೆದಿದೆ. ಇದಕ್ಕೆ ತಕ್ಕಂತೆ  ತಂತ್ರಜ್ಞಾನ ಬೆಳೆದಿದೆ. ತಂತ್ರ ಯಾವತ್ತೂ ಸತ್ಯವಿರದು.ಧರ್ಮ ರಕ್ಷಣೆಗೆ  ತಾತ್ಕಾಲಿಕ ಪರಿಹಾರ ತಂತ್ರವಿದ್ಯೆ ನೀಡಿದರೂ ಸ್ವತಂತ್ರ ಜ್ಞಾನವನ್ನು ಪಡೆಯಲಾಗದು. ಹೀಗಾಗಿ ಕಷ್ಟಪಟ್ಟು ನೂರು ರೂ ಸತ್ಕರ್ಮ ಸ್ವಧರ್ಮ ಸದಾಚಾರ ಸತ್ಯದಿಂದ ಗಳಿಸಿದರೆ ಸಿಗುವ ತೃಪ್ತಿ  ಪರರ ವಶದಲ್ಲಿ ‌ ಪರತಂತ್ರದಲ್ಲಿ ಪರದೇಶದಲ್ಲಿ ಲಕ್ಷ ಕೋಟಿ ಹಣ ಗಳಿಸಿದರೂ ಅದು ಪರಮಾತ್ಮನ ಕಡೆಗೆ ಮನಸ್ಸನ್ನು ಎಳೆಯಲಾಗದು.ಹೀಗಾಗಿ ಅತಿಯಾದ  ಹಣದ ಶ್ರೀಮಂತರ  ಊಟ ನಿದ್ರೆಗೂ ಬಡವನ ಊಟ ನಿದ್ರೆಗೂ ಅಂತರವಿದೆ.

ಬಡವನ ಹೊಟ್ಟೆಯ ಹಸಿವು  ಅನ್ನದಲ್ಲಿದ್ದರೆ ಶ್ರೀಮಂತ ನ ಹಸಿವು ಹಣದಲ್ಲಿರುತ್ತದೆ.ಎಷ್ಟು ದುಡಿದರೂ ತೃಪ್ತಿ ಸಿಗದೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವೂ ಇರದೆ ದುಂದುವೆಚ್ಚ ಮಾಡುವುದಲ್ಲದೆ ಅಡ್ಡದಾರಿಯಲ್ಲಿ ಭ್ರಷ್ಟಾಚಾರದಲ್ಲಿಯೇ  ಜೀವನ ಮುಗಿದಿರುತ್ತದೆ.ಇಂತಹವರ ಹಿಂದೆ ಬಡವ ನೆಡೆದರೆ‌ ಮುಗಿಯಿತು ಕಥೆ. ಭ್ರಷ್ಟಾಚಾರ ಹಂಚಿಕೊಂಡು ಇರುವ ಸುಖನಿದ್ರೆಯನ್ನೂ ಕಳೆದುಕೊಂಡು ತನ್ನೊಳಗೆ ಇದ್ದ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಸೋತು ಋಣಭಾರದಿಂದ ನರಳಬೇಕು.

ಇದೇ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು  ಜ್ಞಾನದಿಂದ ಹಣಸಂಪಾದಿಸಿ ತಮ್ಮ ಧರ್ಮ ಕರ್ಮ ಗಳಲ್ಲಿಯೇ ಪರಮಾತ್ಮನ ಸೇವೆ ಮಾಡುತ್ತಾ ಸಂಸಾರದ ಜೊತೆಗೆ ಸಮಾಜದ ಋಣವನ್ನು ತೀರಿಸುವವರಾಗಿ ಮುಕ್ತಿ ಮಾರ್ಗ ಹಿಡಿದಿದ್ದರು.ಈಗ ಪರದೇಶದ ವ್ಯಾಮೋಹದಲ್ಲಿ ಪರಮಾತ್ಮನ ಹೆಸರಿನಲ್ಲಿ ದೇಶಭ್ರಷ್ಟರಾದವರಿಗೆ ಸ್ವಾಗತಿಸುವ ವರಿಗೇ  ಹೆಚ್ಚಿನ ಬೆಲೆ ಎಂದರೆ ಅಜ್ಞಾನ ಮಿತಿಮೀರಿದೆ. ಇದಕ್ಕೆ ಕಾರಣವೇ ಮೂಲ ಶಿಕ್ಷಣ ನೀತಿ. 

ಮಕ್ಕಳಿಗೆ ಆಸ್ತಿ ಮಾಡಲು ಹಣಮಾಡುವ ಮೊದಲು ಮಕ್ಕಳನ್ನೇ ದೇಶದ  ಆಸ್ತಿ ಯಾಗಿಸುವ‌ಸಾತ್ವಿಕ ಶಿಕ್ಷಣ ಮನೆಮನೆಯೊಳಗೆ ‌ನೀಡಿದಾಗಲೇ ಹಿಂದಿನ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.ಹಾಗಂತ ಹಣ ಬೇಡವೆಂದಿಲ್ಲ ಅದರ ಸದ್ಬಳಕೆ ಸದ್ವಿನಿಯೋಗದ ಅಗತ್ಯವಿದೆ.ಹೊರಗಿನ ಕಾರ್ಯಕ್ರಮಕ್ಕೆ ಪ್ರತಿಮೆಗಳಿಗೆ ಸಮಾರಂಭ ಸಮಾವೇಷ,ವೇಷಭೂಷಣ,ನಾಟಕಗಳಿಗೆ ಬಳಸುವ  ಹಣವೂ ದೇಶದ ಸಾಲವೇ ಆಗಿದ್ದು ಜನಸಾಮಾನ್ಯರಿಗೆ  ಮೋಸ ಮಾಡಿಗಳಿಸಿದ್ದರೆ ಅದರಿಂದ ಆತ್ಮತೃಪ್ತಿ ಸಿಗೋದಿಲ್ಲ.ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮ ನಿಗೇ ಮೋಸ ಮಾಡಿದರೆ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗದು.ಇದನ್ನು ಮಹಾತ್ಮರುಗಳು ಹಿಂದೆಯೂ ಹೇಳಿದ್ದರು ಈಗ ಹೇಳುವವರು ಮಹಾತ್ಮರಂತೆ ನಡೆಯುವವರಿಲ್ಲದೆ  ಜನರು ದಾರಿತಪ್ಪಿದ್ದಾರೆ. ಹಿಂದೆ ಪರದೇಶಿ ಪದವನ್ನು ಬೈಗಳಕ್ಕೆ ಬಳಸಿದ್ದರು.ಈಗಿದು‌ ಪ್ರತಿಷ್ಠೆಯ ಪದವಾಗುತ್ತಿದೆ.ಇಷ್ಟೇ ವ್ಯತ್ಯಾಸ.

ಹಣದ ಶ್ರೀಮಂತಿಕೆಗೂ ಜ್ಞಾನದ ಶ್ರೀಮಂತಿಕೆಗೂ ವ್ಯತ್ಯಾಸ ವಿಷ್ಟೆ.ಹಣ ಕಣ್ಣಿಗೆ ಕಾಣುತ್ತದೆ ಅದರ ಹಿಂದೆ ಋಣವೂ ಇರುತ್ತದೆ ಕಾಣೋದಿಲ್ಲ.ಹಾಗೆ ಜ್ಞಾನ ಕಣ್ಣಿಗೆ ಕಾಣೋದಿಲ್ಲ ಹಿಂದೆ ಋಣ ತೀರುತ್ತಿರುತ್ತದೆ.

ಇದರಲ್ಲಿ  ಎರಡೂ ಮಾನವನ ಜೀವನಕ್ಕೆ ಮುಖ್ಯ. ಮೊದಲು ಜ್ಞಾನ ನಂತರ ಜ್ಞಾನದಿಂದ ಹಣ ಬಳಸಿದರೆ ಋಣ ಸಂದಾಯ.

 ಹಿಂದೆ ರಾಜಾಧಿರಾಜರ ಕಾಲದಲ್ಲಿದ್ದ  ಐಶ್ವರ್ಯ ಇಂದು ಕೆಲವೇ ಕೆಲವರ ಪಾಲಾಗಿದೆ.ಅಂದಿನ ರಾಜಪ್ರಭುತ್ವದಲ್ಲಿದ್ದ ಧರ್ಮ ಶಿಕ್ಷಣವೂ ಕೆಲವೇ ಕೆಲವರ ವಶದಲ್ಲಿದೆ. ಆದರೆ ಇದು ಸಮಾಜಕ್ಕೆ  ಯಾವ ಕೊಡುಗೆ ಕೊಟ್ಟಿದೆ? ಪ್ರಜಾಪ್ರಭುತ್ವ ದಲ್ಲಿ  ಎಲ್ಲರ ಸಹಕಾರವಿಲ್ಲದೆ ಏನೂ ನಡೆಯದು. ಹಾಗಂತ ಕಾಣದ ದೇವರ ಹೆಸರಿನಲ್ಲಿ ‌ ಕಾಣದ ಕೈಗಳು ಕೆಲಸ ಮಾಡಿದರೆ ಯಾರಿಗೂ ಕಾಣಿಸೋದಿಲ್ಲವೆಂದು ಹಣಗಳಿಸಿ ಶ್ರೀಮಂತ ರಾದರೆ  ಮೇಲಿರುವ  ಪರಮಾತ್ಮನೇ ಕಾಣೋದಿಲ್ಲ. ಇದೇ ಹಿಂದಿರುಗಿ ಬರೋವಾಗ  ಬಡತನದ ಅನುಭವಾಗೋದು.ಇಲ್ಲಿ  ತೃಪ್ತಿಯಿಲ್ಲದ ಜೀವನವೇ ನಿಜವಾದ ಬಡತನವಾಗಿದೆ. ಹಾಗಾದರೆ ತೃಪ್ತಿ ಹಣದಿಂದ ಖರೀದಿಸಬಹುದೆ? ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವೆ?

ವಿದ್ಯೆಗೂ ಜ್ಞಾನಕ್ಕೂ ವ್ಯತ್ಯಾಸವಿಲ್ಲವೆ? ವಿದ್ಯೆ ಹೊರಗಿನಿಂದ ಕಲಿತರೆ ಜ್ಞಾನ ಒಳಗಿನಿಂದ ಬೆಳೆಯುತ್ತದೆ. ಆದರೆ ಒಳಗಿರುವ ಜ್ಞಾನವೇ‌ಬೇರೆ ವಿದ್ಯೆಯೇ ಬೇರೆಯಾದಾಗಲೇ ಬಡತನ ಹೆಚ್ಚಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ  ಜ್ಞಾನದ ಶಿಕ್ಷಣದಿಂದ  ಮಹಾತ್ಮರಾಗಿಸಬಹುದೆ ಹೊರತು ಸಂಸ್ಕಾರವಿಲ್ಲದ ವಿದ್ಯೆಯಿಂದ ಹಣಗಳಿಸಿದರೂ ಆತ್ಮ ಕ್ಕೆ ತೃಪ್ತಿ ಸಿಗದು. ಇದೇ ಕಾರಣಕ್ಕಾಗಿ ಭಾರತೀಯರ ಸಮಸ್ಯೆ ಹೊರಗಿನಿಂದ ಒಳಗೆ ಹೆಚ್ಚಾಗಿ ಬೆಳೆಯುತ್ತಿದೆ. ಅದಕ್ಕೆ ಪರಿಹಾರವಾಗಿ ಹೊರಗಿನ ಸಾಲ ಬೆಳೆಯುತ್ತಿದೆ. ಸಾಲ ತೀರಿಸಲು ಮನೆ ಬಿಟ್ಟು ದೇಶ ಬಿಟ್ಟು ಮಕ್ಕಳು  ಯುವಕರು ಮಹಿಳೆಯರು ಹೊರಗೆ ಬರುತ್ತಿರುವುದರಿಂದ  ಯಾರಿಗೆ ಲಾಭ? ಯಾರಿಗೆ ನಷ್ಟ?

ಶ್ರೀಮಂತ ರು ಯಾರು? ಬಡತನ ಯಾವುದು? ಸರಳವಾಗಿದೆ ಉತ್ತರ‌ಇದನ್ನೇ ಮಹಾತ್ಮರುಗಳು ತಿಳಿದು ತಿಳಿಸಿರೋದು.

ಅಲ್ಲಿ ಯಾವ ಧರ್ಮ, ಜಾತಿ,ಪಕ್ಷ,ದೇವರಲ್ಲಿ ಬೇದವಿರಲಿಲ್ಲ.

ಇದನ್ನು ಅಪಾರ್ಥ ಮಾಡಿಕೊಂಡು ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ನಿಜವಾದ ಜ್ಞಾನವನ್ನು ಕೊಡದೆ  ದ್ವೇಷ ಬೆಳೆಸಿ  ಹಣದಿಂದ ಶ್ರೀಮಂತ ರಾದರು. ಈಗಲೂ ಇದು ರಾಜಾರೋಷವಾಗಿ ನಡೆದಿದ್ದರೂ ಜನರ ಕಣ್ಣಿಗೆ ಕಾಣೋದು  ಕೇವಲ ಹಣ ಮಾತ್ರ. ಯಾರದ್ದೋ ದುಡ್ಡು ಯಲ್ಲಮ್ಮ ನ ಜಾತ್ರೆ. ದೈವತ್ವ ಪಡೆಯಲು ಬೇಕಾದ ಶಿಕ್ಷಣ ಕೊಡುವುದರಿಂದ  ಮಾನವ ಮಹಾತ್ಮನಾಗಲು ಸಾಧ್ಯ.

ಹೊರಗಿನ‌  ಶಿಕ್ಷಣ ಹಣಕ್ಕಾಗಿ ಒಳಗಿನ ಶಿಕ್ಷಣ ಜ್ಞಾನಕ್ಕಾಗಿ‌

ಜ್ಞಾನದಿಂದ‌ ಗಳಿಸಿದ ಹಣದಿಂದ ಋಣ ತೀರುತ್ತದೆ ಎಂದಾಗ  ನಮ್ಮಲ್ಲಿ  ನಮ್ಮ ಜ್ಞಾನವಿದೆಯೆ?

ಯಾರದ್ದೋ ಜ್ಞಾನದಲ್ಲಿ ನಮ್ಮ ಋಣ ತೀರಿಸುತ್ತಿದ್ದೇವೆಯೆ?

ಹಿಂದೂ ಧರ್ಮ ನಿಂತಿರೋದೇ ಹಿಂದಿನ ಸಾತ್ವಿಕ ತಾತ್ವಿಕ ನೈತಿಕ ಶಿಕ್ಷಣದಲ್ಲಿ ಎಂದಾಗ ಹಿಂದೂ ಮಕ್ಕಳಿಗೆ  ನಮ್ಮ ದೇಶದಲ್ಲಿ ಎಂತಹ ಶಿಕ್ಷಣ  ಸಿಗುತ್ತಿದೆ? ಪ್ರತಿಯೊಬ್ಬರಲ್ಲಿಯೂ

ವಿಶೇಷ ಜ್ಞಾನವಿದೆ. ಗುರುತಿಸುವ ಗುರುವಿಲ್ಲದೆ ಗುರಿತಪ್ಪಿ ನಡೆದಿರೋದು ದುರಂತ. 

"ಕೃಷ್ಣಂವಂದೆ ಜಗದ್ಗುರುಂ" ಎಂದರು ಭಗವದ್ಗೀತೆಯ  ಯೋಗವನ್ನು  ಅಲ್ಲಗೆಳೆದರು. ಅಂದರೆ ಪರಮಸತ್ಯ ಧರ್ಮ ದಿಂದ ಮಾತ್ರ ಯೋಗಿಯಾಗಲು ಸಾಧ್ಯ. ಜ್ಞಾನಯೋಗಿ,ರಾಜಯೋಗಿ,ಭಕ್ತಿಯೋಗಿ,ಕರ್ಮಯೋಗಿ ಎಲ್ಲಾ  ಪರಮಾತ್ಮನೇ ‌ ಆದಾಗ ಬೇರೆ ಹೇಗಾದರು,?

ಶಿವನೇ ಶ್ರೇಷ್ಠ ವೆಂದವರು ಜೊತೆಗಿದ್ದ ಶಕ್ತಿಯನ್ನು ಮರೆತರು.

ಒಟ್ಟಿನಲ್ಲಿ ಭೂಮಿ  ಮೇಲಿದ್ದು ತಿಳಿಯಬೇಕಾದ ಸದ್ವಿಚಾರ ಬಿಟ್ಟು  ದುಷ್ಟರ ಭ್ರಷ್ಟರ ವಿಚಾರವೇ ಪ್ರಚಾರವಾದಾಗ ಬೆಳೆಯೋದು ಯಾರು?

ಮಾನವ ಏನನ್ನು ಕೇಳುವನೋ ಹೇಳುವನೋ ಮಾಡುವನೋ ನೋಡುವನೋ  ಅದೇ ಆಗಿರುವನು. ಇಲ್ಲಿ ಒಳ್ಳೆಯದಿದ್ದರೆ ಯೋಗವಾಗುತ್ತದೆ ಯೋಗ್ಯ ಜೀವನವಾಗಿರುತ್ತದೆ. ತುಂಬಾ ಕಷ್ಟವಿದೆ ಸತ್ಯ ದ ಹುಡುಕಾಟ ಕಾರಣ ಇದು ಒಳಗೇ ಅಡಗಿದೆ..ಹೊರಗಿಲ್ಲ.

"ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ..."

ಎಲ್ಲಾ ನಿನ್ನೊಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗೋದು ಸತ್ಯವಲ್ಲ ಅಸತ್ಯ. ಆದರೂ ಜೀವನ ನಡೆಸಲು  ಪೂರ್ಣ ಸತ್ಯದಿಂದ ಕಷ್ಟ.ಅದರಲ್ಲೂ ಸಂಸಾರ ನಡೆಸಲು ಸಾಧ್ಯವೇ ಇಲ್ಲ.ಹಾಗಂತ  ಸಂಪೂರ್ಣ ಅಸತ್ಯ  ಜೀವನವಾಗಿರದು. 

ಮಾತಿಗಿಂತ ಕೃತಿಯೇ ಮೇಲೆಂದರು.ಕೃತಿಯ ಜೊತೆಗೆ ಪ್ರಕೃತಿ ಇದ್ದರೆ ಇತಿಮಿತಿಯಿರುತ್ತದೆ.ವಿಕೃತಿಯಿದ್ದರೆ  ಬಡತನ ಅತಿಯಾಗುತ್ತದೆ. ಪ್ರಕೃತಿ  ಉಚಿತವಾಗಿಯೇ ಎಲ್ಲವನ್ನೂ ಕೊಟ್ಟರೂ  ಅದನ್ನು ವಿಕೃತಿ ಮಾನವ ತನ್ನ ವಶಕ್ಕೆ ಬಳಸಿ ಸಂಸ್ಕೃತಿ ಮರೆತು ಹಣ ಮಾಡಿದರೆ  ಅದೇ ಮುಂದೆ ಮಾರಕವಾಗುತ್ತದೆ. ಜನನ ಮರಣದ ನಡುವಿನ ಜೀವನದ ರಹಸ್ಯವರಿತರೆ ತೃಪ್ತಿ ಸಿಗುವುದು.

ದೇವರು ಕೊಟ್ಟರೂ ಪೂಜಾರಿ ಬಿಡೋದಿಲ್ಲವೆಂದರೆ  ಏನರ್ಥ?

ಭ್ರಷ್ಟಾಚಾರ ವೆಂದು ತಿಳಿದವರೂ ಭ್ರಷ್ಟರ ಹಣಕ್ಕಾಗಿ ಸತ್ಯ ಧರ್ಮ ಮರೆತರೆ  ಬೇಲಿಯೇ ಎದ್ದು ಹೊಲಮೇಯ್ದಂತೆ.

ವಿನಾಶಕಾಲೇ ವಿಪರೀತ ಬುದ್ದಿ. ಕಲಿಯುವ ಕಾಲ ಕಲಿಗಾಲ.

ಉತ್ತಮವಾದದ್ದನ್ನು ಕಷ್ಟಪಟ್ಟು ಕಲಿತಾಗಲೇ ಕಾಲ ಉತ್ತಮವಾಗಿರೋದು. ಅನಾವಶ್ಯಕ ವಿಷಯದೊಳಗೇ ವಿಷವಿದ್ದರೆ  ಅಮೃತಕ್ಕೆ ಸ್ಥಾನವಿರದು.ಒಟ್ಟಿನಲ್ಲಿ ಎಲ್ಲರೂ ಅಮೃತ ಪುತ್ರರೆ ಆಗಿದ್ದರೂ  ಅಮೃತದಂತಹ ವಿಚಾರಗಳ ಶಿಕ್ಷಣ ಕೊಡದೆ ಆಳಿದವರೆ ಶ್ರೀಮಂತರಾದರು. ವಿಷ ಯಾವತ್ತೂ  ವಿಷವೇ. ಅತಿಯಾದ ಅಮೃತವೂ ವಿಷವಾಗಬಹುದು.ಅದಕ್ಕಾಗಿ  ಎರಡರಲ್ಲಿ ಅಡಗಿರುವ ತತ್ವ ಒಂದೇ ಎಲ್ಲಾ ಭೂಮಿ ಪುತ್ರರು. ಸುಜ್ಞಾನದಿಂದ ಮಾತ್ರ ಭೂ ಋಣ ತೀರಿಸಬಹುದು. ಅಜ್ಞಾನದ  ಹಣದಿಂದ ಸಾಲವೇ ಬೆಳೆಯೋದು. 

- ಅರುಣ ಉದಯಭಾಸ್ಕರ್


Saturday, February 10, 2024

Can we surrender to god?

ಭಗವಂತನಿಗೆ ಶರಣಾಗಲು ಸಾಧ್ಯವಿದೆಯೆ?



ಪುರಾಣಗಳಲ್ಲಿ ಕೆಲವು ಸೂಕ್ಷ್ಮ ಸತ್ಯ ಗಮನಿಸಿದರೆ ಎಲ್ಲಿಯವರೆಗೆ ಭಕ್ತರು ನೀನೇ ಸರಿ ಎಂದು ಭಗವಂತನಿಗೆ ಶರಣಾಗುವುದಿಲ್ಲವೋ ಅಲ್ಲಿಯವರೆಗೆ  ಭಗವಂತ ಹತ್ತಿರ ಬರದೆ ದೂರವಿರುವನು. ನಮ್ಮ ಹೋರಾಟ ಹೊರಗಿನ ವ್ಯಕ್ತಿಯೊಂದಿಗಿದ್ದಷ್ಟೂ ಒಳಗಿರುವ ಶಕ್ತಿಯ ಪರಿಚಯವಾಗದು. ಹಾಗಾಗಿ ನಾವು ಹೊರಗಿನ ವ್ಯಕ್ತಿ ಯನ್ನು  ಆಶ್ರಯಿಸಿಕೊಂಡೇ ಇರುತ್ತೇವೆ. ಎಲ್ಲರ ಮೂಲಕ ಕೆಲಸ ಮಾಡಿಸೋದು ಬುದ್ದಿ ಕಲಿಸೋದು ಜ್ಞಾನ ಕೊಡೋದು ಎಲ್ಲಾ ಪರಮಾತ್ಮನೇ ಆದರೂ  ಎಲ್ಲರ ಮನಸ್ಸು ದೇವರಂತಿರದು. ಅಂದರೆ ನಿಸ್ವಾರ್ಥ ನಿರಹಂಕಾರ. ಪ್ರತಿಫಲಾಪೇಕ್ಷೆ ಇಲ್ಲದೆ ಯಾವ ವ್ಯಕ್ತಿಯೂ ಸಹಕಾರ ಸಹಾಯ ಮಾಡೋದಿಲ್ಲವಾದ್ದರಿಂದ  ಒಬ್ಬರು ಇನ್ನೊಬ್ಬರ ಗುಲಾಮರೆ. ಗುಲಾಮಗಿರಿ ಹೆಚ್ಚಾದಾಗಲೇ ಮೇಲಿರುವ ಆ ಭಗವಂತನಿಗೆ ಶರಣಾಗೋದು. 

ದ್ರೌಪದಿಯ ವಸ್ತ್ರ ಅಪಹರಣ, ಕುಚೇಲನಿಗೆ ಕೃಷ್ಣನ ಕೃಪೆ, ಕುಬೇರನ  ಪರೀಕ್ಷೆ, ದಾಸ ಸಂತ ಶರಣರ ಅನುಭವ, ಕನಕನ ಭಕ್ತಿ, ಗಜೇಂದ್ರಮೋಕ್ಷ‌ ಇದರಲ್ಲಿ  ಹೊರಗಿನ ವ್ಯಕ್ತಿಯನ್ನು ನಂಬದೆ ಒಳಗಿನ ಶಕ್ತಿಯನ್ನೇ  ಆಶ್ರಯಿಸಿದ್ದರು. ಇದರರ್ಥ ನಮ್ಮ ಆತ್ಮಜಾಗೃತವಾಗಿದ್ದಷ್ಟೂ ನಾವು ಹೊರಗಿರುವ ವ್ಯಕ್ತಿಗಳ ಹಿಂದೆ  ಹೆಚ್ಚು ಬೀಳೋದಿಲ್ಲ.

ಹಾಗೆಯೇ ನಮ್ಮ ದೇಶದ ಸಮಸ್ಯೆಗೆ  ದೇಶದವರಲ್ಲಿಯೇ ಪರಿಹಾರ ಕಂಡುಕೊಂಡರೆ  ಸಮಸ್ಯೆಯಿಂದ ಮುಕ್ತಿ. ವಿದೇಶದೊಂದಿಗೆ‌  ಒಪ್ಪಂದ ಮಾಡಿಕೊಂಡರೆ  ಕಷ್ಟವಿದೆ.  ಒಳಗಿನ ಸಮಸ್ಯೆಗೆ ಪರಿಹಾರ ಒಳಗಿನ‌ಜ್ಞಾನದಿಂದಲೇ ಪಡೆದಾಗ ಉತ್ತಮ ಶಾಂತಿ ತೃಪ್ತಿ.

ಹೊರಗೆ ಕಂಡುಕೊಳ್ಳಲು  ಹೊರಗೆ ನಡೆದಷ್ಟೂ ಮುಗಿಯದ ಕಥೆ. ಪುರಾಣ ಕಾಲದ ಸತ್ಯಕ್ಕೆ ಪುರಾಣವೇ ಸಾಕ್ಷಿ. ಹಿಂದಿನ  ಧರ್ಮ ವನರಿತರೆ ಹಿಂದೂ ಧರ್ಮ ಸುರಕ್ಷಿತ.

ಇದನ್ನರಿಯದೆ ಮುಂದೆ ನಡೆದಷ್ಟೂ ಹಿಂದೆ ಬರೋದು ಕಷ್ಟ.

ರಾಜಕೀಯ ಪಕ್ಷಗಳಲ್ಲಿ ನಡೆದಿರುವ ಪಕ್ಷಾಂತರದಿಂದ   ಜಾತ್ಯಾಂತರವಾಗಲಿ,ಧರ್ಮಾಂತರವಾಗಲಿ  ಮತಾಂತರವಾಗಲಿ ದೇಶಾಂತರವಾಗಲಿ  ತಡೆಯಲಾಗದು ಇದರಿಂದ ಇನ್ನಷ್ಟು ಅಂತರಗಳೇ ಹೆಚ್ಚಾಗುತ್ತಾ  ಒಗ್ಗಟ್ಟು ಮರೆಯಾಗಿ ಬಿಕ್ಕಿಟ್ಟಿನ ಸಮಸ್ಯೆಗಳಿಗೆ ಅವಕಾಶ ಕೊಡುತ್ತದೆನ್ನುವ  ಕಾರಣಕ್ಕಾಗಿ ಮಾಡು ಇಲ್ಲ ಮಡಿ ಎಂದು ತಮ್ಮ ಧರ್ಮ ದೇಶವನ್ನು  ಬಿಡದೆ  ಯಾವ ರಾಜಕೀಯಕ್ಕೆ ಒಳಗಾಗದೆ ಸ್ವತಂತ್ರವಾಗಿ ನಮ್ಮ ಮಹಾತ್ಮರುಗಳು  ದೇವರ ಭಕ್ತರಾಗಿದ್ದೂ ದೇಶಭಕ್ತಿಯೆಡೆಗೆ ನಡೆದರು.ಈಗ ಅಸಂಖ್ಯಾತ ದೇವರಿದ್ದರೂ ಒಂದು ದೇಶವನ್ನು  ಒಗ್ಗಟ್ಟಿನಿಂದ  ಸರಿಪಡಿಸಲಾಗದಿರೋದೆ ದುರಂತ. ಇದಕ್ಕೆ ಕಾರಣವೇ ನಮ್ಮೊಳಗಿರುವ ಸ್ವಾರ್ಥ ಅಹಂಕಾರದ ರಾಜಕೀಯ ಪ್ರಜ್ಞೆ. ಇದರಲ್ಲಿ ಭಗವಂತನಿಗೆ ಶರಣಾಗಲು ಸಾಧ್ಯವಿದೆಯೆ? ನಾನಿರುವಾಗ ಭಗವಂತ ಕಾಣೋದಿಲ್ಲ. ನಾನು ಹೋದಾಗ  ಭಗವಂತನೊಬ್ಬನೆ.ಹಾಗೆ ದೇಶದ ಒಂದು ಸಣ್ಣ ಬಿಂದುವಾಗಿರುವ ನನ್ನಲ್ಲಿ ದೇಶಭಕ್ತಿ ಇದ್ದರೆ ದೇಶ ಕಾಣುತ್ತದೆ. ಭಕ್ತಿಯೇ ಇಲ್ಲದೆ ದೇಶವನ್ನು  ನಡೆಸಲು ಹೋದರೆ ನಾನೇ  ವಿನಾಶಕ್ಕೆ ಕಾರಣವಾಗಬಹುದು ಇದನ್ನು ಪ್ರತಿಯೊಬ್ಬರೂ  ಅರ್ಥ ಮಾಡಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ತಿಳಿದು ಧರ್ಮ ದೆಡೆಗೆ ನಡೆದರೆ ಉತ್ತಮ ಬದಲಾವಣೆ ಸಾಧ್ಯವಿದೆ. ಬದಲಾವಣೆ ಜಗದ ನಿಯಮ.ಆ ಜಗತ್ತನ್ನು ಬದಲಾಯಿಸುವ ಮೊದಲು ಒಳಗಿರುವ ಜಗತ್ತನ್ನು ಅರ್ಥ ಮಾಡಿಕೊಂಡರೆ  ಉತ್ತಮ ಫಲ.

- ಅರುಣ ಉದಯಭಾಸ್ಕರ್



Monday, January 29, 2024

Poverty

 ಬಡತನ ತಮಗೆ ಅಂಟಿದ ಶಾಪ ಅಂತಾನೇ ಎಲ್ಲರೂ ಭಾವಿಸುತ್ತಾರೆ


ಬಡತನದಿಂದಾಗಿಯೇ ತಾವು ಸಾಧನೆ ಮಾಡಲಾಗಲಿಲ್ಲ ಅಂತ ಕೊರಗುವವರೂ ಇದ್ದಾರೆ. ಬಡತನವೇ ತಮ್ಮೆಲ್ಲ ಸುಖವನ್ನು ಕಿತ್ತುಕೊಂಡಿತು ಅಂತ ದುಃಖಿಸುವವರೂ ಇದ್ದಾರೆ. ಇವರಿಗೆ ಬಡತನವೇ ಈ ಜಗತ್ತನ್ನು ಪೊರೆ ದಿದೆ ಎಂಬ ಸತ್ಯ ತಿಳಿದಿಲ್ಲ. ಬಡತನದಿಂದ ಉತ್ತಮ ಬದುಕು ಕಟ್ಟಿಕೊಂಡ ವರು ಬಹಳಷ್ಟು ಜನರಿದ್ದಾರೆ. ಅದೇ ಶ್ರೀಮಂತಿಕೆಯಿಂದ ನೆಮ್ಮದಿಯ ಬದುಕು ಕಟ್ಟಿಕೊಂಡವರು ವಿರಳ. ಏಕೆಂದರೆ, ಬಡತನ ಕಲಿಸುವಷ್ಟು ಜೀವನಪಾಠವನ್ನು ಶ್ರೀಮಂತಿಕೆ ಕಲಿಸಲಾರದು. ಹೊಟ್ಟೆಯಲ್ಲಿನ ಹಸಿವು ಬುದ್ಧಿಗೆ, ಭುಜಕ್ಕೆ ಕಸುವು ತುಂಬುತ್ತದೆ. ಅದೇ ಹೊಟ್ಟೆ ತುಂಬಿದವರಿಗೆ ಅದ್ಯಾವ ಕಸುಬು ಗೊತ್ತಿರುವುದಿಲ್ಲ. ಇದರಿಂದಾಗಿಯೇ, ಸಾಧಕನ ಮಗ ಸಾಧಕನಾಗಲಾರ. ಸಾಮಾನ್ಯನ ಮಗ ಅಸಾಮಾನ್ಯ ಸಾಧನೆ ಮಾಡುತ್ತಾನೆ. ಹಸಿವಿನ ಶಕ್ತಿ ಅಷ್ಟರ ಮಟ್ಟಿಗೆ ವ್ಯಕ್ತಿಯ ಬದುಕನ್ನು ಉದ್ದೀಪಿಸುತ್ತದೆ. ಹೀಗಾಗಿ ಬಡತನ ಶಾಪವಲ್ಲ, ಅದೊಂದು ವರ.

ಬಡತನ ಶಾಪ ಅಂದುಕೊಂಡರೆ ಅದು ಶಾಪವಾಗಿಯೇ ಕಾಡುತ್ತೆ. ಬಡತನ ಭಗವಂತ ನಮಗೆ ಕೊಟ್ಟಿರುವ ಸವಾಲು ಅಂತ ಸ್ವೀಕರಿಸಿದರೆ ವರವಾಗುತ್ತೆ. ಬಡವನಿರಲಿ, ಶ್ರೀಮಂತನಿರಲಿ ಬದುಕಲು ಬೇಕಿರುವುದು ಛಲ. ನೋವನ್ನು ನುಂಗಿ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಛಲ ಹುಟ್ಟುವುದೇ ಬಡವರಲ್ಲಿ. ಎಲ್ಲಾ ಇದ್ದವನಿಗೆ ಏನೂ ಬೇಕೆನಿಸುವುದಿಲ್ಲ. ಬೇಕು ಎನ್ನುವ ಛಲವೇ ಬದುಕಿಗೆ ಬಲ. ಸಾಕು ಅನ್ನುವುದೇ ಬದುಕಿನ ದೌರ್ಬಲ್ಯ. ಹಸಿವು ಎಲ್ಲವನ್ನೂ ಕಲಿಸುತ್ತದೆ. ಅನ್ನ ಹುಟ್ಟಿಸುವುದರಿಂದ ಅದನ್ನು ಹಂಚುವವರೆಗೂ ಬದುಕಿನ ಪಾಠ ಕಲಿಸುತ್ತದೆ. ಇದರಿಂದಾಗಿಯೇ, ಬಡತನದಲ್ಲಿ ಬೆಳೆಯುವ ಮಕ್ಕಳು ಸಾಧನೆಯ ಶಿಖರದಲ್ಲಿ ಮಿಂಚುತ್ತಾರೆ. ಅದಕ್ಕೆ ಪೂರಕವಾದ ವಾತಾವರಣ ಮತ್ತು ಅವಕಾಶವನ್ನು ಸಮಾಜ ಕಲ್ಪಿಸಿಕೊಡಬೇಕಷ್ಟೆ.

ಬಹಳಷ್ಟು ಬಡಮಕ್ಕಳು ಬಡತನದ ಕೀಳರಿಮೆಯಿಂದಲೇ ಹಿಂದುಳಿಯುತ್ತಿದ್ದಾರೆ. ಇಂಥ ಮಕ್ಕಳಲ್ಲಿ ಆತ್ಮಬಲ ತುಂಬಿ ಬೆಳೆಸಿದರೆ ಈ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಡಬಲ್ಲರು. ಏಕೆಂದರೆ ಬಡ-ಮಧ್ಯಮ ವರ್ಗದ ಮಕ್ಕಳಿಂದಲೇ ನಮ್ಮ ದೇಶ ಒಂದಿಷ್ಟು ಸಾಧನೆ ಮಾಡುತ್ತಿದೆ. ಶ್ರೀಮಂತ ಮಕ್ಕಳಿಂದ ದೇಶದ ಪ್ರಗತಿಗೆ ನೀಡುತ್ತಿರುವ ಕಾಣಿಕೆ ಅತ್ಯಲ್ಪ. ಬಡಮಕ್ಕಳಲ್ಲಿ ಉತ್ತಮ ಬದುಕು ಕಟ್ಟಬೇಕೆಂಬ ತುಡಿತವಿರುತ್ತದೆ. ತುಡಿತದ ಒತ್ತಡ ಇದ್ದಾಗಷ್ಟೆ ಮನುಷ್ಯ ಮೇಲೇಳುತ್ತಾನೆ. ಸ್ಥಿತಿವಂತನಾಗಬೇಕೆಂಬ ಒತ್ತಡ ಬಡಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಏಕೆಂದರೆ, ಎಲ್ಲಿ ಕೊರತೆ ಇರುತ್ತದೋ, ಅಲ್ಲಿ ಒರತೆಗೆ ಕಿಚ್ಚು ಹಚ್ಚುತ್ತೆ.

ಪರಿಶ್ರಮದಿಂದಷ್ಟೇ ಸಾಧನೆ ಸಾಧ್ಯ ಅನ್ನೋದನ್ನ ವಿಜ್ಞಾನವೂ ಒಪ್ಪುತ್ತದೆ, ಧರ್ಮಜ್ಞಾನವೂ ಮನಗಾಣುತ್ತದೆ. ಕುಂತಲ್ಲೇ ಸುಖ ಬಯಸುವ ಶ್ರೀಮಂತರ ಮಕ್ಕಳಿಂದ ಸಾಧನೆ ನಿರೀಕ್ಷಿಸುವುದು ಹಾಸ್ಯಾಸ್ಪದ. ಕೂತುಣ್ಣುವವರಿಗೆ ರೋಗಬಾಧೆ ಹೆಚ್ಚುವಂತೆ, ಸುಖದಲ್ಲಿರುವವರಿಗೆ ಸೋಮಾರಿತನದ ಬಾಧೆ ಹೆಚ್ಚಿರುತ್ತದೆ. ಅದೇ ಹಸಿವಿದ್ದವನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೆಚ್ಚಿರುತ್ತದೆ. ಉಳಿ ಪೆಟ್ಟು ತಿಂದಷ್ಟು ಸುಂದರ ಮೂರ್ತಿಯಾಗುವಂತೆ, ಬಡತನದ ಬೇಗೆಯಲ್ಲಿ ಬೆಂದಷ್ಟು ಸಾಧನೆಯ ಅಂಚು ಹರಿತವಾಗಿರುತ್ತದೆ. ‘ಗುಡಿಸಲಲ್ಲಿ ಅರಳಿದ ಕಲೆ ಅರಮನೆಯಲ್ಲಿ ಅಳಿಯುತ್ತೆ’ ಅನ್ನೋ ಮಾತು ಅಕ್ಷರಶಃ ನಿಜ. ಎಲ್ಲಿ ಶ್ರೀಮಂತಿಕೆ ಇರುತ್ತೋ ಅಲ್ಲಿ ಸಾಧನೆ ಕ್ಷೀಣಿಸುತ್ತೆ. ಎಲ್ಲಿ ಬಡತನ ಇರುತ್ತೋ ಅಲ್ಲಿ ಪ್ರಗತಿಯ ಹೆಜ್ಜೆ ಕಾಣಿಸುತ್ತೆ. ಛಲ-ಬಲವುಳ್ಳ ಮಕ್ಕಳಿಗೆ ಹಣದ ಕಾರಣಕ್ಕಾಗಿ ವಿದ್ಯೆ ವಂಚಿಸಬಾರದು. ಹಣದ ಕೊರತೆಯಿಂದ ಬಡಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದು ದೇಶದ ಅಭಿವೃದ್ದಿಗೆ ಮಾರಕ. ಪ್ರತಿಭಾವಂತ ಮಕ್ಕಳನ್ನು ಪೋಷಿಸಿ ಬೆಳೆಸಿದಾಗಷ್ಟೆ ಸಾಧನೆಯ ಪೂರಕ ವಾತಾವರಣದಲ್ಲಿ ‘ಸಚ್ಚಿದಾನಂದ’ದ ಬದುಕು ಅನಾವರಣವಾಗುತ್ತದೆ.

Kalyana Kranti

ಕಲ್ಯಾಣಕ್ರಾಂತಿ ನಡೆದಾಗ ಸಾವಿರಾರು ಶರಣರ ಕಗ್ಗೊಲೆಗಳಾದವು


ಕಲ್ಯಾಣಕ್ರಾಂತಿ ನಡೆದಾಗ ಸಾವಿರಾರು ಶರಣರ ಕಗ್ಗೊಲೆಗಳಾದವು, ಶರಣರ ರಕ್ತ ಬೀದಿಬೀದಿಗಳಲ್ಲಿ ನೀರಿನಂತೆ ಹರಿಯಿತು. ಕನ್ನಡದ ಅತ್ಯಮೂಲ್ಯ ವಚನಸಾಹಿತ್ಯಗಳನ್ನ ಅಂದು ಅಮಾನುಶವಾಗಿ ಸುಟ್ಟು ಹಾಕಲಾಯಿತು.

ಹಾಗಿದ್ದರೆ ಕಲ್ಯಾಣಕ್ರಾಂತಿಗೆ ಮೂಲವಾದರೂ ಏನು?

ಬಸವಣ್ಣ ತನ್ನ ಅನುಭವಮಂಟಪದ ಮುಖಾಂತರ ವಿಚಾರಗೋಷ್ಠಿಗಳು ನಡೆಸುತ್ತಿದ್ದದ್ದು, ಎಲ್ಲಾ ಕಾಯಕ ಜಾತಿಗಳಿಗೂ ಇಷ್ಟಲಿಂಗದೀಕ್ಷೆ ಕೊಡುತ್ತಿದ್ದದ್ದು, ಬಸವಣ್ಣನ ಪ್ರತಿಪಾದಿಸುತ್ತಿದ್ದ ಸಮಾನತೆ, ಎಲ್ಲಾ ಕಾಯಕ ವರ್ಗಗಳು ಒಟ್ಟಿಗೆ ದಾಸೋಹ ಮಾಡುತ್ತಿದ್ದದ್ದು, ಜಾತಿ ವ್ಯವಸ್ಥೆಯ ವಿರುದದ್ದ ಹೋರಾಟ, ಬಾಯಿಲ್ಲದ ಕೆಳಕ್ಕೆ ತಳ್ಳಲ್ಪಟ್ಟ ಸಮುದಾಯಗಳೂ ಕೂಡ ವಚನಗಳನ್ನು ರಚಿಸುವಂತಾಗಿದ್ದು, ಇವ್ಯಾವು ಅಲ್ಲಿನ ಸಂಪ್ರದಾಯವಾದಿಗಳಿಗೆ, ಪುರೋಹಿತರಿಗೆ ಹಿಡಿಸುತ್ತಲೇ ಇರಲಿಲ್ಲ. ಈ ವಿಷಯದಲ್ಲೇ ಬಸವಣ್ಣನ ಮೇಲೆ ಅವರಿಗೆ ವಿಪರೀತವಾದ ದ್ವೇಷ, ಅಸೂಯೆ ಆವರಿಸಿಕೊಂಡಿತ್ತು.

ಆದರೆ ವಿಶ್ವಗುರು ಬಸವಣ್ಣನ ಮೇಲೆ ಬಿಜ್ಜಳನಿಗೆ ಅಪಾರ ನಂಬುಗೆಯಿತ್ತು. ಆದ್ದರಿಂದ ಈ ಪುರೋಹಿತಶಾಹಿಗಳಾರು ಬಹಿರಂಗವಾಗಿ ಅಲ್ಲಿಯವರೆಗೆ ಬಸವಣ್ಣನನ್ನ ದೊಡ್ಡ ಮಟ್ಟದಲ್ಲಿ ವಿರೋಧಿಸಿರಲಿಲ್ಲ.

ಇಂತಿಪ್ಪ ಕಲ್ಯಾಣದಲ್ಲಿ ನಡೆದ ಸಮಗಾರ(ಚಪ್ಪಲಿ ತಯಾರಿಸುವ ಮಾದಾರ ಸಮುದಾಯ) ಜಾತಿಯ ಹರಳಯ್ಯ, ಬ್ರಾಹ್ಮಣನಾಗಿದ್ದ ಮಧುವರಸನ ಮಕ್ಕಳ ವಿವಾಹವು ಕಲ್ಯಾಣಕ್ರಾಂತಿಗೆ ಕಾರಣವಾಯಿತು.

ಹರಳಯ್ಯ, ಮಧುವರಸ ಇಬ್ಬರೂ ಇಷ್ಟಲಿಂಗದೀಕ್ಷೆ ಪಡೆದಿದ್ದರು. ಮಧುವರಸನ ಮಗಳು ಲಾವಣ್ಯ, ಹರಳಯ್ಯನ ಮಗ ಶೀಲವಂತನ ವಿವಾಹವು ಪುರೋಹಿತಶಾಹಿಗಳ ವಿರೋಧದ ನಡುವೆಯೂ ನೆರವೇರಿತು.

ಆದರೆ ಪುರೋಹಿತಶಾಹಿಗಳು ತಮ್ಮ ಮಡಿವಂತಿಕೆ, ಸಂಪ್ರದಾಯಗಳ ವಿರುದ್ದವಾಗಿ ನಡೆದ ವರ್ಣಸಂಕರ ವಿವಾಹವನ್ನ ಹೇಗಾದರೂ ಸಹಿಸಿಯಾರು? ಕೀಳು ಜಾತಿಯ ಸಮಗಾರನಿಗೆ, ಬ್ರಾಹ್ಮಣ ಕನ್ಯೆಯನ್ನು ಕೊಟ್ಟು ಮದುವೆ ಮಾಡುವುದು ಅನುಲೋಮ ವಿವಾಹ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು ಇದು ಧರ್ಮಬಾಹಿರ ಎಂದು ಬಿಜ್ಜಳನಲ್ಲಿ ದೂರಿತ್ತರು.

ನಂತರ ಬಸವಣ್ಣನನ್ನು ರಾಜ್ಯದಿಂದ ಗಡಿಪಾರು ಮಾಡಿಸಲಾಯಿತು...

ಇತ್ತ ಹರಳಯ್ಯ, ಮಧುವರಸ, ಶೀಲವಂತನಿಗೆ ಎಳೆಹೂಟೆ ಶಿಕ್ಷೆ (ಮನುಷ್ಯರನ್ನ ಸರಪಳಿಗಳಲ್ಲಿ ಆನೆಗಳ ಕಾಲಿಗೆ ಕಟ್ಟಿ ಎಳೆಸುವುದು) ಎಳೆಸಿ ಅಮಾನವೀಯವಾಗಿ ಕೊಲ್ಲಲಾಯಿತು.

ನಂತರ ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಜ್ಜಳನ ಕೊಲೆಯಾಯಿತು. ನಂತರ ಬಿಜ್ಜಳನ ಸೈನ್ಯದ ತಲೆಕೆಡಿಸಿದ ಪುರೋಹಿತಶಾಹಿಗಳು ಶರಣರ ಕಗ್ಗೊಲೆಗಳಿಗೆ ಮುನ್ನುಡಿ ಬರೆದರು. ವಚನಕಾರರನ್ನ, ಶರಣರನ್ನ ಪ್ರಭುತ್ವ ವಿರೋಧಿಗಳೆಂದು ಅವರ ಮಾರಣಹೋಮ ನಡೆಸಲಾಯಿತು. ಸುಮಾರು ೧ಲಕ್ಷದ ೯೬ಸಾವಿರ ಶರಣರಿದ್ದ ಕಲ್ಯಾಣದಲ್ಲಿ, ಭಾಗಶಃ ಶರಣರನ್ನು ಕೊಲ್ಲಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು. ವಚನಕಾರರ ವಚನಗಳ ಕಟ್ಟುಗಳನ್ನು ಬೆಂಕಿಯಿಟ್ಟು ಸುಡಲಾಯಿತು. ಇದು ನಡೆದದ್ದು ಮಹಾನವಮಿಯಂದು. ಆನಂತರ ಉಳಿದ ವಚನಕಾರರು, ವಚನಗಳೊಂದಿಗೆ ಬೇರೆಡೆಗೆ ಪ್ರಯಾಣ ಬೆಳೆಸಿ, ಶರಣರ ವಚನಗಳನ್ನು, ಲಿಂಗಾಯತ ದೀಕ್ಷೆಯನ್ನು ನೀಡಿ ಲಿಂಗಾಯತ ಧರ್ಮವನ್ನ ಉಳಿಸಿದರು.

ಈ ಕೊಲೆಗಳಾವೂ ರಾಜ್ಯ ವಿಸ್ತರಿಸುವುದಕ್ಕೆ ನಡೆದ ಕೊಲೆಗಳಲ್ಲ, ಕೇವಲ ಪುರೋಹಿತಶಾಹಿಗಳ ಗೊಡ್ಡು ಸಂಪ್ರದಾಯ, ವರ್ಣಸಂಕರ, ಜಾತಿವ್ಯವಸ್ಥೆ ಮೀರಿದ್ದಕ್ಕಾಗಿ ನಡೆದ ಕೊಲೆಗಳಾಗಿದ್ದವು.

ಊರಿನೊಳಗೆ, ಗುಡಿಯೊಳಗೆ ಪ್ರವೇಶವಿರದಿದ್ದ ಶೂದ್ರರಿಗೆ ಅಂದು ಬಸವಣ್ಣ ಅಂಗೈಯಲ್ಲೇ ಲಿಂಗ ಕೊಟ್ಟು ಲಿಂಗಾಯತರನ್ನಾಗಿ ಮಾಡಿದ. ಇಂದು ಭಾಗಶಃ ಲಿಂಗಾಯತ ಯುವಕರಿಗೆ ಈ ಕಲ್ಯಾಣ ಕ್ರಾಂತಿಯ ಬಗ್ಗೆಯೇ ತಿಳಿದಿಲ್ಲ. ಅಂದು ಯಾರು ಬಸವಣ್ಣ, ವಚನಕಾರರನ್ನ ವಿರೋಧಿಸಿ ಲಕ್ಷಾಂತರ ಶರಣರನ್ನ ಕೊಂದರೋ ಇಂದು ಅಂತವರ ತಾಳಕ್ಕೆ ನಮ್ಮ ಹುಡುಗರೇ ಕುಣಿಯುತ್ತಿರೋದು ಈ ಕಾಲದ ಚೋದ್ಯ.

ಈ ರೀತಿ ಅಮಾನವೀಯವಾಗಿ ಶರಣರನ್ನ ಕೊಲೆಗೈದ ಪುರೋಹಿತಶಾಹಿಗಳು ಹೇಳುವ ಧರ್ಮವನ್ನ ಲಿಂಗಾಯತರು ಏತಕ್ಕಾಗಿ ಪಾಲಿಸಬೇಕು? ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಕಲ್ಯಾಣಕ್ರಾಂತಿ ಪುಸ್ತಕ ಸಿಗುತ್ತದೆ, ತಪ್ಪದೇ ಓದಿ.

ಇನ್ನೊಂದಷ್ಟು ವರುಷಗಳಾದ ಮೇಲೆ ಈ ಪುರೋಹಿತಶಾಹಿಗಳು ಲಿಂಗಾಯತ ಯುವಕರ ಮನಸ್ಸಿನಲ್ಲಿ ಬಸವಣ್ಣನೇ ಸರಿಯಿಲ್ಲ ಎನ್ನುವ ಮಟ್ಟಿಗೆ ವಿಷ ತುಂಬದಿದ್ದರೆ ಅದೇ ನಮ್ಮ ಅದೃಷ್ಟ.

Sunday, January 28, 2024

The Magical World called Mobile

ಮೊಬೈಲ್ ಎಂಬ ಮಾಯಾಲೋಕ;

ಸಂಬಂಧಗಳ ಕೊಂಡಿ ಕಳಚಿ ಕೊನೆಗೆ ದಕ್ಕಿದ್ದು ಏಕಾಂತ ಮಾತ್ರ!!


ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರ ಚೆನ್ನಾಗಿದೆ, ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ, ನನಗೆ ನೆಮ್ಮದಿ ಸಿಕ್ಕಿದೆ, ಮೊಬೈಲ್ ನಿಂದಲೇ ನಾನು ಅತೀ ಸಂತೋಷವಾಗಿದ್ದೇನೆ ಎಂದು ಹೇಳಲಿ ನೊಡೋಣ. ಹಾಸ್ಯಾಸ್ಪದ ಸಂಗತಿ ಏನೆಂದರೆ ನಾವು ನಮ್ಮ ಆಯುಷ್ಯವಿಡೀ ಸಂಬಂಧಿಗಳನ್ನು, ಗೆಳೆಯರನ್ನು, ಮನೆಯವರನ್ನು, ಸಂಗಾತಿಯನ್ನೂ ದೂರ ಮಾಡಿಕೊಳ್ಳುವಷ್ಟು ಮೊಬೈಲ್ ಹಿಂದೆ ಬಿದ್ದು ಆಟದಲ್ಲಿ ನಮ್ಮ ಸಂತೋಷ , ನೆಮ್ಮದಿ ಹುಡುಕುತ್ತಿರುತ್ತೇವೆ. ಆದರೆ ಕೊನೆಗೆ ನಮ್ಮ ಉಸಿರು ನಿಂತರೂ ಅದರಲ್ಲಿ ನಮ್ಮ ಆ ಹುಡುಕಾಟ ನಿಲ್ಲುವುದಿಲ್ಲ.

ಮೊಬೈಲ್... ಇದು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆಗ ತಾನೆ ಅಮ್ಮ ಎಂದು ಹೇಳಲು ಕಲಿತ ಮಗುವಿನಿಂದ ಹಿಡಿದು ಬಿಳಿ ಗಡ್ಡ ಬೆಳೆದ ಹಿರಿ ಜೀವದವರೆಗೂ ಎಲ್ಲರಿಗೂ ಬೇಕಾದ, ಅವಶ್ಯಕ ವಸ್ತು, ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಜೀವ, ಜೀವನದ ಪ್ರಮುಖ ಭಾಗವಾಗಿಯೇ ಬೆಸೆದುಕೊಂಡಿರುವ ಜಂಗಮ ಯಂತ್ರ ಮನುಷ್ಯನ ಎಲ್ಲ ಸಂಬಂಧಿಗಳಿಗಿಂತಲೂ ಶ್ರೇಷ್ಟ. ಆದರೂ ಮೊಬೈಲ್ ನ್ನು ನಮ್ಮ ಸುಖ, ದುಃಖಗಳಲ್ಲಿ ಭಾಗಿಯಾಗುವ ಉತ್ತಮ ಸಂಗಾತಿ, ನಂಬಿಕೆಯ ಗೆಳೆಯ, ಬೇಕಾದಾಗ ಸಲಹೆ ನೀಡುವ ಪಾಲಕನೆಂದೇ ಅಂದುಕೊಂಡಿರುವ ನಾವು ಅದೆಷ್ಟು ಮೂರ್ಖರಲ್ವಾ?

ಮೊಬೈಲ್ ಈ ಪ್ರಪಂಚಕ್ಕೆ ಬಂದ ಮೊದ ಮೊದಲು ನಾವೆಲ್ಲರೂ ಹೆಮ್ಮೆಯಿಂದ ಬೀಗಿದೆವು ಇನ್ನು ಮುಂದೆ ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿ ಇರುತ್ತೆ ಅಂತ. ಆದರೆ ಇಂದು ಆ ಮೊಬೈಲ್ ಅಂಗೈಯಲ್ಲಿ ನಾವೆಲ್ಲರೂ ಇರುವಂತಾಗಿದೆ. ಇದಕ್ಕೆಲ್ಲಾ ಮೊಬೈಲ್ ಅನ್ನೋ 'ಮಾಯಾವಿ'ಯನ್ನು ನಾವು ನಮ್ಮ ಬದುಕಿನೊಳಗೆ ಅತಿಯಾಗಿ ಬಿಟ್ಟುಕೊಂಡಿದ್ದೇ ಕಾರಣ. ಜಂಗಮವಾಣಿ ಇಂದು ಕೇವಲ ಫೋನ್ ಮಾಡಲು ಮತ್ತು ಮೆಸೆಜ್ ಮಾಡಲಷ್ಟೇ ಉಳಿದಿದ್ದರೆ ಬಹುಷಃ ಮೊಬೈಲ್ ಇಷ್ಟೊಂದು ನಶೆ ಆಗುತ್ತಿರಲಿಲ್ಲ. ಇದು ಮೊಬೈಲ್ ಮಾಡಬೇಕಾದ ಕೆಲಸವನ್ನಷ್ಟೇ ಮಾಡದೆ ಟಿವಿ, ರೇಡಿಯೋ, ಪುಸ್ತಕ, ಸುದ್ದಿ ಪತ್ರಿಕೆ ಹೀಗೆ ಅನೇಕ ವಸ್ತುವಿನ ಕೆಲಸವನ್ನು ಕಸಿದುಕೊಂಡು ಅವರ ಕೆಲಸವನ್ನೂ 'ಪಾರ್ಟ್ ಟೈಮ್ ' ಲೆಕ್ಕದಲ್ಲಿ ಮಾಡುತ್ತಿದೆ. ಇದು ಒಂದು ರೀತಿ ಒಳ್ಳೆಯದೇ.

ಯಾಕೆಂದರೆ ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಮೊಬೈಲ್ ಅನ್ನೋ ದೂರದ ಸಂಬಂಧಿಯನ್ನು ನಮ್ಮ ಅತೀ ಹತ್ತಿರದ ಸಂಬಂಧದ ಒಳಗೆ ಸೇರಿಸಿಕೊಂಡಿದ್ದು ಸರಿಯಾಗಿಯೇ ಇದೆ. ಆದರೆ ಆ ಸಂಬಂಧಿಯನ್ನು ನಾವು ಅತೀಯಾಗಿ ಅವಲಂಬಿಸಿ ಇಂದು ಅವನಿಲ್ಲದೆ ನಾವಿಲ್ಲ ಎನ್ನುವ ಸ್ಥಿತಿಗೆ ಬಂದು ತಲುಪಿದ್ದೇವೆ. ಎಷ್ಟರ ಮಟ್ಟಿಗೆ ಎಂದರೆ ಮೊಬೈಲ್ ಈ ಪ್ರಪಂಚಕ್ಕೆ ಕಾಲಿಡುವುದಕ್ಕಿಂತ ಮೊದಲು ನಮ್ಮ ಪೂರ್ವಜರು ಅದು ಹೇಗೆ ಬದುಕಿದರೋ ಎಂಬ ಅನುಮಾನ ಬರುವಷ್ಟು. ಹಾಗಿದ್ದರೆ ನಿಜವಾಗಿಯೂ ಈ ಮೊಬೈಲ್ ಬಳಕೆ ನಮ್ಮ ಜೀವನಕ್ಕೆ ಇಷ್ಟೊಂದು ಅವಶ್ಯಕತೆ ಇದೆಯಾ? ಇದನ್ನು ನಾವು ನಮ್ಮ ಬದುಕುವ ಅನಿವಾರ್ಯತೆ ಎಂದು ಭಾವಿಸಿಕೊಂಡು ಬದುಕುವುದರಲ್ಲಿ ಏನಾದರೂ ಅರ್ಥ ಇದೆಯಾ?

ಈಗ ಅದ್ಯಾವ ಮನೆಯಲ್ಲಾದರೂ ನೋಡಿ, ಅತ್ತೆ-ಸೊಸೆ ಜಗಳ, ಚಿಕ್ಕ ಮಕ್ಕಳ ಚೀರಾಟ, ಪಾಲಕರ ಕಿತ್ತಾಟ ಬಹಳ ಕಡಿಮೆ ಆಗಿ ಹೋಗಿದೆ. ಮೊದಲೆಲ್ಲಾ ಪಕ್ಕದ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಕೇಳಿಸಿಕೊಳ್ಳುವ ಕೆಟ್ಟ ಕುತೂಹಲ ಎಲ್ಲರಲ್ಲೂ ಇರುತ್ತಿತ್ತು. ಆದರೆ ಇಂದು ಪಕ್ಕದ ಮನೆಯವರ ಸುದ್ದಿ ಬಿಡಿ, ನಮ್ಮ ಪಕ್ಕಕ್ಕಿದ್ದವರ ಮಾರು ಕೇಳಿಸಿಕೊಳ್ಳುವುದೂ ನಮಗೆ ಬೇಕಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಎಷ್ಟು ಮಂದಿಇರುತ್ತಾರೋ ಅವರೆಲ್ಲರ ಬಳಿಯೂ ಒಂದೊಂದು ಮೊಬೈಲ್ ಇದ್ದೇ ಇರುತ್ತದೆ. ಯಾಕೆಂದರೆ ಬಿಡುವಿನ ಸಮಯದಲ್ಲಿ ಆ ಮೊಬೈಲ್ ಅವರ ಕೈಗೆ ಬಂದಾಗ ಒಬ್ಬೊಬ್ಬರದ್ದೂ ಒಂದೊಂದು ಪ್ರಪಂಚವಾಗಿರುತ್ತದೆ. ಅಂದು ಚಿಕ್ಕ ಮಕ್ಕಳು ಅಳದಂತೆ, ಕೀಟಲೆ ಮಾಡದಂತೆ ನೋಡಿಕೊಳ್ಳಲು ಮನೆವರೆಲ್ಲಾ ಒಟ್ಟಾಗುತ್ತಿದ್ದರು, ಅವರ ಜೊತೆ ನಲಿದು ಆ ಮಗುವಿನ ನಗುವಿಗೆ ಕಾರಣವಾಗುತ್ತಿದ್ದರು.

ಆದರೆ ಇಂದು ಯಾವ ಪಾಲಕರಿಗೂ ಅವರ ಮಕ್ಕಳನ್ನು ಸುಧಾರಿಸುವ ಸಹನೆ, ಸಮಯ ಎರಡೂ ಇಲ್ಲ. ತಮ್ಮ ಮಕ್ಕಳು ಅತ್ತರೆ ಸಾಕು ಆ ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಅದರಲ್ಲಿ ಕಾರ್ಟೂನ್ ಅಥವಾ ಇನ್ಯಾವುದೇ ಚಿಕ್ಕ ಮಕ್ಕಳಿಗೆ ಮನರಂಜನೆ ನೀಡುವ ವಿಡಿಯೋಗಳನ್ನು ಹಚ್ಚಿ ಅವರನ್ನು ಒಂದೆಡೆ ಕೂರಿಸಿ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಈಗಂತೂ ಶಾಲೆಗೆ ಹೋಗದೆ ಇರುವ ಮಕ್ಕಳೂ ಸಹ ತಿಂಡಿ, ತಿನಿಸುಗಳು, ಆಟಿಗೆ ಸಾಮಾನುಗಳು ಹಾಗೂ ಅಪ್ಪ, ಅಮ್ಮ ಬೇಕು ಎನ್ನುವುದಕ್ಕಿಂತ ಮೊಬೈಲ್ ಬೇಕು ಎಂಬ ಸಲುವಾಗಿಯೇ ರಂಪಾಟ ಮಾಡುವುದು ಹೆಚ್ಚು. ಕೊರೊನಾದಿಂದ ಆನ್ ಲೈನ್ ಕ್ಲಾಸ್ ಆರಂಭವಾದಾಗ ಪ್ರತೀ ವಿದ್ಯಾರ್ಥಿಗಳ ಕೈಯ್ಯಲ್ಲೂ ಬಂದ ಮೊಬೈಲ್ , ಈಗ ಶಾಲಾ ಕಾಲೇಜು ಆರಂಭವಾಗುತ್ತಿದ್ದಾಗಲೂ ಆ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ಮೊಬೈಲ್ ಲೋಕವೇ ಚೆನ್ನಾಗಿತ್ತು ಅನ್ನಿಸದೇ ಇರದು. ಯಾಕೆಂದರೆ, ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ, ಸಮಯಕ್ಕೆ ಸರಿಯಾಗಿ ಬಾರದ ಬಸ್ ಗೆ ಕಾದು, ಬೇಸಿಗೆ, ಮಳೆ, ಚಳಿಗಾಲವೆನ್ನದೆ ಶಾಲೆಗೆ ಹೋಗಿ, ಗಂಟೆಗಂಟ್ಟಲೇ ಒಂದೇ ಕೊಠಡಿಯಲ್ಲಿ ಕಲಿಸುವ ಅಧ್ಯಾಪಕರುಗಳು ಮತ್ತು ಎಂಟೊಂಭತ್ತು ತಾಸು ಅದೇ ನಾಲ್ಕು ಗೋಡೆಯ ಮಧ್ಯೆ ಕೂರುವ ವಿದ್ಯಾರ್ಥಿಗಳಿಗೆ ಮೊಬೈಲ್ ನಲ್ಲೇ ಶಾಲೆ ಮುಂದುವರೆದರೆ ಬಹಳ ಒಳ್ಳೆಯದು. ಆನ್ ಲೈನ್ ಕ್ಲಾಸ್ ನಲ್ಲಾದರೆ ನಾಲ್ಕೈದು ತಾಸು ಒಂದೇ ಕಡೆ ಕೂರಲೇ ಬೇಕೆಂದೇನಿಲ್ಲ, ಬೆಳಿಗ್ಗೆ ಬೇಗನೇ ಏಳಬೇಕಿಲ್ಲ, ಬಸ್ ಹಿಡಿಯುವ ಜಂಜಾಟವಿಲ್ಲ. ಹೀಗಾಗಿ ಶಾಲೆ ಆರಂಭವಾದರೂ ಇನ್ನೂ ಅವರು ಆನ್ ಲೈನ್ ಕ್ಲಾಸಿನ ಮೂಡಲ್ಲೇ ಇರುವುದು ದೊಡ್ಡ ವಿಷಯವೇನಲ್ಲ.

ಬದಲಾದ ಜಗತ್ತಿನಲ್ಲಿ ನಾವು ಇತರರೊಂದಿಗೆ ಸರಿಸಮಾನವಾಗಿ ಹೊಂದಿಕೊಂಡು ಬದುಕಬೇಕಾದರೆ ನಾವು ಸ್ವಲ್ಪವಾದರೂ ಆಧುನಿಕರಾಗುವುದು ಅನಿವಾರ್ಯ. ಆದರೆ ಹೊರಗಿನ ಪ್ರಪಂಚವನ್ನೇ ನೋಡಿರದ ಆ ಪುಟ್ಟ ಕಂದಮ್ಮಗಳಿಗೆಲ್ಲಾ ಮೊಬೈಲ್ ನೀಡುವಷ್ಟು ನಾವು ಆಧುನಿಕರಾಗಬಾರದು. ಯಾಕೆಂದರೆ ಚಿಕ್ಕ ಮಕ್ಕಳು ದೊಡ್ಡವರಾಗಿ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಅವರು ಮೊದಲು ಬೀಳುವುದನ್ನು ಅಂದರೆ ಸೋಲುವುದನ್ನು ಕಲಿಯಬೇಕು. ಆಗ ಮಾತ್ರ ಅವರಿಗೆ ಗೆಲುವಿನ ನಿಜವಾದ ಮಹತ್ವ ಅರಿವಾಗುತ್ತದೆ.

ಮೊಬೈಲ್ ಚಟ ಜಾಸ್ತಿ ಆದರೆ, ಕೊನೆಗೆ ದೇವರೇ ಗತಿ!!

ಆದರೆ ಇಂದು ಮಕ್ಕಳ ಕೈಯಲ್ಲಿ ಮೊಬೈಲ್ ಬಂದಾಗಿನಿಂದ ಅವರಿಗೆ ಹೊರಗಿನ ಆಟ ಬೇಕಾಗಿಲ್ಲ, ಮೊಬೈಲ್ ನಲ್ಲೇ ಹತ್ತಾರು ಗೇಮ್ಸ್ ಆಡಿಕೊಂಡು ಕಾಲ ಕಳಿಯುತ್ತಿರುತ್ತಾರೆ. ಹೀಗಾಗಿ ಅವರಿಗೆ ಬೀಳು (ಸೋಲು)ವ ಅನಿವಾರ್ಯತೆಯೇ ಇರುವುದಿಲ್ಲ. ಮೊಬೈಲ್ ನಲ್ಲಿ ಆಟ ಆಡುವುದಕ್ಕೂ ಹಾಗೂ ಹೊರಗಡೆ ನಾಲ್ಕು ಜನರ ಜೊತೆ ಆಟ ಆಡುವುದಕ್ಕೂ ಇರುವ ವ್ಯತ್ಯಾಸ ಇಷ್ಟೆ- ಹೊರಗಡೆ ನಾಲ್ಕು ಜನರೊಂದಿಗೆ ಆಟ ಆಡಿದಾಗ ಚಿಕ್ಕವರಿದ್ದಾಗಲೇ ನಮಗೆ ಸಮಾಜ ಹೇಗೆ, ಬೇರೆ ವ್ಯಕ್ತಿಗಳ ಜೊತೆ ಮಾತನಾಡುವುದು ಮತ್ತು ಸಂಬಂಧ ಗಟ್ಟಿಗೊಳಿಸಿಕೊಳ್ಳುವುದು ಹೇಗೆ ಎಂದು ಅರಿವಾಗುತ್ತದೆ. ಅಲ್ಲದೆ ಅವರಿಂದ ನಾವು ಕಲಿಯುವ, ಕಲಿತ ಪಾಠಗಳು ಮಂದಿನ ನಮ್ಮ ಜೀವನಕ್ಕೆ ಒಂದೊಳ್ಳೆ ಗೆಳೆಯನಾಗಿ ನಮ್ಮ ಜೊತೆಗಿರುತ್ತದೆ.

ಅದೆಲ್ಲವುಗಳಿಗಿಂತ ಮುಖ್ಯವೇನೆಂದರೆ ಹೊರಗಡೆ ಆಟದಲ್ಲಿ ನಾವು ಭಾಗವಹಿಸಿದಾಗ ನಾವು ಎಷ್ಟು ಬಾರಿ ಸೋತರೂ ನಮಗೆ ಆಡಲು ಮತ್ತೊಂದು ಅವಕಾಶ ದೊರೆಯುತ್ತದೆ. ಆಗ ನಮಗೆ ಸೋಲು ಅಂದರೆ ಭಯ ಕಡಿಮೆ, ಗೆಲುವು ಅಂದರೆ ಹೆಮ್ಮೆ ಕಡಿಮೆ ಆಗುತ್ತದೆ. ಇದರಿಂದ ನಾವು ಒಂದೊಳ್ಳೆ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ. ಆದರೆ ಮೊಬೈಲ್ ನಲ್ಲಿ ಆಟ ಆಡುವವರಿಗೆ ಸಮಾಜದ ಜ್ಞಾನ ಸಿಗುವುದಿಲ್ಲ, ಯಾರ ಸಂಬಂಧಗಳೂ ಬೇಕಾಗುವುದಿಲ್ಲ. ಇದಲ್ಲದೆ ಮೊಬೈಲ್ ನಲ್ಲಿ ಆಟ ಸೋತರೆ 'ಗೇಮ್ ಓವರ್' ಅಲ್ಲಾ? ಹಾಗಾಗಿ ಅವರಿಗೆ ಆಟ ಎಷ್ಟು ಮುಖ್ಯವೋ ತಾವು ಗೆಲ್ಲುವುದೂ ಅಷ್ಟೇ ಮುಖ್ಯ. ಸೋಲು ಅನ್ನುವ ಆಯ್ಕೆಯೇ ಅವರಲ್ಲಿಲ್ಲ. ಆದರೆ ನಾವು ಸೋತುಬಿಡುತ್ತೇವೆ ಎಂಬ ಭಯ ಅವರು ಮಾಡುವ ಪ್ರತಿಯೊಂದು 'ಮೂವ್ಸ್ 'ನಲ್ಲೂ ಖಂಡಿತಾ ಇರುತ್ತದೆ. ಅದು ಅವರು ಆಟದಲ್ಲಿ ಇಡುವ ಮೂವ್ಸ್ ಆಗಿರಬಹುದು ಅಥವಾ ಜೀವನದಲ್ಲಿ ಇಡುವ ದೊಡ್ಡ ಹೆಜ್ಜೆಯ ಮೂವ್ಸೇ ಆಗಿರಬಹುದು. ಒಟ್ಟಿನಲ್ಲಿ ಮೊಬೈಲ್ ಕಾಲ ಆರಂಭವಾದಾಗಿನಿಂದ ಸೋಲು ಯಾರಿಗೂ ಬೇಡವಾಗಿದೆ. ಹೀಗಾಗಿಯೇ ಗೆಲುವಿಗೂ ಕೂಡ ನಾವ್ಯಾರೂ ಬೇಡವೇ ಆಗಿದ್ದೇವೆ. ನೀವ್ಯಾರೇ ಯಶಸ್ಸು ವ್ಯಕ್ತಿಗಳ ಕೇಳಿ ನೋಡಿ ಅವರಲ್ಲಿ ಒಬ್ಬರಾದರೂ ನನ್ನ ಯಶಸ್ಸಿಗೆ ಮೊಬೈಲ್ ಕಾರಣ ಎದಿದ್ದಾರಾ? ಅಥವಾ ಅನ್ನುತ್ತಾರಾ? ಎಂದು.

ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರ ಚೆನ್ನಾಗಿದೆ, ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ, ನನಗೆ ನೆಮ್ಮದಿ ಸಿಕ್ಕಿದೆ, ಮೊಬೈಲ್ ನಿಂದಲೇ ನಾನು ಅತೀ ಸಂತೋಷವಾಗಿದ್ದೇನೆ ಎಂದು ಹೇಳಲಿ ನೊಡೋಣ. ಹಾಸ್ಯಾಸ್ಪದ ಸಂಗತಿ ಏನೆಂದರೆ ನಾವು ನಮ್ಮ ಆಯುಷ್ಯವಿಡೀ ಸಂಬಂಧಿಗಳನ್ನು, ಗೆಳೆಯರನ್ನು, ಮನೆಯವರನ್ನು, ಸಂಗಾತಿಯನ್ನೂ ದೂರ ಮಾಡಿಕೊಳ್ಳುವಷ್ಟು ಮೊಬೈಲ್ ಹಿಂದೆ ಬಿದ್ದು ಆಟದಲ್ಲಿ ನಮ್ಮ ಸಂತೋಷ , ನೆಮ್ಮದಿ ಹುಡುಕುತ್ತಿರುತ್ತೇವೆ. ಆದರೆ ಕೊನೆಗೆ ನಮ್ಮ ಉಸಿರು ನಿಂತರೂ ಅದರಲ್ಲಿ ನಮ್ಮ ಆ ಹುಡುಕಾಟ ನಿಲ್ಲುವುದಿಲ್ಲ. ಆದರೂ ನಮ್ಮ ಕೈ ರೇಖೆ ಒಳಗೆ ಅವಿತು ಹೋಗುವಷ್ಟರ ಮಟ್ಟಿಗೆ ಮೊಬೈಲ್ ಅನ್ನೋ ನಮ್ಮ ಆತ್ಮಮಿತ್ರ ನಮ್ಮ ಕೈಯ್ಯಲ್ಲೇ ಇರಬೇಕು.

ಇಂದು ಇಡೀ ಪ್ರಪಂಚದಲ್ಲಿ ತಮ್ಮ ಮೊಬೈಲ್ ನ್ನು ಕಿಸೆಯಲ್ಲಿಟ್ಟುಕೊಂಡು ನಿರಂತರವಾಗಿ ಒಂದು ಹತ್ತು ನಿಮಿಷ ನೆಮ್ಮದಿಯಿಂದ ಇರುವ ಮಹಾನುಭಾವರಿಲ್ಲ. ಹಾಗೇನಾದರೂ ಇದ್ದರೆ ಅವರು ಈ ಗೃಹದವರೇ ಅಲ್ಲ. ಮೊಬೈಲ್ ನ ಅತೀಯಾದ ಬಳಕೆ ಇನ್ನೂ ಅತಿಯಾದರೆ, ಅದರಲ್ಲೂ ಹೀಗೆಯೇ ಮುಂದುವರೆದರೂ ಸಾಕು ನಾವು ಹೊರಗಿನ ಪ್ರಪಂಚವನ್ನು ಸಂಪೂರ್ಣವಾಗಿ ಮರೆತು 'ಏಲಿಯನ್ಸ್ ' ಗಳಂತೆ ಆಗುವ ಕಾಲ ಬಹಳ ದೂರವಿಲ್ಲ. ಇನ್ನು ಅಲೆಗಳ ಮೇಲೆ ಅಲೆಗಳನ್ನು ಎಬ್ಬಿಸುತ್ತಿರುವ ಕೊರೊನಾ ಉಪಟಳದಿಂದ ಮತ್ತೂ ಮೊಬೈಲ್ ಗೆ ಅಂಟಿಕೊಂಡಿರುವ ನಾವು ಇತರರ ಜೊತೆ ಬೆರೆಯುವುದನ್ನೇ ಸಂಪೂರ್ಣ ಮರೆತುಹೋಗಿದ್ದೇವೆ. ಇನ್ನು ಪಾಪ ಮನೆಯಲ್ಲಿರುವ ವೃದ್ಧರ ಪಾಡಂತೂ ಕೇಳೋದೇ ಬೇಡ. ತಮ್ಮ ಜೊತೆ ಮಾತನಾಡುವವರೂ ಸಿಗದೆ, ತಮ್ಮ ಮಕ್ಕಳು, ಮೊಮ್ಮಕ್ಕಳಂತೆ ಮೊಬೈಲ್ ಉಪಯೋಗಿಸಲೂ ಬಾರದೆ, ಬಂದರೂ ಉಪಯೋಗಿಸುವ ಮನಸ್ಸಿಲ್ಲದೆ ಏಕಾಂತ ಭಾವದೊಂದಿಗೆ ಬದುಕಿ ಬದುಕಿ ಸಾಕಾಗಿ ತಮ್ಮ ಕೊನೆ ದಿನದ ಲೆಕ್ಕಾಚಾರ ಹಾಕುತ್ತಿರುತ್ತಾರೆ.

ಮೊಬೈಲ್ ನಮಗೆ ನಿಜವಾಗಿಯೂ ಉತ್ತಮ ಗೆಳೆಯನಾಗಬಲ್ಲ. ಯಾವಾಗೆಂದರೆ- ನಾವು ಮೊಬೈಲ್ ನ್ನು ನಮ್ಮ ದುಡಿಮೆಗೆ ಮತ್ತು ಲಾಭಕ್ಕಷ್ಟೇ ಉಪಯೋಗಿಸಿ, ನಮ್ಮ ಒತ್ತಡದ ಜೀವನದ ನಡುವೆ ಸಿಕ್ಕ ಸ್ವಲ್ಪ ಸಮಯವನ್ನು ನಮ್ಮವರಿಗೋಸ್ಕರ ಮೀಸಲಿಟ್ಟು, ಜೀವನವನ್ನು ಸಮಾಜದೊಂದಿಗೆ ಬೆರೆಸಿ ನಮ್ಮಿಂದ ನಾಲ್ಕು ಜನಕ್ಕೆ ಉಪಯೋಗವಾಗುವಂತೆ ಬದುಕಿದಾಗ ಮಾತ್ರ. ಅದು ಬಿಟ್ಟು, ಮೊಬೈಲ್ ? ನಶೆ ಹತ್ತಿಸಿಕೊಂಡು ಅದೇ ಸರ್ವಸ್ವ ಎಂದು ಭಾವಿಸಿ ಬದುಕಿದರೆ ಕೊನೆವರೆಗೂ ನಮಗೆ ಸಿಗುವುದು, ನಮ್ಮಿಂದ ಉಳಿದವರಿಗೆ ದೊರೆಯುವುದು ಕೇವಲ ಏಕಾಂತ ಮಾತ್ರ.

ಸಂಬಂಧಗಳ ಯುಗ


ಇದು SSLC ವರೆಗೆ ಒಂದೇ ಶಾಲೆಯಲ್ಲಿ ಓದಿದ ನಾಲ್ವರು ಆತ್ಮೀಯ ಸ್ನೇಹಿತರ ಕಥೆ.

ಆಗ ನಗರದಲ್ಲಿ ಒಂದೇ ಒಂದು ಐಷಾರಾಮಿ ಹೋಟೆಲ್ ಇತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಆ ಹೋಟೆಲ್‌ಗೆ ಹೋಗಿ ಚಹಾ ಮತ್ತು ತಿಂಡಿ ತಿನ್ನೋಣ ಎಂದು ನಿರ್ಧರಿಸಿದರು. ನಾಲ್ವರಿಂದ ನಲವತ್ತು ರೂಪಾಯಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅದೊಂದು ಭಾನುವಾರವಾದ್ದರಿಂದ ನಾಲ್ವರೂ ಸೈಕಲ್ ಹತ್ತಿ ಹತ್ತೂವರೆ ಗಂಟೆಗೆ ಹೋಟೆಲ್ ತಲುಪಿದರು.

ದಿನೇಶ್, ಸಂತೋಷ್, ಮನೀಶ್ ಮತ್ತು ಪ್ರವೀಣ್ ತಿಂಡಿ ಮತ್ತು ಚಹಾ ಸೇವಿಸುತ್ತಾ ಮಾತನಾಡತೊಡಗಿದರು. ನಾಲ್ವರೂ ೪೦ ವರ್ಷಗಳ ನಂತರ ಅದೇ ಹೋಟೆಲ್‌ನಲ್ಲಿ ಏಪ್ರಿಲ್ ೧ ರಂದು ಮತ್ತೆ ಭೇಟಿಯಾಗಲು ಸರ್ವಾನುಮತದಿಂದ ನಿರ್ಧರಿಸಿದರು.

ಅಲ್ಲಿಯವರೆಗೆ ನಾವೆಲ್ಲರೂ ತುಂಬಾ ಶ್ರಮಿಸಬೇಕು, ೪೦ ವರ್ಷಗಳ ನಂತರ ಎಷ್ಟು ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ ಎಂದು ಅವರು ಚರ್ಚಿಸಿದರು.

ಅಂದು ಕೊನೆಯವನಾಗಿ  ಹೋಟೆಲ್ ತಲುಪುವವನು  ಆ ದಿನದ ಬಿಲ್ ನ್ನು ಪಾವತಿಸಬೇಕು ಎಂದು ನಿರ್ಧರಿಸಿದರು.     

ಇವರಿಗೆ ಟೀ, ತಿಂಡಿ ಬಡಿಸಿದ ಮಾಣಿ ಕಾಳು ಇದನ್ನೆಲ್ಲ ಕೇಳುತ್ತಿದ್ದ. ಅಲ್ಲಿಯವರೆಗೆ ಇಲ್ಲೇ ಇದ್ದರೆ ನಿಮ್ಮೆಲ್ಲರಿಗಾಗಿ ನಾನು ಕಾಯುತ್ತಿರುತ್ತೇನೆ ಎಂದರು.

ಮುಂದಿನ ಶಿಕ್ಷಣಕ್ಕಾಗಿ ನಾಲ್ವರೂ ಬೇರೆಯಾದರು.   

ದಿನೇಶ್ ತನ್ನ ತಂದೆ ಸ್ಥಳಾಂತರಗೊಂಡ ನಂತರ ನಗರವನ್ನು ತೊರೆದಿದ್ದರು, ಸಂತೋಷ್ ಹೆಚ್ಚಿನ ಅಧ್ಯಯನಕ್ಕಾಗಿ ತನ್ನ ಚಿಕ್ಕಪ್ಪನ ಬಳಿಗೆ ಹೋದರು.   ಮನೀಶ್ ಮತ್ತು ಪ್ರವೀಣ್ ನಗರದ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದರು.

ಕೊನೆಗೆ ಮನೀಶ್ ಕೂಡ ಊರು ಬಿಟ್ಟರು.     

ದಿನಗಳು, ತಿಂಗಳುಗಳು ಮತ್ತು ವರ್ಷಗಳು ಕಳೆದವು.  

ನಲವತ್ತು ವರ್ಷಗಳಲ್ಲಿ, ನಗರವು ಅಮೂಲಾಗ್ರ ಬದಲಾವಣೆಗೆ ಒಳಗಾಯಿತು. ನಗರದ ಜನಸಂಖ್ಯೆಯು ಹೆಚ್ಚಾಯಿತು ಮತ್ತು ರಸ್ತೆಗಳು, ಮೇಲ್ಸೇತುವೆಗಳು ಮತ್ತು ಮಾಲ್‌ಗಳು ನಗರದ ನೋಟವನ್ನು ಬದಲಾಯಿಸಿದವು.

ಈಗ ಆ ಹೋಟೆಲ್ ಪಂಚತಾರಾ ಹೋಟೆಲ್ ಆಗಿ ಮಾರ್ಪಟ್ಟಿತ್ತು, ಮಾಣಿ ಕಾಳು ಈಗ ಈ ಹೋಟೆಲ್ ನ ಮಾಲೀಕ ಶ್ರೀ ಕಾಳು ಆಗಿಬಿಟ್ಟಿದ್ದ.      

ನಲವತ್ತು ವರ್ಷಗಳ ನಂತರ, ನಿಗದಿತ ದಿನಾಂಕವಾದ ಏಪ್ರಿಲ್ ೧ ರಂದು, ಮಧ್ಯಾಹ್ನ, ಐಷಾರಾಮಿ ಕಾರೊಂದು ಹೋಟೆಲ್‌ನ ಬಾಗಿಲಿಗೆ ಬಂದಿತು.

ದಿನೇಶ್ ಕಾರಿನಿಂದ ಇಳಿದು ವರಾಂಡದತ್ತ ನಡೆಯತೊಡಗಿದ. ಅವರು ಈಗ ಮೂರು ಆಭರಣ ಶೋರೂಮ್‌ಗಳನ್ನು ಹೊಂದಿದ್ದರು.

ದಿನೇಶ ಹೊಟೇಲ್ ಮಾಲಕ ಶ್ರೀ ಕಾಳು ಬಳಿಗೆ ಬಂದರು, ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಶ್ರೀ ಕಾಳು ಹೇಳಿದರು, "ಪ್ರವೀಣ್ ಸರ್, ನಿಮಗಾಗಿ ಒಂದು ತಿಂಗಳ ಹಿಂದೆನೇ  ಟೇಬಲ್ ಕಾಯ್ದಿರಿಸಿದ್ದರು."

ನಾಲ್ವರಲ್ಲಿ ತಾನು ಮೊದಲಿಗನೆಂದು ದಿನೇಶನಿಗೆ ಮನಸಾರೆ ಸಂತೋಷವಾಯಿತು.  ಈ  ದಿನ ತಾನು ಬಿಲ್ ಕಟ್ಟಬೇಕಿಲ್ಲ.  ಅದಕ್ಕಾಗಿ ಗೆಳೆಯರನ್ನು ಗೇಲಿ ಮಾಡುತ್ತಿದ್ದ.

ಸ್ವಲ್ಪ ಹೊತ್ತಿನ ನಂತರ ಸಂತೋಷ್ ಬಂದ. ಸಂತೋಷ್ ನಗರದ ದೊಡ್ಡ ಬಿಲ್ಡರ್ ಆಗಿದ್ದರು. ಅವರ ವಯಸ್ಸಿಗೆ, ಅವರು ಈಗ ವಯಸ್ಸಾದ ಹಿರಿಯ ನಾಗರಿಕರಂತೆ ಕಾಣುತ್ತಿದ್ದರು.

ಈಗ, ಇಬ್ಬರೂ ಮಾತನಾಡುತ್ತ  ತಮ್ಮ

ಇತರ ಸ್ನೇಹಿತರಿಗಾಗಿ ಕಾಯತೊಡಗಿದರು.

ಮೂರನೇ ಗೆಳೆಯ ಮನೀಶ್ ಕೂಡ ಅರ್ಧ ಗಂಟೆಯಲ್ಲಿ ಬಂದ. ಅವನೊಂದಿಗೆ ಮಾತನಾಡಿದಾಗ, ಮನೀಷ್ ಈಗ ಉದ್ಯಮಿ ಎಂಬುದು ಇಬ್ಬರಿಗೂ ತಿಳಿಯಿತು.

ಪ್ರವೀಣ್ ಯಾವಾಗ ಬರುತ್ತಾನೆ ಎಂದು ಆ ಮೂವರು ಗೆಳೆಯರು ಮತ್ತೆ ಮತ್ತೆ ಬಾಗಿಲ ಕಡೆ ನೋಡುತ್ತಿದ್ದರು.

ಆಗ, ಶ್ರೀ ಕಾಳು ಅವರ ಬಳಿಗೆ ಬಂದು, "ಪ್ರವೀಣ್ ಸರ್ ಅವರಿಂದ ಒಂದು ಸಂದೇಶ ಬಂದಿದೆ, ಅವರು ತಿಂಡಿಗಳೊಂದಿಗೆ ತಮ್ಮ ಸಂತೋಷಕೂಟ  ಪ್ರಾರಂಭಿಸಲು ನಿಮ್ಮೆಲ್ಲರನ್ನು ಕೇಳಿಕೊಂಡಿದ್ದಾರೆ.  

ಸ್ವಲ್ಪೇ ಸಮಯದಲ್ಲಿ ಅವರು ನಿಮ್ಮೊಂದಿಗೆ ಸೇರಿಕೊಳ್ಳುತ್ತಾರೆ" ಎಂದು ಹೇಳಿದರು.

ಮೂವರೂ ನಲವತ್ತು ವರ್ಷಗಳ ನಂತರ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಗಂಟೆಗಟ್ಟಲೆ ನಗುತ್ತಾ ತಮಾಷೆ ಮಾಡುತ್ತಾ ಖುಷಿಪಡುತ್ತಾ ಇದ್ದರು. ತುಂಬ ಸಮಯವಾದರೂ ಪ್ರವೀಣ್ ರವರು ಬರಲಿಲ್ಲ.

ಶ್ರೀ ಕಾಳು, "ಪ್ರವೀಣ್ ಸರ್ ಇನ್ನೊಂದು ಸಂದೇಶ ಕಳುಹಿಸಿದ್ದಾರೆ. "ನೀವು ಇಲ್ಲಿಯ ಮೂರೂ ಮೆನುಗಳಲ್ಲಿರುವ ನಿಮ್ಮ ಮೆಚ್ಚಿನ ತಿನಿಸುಗಳನ್ನು ಆರ್ಡರ್ ಮಾಡಿ,  ಊಟ  ಪ್ರಾರಂಭಿಸಲು ವಿನಂತಿಸಿದ್ದಾರೆ."

ಫುಡ್ ಆರ್ಡರ್ ಮಾಡಿದ್ರು. ತಿಂದು ಮುಗಿಸಿದರೂ ಪ್ರವೀಣ್ ಬರಲಿಲ್ಲ. ಮೂವರು ಬಿಲ್ ಕೇಳಿದಾಗ ಆನ್‌ಲೈನ್‌ನಲ್ಲಿ ಬಿಲ್ ಪಾವತಿ ಮಾಡಲಾಗಿದೆ ಎಂದು ಶ್ರೀ ಕಾಳುರವರು  ತಿಳಿಸಿದರು. ಇವರಿಗೆ ಅತಿ ಆಶ್ಚರ್ಯವಾಗಿತ್ತು.

ರಾತ್ರಿ ಎಂಟು ಗಂಟೆಗೆ ಒಬ್ಬ ಯುವಕ ಕಾರಿನಿಂದ ಇಳಿದು ಭಾರವಾದ ಹೃದಯದಿಂದ  ಆಗಮಿಸಿದರು. ಹೋಟೆಲ್‌ನಿಂದ ಹೊರಡಲು ತಯಾರಾದ ಆ ಮೂವರು ಸ್ನೇಹಿತರನ್ನು ಸಂಪರ್ಕಿಸಿದರು. ಆ ಮೂವರಿಗೂ  ಈ ವ್ಯಕ್ತಿಯಿಂದ ಕಣ್ಣು ತೆಗೆಯಲಾಗಲಿಲ್ಲ.

ಯುವಕ, "ನಾನು ನಿಮ್ಮ  ಸ್ನೇಹಿತನ ಮಗ ರವಿ. ನನ್ನ ತಂದೆಯ ಹೆಸರು ಪ್ರವೀಣ್, ಇಂದಿನ ನಿಮ್ಮ ಗೆಟ್ ಟುಗೆದರ್ ಬಗ್ಗೆ ಅಪ್ಪ ಹೇಳಿದ್ದರು.  

ಅವರು ಈ ದಿನಕ್ಕಾಗಿಯೇ ನಿರೀಕ್ಷೆ ಮಾಡುತ್ತಲೇ ಇದ್ದರು. ಆದರೆ, ನನ್ನ ದುರ್ದೈವ! ತೀವ್ರ ಅನಾರೋಗ್ಯದಿಂದ ಅವರು ಕಳೆದ ತಿಂಗಳು ನಿಧನರಾದರು.

ಇಂದು ನಾನು ಬೇಗ ಬಂದಿದ್ದರೆ ನಿಮಗೆಲ್ಲ ಬೇಸರವಾಗುತ್ತದೆ ಎಂದು ತಡವಾಗಿ ನನಗೆ ಬರಲು ತಿಳಿಸಿದ್ದರು. ‘ನನ್ನ ಗೆಳೆಯರಿಗೆ' ನಾನು ಈ ಲೋಕದಲ್ಲಿಲ್ಲ' ಎಂಬ ವಿಚಾರ ತಿಳಿದರೆ ಅವರು ಖಂಡಿತವಾಗಿಯೂ ನಗುವುದಿಲ್ಲ. 

ಆಗ ಒಬ್ಬರನ್ನೊಬ್ಬರು ಭೇಟಿಯಾದ ಖುಷಿಯನ್ನೇ  ಕಳೆದುಕೊಳ್ಳುತ್ತಾರೆ. ಅದು ನನಗೆ ಇಷ್ಟವಿಲ್ಲ. ಅವರೆಲ್ಲ ಸದಾಕಾಲ ಖುಷಿಯಿಂದ ಇರಬೇಕೆಂಬುದೇ ನನ್ನ ಆಸೆ" ಎಂದು ಅಪ್ಪ ಹೇಳಿದ್ದರು.

ಅದಕ್ಕೇ ನನಗೆ ಇಲ್ಲಿಗೆ ತಡವಾಗಿ ಹೋಗುವಂತೆ ಆದೇಶಿಸಿದ್ದರು. "ತನ್ನ ಪರವಾಗಿ ಎಲ್ಲರನ್ನೂ ಪ್ರೀತಿ, ಗೌರವದಿಂದ ತಬ್ಬಿಕೋ" ಎಂದೂ ನನಗೆ ಸೂಚನೆ  ನೀಡಿದ್ದರು". ಹೀಗೆ  ಹೇಳುತ್ತ, ರವಿ  ಹರ್ಷಾಶ್ರುಗಳೊಂದಿಗೆ ತನ್ನೆರಡೂ ಬಾಹುಗಳನ್ನು  ಅಗಲಿಸಿ ಅವರನ್ನು ಆಲಂಗಿಸಲು ಮುಂದಾದನು.

    ಸುತ್ತಮುತ್ತಲಿನವರೆಲ್ಲರೂ ಈ ದೃಶ್ಯವನ್ನು ಕುತೂಹಲದಿಂದ ನೋಡುತ್ತಿದ್ದರು.  ಅವರಿಗೆ  'ಈ ಯುವಕನನ್ನು ಎಲ್ಲೋ ನೋಡಿದ್ದೇವೆ' ಎಂದು  ಅನಿಸತೊಡಗಿತ್ತು.     

ಆಗ ರವಿಯವರೇ ಅವರ ಸಂಶಯ ನಿವಾರಣೆಗೆ  ಮುಂದಾದರು. ‘ನನ್ನ ತಂದೆ ಶಿಕ್ಷಕರಾಗಿದ್ದರು. ಕಲೆಕ್ಟರ್ ಆಗಲು ಅಗತ್ಯವಿರುವ ಒಳ್ಳೆಯ ಶಿಕ್ಷಣವನ್ನು ನನಗೆ ನೀಡಿದರು.  ಇಂದು ನಾನು ಈ ನಗರದ ಡಿ.ಸಿ. ಆಗಿದ್ದೇನೆ’ ಎಂದು  ಹೇಳಿದರು.

ಎಲ್ಲರೂ ಇನ್ನೂ ಆಶ್ಚರ್ಯಚಕಿತರಾದರು, "ಇನ್ನು ಮುಂದೆ, ಇದು ನಲವತ್ತು ವರ್ಷಗಳಿಗೊಮ್ಮೆ ಆಗಬಾರದು.  ಬದಲಿಗೆ, ನಾವು ಪ್ರತಿ ತಿಂಗಳು ಇದೇ  ಹೋಟೆಲ್ ನಲ್ಲಿ ಭೇಟಿಯಾಗೋಣ. 

ಆಗೆಲ್ಲ ಪ್ರತಿ ಬಾರಿಯೂ ನನ್ನ ಕಡೆಯಿಂದ  ಹಿರಿಯರೂ,    ನನ್ನ ಅಪ್ಪನ ಆತ್ಮೀಯ  ಸ್ನೇಹಿತರೂ ಆಗಿದ್ದ ತಮಗೆಲ್ಲರಿಗೂ ಪ್ರೀತಿ, ಅಭಿಮಾನಪೂರ್ವಕ  ಒಂದು ಗ್ರಾö್ಯಂಡ್ ಪಾರ್ಟಿ ಇರುತ್ತದೆ. ದಯವಿಟ್ಟು ನೀವೆಲ್ಲರೂ ಇದರಲ್ಲಿ  ತಪ್ಪದೇ ಭಾಗಿಯಾಗಬೇಕು" ಎಂದು ಕೇಳಿಕೊಂಡರು.

*ಸ್ನೇಹಿತರೇ, ನಿಮ್ಮ ಪ್ರೀತಿಪಾತ್ರರನ್ನು ಆಗಾಗ ಭೇಟಿಯಾಗುತ್ತಿರಿ. ಯಾರನ್ನಾದರೂ ಭೇಟಿಯಾಗಲು ಯಾವುದೇ ಪ್ರತ್ಯೇಕ ಅವಕಾಶಕ್ಕಾಗಿ ಕಾಯಬೇಡಿ. ಯಾವಾಗ ಬೇರ್ಪಡುವ ಸಮಯ ಬರುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ  

ಬದುಕಿನ ಪಯಣ ರೈಲು ಪ್ರಯಾಣದಂತೆ. ಯಾರದ್ದೋ ಸ್ಟೇಷನ್ ಬಂದಾಗ, ಆ ಕ್ಷಣವೇ ಅವರು ಡ್ರಾಪ್ ಆಗುತ್ತಾರೆ. ಕೆಲವು ಮಸುಕಾದ ನೆನಪುಗಳು ಮಾತ್ರ ಉಳಿಯುತ್ತವೆ!

ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಇತರ ಸಂದರ್ಭಗಳಲ್ಲಿ ಮತ್ತು ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ನಿಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಿ. 

ನಮ್ಮ ಸಂಬಂಧಗಳೆಂಬ ಮರವು ಪ್ರೀತಿಯೆಂಬ ನೀರಿನಿಂದ ಪೋಷಿಸಲ್ಪಡಲಿ.  ಯಾರನ್ನಾದರೂ  ಭೇಟಿಯಾಗಲು ನಾವು ಯಾವುದೇ ಕಾರಣಕ್ಕಾಗಿ ಅಥವಾ ಅವಕಾಶಕ್ಕಾಗಿ ಕಾಯಬೇಕಾಗಿಲ್ಲ.

ಆತ್ಮೀಯ ಸ್ನೇಹಿತರೇ, ನೀವು ಈ ಕಥೆಯನ್ನು ಓದಿದಾಗ, ಯಾರಾದರೂ ನಿಮ್ಮ ಸ್ನೇಹಿತರ ನೆನಪು ಆದರೆ, ತಕ್ಷಣ ಅವರೊಂದಿಗೆ ಎರಡು ನಿಮಿಷ ಮಾತನಾಡಿ. ಇಂದು ನಮ್ಮಲ್ಲಿ ಅದಕ್ಕಾಗಿ ಅವಶ್ಯವಿರುವ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಿವೆ.

ನಾವು ನಮ್ಮ ಸುತ್ತಮುತ್ತಲಿನ ಜನರಿಗಾಗಿ,  ನಮ್ಮ ಆಪ್ತರಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲೇಬೇಕು ಮತ್ತು ಜೀವನದ ಸೌಂದರ್ಯವನ್ನು ಆದಷ್ಟು  ಆನಂದದಿಂದ ಆಸ್ವಾದಿಸಬೇಕು.

Saturday, January 27, 2024

ವೃದ್ಧರಾಗಬೇಡಿ, "ಹಿರಿಯರಾಗಿರಿ'

 ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ ಮತ್ತು ಜೀವನವನ್ನು ಪೂರ್ತಿಯಾಗಿ ಆನಂದಿಸಿ...

ಒಬ್ಬ ವ್ಯಕ್ತಿಯು ವಯಸ್ಸಾದಾಗ ... 

'ವೃದ್ಧ' ಅಲ್ಲ "ಹಿರಿಯ" ನಾಗಬೇಕು.

"ವೃದ್ಧಾಪ್ಯ"...ಇತರ ಜನರನ್ನು ಆಧಾರಕ್ಕಾಗಿ ಹುಡುಕುತ್ತದೆ.

"ಹಿರಿತನ"... ಜನರಿಗೆ ಆಧಾರ ನೀಡುತ್ತದೆ.          

"ವೃದ್ಧಾಪ್ಯ"... ಮರೆ ಮಾಚಲು ಬಯಸುತ್ತದೆ.

"ಹಿರಿತನ"... ಬೆಳಕಿಗೆ ತರಲು ಬಯಸುತ್ತದೆ.

"ವೃದ್ಧಾಪ್ಯ"... ಅಹಂಕಾರಿಯಾಗಿರುತ್ತದೆ.

"ಹಿರಿತನ"...ಅನುಭವಿ, ವಿನಯಶೀಲ ಮತ್ತು  ಸಂಯಮಶೀಲವಾಗಿರುತ್ತದೆ.

"ವೃದ್ಧಾಪ್ಯ"...ಹೊಸ ತಲೆಮಾರಿನ ವಿಚಾರಗಳಲ್ಲಿ ಕೈ ಹಾಕಿ ತಿದ್ದಲು ಹೊರಡುತ್ತದೆ.

"ಹಿರಿತನ"...ಯುವ ಪೀಳಿಗೆಗೆ ಬದಲುತ್ತಿರುವ ಕಾಲಕ್ಕೆ ತಕ್ಕಂತೆ ಬದುಕಲು ಅನುವು ಮಾಡಿ ಕೊಡುತ್ತದೆ.

"ವೃದ್ಧಾಪ್ಯ".. 

ನಮ್ಮ ಕಾಲದಲ್ಲಿ ಹೀಗಿತ್ತು ಎಂದು ಚಿಟ್ಟು ಹಿಡಿಸುತ್ತದೆ.

 "ಹಿರಿತನ"...ಬದಲಾಗುತ್ತಿರುವ ಕಾಲದೊಡನೆ ತನ್ನ ನಂಟು ಬೆಳೆಸುತ್ತದೆ ಮತ್ತು ಅದನ್ನು ತನ್ನದಾಗಿಸಿಕೊಳ್ಳುತ್ತದೆ.

"ವೃದ್ಧಾಪ್ಯ"...ಹೊಸ ಪೀಳಿಗೆಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುತ್ತದೆ.

"ಹಿರಿತನ"...ಯುವ ಪೀಳಿಗೆಯ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ.

 "ವೃದ್ಧಾಪ್ಯ"...ಜೀವನದ ಸಂಜೆಯಲ್ಲಿ ಅದರ ಅಂತ್ಯವನ್ನು ಹುಡುಕುತ್ತದೆ.

"ಹಿರಿತನ"...ಜೀವನದ ಸಂಜೆಯಲ್ಲೂ ಹೊಸ ಉದಯವನ್ನು ಕಾಯುತ್ತದೆ ಹಾಗೂ ಯುವಕರ ಸ್ಫೂರ್ತಿಯಿಂದ ಪ್ರೇರಿತವಾಗುತ್ತದೆ.

"ಹಿರಿತನ" ಮತ್ತು "ವೃದ್ಧಾಪ್ಯ" ಗಳ ನಡುವಿನ ವ್ಯತ್ಯಾಸವನ್ನು ಗಂಭೀರತಾಪೂರ್ವಕವಾಗಿ ಅರ್ಥ ಮಾಡಿಕೊಂಡು ಮೂಲಕ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಮರ್ಥರಾಗಿ.

ವಯಸ್ಸು ಎಷ್ಟೇ ಇರಲಿ.... ಸದಾ ಹೂವಿನಂತೆ ಅರಳಿ...

ಉಲ್ಲಾಸ, ಉತ್ಸಾಹಗಳಿಂದ ಬದುಕಿರಿ... ಮತ್ತು ಇತರರ ಜೀವನಕ್ಕೆ ಸ್ಫೂರ್ತಿಯಾಗಿರಿ.

Wednesday, January 24, 2024

ಮನುಷ್ಯ ಸಂಬಂಧಗಳು ಸಂಕೀರ್ಣವಾಗುತ್ತಿವೆ...!


ನಂಬಿಕೆ ಮೊಳೆಯುವ ಬದಲು ದ್ವೇಷ ಚಿಗುರೊಡೆಯುತ್ತಿದೆ. ಸಂಬಂಧಗಳು ವಿಶ್ವಾಸ ಬಂಧದಲ್ಲಿ ವಿಸ್ತರಿಸುವ ಬದಲು ಕ್ಷೀಣಿಸುತ್ತಿರುವುದಕ್ಕೆ ಮನಸ್ಸಿನೊಳಗೆ ಬಿತ್ತುತ್ತಿರುವ ಅಪನಂಬಿಕೆ ಬಿತ್ತನೆಗಳೇ ಮೂಲ ಕಾರಣ. ಜೊಳ್ಳು ಬಿತ್ತಿ ಒಳ್ಳೆಯ ಫಲ ಹೇಗೆ ಸಿಗುವುದಿಲ್ಲವೋ, ಹಾಗೇ ನಮ್ಮ ಸಂಬಂಧಗಳಿಗೆ ತೋರಿಕೆಯ ಲೇಪ ಹಾಕಿ ಬಿಗಿಯುವುದರಿಂದ ಸಡಿಲವಾಗುತ್ತಿದೆ. ಹಿಂದೆಲ್ಲ ಕೂಡುಕುಟುಂಬಗಳಿದ್ದವು; ನೂರಾರು ಜನ ಒಂದುಗೂಡಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಇಂಥ ಅವಿಭಕ್ತ ಕುಟುಂಬಗಳು ಸಡಿಲಗೊಂಡಿದ್ದು ಸಹ ಮನೆಯ ಸದಸ್ಯರ ಅಪನಂಬಿಕೆ-ಅಸೂಯಾಪರ ಮನಃಸ್ಥಿತಿಗಳಿಂದ.

ಅವಿಭಕ್ತ ಕುಟುಂಬಗಳು ಕ್ಷೀಣಿಸಿದ ನಂತರ ಮುಂದುವರೆದ ವಿಭಕ್ತ ಕುಟುಂಬಗಳಲ್ಲೂ ಹತ್ತಾರು ಮಂದಿ ಬದುಕುತ್ತಿದ್ದರು. ಈಗಿನ ೨೧ನೇ ಶತಮಾನದ ಹೊತ್ತಿಗೆ ಮೂರ್ನಾಲ್ಕು ಮಂದಿಗೆ ಕುಟುಂಬಗಳು ಸೀಮಿತಗೊಂಡಿವೆ. ಹೀಗಿದ್ದರೂ ಮನೆಯಲ್ಲಿ ಅಪನಂಬಿಕೆ-ಅಸಮಾಧಾನಗಳು ಇಮ್ಮಡಿಸುತ್ತಲೇ ಇವೆ. ಇದರಿಂದ ಸುಮಧುರ ಬಾಂಧವ್ಯಗಳು ಹಾಳಾಗುತ್ತಿವೆ. ಸಂಸಾರವೆಂಬ ಸುಂದರ ವ್ಯವಸ್ಥೆ ಕುರೂಪವಾಗುತ್ತಿವೆ. ದಿನಕಳೆದಂತೆ ಸಾರ ಕಳೆದುಕೊಳ್ಳುತ್ತಿರುವ ಸಂಸಾರವೆಂಬ ಸಾಗರ ಬತ್ತಿದರೆ ಮನುಷ್ಯಕುಲ ನಾಶವಾದಂತೆ ಎಂಬ ಪ್ರಜ್ಞೆ ಯಾರಲ್ಲೂ ಕಾಣದಿರುವುದು ಆತಂಕಕಾರಿಯಾಗಿದೆ.

ಹಿಂದೆಲ್ಲಾ ಮನುಷ್ಯಸಂಬಂಧಗಳ ಮಧ್ಯೆ ಗೋಡೆಗಳೆದ್ದು ಮನೆ-ಮನಗಳನ್ನು ಪ್ರತ್ಯೇಕಿಸುತ್ತಿದ್ದವು. ಈಗ ಮನುಷ್ಯರ ವಾಸ ಊರು-ಕೇರಿಗಳನ್ನು ದಾಟಿ ದೇಶಗಳ ಗಡಿಯಾಚೆ ವಿಸ್ತರಿಸುತ್ತಿರುವುದರಿಂದ ಹತ್ತಾರು ತಲೆಮಾರುಗಳ ವಂಶವೃಕ್ಷಗಳು ಸಂಬಂಧದ ಬೆಸುಗೆ ಕಾಣದೆ ಒಣಗುತ್ತಿವೆ. ತನ್ನ ಮಕ್ಕಳು, ಮೊಮ್ಮಕ್ಕಳು ಬಾಳಿ ಬದುಕಲೆಂದು ಕಡುಕಷ್ಟ ಕಾಲದಲ್ಲಿ ಹೊಟ್ಟೆಬಟ್ಟೆ ಕಟ್ಟಿ ಕಟ್ಟಿದ ಸೂರುಗಳು ಬಾಳುವ ಕುಡಿಗಳಿಲ್ಲದೆ ಸೊರಗಿ ಹೋಗುತ್ತಿವೆ. ಮನೆಗೆ ವಾರಸುದಾರರಿಲ್ಲದೆ ತಮ್ಮ ಕಣ್ಣೆದುರೇ ಪಾಳು ಬೀಳುತ್ತಿರುವ ಮನೆಯನ್ನು ನೋಡಲಾಗದೆ, ನೋಡಿದರೂ ಏನೂ ಮಾಡಲಾಗದೆ ವೃದ್ದಾಶ್ರಮ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನಾಥಾಶ್ರಮಗಳಿಗಿಂತ ವೃದ್ಧಾಶ್ರಮಗಳು ಹೆಚ್ಚಾಗಿವೆ ಅನ್ನುವ ಮಾತು ಕುಹಕ ಮಾತ್ರವಲ್ಲ, ಈ ಸಮಾಜದ ದುರಂತ ಪರಿಸ್ಥಿತಿಯ ಪ್ರತಿಬಿಂಬವಾಗಿದೆ.

ಸಂಬಂಧಗಳು ಹಾಳಾಗುತ್ತಿರುವುದರ ಹಿಂದೆ ಮನುಷ್ಯರ ಸಲ್ಲದ ದುರಾಸೆಗಳು ಮೂಲ ಕಾರಣವಾಗುತ್ತಿವೆ. ಹಣ ಮತ್ತು ಗುಣದ ನಡುವಿನ ವ್ಯತ್ಯಾಸ ಮತ್ತು ಅದರ ಫಲದ ಅರಿವಿಲ್ಲದ ಜನ, ಸಂಬಂಧಗಳನ್ನು ಬೆಲೆ ಕಟ್ಟಿ ತೂಗಿನೋಡುವ ಅಸಹ್ಯಕರ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ನಿತ್ಯ ಅನಾರೋಗ್ಯಕರ ಪೈಪೋಟಿಯ ವಾತಾವರಣ ಸೃಷ್ಟಿಯಾಗಿದೆ. ಇಂಥ ಕೃತಕ ಜಗತ್ತಿನಲ್ಲಿ ತಮ್ಮ ಮಾನ-ಪ್ರಾಣಗಳನ್ನು ಹಣದ ನೋಟಿನಲ್ಲಿ ಸಿಂಗರಿಸುವ ಪ್ರಯತ್ನ ಅವ್ಯಾಹತವಾಗಿ ಸಾಗುತ್ತಿದೆ. ತಮ್ಮ ಜೀವನದಲ್ಲಿ ಕಳೆದುಕೊಳ್ಳುತ್ತಿರುವುದೇನು, ತಮ್ಮ ಬದುಕಿಗೆ ಅಮೂಲ್ಯವಾದುದೇನು, ಎಂಬ ಸತ್ಯ ತಿಳಿಯದೆ ಪ್ರತಿ ಜೀವಕ್ಕೂ ಅಗತ್ಯವಾದ ಸುಖ-ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆ ಒಳಗೂ-ಹೊರಗೂ, ಮನದೊಳಗೂ ಮನದ ಹೊರಗೂ ನೆಮ್ಮದಿ ಕಾಣದೆ ಚಡಪಡಿಸುತ್ತಿರುವ ಮನುಷ್ಯರ ನಡವಳಿಕೆ ವಿನಾಶದ ಮುನ್ಸೂಚನೆ ಅನಿಸುತ್ತೆ. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಬರುತ್ತೆ ಅನ್ನೋ ನಾಣ್ನುಡಿಯಂತೆ ಮನುಷ್ಯ ವಿಪರೀತವಾಗಿ ಯೋಚಿಸುತ್ತಾ ವಿಚಿತ್ರವಾಗಿ ಆಡುತ್ತಿದ್ದಾನೆನಿಸುತ್ತೆ.

ಮನುಷ್ಯರ ಒಟ್ಟಾರೆ ಗುಣಗಳು ಜೀವನ್ಮುಖಿಯಾಗಿ ಹೊಮ್ಮುತ್ತಿಲ್ಲ, ಮೃತ್ಯುಮುಖಿಯಾಗಿ ಕಾಣುತ್ತಿವೆ. ಮನುಷ್ಯ ತನ್ನ ತಾನು ಸುಧಾರಿಸಿಕೊಳ್ಳದೆ, ಸಮಾಜವನ್ನು, ಆಮೂಲಕ ಈ ದೇಶವನ್ನು ಸುಧಾರಿಸಲಾರ. ಒಂದು ದೇಶ ಚೆನ್ನಾಗಿರಬೇಕಾದರೆ, ಆ ದೇಶದ ಜನರೂ ಚೆನ್ನಾಗಿರಬೇಕು. ಹಾಗೇ, ಒಂದು ದೇಹ ಉತ್ತಮವಾಗಿರಬೇಕಾದರೆ ಅದರೊಳಗಿನ ಮನಸ್ಸೂ ಉತ್ತಮವಾಗಿರಬೇಕು. ದೇಶದೊಳಗಿನ ಜನ ಒಳ್ಳೆ ಆಲೋಚನೆ ಮಾಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಜನ ಕೆಟ್ಟ ಆಲೋಚನೆಯಲ್ಲಿ ಮುಳುಗಿದರೆ, ದೇಶ ಸಹ ಕೆಟ್ಟದರಲ್ಲಿ ಮುಳುಗಿ ಹೋಗುತ್ತದೆ. ಹಾಗೇ ನಮ್ಮ ದೇಹ ಸಹ ಒಳ್ಳೇ ಚಿಂತನೆ ಮಾಡದಿದ್ದರೆ, ಕೆಟ್ಟು ಹೋಗುತ್ತದೆ. ನಾವು, ನಮ್ಮ ಕುಟುಂಬ ಚೆನ್ನಾಗಿದ್ದರೆ, ಈ ದೇಶ ಚೆನ್ನಾಗಿರುತ್ತದೆ ಎಂಬ ಸತ್ಯ ಅರ್ಥವಾದಾಗ ‘ಸಚ್ಚಿದಾನಂದ’ದ ದರ್ಶನವಾಗುತ್ತದೆ.

Sunday, January 21, 2024

ಮನೆಯಲ್ಲಿ ಶ್ರೀರಾಮನಿಗೆ ಈ ರೀತಿ ಪೂಜೆ ಮಾಡಿ


ಜನವರಿ ೨೨ ರಂದು ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಅಯೋಧ್ಯೆಗೆ ಹೋಗಲು ಸಾಧ್ಯವಾಗದವರು ಮನೆಯಲ್ಲಿ ಶ್ರೀರಾಮನಿಗೆ ಪೂಜೆ ಮಾಡಿ ಆಶರ‍್ವಾದ ಪಡೆಯಬಹುದು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಹುನಿರೀಕ್ಷಿತ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮೂಲಕ ಕೋಟಿ ಕೋಟಿ ಭಾರತೀಯರ ಕನಸು ನನಸಾಗಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿವೆ. ರಾಮನ ನಾಮಸ್ಮರಣೆಯಿಂದ ಇಡೀ ದೇಶ ಗಮನ ಸೆಳೆಯುತ್ತಿದೆ. ನಾಳೆ (ಜನವರಿ ೨೨, ಸೋಮವಾರ) ಇತಿಹಾಸದಲ್ಲಿ ಸುರ‍್ಣಾಕ್ಷರಗಳಲ್ಲಿ ಬರೆಯಲ್ಪಡುವ ದಿನ. ಈ ವಿಶೇಷ ದಿನದಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ರಾಮಲಲ್ಲಾ ಪ್ರತಿಮೆಯ ಪ್ರಾಣ ಪ್ರತಿಷ್ಠೆ ನಡೆಯಲಿದೆ.

ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಬಹುತೇಕರಿಗೆ ಅದು ಸಾಧ್ಯವಾಗುತ್ತಿಲ್ಲ. ಆದರೆ ನೀವು ಅಯೋಧ್ಯೆಗೆ ಹೋಗದೆ ರಾಮನ ಆಶರ‍್ವಾದವನ್ನು ಪಡೆಯಬಹುದು. ಮನೆಯಲ್ಲಿಯೇ ರಾಮನ ಮರ‍್ತಿಯನ್ನು ಪೂಜಿಸಿದರೆ ಭಗವಂತನ ಕೃಪೆಗೆ ಪಾತ್ರರಾಗಬಹುದು. ಶ್ರೀರಾಮನ ಪೂಜಾ ವಿಧಾನವನ್ನು ತಿಳಿಯಿರಿ.

ಮನೆಯಲ್ಲಿ ಶ್ರೀರಾಮನ ಪೂಜೆ ವಿಧಾನ

ಜನವರಿ ೨೨ ರಂದು ಬೇಗ ಎದ್ದು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಪೀಠವನ್ನು ಇಟ್ಟು ಅದರ ಮೇಲೆ ಹಳದಿ ಬಟ್ಟೆಯನ್ನು ಹಾಕಿ. ನಂತರ ಅದರ ಮೇಲೆ ಶ್ರೀರಾಮನ ವಿಗ್ರಹವನ್ನು ಇಡಿ. ದೇವರಿಗೆ ಪಂಚಾಮೃತ ಅಭಿಷೇಕ ಮಾಡಬೇಕು. ಪೂಜೆ ಮಾಡುವಾಗ ಪರ‍್ವಾಭಿಮುಖವಾಗಿ ಕುಳಿತುಕೊಳ್ಳಲು ಮರೆಯಬೇಡಿ.

ಧೂಪ ಮತ್ತು ದೀಪವನ್ನು ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗಲು ಹೂವುಗಳನ್ನು ರ‍್ಪಿಸಿ, ನೈವೇದ್ಯ ಸಲ್ಲಿಸಬೇಕು. ಶ್ರೀರಾಮನ ಜೊತೆಗೆ ಆತನ ಪರಮ ಭಕ್ತನಾದ ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಒಳ್ಳೆಯದು. ಈ ಮಂಗಳಕರ ದಿನದಂದು ರಾಮ ಚರಿತ ಮಾನಸ್, ಶ್ರೀ ರಾಮ ರಕ್ಷಾ ಸ್ತೋತ್ರ ಮತ್ತು ಮಂತ್ರ ಪಠಣಗಳನ್ನು ಮಾಡಬೇಕು. ಅಯೋಧ್ಯೆಗೆ ಹೋಗದಿದ್ದರೂ ಮನೆಯಲ್ಲಿ ರಾಮನ ಮರ‍್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಅಲ್ಲಿಗೆ ಹೋದಷ್ಟೇ ಪುಣ್ಯ ಸಿಗುತ್ತದೆ.

ನಾಳೆ (ಜನವರಿ ೨೨, ಸೋಮವಾರ) ಅಯೋಧ್ಯೆಯಲ್ಲಿ ನಡೆಯಲಿರುವ ಎಲ್ಲಾ ಪೂಜಾ ಕರ‍್ಯಕ್ರಮಗಳನ್ನು ದೂರರ‍್ಶನ ಚಾನೆಲ್‌ನಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ರವರೆಗೆ ನೇರ ಪ್ರಸಾರ ಮಾಡಲಾಗುತ್ತದೆ. ವಿಧಿ ವಿಧಾನಗಳ ಪೂಜಾ ಕರ‍್ಯಕ್ರಮಗಳು ನಡೆಯಲಿವೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಈಗಾಗಲೇ ವಿಧಿ ವಿಧಾನಗಳು ಆರಂಭವಾಗಿವೆ. ರ‍್ಭ ಗುಡಿಯಲ್ಲಿ ಬಾಲ ರಾಮ ವಿಗ್ರಹವನ್ನು ಇರಿಸಲಾಗಿದ್ದು, ಜನವರಿ ೨೦ ರಂದು ಸರಯು ಪವಿತ್ರ ನದಿ ನೀರಿನಿಂದ ದೇವಾಲಯದ ರ‍್ಭಗುಡಿಯನ್ನು ಸ್ವಚ್ಛಗೊಳಿಸಲಾಗಿದೆ. ಇಂದು (ಜನವರಿ ೨೧, ಭಾನುವಾರ) ಬಾಲ ರಾಮನಿಗೆ ೧೨೫ ಕಲಶಗಳನ್ನಿಟ್ಟು ವಿವಿಧ ಪುಣ್ಯಕ್ಷೇತ್ರಗಳಿಂದ ತಂದ ಪುಣ್ಯಜಲದಿಂದ ಸ್ನಾನ ಮಾಡಲಾಗುತ್ತಿದೆ. ಜನವರಿ ೨೨ರಂದು ಮಧ್ಯಾಹ್ನ ೧೨.೩೦ಕ್ಕೆ ರಾಮಲಲ್ಲಾ ಪ್ರಾಣ ಪ್ರತಿಮೆ ಉದ್ಘಾಟನೆಯಾಗಲಿದೆ.

ಜನವರಿ ೨೨ರ ಮತ್ತೊಂದು ವಿಶೇಷ ದಿನ

ಅಯೋಧ್ಯೆಯಲ್ಲಿ ರಾಮಲಲ್ಲಾ ಮರ‍್ತಿ ಪ್ರತಿಷ್ಠಾಪನಾ ದಿನಕ್ಕೆ ಮತ್ತೊಂದು ಮಹತ್ವವಿದೆ. ಅಂದು ಕರ‍್ಮ ದ್ವಾದಶಿ ಇದೆ. ಕ್ಷೀರಸಾಗರದ ಮಂಥನದ ಸಮಯದಲ್ಲಿ, ಭಗವಾನ್ ವಿಷ್ಣುವು ಕರ‍್ಮಾವತಾರ ರೂಪವನ್ನು ಪಡೆಯುತ್ತಾರೆ. ಆದ್ದರಿಂದ ಕರ‍್ಮ ದ್ವಾದಶಿಯ ದಿನವನ್ನು ಭಗವಾನ್ ವಿಷ್ಣುವಿಗೆ ಸರ‍್ಪಿಸಲಾಗಿದೆ. ವಿಷ್ಣುಸಹಸ್ರ ನಾಮಸ್ಮರಣೆ ಮತ್ತು ಪೂಜೆಯನ್ನು ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.