ವಿಶ್ವ ಭಾರತಿ : ಯುವ ಜಾಗೃತಿಯ ಮಾಸಿಕ
ವಿಶ್ವ ಭಾರತಿ ಪಬ್ಲಿಕೇಷನ್ಸ್ ಸಂಸ್ಥೆಯಿಂದ ವಿಶ್ವ ಭಾರತಿ ಎಂಬ ಪತ್ರಿಕೆಯನ್ನು ಹೊರ ತರುತ್ತಿದ್ದು ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆ, ಮಾಡಿರುವ ಸಾಧನೆಯ ಅನಾವರಣ ಮಾಡಲಿದ್ದೇವೆ. ಕೇಂದ್ರಾಡಳಿತದ ಸುದ್ಧಿಯನ್ನೇ ಪ್ರಮುಖವಾಗಿಸಿ, ರಾಷ್ಟ್ರ ಸುದ್ದಿಯನ್ನು ಪ್ರಸಾರ ಮಾಡುವ ಏಕೈಕ ಕನ್ನಡ ಮಾಸ ಪತ್ರಿಕೆ ಇದಾಗಿದೆ. ಇದೇ ಮೊಟ್ಟ ಮೊದಲನೇ ಬಾರಿಗೆ ರಾಷ್ಟ್ರೀಯ ಸುದ್ಧಿಗಳ ವಿಚಾರ ಲಹರಿಯಾಗಿ ಹೊರಹೊಮ್ಮಲಿದೆ. ರಾಷ್ಟ್ರಾದ್ಯಂತ ಪ್ರಸರ ಹೊಂದಿರುವ ಪತ್ರಿಕೆಯಾಗಿದ್ದು ರಾಜ್ಯ ಸರ್ಕಾರದಿಂದ ಮಾನ್ಯತೆ ಪದೆದಿದೆ.
ವಿಶ್ವ ಭಾರತಿ ಪಬ್ಲಿಕೇಷನ್ಸ್ ಸಂಸ್ಥೆಯವರ ನಿರಂತರ ಪರಿಶ್ರಮದಿಂದಾಗಿ ಆಗಸ್ಟ್ ೧೫, ೨೦೧೬ರಂದು ಪತ್ರಿಕೆ ಹೊರ ಬರುತ್ತಿದೆ. ವಿಶ್ವಭಾರತಿಯ ಪ್ರಧಾನ ಸಂಪಾದಕರಾಗಿ ಶ್ರೀಯುತ ಎ. ವಿಜಯಕುಮಾರ್ ರವರು ಕಾರ್ಯ ನಿರ್ವಹಿಸುತ್ತಿದ್ದು, ಪತ್ರಿಕೆಯ ವ್ಯವಸ್ತಾಪಕ ಸಂಪಾದಕರಾಗಿ ಸನ್ಮಾನ್ಯ ಗಗನ್ ಕುಮಾರ್ ಎ.ವಿ. ಯವರು ತೊಡಗಿದ್ದಾರೆ. ಇನ್ನು ಪತ್ರಿಕೆಯಲ್ಲಿ ಸಾಕಷ್ಟು ಹಿರಿಯ ಪತ್ರಕರ್ತರಿದ್ದು ಪತ್ರಿಕೆ ಯಶಸ್ವಿಯಾಗಿ ಪ್ರಕಟಗೊಳ್ಳಲಿದೆ.
No comments:
Post a Comment