Monday, September 26, 2022

Aishwarya Sindhogi

ಐಶ್ವರ್ಯ ಸಿಂಧೋಗಿ


ಐಶ್ವರ್ಯ ಸಿಂಧೋಗಿ ಅಂದ್ರೆ ಈ ಹೆಸರು ಕನ್ನಡ ಇಂಡಸ್ಟ್ರೀಗೆ ಮಾತ್ರ ಗೊತ್ತಿದೆ. ಆದರೆ ಇದೇ ನಟಿಯ ಪರಿಚಯ ಪುಟ್ಟ ಪರದೆಯಲ್ಲಿ ಮಾಯಾಂಗಿಣಿ, ತನಿಷಾ ಹೆಸರಿನ ಪಾತ್ರಗಳ ಮೂಲಕವೇ ಚಿರಪರಿಚಿತವಾಗಿದೆ.

ನಾಗಿಣಿ-೨ ಸೀರಿಯಲ್ ಮಾಯಾಂಗಿಣಿ ಮನದ ಮಾತು

ಐಶ್ವರ್ಯ ಸಿಂಧೋಗಿ ಅಂದ್ರೆ ಈ ಹೆಸರು ಕನ್ನಡ ಇಂಡಸ್ಟ್ರಿಗೆ ಮಾತ್ರ ಗೊತ್ತಿದೆ. ಆದರೆ ಇದೇ ನಟಿಯ ಪರಿಚಯ ಪುಟ್ಟ ಪರದೆಯಲ್ಲಿ ಮಾಯಾಂಗಿಣಿ, ತನಿಷಾ ಹೆಸರಿನ ಪಾತ್ರಗಳ ಮೂಲಕವೇ ಪರಿಚಿತವಾಗಿದೆ. ನಾಗಿಣಿ-೨ ಸೀರಿಯಲ್? ನಲ್ಲಿರೋ ಮಾಯಾಂಗಿಣಿ ಪಾತ್ರದಿಂದಲೇ ಈ ಯುಟ ನಟಿ ಕಿರುತೆರೆ ಪ್ರೇಕ್ಷಕರನ್ನ ವಿಲನ್?ಗಿರಿ ಮೂಲಕ ರಂಜಿಸುತ್ತಿದ್ದಾರೆ.

ಐಶ್ವರ್ಯ ಸಿಂಧೋಗಿ ಪಾತ್ರಗಳಲ್ಲಿ ಈಗ ಮಂಗಳ ಗೌರಿ ಮದುವೆ ಸೀರಿಯಲ್?ನ ತನಿಷಾ ರೋಲ್? ಮೂಲಕ ಐಶ್ವರ್ಯ ಎಲ್ಲರ ಮನ ಮತ್ತು ಮನೆಯಲ್ಲಿ ಹಂಗಾಮ ಮಾಡುತ್ತಿದೆ. ಯಾಕೆಂದ್ರೆ, ಈ ಒಂದು ಪಾತ್ರ ಸಂಪೂರ್ಣ ಓegಚಿಣive ಪಾತ್ರವೇ ಆಗಿದೆ.

ನಾಗಿಣಿ-೨ ಮೂಲಕವೇ ಬಿಗ್ ಪರದೆಯಿಂದ ಪುಟ್ಟ ಪರದೆಗೆ ಎಂಟ್ರಿ

ನಾಗಿಣಿ-೨ ಸೀರಿಯಲ್ ಐಶ್ವರ್ಯ ಸಿಂಧೋಗಿ ಪುಟ್ಟ ಪರದೆಗೆ ಎಂಟ್ರಿಕೊಡಲು ನೆರವಾದ ಮೊದಲ ಸೀರಿಯಲ್ ಆಗಿದೆ. ಮಾಯಾಂಗಿಣಿ ಅನ್ನೋ ರೋಲ್ ಅನ್ನ ಒಂದು ತಿಂಗಳ ಮಟ್ಟಿಗೆ ಅಭಿನಯಿಸೋಕೆ ಸೀರಿಯಲ್ ತಂಡ ಐಶ್ವರ್ಯ ಅವರಿಗೆ ಆಫರ್ ಕೊಟ್ಟಿತ್ತು.

ನಾಗಿಣಿ-೨ ಸೀರಿಯಲ್? ನ ಈ ಪಾತ್ರಕ್ಕೆ ನೆಗೆಟಿವ್ ಶೇಡ್ ಇತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ. ಹಾಗಿದ್ದರೂ ಜನ ಈ ಪಾತ್ರವನ್ನ ಮೆಚ್ಚಿಕೊಂಡರು.

ಪಾತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬರ್ತಾಯಿದ್ದಂತೆ ಐಶ್ವರ್ಯ ಸಿಂಧೋಗಿ ಪಾತ್ರ ಮುಂದುವರೆಯುತ್ತಲೇ ಹೋಯಿತು. ಈಗಲೂ ಮಾಯಾಂಗಿಣಿ ರೋಲ್ ಜನ ಪ್ರಿಯತೆಗೆ ಗಳಿಸಿಕೊಂಡಿದೆ.

ಮಂಗಳ ಗೌರಿ ಮದುವೆ ಸೀರಿಯಲ್? ನಲ್ಲಿ ಐಶ್ವರ್ಯ ವಿಲನ್

ಈ ಒಂದು ಸೀರಿಯಲ್ ಪಾತ್ರ ನಿರ್ವಹಿಸುತ್ತಿರೋವಾಗ್ಲೇ, ಬಂದದ್ದೇ ಮಂಗಳ ಗೌರವಿ ಮದುವೆ ಸೀರಿಯಲ್. ಈ ಧಾರವಹಿಯಲ್ಲಿ ತನಿಷಾ ಹೆಸರಿನ ಪರಿಪೂರ್ಣ ಖಳನಾಯಕಿಯ ಪಾತ್ರವೇ ಸಿಕ್ಕಿ ಬಿಡ್ತು.

ಇಲ್ಲಿಂದ ನಟಿ ಐಶ್ವರ್ಯ ಸಿಂಧೋಗಿ ಪುಟ್ಟ ಪರದಲ್ಲಿ ತಮ್ಮದೇ ರೀತಿಯಲ್ಲಿ ಹೆಸರು ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ. ಐಶ್ವರ್ಯ ಸಿಂಧೋಗಿ ಅವರ ಈ ಪುಟ್ಟ ಪರದೆಯ ಪಯಣ ಅಚಾನಕ್ಕಾಗಿಯೇ ಶುರು ಆಗಿದೆ. ತಮ್ಮ ಸಿನಿಮಾಗಳಲ್ಲಿಯೇ ಐಶ್ವರ್ಯ ಬ್ಯುಸಿ ಆಗಿದ್ದಾರೆ.

ಕೊರೊನಾ ೨  ನೇ ಲಾಕ್ ಡೌನ್ ಟೈಮ್? ನಲ್ಲಿ ಸೀರಿಯಲ್ ಆಫರ್

ಕೊರೊನಾ ಎರಡನೇ ಲಾಕ್ ಡೌನ್ ಅನಿಸುತ್ತದೆ. ಆ ವೇಳೆಗೇನೆ ನಾಗಿಣಿ-೨ ಸೀರಿಯಲ್ ಆಫರ್ ಬಂದಿದೆ. ಇದರಲ್ಲಿ ಅಭಿನಯಿಸುತ್ತಿರೋವಾಗ್ಲೇ, ಮಂಗಳ ಗೌರಿ ಮದುವೆ ಸೀರಿಯಲ್ ಆಫರ್ ಬಂದಿದೆ. ಎರಡನ್ನೂ ನಿಭಾಯಿಸುತ್ತಲೇ ಐಶ್ವರ್ಯ ಸಾಗುತ್ತಿದ್ದಾರೆ.

ಸೀರಿಯಲ್ ಜೊತೆಗೆ ಐಶ್ವರ್ಯ ಸಿಂಧೋಗಿ ಸಿನಿಮಾ ನಂಟು

ಐಶ್ವರ್ಯ ಸಿಂಧೋಗಿ ಸೀರಿಯಲ್ ಜತೆಗೆ ಸಿನಿಮಾ ನಂಟು ಏನು ಬಿಟ್ಟು ಹೋಗಿಲ್ಲ. ಈಗಾಗಲೇ ಐಶ್ವರ್ಯ ಅಭಿನಯದ ವಾವ್ ಸಿನಿಮಾ ರೆಡಿ ಆಗಿದೆ. ಈ ಸಿನಿಮ ಓಟಿಟಿ ಪ್ಲಾಟ್? ಫಾರಂಗೆ ರೆಡಿ ಆಗಿದೆ. ಈಗಾಗಲೇ ಸೇಲ್ ಕೂಡ ಆಗಿದೆ.

ನರಸಿಂಹ ರಾಜು ಅವರ ಮೊಮ್ಮಗ ಸಮರ್ಥ್ ನಟನೆಯ ಯಾರು ನೀ ಯಾರು ಸಿನಿಮಾದಲ್ಲೂ ಐಶ್ವರ್ಯ ಸಿಂಧೋಗಿ ಅಭಿನಯಿಸಿದ್ದಾರೆ. ಇದು ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.

ಮಮ್ಮಿ ಡೈರೆಕ್ಟರ್ ಲೋಹಿತ್ ಸಿನಿಮಾದಲ್ಲಿ ಐಶ್ವರ್ಯ ಸಿಂಧೋಗಿ

ಈ ಸಿನಿಮಾದ ಹೊರತಾಗಿ ಮಮ್ಮಿ ಸಿನಿಮಾದ ನಿರ್ದೇಶಕ ಲೋಹಿತ್ ನಿರ್ದೇಶನದ ಸೈತಾನ್ ಸಿನಿಮಾದಲ್ಲೂ ಐಶ್ವರ್ಯ ಸಿಂಧೋಗಿ ಅಭಿನಯಿಸಿದ್ದಾರೆ. ಇದು ಕೂಡ ಫೋಸ್ಟ್ ಪ್ರೋಡಕ್ಷನ್ ಹಂತದಲ್ಲಿಯೇ ಇದೆ.

ಐಶ್ವರ್ಯ ಸಿಂಧೋಗಿ ಅಭಿನಯದ ಆಶಿಕಿ ರೆಡಿ ಟು ರಿಲೀಸ್

ಐಶ್ವರ್ಯ ಸಿಂಧೋಗಿ ಅಭಿನಯದ ಆಶಿಕಿ ಸಿನಿಮಾ ಕೂಡ ಈಗ ರಿಲೀಸ್ ಹಂತಕ್ಕೆ ಬಂದಿದೆ. ಈ ರೀತಿ ಸಿನಿಮಾ ಮತ್ತು ಸೀರಿಯಲ್ ಎರಡೂ ನಿಭಾಯಿಸ್ತಿರೋ ಐಶ್ವರ್ಯ ಸಿಂಧೋಗಿ ತಮ್ಮ ಪಯಣವನ್ನ ಯಶಸ್ವಿಯಾಗಿಯೇ ಮುಂದುವರೆಸಿ ಕೊಂಡು ಹೋಗ್ತಿದ್ದಾರೆ.

A new possibility in the US-India alliance Hope on Joe Biden

ಅಮೆರಿಕ-ಭಾರತ ಮೈತ್ರಿಯಲ್ಲಿ ಹೊಸ ಶಕೆ ಜೋ ಬಿಡೆನ್ ಮೇಲೆ ಭರವಸೆ


ಡೆಮೊಕ್ರಾಟ್ ಪಕ್ಷದ ಜೋ ಬಿಡೆನ್ ಅವರು ಅಧ್ಯಕ್ಷ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಆಗುವುದರೊಂದಿಗೆ ಅಮೆರಿಕದ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗಿದೆ. ಪಕ್ಷ ನೀತಿಯಲ್ಲಿ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಭಿನ್ನವಾಗಿರುವ ಬೈಡೆನ್ ಕಾಲಾವಧಿಯಲ್ಲಿ ಅಂತಾರಾಷ್ಟ್ರೀಯ ಆಗು ಹೋಗುಗಳ ಜೊತೆಗೆ ಹೇಗೆ ಸಂಬಂಧ ಕಾಪಾಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹಾಗೆಯೇ ಭಾರತೀಯರಾದ ನಮಗೆ ಮುಖ್ಯವಾಗಿರುವುದು ಬೈಡೆನ್ ನಮ್ಮ ಜೊತೆಗೆ ಹೇಗಿರುತ್ತಾರೆ ಎಂಬುದು. ಉಪಾಧ್ಯಕ್ಷೆ ಕಮಲಾ ಭಾರತೀಯ ಮೂಲದವರಾಗಿರುವುದರಿಂದ ಈ ಕುತೂಹಲ ಇನ್ನಷ್ಟು ಗರಿಗೆದರಿದೆ.

ಕಳೆದ ನಾಲ್ಕು ವರ್ಷಗಳಲ್ಲಿ, ಡೊನಾಲ್ಡ್ ಟ್ರಂಪ್ ಬಹಳಷ್ಟು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಎಡವಿದ್ದರಾದರೂ, ಭಾರತದ ಜೊತೆಗೆ ಉತ್ತಮ ಸಂಬಂಧ ಕಾಪಾಡಿಕೊಂಡಿದ್ದರು. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಒಳ್ಳೆಯ ಮಿತ್ರತ್ವವಿತ್ತು. ಗಲ್ವಾನ್ ಮತ್ತು ಲಡಾಕ್ ಗಡಿಗಳಲ್ಲಿ ಚೀನಾ ನಮ್ಮನ್ನು ಕೆಣಕಿದಾಗ ಭಾರತದ ಪರ ನಿಂತಿದ್ದರು. ವಿದೇಶಾಂಗ ನೀತಿಯಲ್ಲಿ ರಿಪಬ್ಲಿಕನ್ನರಿಗಿಂತ ಡೆಮೊಕ್ರಾಟರು ಭಿನ್ನರಾದರೂ, ಬೈಡೆನ್ ಅವರ ನೀತಿ ದಾಖಲೆಯು ಹೇಳುವಂತೆ, ಅವರು ಭಾರತದ ಜೊತೆಗೆ ಎಲ್ಲ ವ್ಯೂಹಾತ್ಮಕ ಒಪ್ಪಂದಗಳನ್ನು ಮುಂದುವರಿಸಲಿದ್ದಾರೆ; ಹೀಗಾಗಿ ಇಂಡೊ ಪೆಸಿಫಿಕ್ ಭಾಗದಲ್ಲಿ ಭಾರತಕ್ಕೆ ಚೀನಾದಿಂದಾಗಿ ಯಾವುದೇ ತೊಂದರೆ ಉಂಟಾದರೂ ಬೈಡೆನ್ ನಮ್ಮ ಸಹಾಯಕ್ಕೆ ಇರುತ್ತಾರೆ ಎಂದು ಭಾವಿಸಬಹುದು. ಆದರೆ ಬೈಡೆನ್ ಯುದ್ಧೊ?ನ್ಮಾದಿಯಲ್ಲ. ಪಳಗಿದ ರಾಜನೀತಿಜ್ಞ ಹಾಗೂ ಮುತ್ಸದ್ದಿಯಾಗಿರುವ ಅವರಿಂದ ಈ ವಿಚಾರದಲ್ಲಿ ನಿಪುಣ ನಡೆಯನ್ನು ನಿರೀಕ್ಷಿಸಬಹುದು. ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತದ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವ ಬಗ್ಗೆಯೂ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಚೀನಾದಂಥ ಆಕ್ರಮಣಕಾರಿ, ವಿಸ್ತರಣಶೀಲ ದೇಶವನ್ನು ಪಕ್ಕದಲ್ಲಿಟ್ಟುಕೊಂಡಿರುವ ನಾವು ಅಮೆರಿಕದ ವಿದೇಶಾಂಗ ನೀತಿಯನ್ನು ನಮಗೆ ಪೂರಕವಾಗಿ ಬಳಸಿಕೊಳ್ಳುವುದೇ ಜಾಣ್ಮೆ.

ಟ್ರಂಪ್ ಆಡಳಿತದಲ್ಲಿ ಕೌಶಲಭರಿತ ಐಟಿ ಮುಂತಾದ ಭಾರತೀಯ ಉದ್ಯೊ?ಗಿಗಳಿಗೆ ವಿ?ಸಾ ಹಾಗೂ ಪೌರತ್ವದ ವಿಚಾರದಲ್ಲಿ ತೊಡಕು ಉಂಟಾಗಿತ್ತು. ಟ್ರಂಪ್ ಆಡಳಿತ ಒಳಬರುವ ವಿ?ಸಾಗಳನ್ನು ಕಡಿತಗೊಳಿಸಿತ್ತು ಹಾಗೂ ಗ್ರಿ?ನ್ ಕಾರ್ಡ್ ನೀಡುವಿಕೆಯನ್ನು ಸ್ಥಗಿತಗೊಳಿಸಿತ್ತು. ಬೈಡೆನ್ ಅವರು ಹಳೆಯ ನಿಯಮವನ್ನು ತೆಗೆದುಹಾಕಿ, ೫ ಲಕ್ಷಕ್ಕೂ ಅಧಿಕ ಭಾರತೀಯರಿಗೆ ಪೌರತ್ವ ಕಲ್ಪಿಸುವ ಮಾತನಾಡಿದ್ದಾರೆ. ಇದು ಐಟಿ ಮುಂತಾದ ವಲಯಗಳಲ್ಲಿ ಉತ್ಸಾಹದ ಹೊನಲನ್ನೆ? ಹರಿಸಬಹುದು. ಚೀನಾದ ಜೊತೆಗೆ ನಮ್ಮ ವ್ಯಾಪಾರ ವ್ಯವಹಾರ ಹಾನಿಗೀಡಾಗಿರುವುದರಿಂದ, ಅಮೆರಿಕದ ಜೊತೆಗಿನ ವಾಣಿಜ್ಯ ವ್ಯವಹಾರಗಳನ್ನು ವೃದ್ಧಿಸಿಕೊಳ್ಳುವ ಅವಕಾಶಗಳು ತೆರೆದಿವೆ. ಜಗತ್ತಿನ ಅತಿ ಹಳೆಯ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವ ಅಮೆರಿಕ ಮತ್ತು ಭಾರತ ಸಮಾನ ಗಣರಾಜ್ಯ ಮೌಲ್ಯಗಳನ್ನು ಹಂಚಿಕೊಂಡಿವೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ, ಕಾನೂನಿನಡಿಯಲ್ಲಿ ಎಲ್ಲರಿಗೆ ಸಮಾನತೆ, ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ‍್ಯ ಇತ್ಯಾದಿ. ಈ ಮೌಲ್ಯಗಳು ಉಭಯ ದೇಶದ ಇತಿಹಾಸದಲ್ಲಿ ಹಾಸು ಹೊಕ್ಕಾಗಿದ್ದು ಭವಿಷ್ಯದಲ್ಲೂ ಹಾಗೇ ಮುಂದುವರಿಯಲಿವೆ ಎಂದು ಬೈಡೆನ್ ಹೇಳಿದ್ದಾರೆ.

ಸೋವಿಯತ್ ರಷ್ಯಾದ ಪತನದ ಬಳಿಕ ಭಾರತಕ್ಕೆ ಆಪ್ತಮಿತ್ರನಾಗಿ ನಿಂತಿರುವ ದೊಡ್ಡ ದೇಶ ಎಂದರೆ ಅಮೆರಿಕ. ಹಾಗೆಯೇ ಅಮೆರಿಕಕ್ಕೂ ಭಾರತದ ಅಗತ್ಯವಿದೆ. ದಕ್ಷಿಣ ಏಷ್ಯಾದಲ್ಲಿ ಚೀನಾದ ಆರ್ಭಟ ತಡೆಯಲು ಭಾರತದಂಥ ಒಬ್ಬ ಆಪ್ತಮಿತ್ರ ಅದಕ್ಕೆ ಬೇಕು; ಭಾರತದ ೧೩೦ ಕೋಟಿ ಜನತೆಯ ಗ್ರಾಹಕಶಕ್ತಿ ಬೇಕು; ಹಾಗೆಯೇ ಇಲ್ಲಿನ ಕೌಶಲಭರಿತ ದುಡಿಯುವ ಶಕ್ತಿಯೂ ಅಮೆರಿಕಕ್ಕೆ ಅಗತ್ಯ. ಇದನ್ನೆಲ್ಲ ಚೆನ್ನಾಗಿಯೇ ಬಲ್ಲ ಬೈಡೆನ್ ಭಾರತದ ಜೊತೆ ಅತ್ಯುತ್ತಮ ಮೈತ್ರಿ ಕಾಪಾಡಿಕೊಳ್ಳಬಲ್ಲರು; ನಾವೂ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಿದೆ.

Why should we pray to God?

ದೇವರಿಗೆ ಪೂಜೆ ಪ್ರಾರ್ಥನೆ ಯಾಕೆ ಮಾಡಬೇಕು?


  ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ? ಪೂಜೆ ಯಾಕೆ ಮಾಡಬೇಕು? ಪ್ರಾರ್ಥನೆ ಯಾಕೆ ಮಾಡಬೇಕು? ಬಹಳ ಜನರನ್ನು ಕಾಡುವ ಪ್ರಶ್ನೆಯಿದು. ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು? ದೇವರ ಪೂಜೆಯಿಂದ ನಿಜವಾಗಿಯೂ ಲಾಭವಿದೆಯೇ?

"ಪೂಜೆ" ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ. ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ, ಸ್ಥಿತಿ, ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ.

ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ, ಪ್ರತಿನಿತ್ಯವೂ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ. ಶಾಂತಿ, ನೆಮ್ಮದಿ, ನಂಬಿಕೆ, ಸಂತೋಷ, ಸಹೃದಯತೆ, ಶ್ರದ್ಧೆ, ಆರಾಧನೆ, ಐಕ್ಯತೆ, ಮುಂತಾದ ಶಕ್ತಿ ಕ್ರಿಯೆಗಳು ಲಭಿಸುತವೆ.

ಅವಶ್ಯ ಮನುಭೋಕ್ತವ್ಯಂ ಗತಂ ಜನ್ಮಶುಭಾಶುಭಂ

ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು ಈ ಜನ್ಮದಲ್ಲಿ ಅನುಭವಿ ಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣ ದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸ ಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಾ ಶಕ್ತಿ ಸಿಗುತ್ತದೆ. "ಗತ ಜನ್ಮದ ರೋಗಕ್ಕೆ" ಈ "ಜನ್ಮದ ಔಷಧಿಯೇ ಪೂಜೆ.

ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ", ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ ಪ್ರಸಂಗವೊಂದು ಇಲ್ಲಿದೆ.??

ಒಂದು ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ "ನಾಸ್ತಿಕನಾಗಿದ್ದ". ಆದರೆ ಜನ ಸೇವೆಯೆಂಬ ಕಾಯಕದಿಂದ ಅಚ್ಚು ಮೆಚ್ಚಿನವನಾಗಿದ್ದ.

ಒಂದು ದಿನ ರಾತ್ರಿ ಜೋರಾಗಿ ಮಳೆ ಸುರಿಯ ಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತ ಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿ ನಾಶಕದ ಬಾಟಲಿಯಾಗಿತ್ತು.

ತನ್ನಿಂದ ಅಮಾಯಕ ಜೀವ ವೊಂದು ಬಲಿಯಾಗುತ್ತದಲ್ಲ ಎಂಬ ಪಾಪ ಪ್ರಜ್ಞೆಯೂ? ಜೊತೆಗೆ ಆ ಬಾಲಕ ಅನಾಥ ನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನ್ನರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.

ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ "ಚಿತ್ರ ಪಟವೊಂದು" ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯ ದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. "ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ" ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈ ಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ.

ಕೆಲವೇ ಕ್ಷಣಗಳಲ್ಲಿ ಪವಾಡವೊ? ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ಅಂಕಲ್ ಜೋರು ಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲಿ ಈಗ ಕೊಡಲು ಹಣವಿಲ್ಲ' ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ.

ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜೊತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆ ಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧ ಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು.

ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರ ಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ!

A slave can become a master... But, the mindset never changed...!!

ಗುಲಾಮನೊಬ್ಬ ಮಾಲೀಕನಾಗಿ ಬದಲಾಗಬಹುದು...  ಆದರೆ, ಮನಸ್ಥಿತಿ ಎಂದಿಗೂ ಬದಲಾಗೋದಿಲ್ಲ...!!

 ಈಗಿನ್ನೂ ದೇಶದ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ ವನ್ನು ವಾರಗಳ ಕಾಲ ಮನೆ ಮುಂದೆ ಬಾವುಟವೆಲ್ಲಾ ಹಾರಿಸಿಕೊಂಡು ಇನ್ನಿಲ್ಲದಂತೆ ಸಂಭ್ರಮದಿಂದ ಆಚರಿಸಿಕೊಂಡಿದ್ದೇವೆ.

ಎಷ್ಟೋ ಮನೆಗಳ ಮೇಲಿನ ಬಾವುಟಗಳನ್ನೂ ಇನ್ನೂ ಕೆಳಗಿಳಿಸಿಲ್ಲ...

ಇವತ್ತು...

ನಮ್ಮನ್ನು ಶತಮಾನಗಳ ಕಾಲ ಬೇಡಿ ತೊಡಿಸಿ ಜೀತದಾಳುಗಳಂತೆ ಗುಲಾಮಗಿರಿ ಮಾಡಿಸಿಕೊಂಡ, ನಮ್ಮ ಸ್ವಾತಂತ್ರ‍್ಯವನ್ನು ಕಿತ್ತುಕೊಂಡು ಅಹಂಕಾರದಿಂದ ಮೆರೆದ, ಮಹಾಕ್ರೂರಿ ಬ್ರಿಟಿಷ್ ರಾಜಮನೆತನದ ರಾಣಿಯೊಬ್ಬಳು ಸತ್ತಿದ್ದಕ್ಕೆ ತಮ್ಮದೇ ಹೆತ್ತ ತಾಯಿಯೋ ಅಜ್ಜಿಯೋ ಸತ್ತಿದಾಳೇನೋ ಎನ್ನುವಂತೆ ಉದ್ದುದ್ದದ ಕಣ್ಣೀರಿನ ಕಥೆ ಕವನಗಳು ಬರೆದುಕೊಂಡು ಮತ್ತೆ ಹುಟ್ಟಿ ಬಾ ಅಂತೆಲ್ಲಾ ಬಳೆ ಒಡೆದುಕೊಂಡು ಅಳ್ತಾ ಕೂತಿದೀರಲ್ರೀ ಹಾವ್ರಾಣಿಮಕ್ಳೆಲ್ಲಾ.

ಇದಕ್ಕಿಂತಾ ಗುಲಾಮಗಿರಿ ಮನಸ್ಥಿತಿ ಮತ್ತೊಂದಿದ್ಯಾ?

ನಿಮ್ಗೆ ಗೊತ್ತಿರ್ಲಿ...

ನಮ್ಗೆ ಸ್ವಾತಂತ್ರ‍್ಯ ಸಿಗಲಿ ಅಂತ ಅದೆಷ್ಟೋ ಲಕ್ಷಾಂತರ ಜನರು ತಮ್ಮ ಜೀವ ಕೊಟ್ರಲ್ಲ, ಬ್ರಿಟಿಷರ ಗುಂಡುಗಳಿಗೆ ಲಾಠಿ ಚಾಟಿ ಏಟುಗಳುಗೆ ಎದೆ ಕೊಟ್ರಲ್ಲ. ಅದೆಲ್ಲಾ ಇನ್ಯಾರದ್ದೋ ಅಲ್ಲ, ಈಗ ಸತ್ತಿರೋ ರಾಣಿಯ ಕುಟುಂಬದ್ದೇ ಜನರದ್ದಾಗಿತ್ತು.

ಬೋರಾಯ್ತು ಅಂದಾಗೆಲ್ಲಾ ಭಾರತೀಯರನ್ನು ಮೈದಾನದೊಳಗೆ ಅವರವರನ್ನೇ ಅಥವಾ ಪ್ರಾಣಿಗಳ ಜೊತೆ ಬಡಿದಾಡಲು ಬಿಟ್ಟು ಎತ್ತರದಲ್ಲಿ ಕೂತು ವೈನ್ ಕುಡಿಯುತ್ತಾ, ಭಾರತೀಯರ ಮೈ ಇಂದ ರಕ್ತ ಇಳೀತಿದ್ರೆ ಅದನ್ನೇಮಜಾ ತೆಗೆದುಕೊಳ್ತಿದ್ರಲ್ಲಾ ಅವ್ರೆಲ್ಲ ಇನ್ಯಾರೋ ಅಲ್ಲ, ಈಕೆಯ ಅಣ್ತಮ್ಮ ಅಕ್ತಂಗಿಗಳೇ ಆಗಿತ್ತು...

೧೯೫೨ರಲ್ಲಿ ಈಕೆ ರಾಣಿಯಾಗ್ತಿದ್ದ ಹಾಗೆಯೇ ಮಾಡಿದ ಮೊದಲ ಕೆಲಸವೇ,

ದಶಕಗಳಿಂದ ಕೀನ್ಯಾದಲ್ಲಿ ಕ್ರಾಂತಿಕಾರಿಗಳು ನಡೆಸ್ತಿದ್ದ ಸ್ವಾತಂತ್ರ‍್ಯದ ಹೋರಾಟವನ್ನು ಮಟ್ಟಹಾಕಿ ತನ್ನೆಲ್ಲಾ ಬಲ ಪ್ರಯೋಗಿಸಿ ಇಡೀ ದೇಶವನ್ನೇ ರಕ್ತಸಿಕ್ತಗೊಳಿಸಿ ಸಾವಿರಾರು ಆದಿವಾಸಿಗಳನ್ನು ಹೀನಾಯವಾಗಿ ಚಿತ್ರಹಿಂಸೆಯ ಮೂಲಕ ಸಾಮೂಹಿಕ ಹತ್ಯೆ ನಡೆಸಿ ಆ ರಕ್ತದಿಂದಲೇ ತನ್ನ ಕಿರೀಟ ತೊಳೆದುಕೊಂಡು ಮುಡಿಗೇರಿಸಿಕೊಂಡಿದ್ದು.

ಹಿಟ್ಲರ್ ಯಹೂದಿಗಳ ಮೇಲೆ ನಡೆಸಿದ ಕ್ರೌರ್ಯಕ್ಕಿಂತಲೂ ಸಾವಿರ ಪಟ್ಟು ಕ್ರೂರವಾಗಿತ್ತು ಇದು.

ಹೀಗೆ ಶುರುವಾಗಿತ್ತು ಆಕೆಯ ರಾಜ್ಯಭಾರ...

ಎಂದಿಗೂ ಗುಲಾಮಗಿರಿ, ಜೀತದಾಳು, ರಾಜ ಸೇವಕ ಇತ್ಯಾದಿ ಪದ್ದತಿಗಳ ತೆರವಿಗಾಗಿ ಒಂದೇ ಒಂದು ಕ್ರಮ ತೆಗೆದುಕೊಳ್ಳಲಿಲ್ಲ. ವರ್ಣ ಭೇದ ನೀತಿ ಕೊನೆಯಾಗಿಸೋ ಕಾರ್ಯಕ್ಕೆ ಕೈ ಹಾಕಲಿಲ್ಲ. ಮೊನ್ನೆ ರಿಷಿ ಸುನಕ್ ಎದುರು ಪ್ರಧಾನಮಂತ್ರಿ ರೇಸಲ್ಲಿ ಗೆದ್ದ ಮೇರಿ ಎಲಿಜಬೆತ್ ಟ್ರಸ್ ಕೊನೆಯ ದಾಳವಾಗಿ ಉರುಳಿಸಿದ್ದೇ ಜಾತಿ ವಾದ ಹಾಗೂ ವರ್ಣಭೇದ ನೀತಿ. ಅದೇ ಈಕೆಯ ಗೆಲುವಿಗೂ ಕಾರಣವಾಗಿದ್ದು. ಇಂತದ್ದು ಇನ್ನೂ ಜೀವಂತವಾಗಿದೆ ಅಂದ್ರೆ ಅದಕ್ ಕಾರಣವೇ ಈ ರಾಜಮನೆತನ.

ಇಂತಾ ರಾಣಿ ಸತ್ತಮೇಲೂ ಹಾಡಿಹೊಗಳುತ್ತಾ ಆಕೆಯ ಬೂಟು ನೆಕ್ಕಲು ಕುಳಿತು ಬಿಡುತ್ತೇವೆ ಎಂದರೆ,

ಅದಿನ್ನೆಷ್ಟು ಆಳಕ್ಕೆ ಇಳಿದಿರಬಹುದು ನಮ್ಮೊಳಗೆ ಗುಲಾಮ ಮನಸ್ಥಿತಿಯ ಬೇರುಗಳು? 

ಇದಕ್ಕಿಂತಾ ದುರಂತ ಏನ್ ಗೊತ್ತಾ...

ಬ್ರಿಟಿಷ್ ರಾಜ ಓಡಾಡಿದ ಅನ್ನೋ ಒಂದೇ ಕಾರಣಕ್ಕೆ ರೋಡಿಗೇ ಕಿಂಗ್'ಸ್ ವೇ(ರಾಜ ಪಥ) ಅಂತ ಹೆಸರಿಟ್ಟು, ಸ್ವಾತಂತ್ರ‍್ಯದ ದಶಕಗಳ ನಂತರವೂ ಆ ಗುಲಾಮಗಿರಿಯ ಕುರುಹಾಗಿಯೇ ಉಳಿದಿದ್ದ ರಸ್ತೆಯ ಹೆಸರನ್ನು ಅಳಿಸಿ...

ದೇಶದಿಂದ ಬ್ರಿಟಿಷರನ್ನು ಒದ್ದೋಡಿಸಲು ತನ್ನ ಜೀವವನ್ನೇ ತೆತ್ತಿದ್ದೂ ಅಲ್ಲದೆ, ಯಾವ ಬ್ರಿಟಿಷರಿಂದ ದೇಶದ್ರೋಹಿ ಎಂಬ ಪಟ್ಟವನ್ನೂ ಹೊತ್ತಿದ್ದರೋ ಅದೇ ನೇತಾಜಿ ಸುಭಾಷ್ ಚಂದ್ರ ಬೋಸರ ಪ್ರತಿಮೆಯನ್ನು ಅದೇ ಜಾಗದಲ್ಲಿ ನಿರ್ಮಿಸಿ ಆತನದ್ದೇ ಘೋಷವಾಕ್ಯವಾದ "ಕರ್ತವ್ಯ" ಪಥವೆಂದು ನಾಮಕರಣ ಮಾಡಿ ಇನ್ನೂ ದಿನ ಕಳೆದಿಲ್ಲ.

ನಮ್ಮ ಗುಲಾಮ ಜನಗಳು ಮತ್ತದೇ ಬ್ರಿಟಿಷ್ ರಾಜ ಮನೆತನದವರ ಬೂಟು ನೆಕ್ಕುತ್ತಾ ಕೂತಿದ್ದಾರೆ.

ಇದ್ರ ಜೊತೆಗೆ...

ನೀವು ಸತ್ತಿದೀರಿ ಅನ್ನೋದು ನಂಬೋಕೆ, ಜೀರ್ಣಿಸಿಕೊಳ್ಳೋಕೇ ಆಗ್ತಿಲ್ಲ ಅಂತ ಡಿಂಗಾಣಿಡವ್ ಬೇರೆ. 

ಲೇಯ್... ೯೬ವರ್ಷ ಕಣ್ರೋ ಆಕೆಗೆ ೧೬ ಅಲ್ಲ. 

ಚೆನ್ನಾಗ್ ನೆನಪಲ್ ಇಟ್ಕೊಳೀ...

ಆಕೆ ದೇವತೆ ಅಲ್ಲ,

ನಮ್ಮಂತೆಯೇ ಹಲವಾರು ದೇಶಗಳ ಲಕ್ಷಾಂತರ ಜನರ ಪೂರ್ವಜರ ಸಾವು ನೋವುಗಳ ಮೂರ್ತರೂಪದ ಮಹಾಪಾಪಿ ವ್ಯಕ್ತಿತ್ವಕ್ಕೊಂದು ಜೀವಂತ ಉದಾಹರಣೆ ಆಕೆ ಹಾಗೂ ಆಕೆಯ ರಾಜಮನೆತನ ಕಣ್ರೋ.

-ಸುದೀರ್ ಸಾಗರ್ ನೊಂದು ಬೆಂದಿರೋ ಕೂಲಿ ಕಾರ್ಮಿಕ