Thursday, September 15, 2022

Human relationships getting complicated...!

ಮನುಷ್ಯ ಸಂಬಂಧಗಳು ಸಂಕೀರ್ಣವಾಗುತ್ತಿವೆ...! 

ನಂಬಿಕೆ ಮೊಳೆಯುವ ಬದಲು ದ್ವೇಷ ಚಿಗುರೊಡೆಯುತ್ತಿದೆ. ಸಂಬಂಧಗಳು ವಿಶ್ವಾಸ ಬಂಧದಲ್ಲಿ ವಿಸ್ತರಿಸುವ ಬದಲು ಕ್ಷೀಣಿಸುತ್ತಿರುವುದಕ್ಕೆ ಮನಸ್ಸಿನೊಳಗೆ ಬಿತ್ತುತ್ತಿರುವ ಅಪನಂಬಿಕೆ ಬಿತ್ತನೆಗಳೇ ಮೂಲ ಕಾರಣ. ಜೊಳ್ಳು ಬಿತ್ತಿ ಒಳ್ಳೆಯ ಫಲ ಹೇಗೆ ಸಿಗುವುದಿಲ್ಲವೋ, ಹಾಗೇ ನಮ್ಮ ಸಂಬಂಧಗಳಿಗೆ ತೋರಿಕೆಯ ಲೇಪ ಹಾಕಿ ಬಿಗಿಯುವುದರಿಂದ ಸಡಿಲವಾಗುತ್ತಿದೆ. ಹಿಂದೆಲ್ಲ ಕೂಡುಕುಟುಂಬಗಳಿದ್ದವು; ನೂರಾರು ಜನ ಒಂದುಗೂಡಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಇಂಥ ಅವಿಭಕ್ತ ಕುಟುಂಬಗಳು ಸಡಿಲಗೊಂಡಿದ್ದು ಸಹ ಮನೆಯ ಸದಸ್ಯರ ಅಪನಂಬಿಕೆ-ಅಸೂಯಾಪರ ಮನಃಸ್ಥಿತಿಗಳಿಂದ.

ಅವಿಭಕ್ತ ಕುಟುಂಬಗಳು ಕ್ಷೀಣಿಸಿದ ನಂತರ ಮುಂದುವರೆದ ವಿಭಕ್ತ ಕುಟುಂಬಗಳಲ್ಲೂ ಹತ್ತಾರು ಮಂದಿ ಬದುಕುತ್ತಿದ್ದರು. ಈಗಿನ ೨೧ನೇ ಶತಮಾನದ ಹೊತ್ತಿಗೆ ಮೂರ್ನಾಲ್ಕು ಮಂದಿಗೆ ಕುಟುಂಬಗಳು ಸೀಮಿತಗೊಂಡಿವೆ. ಹೀಗಿದ್ದರೂ ಮನೆಯಲ್ಲಿ ಅಪನಂಬಿಕೆ-ಅಸಮಾಧಾನಗಳು ಇಮ್ಮಡಿಸುತ್ತಲೇ ಇವೆ. ಇದರಿಂದ ಸುಮಧುರ ಬಾಂಧವ್ಯಗಳು ಹಾಳಾಗುತ್ತಿವೆ. ಸಂಸಾರವೆಂಬ ಸುಂದರ ವ್ಯವಸ್ಥೆ ಕುರೂಪವಾಗುತ್ತಿವೆ. ದಿನಕಳೆದಂತೆ ಸಾರ ಕಳೆದುಕೊಳ್ಳುತ್ತಿರುವ ಸಂಸಾರವೆಂಬ ಸಾಗರ ಬತ್ತಿದರೆ ಮನುಷ್ಯಕುಲ ನಾಶವಾದಂತೆ ಎಂಬ ಪ್ರಜ್ಞೆ ಯಾರಲ್ಲೂ ಕಾಣದಿರುವುದು ಆತಂಕಕಾರಿಯಾಗಿದೆ.

ಹಿಂದೆಲ್ಲಾ ಮನುಷ್ಯಸಂಬಂಧಗಳ ಮಧ್ಯೆ ಗೋಡೆಗಳೆದ್ದು ಮನೆ-ಮನಗಳನ್ನು ಪ್ರತ್ಯೇಕಿಸುತ್ತಿದ್ದವು. ಈಗ ಮನುಷ್ಯರ ವಾಸ ಊರು-ಕೇರಿಗಳನ್ನು ದಾಟಿ ದೇಶಗಳ ಗಡಿಯಾಚೆ ವಿಸ್ತರಿಸುತ್ತಿರುವುದರಿಂದ ಹತ್ತಾರು ತಲೆಮಾರುಗಳ ವಂಶವೃಕ್ಷಗಳು ಸಂಬಂಧದ ಬೆಸುಗೆ ಕಾಣದೆ ಒಣಗುತ್ತಿವೆ. ತನ್ನ ಮಕ್ಕಳು, ಮೊಮ್ಮಕ್ಕಳು ಬಾಳಿ ಬದುಕಲೆಂದು ಕಡುಕಷ್ಟ ಕಾಲದಲ್ಲಿ ಹೊಟ್ಟೆಬಟ್ಟೆ ಕಟ್ಟಿ ಕಟ್ಟಿದ ಸೂರುಗಳು ಬಾಳುವ ಕುಡಿಗಳಿಲ್ಲದೆ ಸೊರಗಿ ಹೋಗುತ್ತಿವೆ. ಮನೆಗೆ ವಾರಸುದಾರರಿಲ್ಲದೆ ತಮ್ಮ ಕಣ್ಣೆದುರೇ ಪಾಳು ಬೀಳುತ್ತಿರುವ ಮನೆಯನ್ನು ನೋಡಲಾಗದೆ, ನೋಡಿದರೂ ಏನೂ ಮಾಡಲಾಗದೆ ವೃದ್ದಾಶ್ರಮ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನಾಥಾಶ್ರಮಗಳಿಗಿಂತ ವೃದ್ಧಾಶ್ರಮಗಳು ಹೆಚ್ಚಾಗಿವೆ ಅನ್ನುವ ಮಾತು ಕುಹಕ ಮಾತ್ರವಲ್ಲ, ಈ ಸಮಾಜದ ದುರಂತ ಪರಿಸ್ಥಿತಿಯ ಪ್ರತಿಬಿಂಬವಾಗಿದೆ.

ಸಂಬಂಧಗಳು ಹಾಳಾಗುತ್ತಿರುವುದರ ಹಿಂದೆ ಮನುಷ್ಯರ ಸಲ್ಲದ ದುರಾಸೆಗಳು ಮೂಲ ಕಾರಣವಾಗುತ್ತಿವೆ. ಹಣ ಮತ್ತು ಗುಣದ ನಡುವಿನ ವ್ಯತ್ಯಾಸ ಮತ್ತು ಅದರ ಫಲದ ಅರಿವಿಲ್ಲದ ಜನ, ಸಂಬಂಧಗಳನ್ನು ಬೆಲೆ ಕಟ್ಟಿ ತೂಗಿನೋಡುವ ಅಸಹ್ಯಕರ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ನಿತ್ಯ ಅನಾರೋಗ್ಯಕರ ಪೈಪೋಟಿಯ ವಾತಾವರಣ ಸೃಷ್ಟಿಯಾಗಿದೆ. ಇಂಥ ಕೃತಕ ಜಗತ್ತಿನಲ್ಲಿ ತಮ್ಮ ಮಾನ-ಪ್ರಾಣಗಳನ್ನು ಹಣದ ನೋಟಿನಲ್ಲಿ ಸಿಂಗರಿಸುವ ಪ್ರಯತ್ನ ಅವ್ಯಾಹತವಾಗಿ ಸಾಗುತ್ತಿದೆ. ತಮ್ಮ ಜೀವನದಲ್ಲಿ ಕಳೆದುಕೊಳ್ಳುತ್ತಿರುವುದೇನು, ತಮ್ಮ ಬದುಕಿಗೆ ಅಮೂಲ್ಯವಾದುದೇನು, ಎಂಬ ಸತ್ಯ ತಿಳಿಯದೆ ಪ್ರತಿ ಜೀವಕ್ಕೂ ಅಗತ್ಯವಾದ ಸುಖ-ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆ ಒಳಗೂ-ಹೊರಗೂ, ಮನದೊಳಗೂ ಮನದ ಹೊರಗೂ ನೆಮ್ಮದಿ ಕಾಣದೆ ಚಡಪಡಿಸುತ್ತಿರುವ ಮನುಷ್ಯರ ನಡವಳಿಕೆ ವಿನಾಶದ ಮುನ್ಸೂಚನೆ ಅನಿಸುತ್ತೆ. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಬರುತ್ತೆ ಅನ್ನೋ ನಾಣ್ನುಡಿಯಂತೆ ಮನುಷ್ಯ ವಿಪರೀತವಾಗಿ ಯೋಚಿಸುತ್ತಾ ವಿಚಿತ್ರವಾಗಿ ಆಡುತ್ತಿದ್ದಾನೆನಿಸುತ್ತೆ.

ಮನುಷ್ಯರ ಒಟ್ಟಾರೆ ಗುಣಗಳು ಜೀವನ್ಮುಖಿಯಾಗಿ ಹೊಮ್ಮುತ್ತಿಲ್ಲ, ಮೃತ್ಯುಮುಖಿಯಾಗಿ ಕಾಣುತ್ತಿವೆ. ಮನುಷ್ಯ ತನ್ನ ತಾನು ಸುಧಾರಿಸಿಕೊಳ್ಳದೆ, ಸಮಾಜವನ್ನು, ಆಮೂಲಕ ಈ ದೇಶವನ್ನು ಸುಧಾರಿಸಲಾರ. ಒಂದು ದೇಶ ಚೆನ್ನಾಗಿರಬೇಕಾದರೆ, ಆ ದೇಶದ ಜನರೂ ಚೆನ್ನಾಗಿರಬೇಕು. ಹಾಗೇ, ಒಂದು ದೇಹ ಉತ್ತಮವಾಗಿರಬೇಕಾದರೆ ಅದರೊಳಗಿನ ಮನಸ್ಸೂ ಉತ್ತಮವಾಗಿರಬೇಕು. ದೇಶದೊಳಗಿನ ಜನ ಒಳ್ಳೆ ಆಲೋಚನೆ ಮಾಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಜನ ಕೆಟ್ಟ ಆಲೋಚನೆಯಲ್ಲಿ ಮುಳುಗಿದರೆ, ದೇಶ ಸಹ ಕೆಟ್ಟದರಲ್ಲಿ ಮುಳುಗಿ ಹೋಗುತ್ತದೆ. ಹಾಗೇ ನಮ್ಮ ದೇಹ ಸಹ ಒಳ್ಳೇ ಚಿಂತನೆ ಮಾಡದಿದ್ದರೆ, ಕೆಟ್ಟು ಹೋಗುತ್ತದೆ. ನಾವು, ನಮ್ಮ ಕುಟುಂಬ ಚೆನ್ನಾಗಿದ್ದರೆ, ಈ ದೇಶ ಚೆನ್ನಾಗಿರುತ್ತದೆ ಎಂಬ ಸತ್ಯ ಅರ್ಥವಾದಾಗ ‘ಸಚ್ಚಿದಾನಂದ’ದ ದರ್ಶನವಾಗುತ್ತದೆ.

Amma and those 108 days

ಅಮ್ಮ ಮತ್ತು ಆ ೧೦೮ ದಿನಗಳು

ಅಂದು ಅಮ್ಮನ ದಿನದ ಆನಂದದ ಆಚರಣೆ. ಈ ಮಹಾತಾಯಿ ತಮ್ಮ ಮಕ್ಕಳನ್ನು ನವ ಮಾಸಗಳು ಹೆತ್ತು ಹೊತ್ತು ಜಗತ್ತು ನೋಡುವಂತೆ ಮಾಡಿದ ಮಹಾಮುತ್ತು.  ನಾವು ಪಂಚತಾರಾ ಹೋಟೆಲ್ ಗಳಿಗೆ ಹೋಗಿ ಸಾವಿರಾರು ರೂಪಾಯಿ ತೆತ್ತು ರುಚಿ ರುಚಿಕರವಾದ ತಿಂಡಿ-ತಿನಿಸು-ಭರ್ಜರಿ ಭೋಜನ ಮಾಡುತ್ತೇವೆ. ಆದರೆ ಅಮ್ಮ ನೀಡುವ ತುಪ್ಪದ ಅನ್ನದ ಆ ಕೈ ತುತ್ತು ಕೊಡುವ ತಾಕತ್ತು ಜಗತ್ತಿಗೆ ಗೊತ್ತು.

ಅಮ್ಮನಿಗೆ ಅನೇಕ ಮಕ್ಕಳಿದ್ದರಂತೂ ಕೊಡುವ ಆಹಾರದಲ್ಲಾಗಿ, ನೀಡುವ ಪ್ರೀತಿಯಲ್ಲಾಗಲಿ ಈ ಮಕ್ಕಳ ನಡುವೆ ಹೆಚ್ಚು ಕಡಿಮೆಯಾದರೂ ಅಮ್ಮನನ್ನು ನಿಂದಿಸುವ , ಪ್ರೀತಿಯಿಂದ ಹೊಡೆಯುವ, ಮುನಿಸಿಕೊಳ್ಳುವ ವಿಷಯಗಳು ಸಹಜ. ಆದರೆ ಮಕ್ಕಳ ಈ ಯಾವುದೇ ಸಕಾರಾತ್ಮಕ ಮತ್ತು ನಕಾರಾತ್ಮಕ ವರ್ತನೆಗಳಿಗೆ ತಲೆ ಕೆಡಿಸಿಕೊಳ್ಳದೆ ತನ್ನ ಮಕ್ಕಳ ಏಳಿಗೆ ಬಗ್ಗೆ ಚಿ೦ತಿಸುವ ಏಕೈಕ ಶಕ್ತಿಯೇ ಅಮ್ಮ.

ಅಮ್ಮ ಮಕ್ಕಳನ್ನು  ದೊಡ್ಡವರನ್ನಾಗಿ ಮಾಡಿದ ಮೇಲೆ  ಕೆಲವರು ಅಮ್ಮ ಇತರ ಮಕ್ಕಳಂತೆ ನನ್ನನ್ನು ಪ್ರೀತಿಸುತ್ತಿಲ್ಲ, ಆಸ್ತಿ ಅಂತಸ್ತುಗಳಲ್ಲಿ ತನಗಿಂತ ಬೇರೆ ಮಕ್ಕಳಿಗೆ ಹೆಚ್ಚು ಒತ್ತು ಕೊಡುತ್ತಾಳೆ ಎಂದು ನಿಂದಿಸುವವರು ಇದ್ದಾರೆ,

 ಮುನಿಸಿಕೊಂಡು ಅಮ್ಮನಿಂದ ದೂರವಾಗಿರುವವರು ಇದ್ದಾರೆ. ಕೆಲವು ಕರ್ಮಠರು ಹೆತ್ತ ತಾಯಿಯನ್ನೇ ಬಡಿದವರು ಇದ್ದಾರೆ. ಆದರೆ ಈ ರೀತಿ ಬಡಿಯುವ ಕೈಗಳಿಗೆ, ಕಾಲುಗಳಿಗೆ ಶಕ್ತಿ ತುಂಬಿದ್ದೆ ಅಮ್ಮ ಎಂಬ ಸತ್ಯ ಆ ಕ್ಷಣದಲ್ಲಿ ಅರಿವಿಗೆ ಬರುವುದಿಲ್ಲ.

ಮುತ್ತು ನೀಡುವವಳು ಪಕ್ಕಕ್ಕೆ ಬಂದಾಗ ,  ಈ ಮುತ್ತು ನೀಡುವವಳಿಗೆ ಕಾರಣವಾದ ಮಗನನ್ನು ಹೆತ್ತು ಕೊಟ್ಟವಳೇ ನನ್ನ ತಾಯಿ ಎಂದು ಮರೆತುಬಿಡುತ್ತಾರೆ. 

ಕ್ಷಣಿಕ ಸುಖಕ್ಕಾಗಿ, ಕಟ್ಟಿಕೊಂಡವಳ ಹಠಕ್ಕೆ ಮಣಿದು ಅಮ್ಮನನ್ನೇ ದೂರ ಮಾಡುವವರು , ಅಮ್ಮನಿಗೆ ಕೊಡಬಾರದ ಕಷ್ಟ ಕೊಡುವವರು ಈ ಭೂಮಿ ತಾಯಿಗೆ ಭಾರವಲ್ಲದೆ ಮತ್ತೇನು?

ಸಿಟ್ಟು ಬಂದಾಗ, ಮತ್ತಾವುದೋ ಕಾರಣಕ್ಕೆ ಅಮ್ಮನನ್ನು ನಿಂದಿಸುತ್ತೇವೆ, ಕೆಲವು ಕರ್ಮಠರಂತೂ ಹಿಡಿದು ಬಡಿಯುತ್ತಾರೆ. ಆದರೆ ಅಮ್ಮ ಆ ಕ್ಷಣದಲ್ಲಿ ಮಾನಸಿಕ ಮತ್ತು ದೈಹಿಕ ನೋವು ಅನುಭವಿಸಲಾರದೆ ನಿಂದಿಸುತ್ತಾಳೆ. 

ಆದರೆ ಸಮಾಧಾನವಾದ ಮೇಲೆ ಅಯ್ಯೋ ನನ್ನ ಬುದ್ಧಿಗೆ ಏನಾಗಿತ್ತು ನಾನೆತ್ತ ಮಗನನ್ನೇ  ಬಯ್ದನಲ್ಲ, ನನ್ನ ಶಾಪ ತಟ್ಟಿ ನನ್ನ ಮಗ ಎಲ್ಲಿ ಕಷ್ಟಕ್ಕೆ ಸಿಲುಕುತ್ತಾನೋ ಎಂದು ಮಮ್ಮಲ ಮರುಗುತ್ತಾಳೆ. ನನ್ನ ಮಕ್ಕಳಿಗೆ ನನ್ನ ಶಾಪ ತಟ್ಟದ೦ತೆ ಕಾಪಾಡಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ.

ಅಮ್ಮ ಹಲವಾರು ಸಲ್ಲದ ಕಾರಣಗಳಿಗೆ ಬೇರೆಯವರಿಗೆ ರಾಕ್ಷಸಿ ಆಗಿರಬಹುದು. ಹೆತ್ತ ಮಕ್ಕಳಿಗೂ ಇಂಥ ಅಮ್ಮನ ಬಗ್ಗೆ ಅಸಮಾಧಾನ  ಇರಬಹುದು. ಆದರೆ  ಹೆತ್ತವರ ಪಾಲಿಗೆ ಅಮ್ಮನೇ ನಿಜವಾದ ದೇವತೆ. 

 ಅಂಥ ಅಮ್ಮನನ್ನು  ಯಾವುದೇ ಕಾರಣಕ್ಕೆ  ದೂರ ತಳ್ಳಿದರೆ ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ ಅದರ ದುಷ್ಪಲವನ್ನು ಖಂಡಿತಾ  ಅನುಭವಿಸಬೇಕಾಗುತ್ತದೆ.

ಕಣ್ಣ ಮುಂದೆ ಇರುವ ಹಣ, ಐಶ್ವರ್ಯ, ಸುಖದ ಸುಪ್ಪತ್ತಿಗೆಯ ಸುಖ ಜೀವನವೇ ಸತ್ಯ ಎಂದು ಹೆತ್ತ ತಾಯಿಯನ್ನು ಹೆಂಡತಿಯ ಮಾತಿಗೋ , ಹಣ ಕೊಡುವಲ್ಲಿ ತಾರತಮ್ಯ ಮಾಡುತ್ತಿದ್ದಾಳೆ ಎಂದೋ..ಇವಳನ್ನು ನೋಡಿಕೊಳ್ಳುವುದೇ ದೊಡ್ಡ ಭಾರ ಎಂದೋ. ಕತ್ತು ಹಿಡಿದು ಆಚೆ ತಳ್ಳಿದರೆ..

ಅಂಥವರನ್ನು ನವ ಮಾಸ ಉದರದಲ್ಲಿ  ಇಟ್ಟುಕೊಂಡ  ಭಾರದ ಬಗ್ಗೆಯೂ ಇಂಥವರು ಯೋಚಿಸಬೇಕು. ಅಮ್ಮ ಎಂಬ ಜೀವವನ್ನುಆಕೆಯ ಅಂತ್ಯದವರೆಗೂ ಜತನದಿಂದ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ  ಆದ್ಯ ಕರ್ತವ್ಯ   

ಈ ಮಹಾತಾಯಿ. ನನ್ನ ಪಾಲಿಗೆ ಸಾಕ್ಷಾತ್ ಗೌರಮ್ಮ. ನಮ್ಮಮ್ಮ. ನನಗೆ ಕೊಟ್ಟ ಶಿಕ್ಷೆ ಇದೆಯಲ್ಲ ನಮ್ಮ ಮನೆಯಲ್ಲಿ ನನ್ನ ಅಣ್ಣನಿಗಾಗಲಿ, ತಮ್ಮನಿಗಾಗಲಿ  ಕೊಟ್ಟಿಲ್ಲ. ಕಾರಣ ಚಿಕ್ಕ ವಯಸ್ಸಿನಿಂದಲೇ ನಾನು ಪುಂಡ. ಏನಾದರೂ ಒಂದು ಜಗಳ ಕಾಯುತ್ತಿದ್ದೆ. ಆಟ ಆಡಲು ಹೋದಾಗ ಯಾರ ಹತ್ತಿರವಾದರೂ ಜಗಳ ಮಾಡಿಕೊಂಡು ಬರುತ್ತಿದೆ. ಆಗ ನಮ್ಮಮ್ಮನಿಗೆ ಕೆಲವರು ದೂರು ನೀಡುತ್ತಿದ್ದರು.

ಆಗ ನಮ್ಮಮ್ಮ ನನ್ನನ್ನು ಹಿಡಿದು ಸಿಕ್ಕಾಬಟ್ಟೆ ಹೊಡೆಯುತ್ತಿದ್ದರು. ಒಮ್ಮೆ ನನ್ನ ಅಮ್ಮನ ಅಕ್ಕ ಅಂದರೆ ನನ್ನ ಶಾ೦ತಮ್ಮ ದೊಡ್ಡಮ್ಮನ ಮನೆಯಲ್ಲಿ ಕಿಟಕಿಯ ಮೂಲಕ ಬೆಲ್ಲ ಕಳ್ಳತನ ಮಾಡಿದೆ. 

ಆಗ ಈ ದೊಡ್ಡಮ್ಮ ನಮ್ಮ ಮನೆಗೆ ಬಂದು ನಿನ್ನ ಮಗ ನಮ್ಮ ಮನೆಯ ಕಿಟಕಿಯಿಂದ ಬೆಲ್ಲ ಕದ್ದುಕೊಂಡು ತಿಂದ ಎಂದು ದೂರು ನೀಡಿದರು.

ಆಗ ನಮ್ಮಮ್ಮ ನಾನು ಮನೆಗೆ ಬರುವುದನ್ನೇ ಕಾಯುತ್ತಾ ಇದ್ದರು, ನಾನು ಬಂದದ್ದೇ ತಡ  ದೊಡ್ಡಮ್ಮನ ಮನೆಗೆ ಹೋಗಿ ಬೆಲ್ಲ ಕದ್ದು ತಿನ್ನುತ್ತಿಯಾ..ನಮ್ಮ ಮನೆಯಲ್ಲಿ ಬೆಲ್ಲಕ್ಕೇನು ಬರ ಬಂದಿದೆಯಾ..ಎಂದು

 ಕಂಬಕ್ಕೆ ಕಟ್ಟಿ  ಕೋಲಿನಿಂದ ಹೊಡೆದದ್ದೇ ಹೊಡೆದದ್ದು ಮಾಡಿದರು. ಆಗ ನಮ್ಮ ತಂದೆ ನನಗೆ ಹೊಡೆಯುವುದನ್ನು ನೋಡಲಾರದೆ ಅಮ್ಮನನ್ನು ಬೈಯ್ದು ನನ್ನನ್ನು ಬಿಡಿಸಿದರು..

ಹೀಗೆ ಒಂದಾ ಎರಡಾ ನಾನು ಮಾಡುತ್ತಿದ್ದ ಸಲ್ಲದ ನಡವಳಿಕೆಗಳಿಗೆ ಸಿಕ್ಕಾ ಬಟ್ಟೆ ಏಟು ತಿಂದಿದ್ದೇನೆ. ಒಮ್ಮೆ ತೋಟದಲ್ಲಿ  ಪಕ್ಕದ ಮನೆಯವರ ತೋಟಕ್ಕೆ ಹೋಗಿ ಮಾವಿನ ಮರ ಹತ್ತಿ ಮಾವಿನ ಹಣ್ಣು ಕದ್ದು ತಿಂದ ವಿಷಯ ಗೊತ್ತಾಯಿತು.

 ನಮ್ಮಮ್ಮ ಬರಲಿ ಮನೆಗೆ ಅವನಿಗೆ ಇವತ್ತು ಇದೆ ಎಂದು ಹೇಳಿದ್ದು ನನ್ನ ಬಗ್ಗೆ ದೂರು ಕೊಟ್ಟಿದ್ದ ವ್ಯಕ್ತಿಗೆ ಹೇಳಿದ್ದಾರೆ. ಆತ ನನಗೆ ತೋಟಕ್ಕೆ ಬರುವ ದಾರಿಯಲ್ಲಿ ಸಿಕ್ಕಾಗ "ಇವತ್ತು ನಿಮ್ಮಮ್ಮನಿಂದ ನಿನಗೆ ಮಾರಿಹಬ್ಬ ಇದೆ ಹೋಗು ಮಾವಿನಹಣ್ಣು ಕದಿಯುತ್ತಿಯಾ ಎಂದ".

ಓ...ಅಮ್ಮನಿಗೆ ಈ ವಿಷಯ ಹೇಳಿಬಿಟ್ಟಿದ್ದಾನೆ. ಇವತ್ತು ಮನೆಗೆ ಹೋದರೆ ಬಿಸಿ ಬಿಸಿ ಕಜ್ಜಾಯ ಗ್ಯಾರಂಟಿ ಎಂದು ಭಯಪಟ್ಟು ರಾತ್ರಿ ನಮ್ಮ ಎಂ ಎಲ್ ಎ ದೊಡ್ಡಪ್ಪನ ಮನೆಯಲ್ಲೇ ಇದ್ದು ಬಿಟ್ಟೆ. ನಮ್ಮ ದೊಡ್ಡಪ್ಪ ಯಾಕೋ ಯಾರ ಹತ್ತಿರವಾದರೂ ಜಗಳ ಮಾಡಿಕೊಂಡೆಯಾ? ಎಂದು ಕೇಳಿದರು.

ಇಲ್ಲ ಪಕ್ಕದ ತೋಟದಲ್ಲಿ ಮಸವಿನ ಹಣ್ಣು ಕದ್ದು ತಿಂದೆ. ಅದಕ್ಕೆ ಅಮ್ಮ ಹೊಡೆಯುತ್ತಾರೆ. ಮನೆಗೆ ಹೋಗಲ್ಲ ಇಲ್ಲೇ ಮಲಗುತ್ತೇನೆ ಎಂದೇ. ಆಯಿತು ಇಲ್ಲೇ  ಊಟ ಮಾಡಿ ಮಲಗಿಕೊ ಎಂದರು.

ಆದರೆ ನಮ್ಮಮ್ಮ ಎಂ ಎಲ್ ಎ ಮನೆಗೆ ಹೊಂದಿಕೊಂಡಿದ್ದ ಕಿಟಕಿಯ ಮೂಲಕ ಹೊಡೆಯಲ್ಲ ಬಾರೋ ಎಂದು  ಕರೆದರೂ ನಾನು ಅವತ್ತು ಹೋಗಲಿಲ್ಲ.

ಆದರೆ ಮರುದಿನ ಭಯದಿಂದಲೇ ಮನೆಗೆ ಹೋದೆ. ಸ್ನಾನ ಪೂಜೆ ಮಾಡಿಕೊಂಡು ಬಾ ತಿಂಡಿ ಮಾಡಿದ್ದೇನೆ ತಿಂಡಿ ತಿನ್ನುವೆಯಂತೆ ಎಂದು ಕರೆದರು ನಮ್ಮಮ್ಮ.

ಆಗ ನನಗೆ ಭಯ ಹೋಯಿತು. ಆದರೆ ಅಮ್ಮ ತಿಂಡಿ ಮಾಡುವಾಗ ಒಲೆಯಲ್ಲಿ ಕಬ್ಬಿಣದ ತುಂಡು ಬಿಸಿ ಮಾಡಿ ಇಟ್ಟುಕೊಂಡಿದ್ದು ನನ್ನ ಗಮನಕ್ಕೆ ಬರಲಿಲ್ಲ. ನಾನು ತಿಂಡಿ ತಿಂದು ಇನ್ನೇನು ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ಬಿಸಿ ಮಾಡಿದ ಆ ಕಬ್ಬಿಣದ ಸಲಾಕೆಯಿಂದ ನನ್ನ ಪಾದಕ್ಕೆ ಇಟ್ಟರು. ಕಂಡೊರೋ ಮರ ಹತ್ತಿ ಮಾವಿನಹಣ್ಣು ಕದಿಯುತ್ತಿಯಾ? ಎಂದು ಶಿಕ್ಷೆ ಕೊಟ್ಟೆ ಬಿಟ್ಟರು. 

ಇನ್ನೊಂದು ಮರೆಯಲಾರದ ಘಟನೆ ಎಂದರೆ ನಮ್ಮ ಅಮ್ಮ ನನ್ನನ್ನು ಬಯ್ದರು ಎಂಬ ಕಾರಣಕ್ಕೆ ನಾನು ನೀನು ಸರಿಯಿಲ್ಲ ನನಗೆ ಮಾತ್ರ ಯಾಕೆ ಹೊಡೆಯುತ್ತಿ, ಅಣ್ಣ ತಮ್ಮನಿಗೆ ಯಾಕೆ ಹೊಡೆಯಲ್ಲಾ? ಎಂದು ಕೇಳಿದ್ದೆ.

ನನ್ನನ್ನೇ ಸರಿಯಿಲ್ಲ ಆನ್ನುತ್ತೀಯಾ ಎಂದು ಗಾರೆ ನೆಲದ ಮೇಲೆ ಹಾಕಿಕೊಂಡು ನನ್ನನ್ನು ತುಳಿದದ್ದೇ ತುಳಿದದ್ಫು ಮಾಡಿದರು. ಆಗಲೂ ನಮ್ಮ ತಂದೆ ನಮ್ಮಮ್ಮನನ್ನು ಬೈಯ್ದು ಮಕ್ಕಳನ್ನು ಯಾರಾದರೂ ಈ ರೀತಿ ಹೊಡೆಯುತ್ತಾರಾ ಎಂದು ನನ್ನನ್ನು ಕರೆದುಕೊಂಡು ಹೋಗಿ ಪಕ್ಕದಲ್ಲಿ ಸಮಾಧಾನ ಮಾಡಿ ಮಲಗಿಸಿದರು.

 ಅದೇ ಕೊನೆ ಅವತ್ತಿನಿಂದ ನಾನು ಅಮ್ಮನಿಗೆ ಸಲ್ಲದ ತಪ್ಪುಗಳನ್ನು ಮಾಡುವುದನ್ನು ಬಿಡುತ್ತಾ ಬಂದೆ.

ಒಂದು ವಿಗ್ರಹ ಸುಂದರಮೂರ್ತಿಯಾಗಿ ರೂಪ ತಾಳಬೇಕಾದರೆ ಉಳಿಗಳ ಅನೇಕ ಪೆಟ್ಟು ತಿನ್ನಲೇ ಬೇಕು. ಹಾಗೆ ನಮ್ಮಮ್ಮ ಸರಿ ದಾರಿಯಲ್ಲಿ ಹೋಗಲು ಕೊಟ್ಟ ಪೆಟ್ಟುಗಳೇ "ನ್ಯಾಯ ನೀತಿ ಧರ್ಮ",ದ ಮಾರ್ಗದಲ್ಲಿ ಸಾಗಲು ಇದುವರೆಗೂ ದಾರಿದೀಪ ಆಗಿದೆ.

ಕೊನೆಯದಾಗಿ, ಹೇಳಬೇಕೆಂದರೆ ಅಂದು ನಾನು ಮೈಸೂರಿನಲ್ಲಿ ಕಾನೂನು ವೃತ್ತಿ  ಪ್ರಾಕ್ಟೀಸ್ ಮಾಡುತ್ತಿದ್ದೆ. ಯಾವುದೋ ಕೆಲಸದ ನಿಮಿತ್ತ ಬೆಳಿಗ್ಗೆ ಬೆಂಗಳೂರಿಗೆ ಬಂದು ರಾತ್ರಿ ಮೈಸೂರಿಗೆ ರೈಲಲ್ಲಿ ಹೋಗುತ್ತಿದ್ದೆ. ಮುಂಜಾನೆ ೪ ಗಂಟೆ  ಗಾಢವಾದ ನಿದ್ದೆ ಬಂದಿತ್ತು. ಈ ಸಮಯದಲ್ಲಿ ರೈಲ್ ನಲ್ಲಿ ಯಾರೋ ಗಲಾಟೆ ಮಾಡುತ್ತಿದ್ದಾರೆ. ಸಡನ್ನಾಗಿ ಎದ್ದು ನೋಡಿದರೆ ರೈಲು ಒಳಗಡೆ ಕೆಲವರು ಕೂಗಾಡುತ್ತಿದ್ದಾರೆ, 

ಅಂದು ಭೀಮನ ಅಮವಾಸೆ ನರಹಂತಕ ವೀರಪ್ಪನ್ ಡಾ. ರಾಜ್ ಕುಮಾರ್ ಅವರನ್ನು ಹಿಡಿದುಕೊಂಡು ಕಾಡಿಗೆ ಹೋಗಿದ್ದ. ಇದರಿಂದಾಗಿ ಕೆರಳಿದ್ದ ಜನರು ಹೊರಗಡೆ ಕೆಲವರು ಬೆಂಕಿ ಹಿಡಿದುಕೊಂಡು ಕೂಗಾಡುತ್ತಿದ್ದದ್ದು  ಸಹ ಕಂಡು ಬಂತು.

 ಕೂಡಲೇ ನನಗೆ ಗಾಬರಿಯಾಗಿ ಇನ್ನೇನು ರೈಲು ನಿಲ್ದಾಣದ ಸಮೀಪ ರೈಲು ಬರುತ್ತಿದ್ದ೦ತೆ ರೈಲಿನಿಂದ ನಿಜವಾಗಿಯೂ ಚಲಿಸುತ್ತಿದ್ದ ರೈಲಿನಿಂದ ಜಿಗಿದುಬಿಟ್ಟೆ.

ಜಂಪ್ ಮಾಡಿದ್ದಕ್ಕೆ ನನ್ನ ಬಲಗಾಲು ಟ್ವಿಸ್ಟ್ ಆಯಿತು. ಎದ್ದೇಳಲು ಆಗಲಿಲ್ಲ. ಕೂಡಲೇ ಅಲ್ಲಿದ್ದ ರೈಲ್ವೆ ಕೆಲಸಗಾರರನ್ನು ಕರೆದೆ. ಅವರು ನನ್ನನ್ನು ಎತ್ಯಿಕೊಂಡು ಹೋಗಿ ರೈಲ್ವೆ ಸ್ಟೇಶನ್ ಹತ್ತಿರ ಇದ್ದ ಆಟೋದಲ್ಲಿ ಕೂರಿಸಿದರು. ಅಲ್ಲದೆ ಇವರನ್ನು ಅವರಿರುವ ಸ್ಥಳವನ್ನು ತೋರಿಸುತ್ತಾರೆ ಅಲ್ಲಿ ಇಳಿಸಿ ಅಂದರು.

ಆಗ ನಾನು ಬೇಡ ಕಾಲು ಸರಿ ಮಾಡುವವರು ಯಾರು ಇದ್ದಾರೆ ಎಂದು ಕೇಳಿದೆ. ಆಗ ಅವರು ಅವರು ಬಾಗಿಲು ತೆಗೆಯುವುದೇ ೮ ಗಂಟೆಗೆ ಎಂದರು. ಪರವಾಗಿಲ್ಲ ಅಲ್ಲಿಯ ವರೆಗೂ ಆ ಅಂಗಡಿಯ ಮುಂದೆ ಕುಳಿತಿರುತ್ತೇನೆ ಎಂದೇ. ಆಗ ಆಟೋದವನು ಕಾಲು ಸರಿಮಾಡುವವರ ಅಂಗಡಿ ಮುಂದೆ ಆಟೋ ನಿಲ್ಲಿಸಿ ನನ್ನನ್ನು ಅಂಗಡಿಯ ಮುಂದೆ ಕೂರಿಸಿದರು.

ಆಗ ನಾನು ಆಟೋದವರಿಗೆ ಕಾಲು ಸರಿ ಮಾಡುವವರೆಗೂ ಇಲ್ಲೇ ಇರಿ ಮತ್ತೆ ಜಯನಗರದಲ್ಲಿ ನಾನಿರುವ ರೂಮ್ ಗೆ ನಿಮ್ಮ ಆಟೋದಲ್ಲಿ ಬಿಡಿ. ವೈಟಿಂಗ್  ಚಾರ್ಜ್ ಕೊಡುತ್ತೇನೆ ಎಂದೇ. ಆಗಲಿ ಎಂದು ನನ್ನ ಜೊತೆ ಇದ್ದೆ ಬಿಟ್ಟರು. 

೮ ಗಂಟೆಗೆ ಕಾಲು ತಿಕ್ಕುವವರು ಬಂದು ಅಂಗಡಿ ಬಾಗಿಲು ತೆಗೆದರು.ಆ. ವೇಳೆಗಾಗಲೇ ಹತ್ತು ಮಂದಿ  ಕೈ ಕಾಲು ಮುರಿದುಕೊಂಡ ಚಿಕಿತ್ಸೆ ಪಡೆಯುವವರು ಬಂದಿದ್ದರು

ನನ್ನನ್ನು ನೋಡಿದ ಇವರುಗಳು ಈ ಹುಡುಗನ ಕಾಲು ಮುರಿದುಕೊಂಡು ಸಿಕ್ಕಾಪಟ್ಟೆ ಊದಿದೆ ಮೊದಲು ಇವರಿಗೆ ಹೋಗಲು ಬಿಡೋಣ ಎಂದು ಒಳಗೆ ಕಳುಹಿಸಿದರು.

ಆ ಕಾಲು ಸರಿಮಾಡುವವನು ಮೊದಲು ಏನಾಯಿತು, ಎಲ್ಲಿ ಆಯಿತು ಎಂದು ಕೇಳಿ ಕಾಲು ಮುಟ್ಟಿ ನೋಡಿದ. ಓ..ದೇವರೇ ಎಂದವನೆ ಅಂಗಾತ ಮಲಗಿ ಎಂದನು. ಅಂಗಾತ ಮಲಗಿದಾಗ  ಯಾವ ಉರು. ಅದು ಇದು ಏನೇನೋ ಕೇಳುತ್ತಾ..ನನ್ನ ಮನಸ್ಸನ್ನು ಬೇರೆ ಕಡೆ ಕೇಂದ್ರೀ ಕರಿಸಿ ಟ್ವಿಸ್ಟ್ ಆಗಿದ್ದ ಕಾಲನ್ನು ಒತ್ತಿ ಹಿಡಿದು ತಿರುಗಿಸಿಯೇ ಬಿಟ್ಟರು. ಕಟಿರ್.. ಕಟಿರ್.. ಅಂತ ಶಬ್ದ ಬಂದಿದ್ದಲ್ಲದೆ ಜನುಮದಲ್ಲಿ ತಡೆಯಲಾರದ ನೋವು ಆಯಿತು.

ನಂತರ ಸತ್ಯ ವಾಗಿ ಹೇಳುತ್ತೇನೆ ಓದುಗ ರೆ,  "ನಿಮ್ಮ ಅಮ್ಮನ ಪುಣ್ಯದಿಂದ ನಿನ್ನ ಕಾಲು ಬಂದಿದೆ" ಊರಿಗೆ ಹೋಗಿ ರೆಸ್ಟ್ ತೆಗೆದುಕೊಳ್ಳಿ ಎಂದರು. ಎಲ್ಲಾ ರೀತಿಯ ಔಷಧಿ ಕೊಟ್ಟು ಕಳುಹಿಸಿದರು. 

ನಾನು ಬಂದಿದ್ದ ಆಟೋದಲ್ಲೇ ನಾನು ಇದ್ದ ರೂಮಿಗೆ ಹೋಗಿ, ನನ್ನ ಸ್ನೇಹಿತನಿಗೆ ವಿಷಯ ತಿಳಿಸಿ ನನ್ನ ಎಲ್ಲಾ ಲಗೇಜು ತೆಗೆದುಕೊಂಡು  ಆಟೋದಲ್ಲಿ ಕೆ.ಎಸ್. ಅರ್.ಟಿ. ಸಿ ಬಸ್ ನಿಲ್ದಾಣ ಕ್ಕೆ ಹೋದೆ. ಆಟೋದನಿಗೆ ಕೊಡಬೇಕಾದ ದುಡ್ಡು ಕೊಟ್ಟೆ. ಅವರಿಂದಲೇ ತಿಂಡಿ ತರಿಸಿಕೊಂಡು ತಿಂದೆ.

 ಮಧ್ಯಾನ್ಹ ಮೈಸೂರಿನಿಂದ ನಮ್ಮ ಪಂಚನಹಳ್ಳಿಗೆ ಹೋಗುವ ಬಸ್ ಬರುವವರೆಗೂ  ಕಾದೆ. ಬಸ್ ಬಂದ ಮೇಲೆ ಅಲ್ಲಿದ್ದವರು ನನ್ನ ಸ್ಥಿತಿ ನೋಡಿ ಬಸ್ ಹತ್ತಿಸಿದರು.ರಾತ್ರಿ ಮನೆಗೆ ಹೋಗಿ ಹೆತ್ತವರಿಗೆ ವಿಷಯ ತಿಳಿಸಿದೆ. 

ನಮ್ಮ ಅಮ್ಮನಂತೂ ನೀನು ತುಂಬಾ ಅಡಾವುಡಿ . ಇಂಥ ಯಡವಟ್ಟು ಮಾಡಿಕೊಳ್ಳುತ್ತಿಯಾ ಅಂತ ಗೊತ್ತಿತ್ತು ಎಂದರು. 

ನಾನು ಅಂದು ಮನೆಯ ಮಂಚದ ಮೇಲೆ ಮಲಗಿಕೊಂಡವನು ಸತ್ಯ ವಾಗಿ ಹೇಳುತ್ತೇನೆ. ಡಾ. ರಾಜ್ ಕುಮಾರ್ ನನ್ನು ನರಹಂತಕ, ಕಾಡುಗಳ್ಳ ವೀರಪ್ಪನ್ ೧೦೮ ನೇ ದಿನದಂದು ಡಾ.ರಾಜ್ ರನ್ನು ಬಿಟ್ಟ ದಿನವೇ ನಾನು ಆಚೆ ಕಡೆ ಓಡಾಡಲು ಮಾಮೂಲಿಯಂತೆ ಪ್ರಾರಂಭಿಸಿದೆ.

ಆ ೧೦೮ ದಿನಗಳಲ್ಲಿ ದಿನಪತ್ರಿಕೆಗಳಾದ ಕನ್ನಡಪ್ರಭ, ಪ್ರಜಾವಾಣಿ, ವಿಜಯ ಕರ್ನಾಟಕ, ಉದಯವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ವೀರಪ್ಪನ್ ವಿರುದ್ಧ ನೋವಿನಿಂದ ಪತ್ರಗಳ ಅಂಕಣಕ್ಕೆ ಬರೆದದ್ದೇ ಬರೆದದ್ಫು. 

ಮೊದಲ ಬಾರಿಗೆ ಕನ್ನಡ ಪ್ರಭ ಪತ್ರಿಕೆಯವರು ನಾನು ಬರೆದ ವಿಷಯವನ್ನು "ಬಾಕ್ಸ್" ನಲ್ಲಿ ಹಾಕಿ ಪ್ರಕಟಿಸಿದ್ದರು. ನಂತರ ಈ ಮೇಲೆ ತಿಳಿಸಿದ ಎಲ್ಲಾ ದಿನಪತ್ರಿಕೆಗಳು ಪ್ರಕಟಿಸಿದವು. ನೀವು ಯಾರಾದರೂ ಈ ಸಮಯದಲ್ಲಿ ಪ್ರಕಟವಾದ ಈ ಪತ್ರಿಕೆ ಇಟ್ಟುಕೊಂಡಿದ್ಧರೆ , ಆಸಕ್ತಿ ಇದ್ದರೆ ಮಾತ್ರ ನೋಡಿ.

ಒಟ್ಟಿನಲ್ಲಿ ಈ ೧೦೮ ದಿನಗಳು ನಮ್ಮಮ್ಮ ನನ್ನ ಕಾಲಿಗೆ ಔಷಧಿ ಹಾಕಿ , ನನ್ನ ಅಣ್ಣ ತಮ್ಮ ಅಕ್ಕ ಕೈಹಿಡಿದು  ಕಾಲು ನಡೆಯುವುದಕ್ಕೆ ಬರುವಂತೆ ನಡೆಸುತ್ತಿದ್ದರು. 

ಅದರಲ್ಲೂ ನಮ್ಮ ಅಮ್ಮ ನನ್ನನ್ನು ಸೇವೆ ಮಾಡಿದ ಪರಿ ನೋಡಿದಾಗ ನನಗೆ ಇಂಥ ತಾಯಿಯನ್ನು ಪಡೆದದ್ದು ಎಷ್ಟು ಜನ್ಮದ ಪುಣ್ಯದ ಫಲವೋ ಅಂದು ಈಗಲೂ ಅನ್ನಿಸುತ್ತಿದೆ.

ನಾನು ಜೀವಂತ ಇರುವವರೆಗೂ ಯಾರನ್ನೂ ಬೇಕಾದರೂ ದೂರ ಮಾಡಿಕೊಳ್ಳ ಬಲ್ಲೆ. ಆದರೆ ಇಂಥ ನನ್ನಮ್ಮನನ್ನು ದೂರ ಮಾಡಲು ಸಾಧ್ಯವೇ ಇಲ್ಲ.

Nehru's betrayal of Hindus Modiji is ready to fix it

ನೆಹರೂ ಹಿಂದೂಗಳಿಗೆ ಮಾಡಿದ ದ್ರೋಹವನ್ನು ಸರಿಪಡಿಸಲು ಮೋದಿಜಿ ಸಿದ್ಧರಾಗಿದ್ದಾರೆ


 

  ನೀವು "ಕಾನೂನು ೩೦", "ಕಾನೂನು ೩೦ ಂ" ಅನ್ನು ಕೇಳಿದ್ದೀರಾ 

  "೩೦ಂ" ಎಂದರೆ ಏನು ಎಂದು ನಿಮಗೆ ತಿಳಿದಿದೆಯೇ?

  ಹೆಚ್ಚು ತಿಳಿಯಲು ತಡ ಮಾಡಬೇಡಿ ......

  ೩೦ಂ ಸಂವಿಧಾನದಲ್ಲಿ ಪ್ರತಿಪಾದಿಸಿದ ಕಾನೂನು

ಈ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಲು ನೆಹರೂ ಮೊದಲು ಪ್ರಯತ್ನಿಸಿದಾಗ, ಸರ್ದಾರ್ ವಲ್ಲಭಭಾಯಿ ಪಟೇಲ್ ಇದನ್ನು ಕಟುವಾಗಿ ವಿರೋಧಿಸಿದರು.

ಸರ್ದಾರ್ ಪಟೇಲ್ ಹೇಳಿದರು, "ಈ ಕಾನೂನು ಹಿಂದೂಗಳಿಗೆ ಮಾಡುವ ದೊಡ್ಡ ದ್ರೋಹ, ಆದ್ದರಿಂದ ಈ ಗರ್ನಿ ಕಾಯಿದೆಯನ್ನು ಸಂವಿಧಾನಕ್ಕೆ ತಂದರೆ, ನಾನು ಕ್ಯಾಬಿನೆಟ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ... ನಂತರ ನಾನು ಈ ದ್ರೋಹದ ವಿರುದ್ಧ ಹೋರಾಡುತ್ತೇನೆ., ಗರ್ನೆ  ಎಲ್ಲಾ ಭಾರತೀಯರ ಜೊತೆಗೆ ... ಮುಂಭಾಗದಿಂದ ವರ್ತಿಸಿ.. " 

   ಸರ್ದಾರ್ ಪಟೇಲರ ಸಂಕಲ್ಪಕ್ಕೆ ನೆಹರೂ ಮಂಡಿಯೂರಬೇಕಾಯಿತು...

 ದುರದೃಷ್ಟವಶಾತ್ .. ಹೇಗೆ ಗೊತ್ತಿಲ್ಲ .. ಕೆಲವೇ ತಿಂಗಳುಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅನಿರೀಕ್ಷಿತವಾಗಿ ನಿಧನರಾದರು ...

ಪಟೇಲರ ಮರಣದ ನಂತರ ನೆಹರು ಈ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿದರು.

೩೦ ಂ ನ ವೈಶಿಷ್ಟ್ಯಗಳನ್ನು ನಾನು ನಿಮಗೆ ಹೇಳುತ್ತೇನೆ.

ಈ ಕಾಯಿದೆಯ ಅಡಿಯಲ್ಲಿ - ಹಿಂದೂಗಳು ತಮ್ಮ "ಹಿಂದೂ ಧರ್ಮ"ವನ್ನು ಹಿಂದೂಗಳಲ್ಲಿ ಕಲಿಸಲು ಅನುಮತಿಸುವುದಿಲ್ಲ.  "ಕಾನೂನು ೩೦ಂ" ಅದಕ್ಕೆ ಅನುಮತಿ ಅಥವಾ ಅಧಿಕಾರವನ್ನು ನೀಡುವುದಿಲ್ಲ .... ಹಾಗಾದರೆ ಹಿಂದೂಗಳು ತಮ್ಮದೇ ಆದ ಖಾಸಗಿ ಕಾಲೇಜುಗಳಲ್ಲಿ ಹಿಂದೂ ಧರ್ಮವನ್ನು ಬೋಧಿಸಬಾರದು ... ಹಿಂದೂ ಧರ್ಮವನ್ನು ಕಲಿಸಲು ಕಾಲೇಜುಗಳನ್ನು ಪ್ರಾರಂಭಿಸಬಾರದು .... ಹಿಂದೂ ಧರ್ಮವನ್ನು ಕಲಿಸಲು ಹಿಂದೂ ಶಾಲೆಗಳನ್ನು ಪ್ರಾರಂಭಿಸಬಾರದು.  ಸರ್ಕಾರಿ ಶಾಲೆಗಳು ಅಥವಾ ಕಾಲೇಜುಗಳಲ್ಲಿ ಹಿಂದೂ ಧರ್ಮದ ಬೋಧನೆಯನ್ನು ಕಾಯಿದೆ ೩೦ಂ ... ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.

ಆದರೆ .. ವಿಚಿತ್ರವೆಂದರೆ ಇದರೊಂದಿಗೆ (೩೦ಂ ಯೊಂದಿಗೆ) ನೆಹರೂ ಅವರ ಸಂವಿಧಾನದಲ್ಲಿ ಮತ್ತೊಂದು ಕಾನೂನಿದೆ - "ಆಕ್ಟ್ ೩೦".  ಈ "ಕಾನೂನು ೩೦" ರ ಪ್ರಕಾರ ಮುಸ್ಲಿಮರು ತಮ್ಮ ಧಾರ್ಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್ ಧಾರ್ಮಿಕ ಶಾಲೆಗಳನ್ನು ಪ್ರಾರಂಭಿಸಬಹುದು ಮತ್ತು ಪ್ರಾರಂಭಿಸಬಹುದು ..... ಮುಸ್ಲಿಮರು ತಮ್ಮ ಧರ್ಮವನ್ನು ಕಲಿಸಬಹುದು .... ಕಾನೂನು ೩೦ ಮುಸ್ಲಿಮರಿಗೆ ತಮ್ಮದೇ ಆದ 'ಮದ್ರಸಾ' ಪ್ರಾರಂಭಿಸಲು ಸಂಪೂರ್ಣ ಅಧಿಕಾರ ಮತ್ತು ಅನುಮತಿಯನ್ನು ನೀಡುತ್ತದೆ.  ಮತ್ತು ಸಂವಿಧಾನದ ೩೦ ನೇ ವಿಧಿ ಕ್ರಿಶ್ಚಿಯನ್ನರಿಗೆ ತಮ್ಮ ಸ್ವಂತ ಧಾರ್ಮಿಕ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಲು ಮತ್ತು ಅವರ ಧರ್ಮವನ್ನು ಮುಕ್ತವಾಗಿ ಕಲಿಸಲು ಮತ್ತು ಪ್ರಚಾರ ಮಾಡಲು ಸಂಪೂರ್ಣ ಅಧಿಕಾರ ಮತ್ತು ಅನುಮತಿಯನ್ನು ನೀಡುತ್ತದೆ ... * !!

   ಇದರ ಇನ್ನೊಂದು ಕಾನೂನು ಅಂಶವೆಂದರೆ ಹಿಂದೂ ದೇವಾಲಯಗಳ ಎಲ್ಲಾ ಹಣ ಮತ್ತು ಸಂಪತ್ತನ್ನು ಸರ್ಕಾರದ ಇಚ್ಛೆಗೆ ಬಿಡಬಹುದು .... ಹಿಂದೂ ದೇವಾಲಯಗಳಲ್ಲಿ ಹಿಂದೂ ಭಕ್ತರು ನೀಡುವ ಎಲ್ಲಾ ಹಣ ಮತ್ತು ಇತರ ದೇಣಿಗೆಯನ್ನು ರಾಜ್ಯದ ಖಜಾನೆಗೆ ತೆಗೆದುಕೊಳ್ಳಬಹುದು.  .... ...

   ಅದೇ ಸಮಯದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಸೀದಿಗಳಿಂದ ದೇಣಿಗೆ ಮತ್ತು ದೇಣಿಗೆಗಳನ್ನು ಸಂಪೂರ್ಣವಾಗಿ ಕ್ರಿಶ್ಚಿಯನ್-ಮುಸ್ಲಿಂ ಸಮುದಾಯಕ್ಕೆ ನೀಡಬಹುದು .... ಈ "ಕಾನೂನು ೩೦" ನ ವೈಶಿಷ್ಟ್ಯಗಳು ಹೀಗಿವೆ ..

    ಆದ್ದರಿಂದ "ಕಾನೂನು ೩೦ಂ" ಮತ್ತು "ಕಾನೂನು ೩೦" ಹಿಂದೂಗಳಿಗೆ ಘೋರ ತಾರತಮ್ಯ ಮತ್ತು ನಿಷ್ಠುರ ದ್ರೋಹವಾಗಿದೆ.

   ಎಲ್ಲರೂ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು...ತಿಳಿದುಕೊಳ್ಳಿ... !!

   ಇತರರ ಅರಿವು ನಮ್ಮಲ್ಲಿ ಪ್ರತಿಯೊಬ್ಬರು ಸನಾತನ ಧರ್ಮದ ರಕ್ಷಕರಾಗುತ್ತೇವೆ .. ಓದಿ, ಕಲಿಯಿರಿ ಮತ್ತು ಹರಡಿ

 ಹಿಂದೂ ರಾಷ್ಟ್ರ ನಿರ್ಮಿತಿ -

 ವಿಶ್ವದಾದ್ಯಂತ ಇರುವ ಹಿಂದೂಗಳು ಓದಲೇಬೇಕಾದ ಸಂದೇಶ!

  ಹಲವು ಜನರು ಸಾಮಾಜಿಕ ಮಾಧ್ಯಮವನ್ನು ಲಘುವಾಗಿ ಪರಿಗಣಿಸುತ್ತಾರೆ ಆದರೆ ಅದರ ಸಾಮರ್ಥ್ಯಗಳನ್ನು ನಾನು ನಿಮಗೆ ಹೇಳುತ್ತೇನೆ, ಸ್ವಲ್ಪ ಸಮಯ ತೆಗೆದುಕೊಳ್ಳಿ:

  ೧: ಭಾರತದಲ್ಲಿನ ಹಿಂದೂಗಳ ಹೊಸ ವಿಶ್ವಾಸ ಮತ್ತು ಐಕ್ಯತೆಯಿಂದಾಗಿ, ಇಡೀ ಯುರೋಪ್ ಒತ್ತಡವನ್ನು ಅನುಭವಿಸುತ್ತಿದೆ!

 ೨: ಬಡ ಭಾರತೀಯರನ್ನು ಮುಸ್ಲಿಮರು ಅಥವಾ ಕ್ರೆöÊಸ್ತರನ್ನಾಗಿ ಪರಿವರ್ತಿಸುವ ಷಡ್ಯಂತ್ರವನ್ನು ಹಿಂದೂ ಏಕತೆ ಅನಾವರಣಗೊಳಿಸಿದೆ.  ನಮ್ಮ ಪ್ರಸ್ತುತ ಸರ್ಕಾರವು ೨೨,೦೦೦ ಓಉಔಗಳು ಮತ್ತು ೪ ಪ್ರಮುಖ ಕ್ರಿಶ್ಚಿಯನ್ ಮತಾಂತರ ಸಂಸ್ಥೆಗಳನ್ನು ನಿಷೇಧಿಸಿದೆ!

 ೩: ಹಿಂದೂಗಳ ಒಗ್ಗಟ್ಟಿನ ಕಾರಣದಿಂದಾಗಿ, "ಲವ್ ಜಿಹಾದ್" ಅನ್ನು ಈಗ ೫೦% ಕ್ಕೆ ಸೀಮಿತಗೊಳಿಸಲಾಗಿದೆ ಮತ್ತು ಇದು ಈಗ ಅನೇಕ ರಾಜ್ಯಗಳಲ್ಲಿ ಕಾನೂನುಬಾಹಿರವಾಗಿದೆ!

 ೪: ಹಿಂದೂಗಳ ಒಗ್ಗಟ್ಟಿನಿಂದಾಗಿ ಜಿಹಾದ್ ದಂಧೆ ಎಷ್ಟೋ ಕಡೆ ದಾಳಿಗೆ ಒಳಗಾಗಿದೆ!

 ೫: ಹಿಂದೂ ಐಕ್ಯತೆಯ ಕಾರಣದಿಂದ "ಸನಾತನ ಧರ್ಮ"ದ ವಿರುದ್ಧ ಮಾತನಾಡಿದ ಶೇ.೭೦ರಷ್ಟು ಜನರ ಬಾಯಿ ಮುಚ್ಚಿಸಲಾಗಿದೆ!  ಬದಲಿಗೆ ಅನೇಕ ವಿದೇಶಿಗರು ಇದನ್ನು ಅಳವಡಿಸಿಕೊಳ್ಳಲು ಆರಂಭಿಸಿದ್ದಾರೆ.

 ೬: ಹಿಂದೂ ಐಕ್ಯತೆಯಿಂದ, Whಚಿಣsಂಠಿಠಿ ಮತ್ತು ಈಚಿಛಿebooಞ ನಲ್ಲಿ ನಮ್ಮ ಹಬ್ಬಗಳು ಮತ್ತು ಸಂಸ್ಕೃತಿಯ ಬಗ್ಗೆ ಹಾಸ್ಯಗಳು ೮೦% ರಷ್ಟು ಕಡಿಮೆಯಾಗಿದೆ!

 ೭: ಹಿಂದೂ ಸಾರ್ವಜನಿಕರ ಒಗ್ಗಟ್ಟಿನಿಂದಾಗಿ, ಇಡೀ ಪ್ರತಿಪಕ್ಷಗಳು ಈಗ ಹಿಂದೂವಾಗಿ ಕಾಣಲು ಹವಣಿಸುತ್ತಿವೆ!

 ೮: ನಮ್ಮ ಒಗ್ಗಟ್ಟಿನಿಂದಾಗಿ ಬಾಲಿವುಡ್ ಒತ್ತಡದಲ್ಲಿದೆ, ಸೀತಾಮಾತೆಯ ಪಾತ್ರವನ್ನು ಕರೀನಾ ಮಾಡಲಿದ್ದರು, ಈಗ ಕಂಗನಾ!

 ೯: ಹಿಂದೂಗಳು ಮೊದಲಿನಂತೆ ಮೌನವಾಗಿಲ್ಲ, ಅವರು ಈಗ ಲಂಡನ್‌ನಂತಹ ಸ್ಥಳಗಳಲ್ಲಿ ವಿದೇಶಗಳಲ್ಲಿಯೂ ಪ್ರತಿಭಟನೆ ಮಾಡುತ್ತಿದ್ದಾರೆ ಮತ್ತು ಪಾಕಿಸ್ತಾನಿಗಳ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಬಹಿಷ್ಕರಿಸಿದ್ದಾರೆ!

 ನೀವು ಸಾಮಾಜಿಕ ಮಾಧ್ಯಮದಲ್ಲಿ ಕೇವಲ ೧೦ ಹಿಂದೂ ಸ್ನೇಹಿತರನ್ನು ಹೊಂದಿದ್ದರೂ ಸಹ, ಅವರಲ್ಲಿ ಈ ಆಲೋಚನೆಗಳನ್ನು ಹರಡುವುದು ಅಂತಿಮವಾಗಿ ಲಕ್ಷಾಂತರ ಹಿಂದೂಗಳನ್ನು ತಲುಪಲು ಸಹಾಯ ಮಾಡುತ್ತದೆ!

 ನೀವು ತಿಳಿಯದೆ ಬರೆದ/ಹಂಚಿಕೊಂಡ ವಿಷಯಗಳು ಲಕ್ಷಗಟ್ಟಲೆ ತಲುಪುತ್ತಿವೆ ಎಂಬುದನ್ನು ಗಮನಿಸಿ!

 ನಿಮಗೆ ನೀವೇ ಬರೆಯಲು ಆಗದಿದ್ದರೆ, ಬರೆಯುವ/ಮಾತನಾಡುವವರ ಆಲೋಚನೆಗಳನ್ನು ಫಾರ್ವರ್ಡ್ ಮಾಡುವುದನ್ನು, ಹಂಚಿಕೊಳ್ಳುವುದನ್ನು, ನಕಲು ಮಾಡುವುದನ್ನು ಮುಂದುವರಿಸಿ

 ಹಿಂದೂ ಧರ್ಮದ ಅರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, "ಹುಸಿ ಸೆಕ್ಯುಲರಿಸಂ" ಅನ್ನು ಬೆಂಬಲಿಸುವ ಹಿಂದೂಗಳು ಕೂಡ ಈಗ ತಮ್ಮ ಪಾತ್ರದ ಬಗ್ಗೆ ಯೋಚಿಸಲು ಪ್ರಾರಂಭಿಸಿದ್ದಾರೆ!

 ಸಂವಹನ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವ ಜನರು ನಿಷ್ಕ್ರಿಯವಾಗಿರಬೇಕಾಗಿಲ್ಲ;  ಕೆಲವರು ಶಿಕ್ಷಣದಲ್ಲಿದ್ದಾರೆ, ಕೆಲವರು ಉದ್ಯೋಗದಲ್ಲಿದ್ದಾರೆ, ಇತರರು ವ್ಯಾಪಾರದಲ್ಲಿದ್ದಾರೆ ಅಥವಾ ಸ್ವಯಂ ಉದ್ಯೋಗಿಗಳಾಗಿದ್ದಾರೆ ಅಥವಾ ಉದ್ಯಮಿಗಳಾಗಿದ್ದಾರೆ!

 ಆದರೆ ಹಿಂದೂಗಳನ್ನು ಒಗ್ಗೂಡಿಸಲು ಮತ್ತು ಜಾಗೃತಿ ಮೂಡಿಸಲು ಎಲ್ಲರೂ "ಧರ್ಮ ಕಾರ್ಯ" ಕ್ಕಾಗಿ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ!

 ಏನೂ ಮಾಡದೆ ತೇರ್ಗಡೆಯಾಗುವುದಕ್ಕಿಂತ ಗುರಿಗಾಗಿ ಬದುಕುವುದು ಉತ್ತಮ!  ಮುಂದಿನ ಪೀಳಿಗೆಯಾದರೂ ನನ್ನ ತಂದೆ ತಾಯಿ ನಮ್ಮ ಸಂಸ್ಕೃತಿ ಮತ್ತು ದೇಶಕ್ಕಾಗಿ ಹೋರಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ!

ನೀವು ಇಲ್ಲಿರುವುದು ಇಲ್ಲ ಎಂಬುದಕ್ಕೆ ಅಲ್ಲ ಎಂಬುದನ್ನು ನೆನಪಿನಲ್ಲಿಡಿ.  ಇಷ್ಟಗಳು ಅಥವಾ ಇಷ್ಟಪಡದಿರುವಿಕೆಗಳು ಆದರೆ ನಮ್ಮ ಶ್ರೇಷ್ಠ ಸಂಸ್ಕೃತಿಯ ಮೌಲ್ಯಗಳು ಮತ್ತು ಸಂಪ್ರದಾಯಗಳ ಅರಿವನ್ನು ಹರಡುವುದಕ್ಕಾಗಿ!  ಎಲ್ಲಾ ರಂಗಗಳಲ್ಲಿ ಉತ್ತಮ ಕೆಲಸವನ್ನು ಮುಂದುವರಿಸಿ!  ನಮ್ಮ ಶಕ್ತಿ ಹೆಚ್ಚುತ್ತಿದೆ!                     

 ಮೋದಿ, ಯೋಗಿ, ಅಮಿತ್ ಶಾ ಮತ್ತು ಇತರ ಶ್ರೇಷ್ಠ ಹಿಂದೂ ನಾಯಕರಂತಹ ನಾಯಕರಿಗೆ ಕ್ರೆಡಿಟ್ ಸಲ್ಲುತ್ತದೆ! ಹಿಂದೂಗಳು ಐಕ್ಯತೆಗೆ ಸ್ಪಷ್ಟವಾದ ಶಕ್ತಿಯಿದೆ. ಆದ್ದರಿಂದ ಸಂಪರ್ಕದಲ್ಲಿರಿ ಮತ್ತು ಉತ್ತಮ ಸಂದೇಶವನ್ನು ಹರಡುತ್ತಲೇ ಇರಿ, ಜಾತಿ ಭೇದಗಳನ್ನು ಕ್ಷಮಿಸುವ, ಮರೆತು, ಜಯಿಸುವ ಮತ್ತು ಕಸದ ಬುಟ್ಟಿಗೆ ಹಾಕುವ ಮೂಲಕ ಪರಸ್ಪರ ಸಹಾಯ ಮಾಡಿ!

 ಮತ್ತು ಭಾರತವು ಮತ್ತೊಮ್ಮೆ ಮಹಾನ್ ರಾಷ್ಟ್ರ ಮತ್ತು ಸೂಪರ್ ಪವರ್ ಆಗಲಿದೆ. 

Wednesday, September 14, 2022

Will India sit in Big-B's chair?

ಬಿಗ್-ಬಿ ಕುರ್ಚಿಯಲ್ಲಿ ಭಾರತ ಕೂರುವುದೇ?

ಕೊರೊನಾದ ಎರಡನೇ ಅಲೆ ದಾಂಗುಡಿ ಇಟ್ಟಾಗ ಅದು ಕಣ್ಣೀರು ಹಾಕಿಸಿತ್ತು. ಪ್ರತಿಪಕ್ಷಗಳಿಗೆ ಅದು ಹಬ್ಬ. ಜನರ ಸಾವಿಗೆ ಮೋದಿಯೇ ಕಾರಣ ಎನ್ನುತ್ತಾ ಅನೇಕ ಕಡೆ ಆಮ್ಲಜನಕದ ಕೊರತೆ ಎಂಬ ಸುದ್ದಿಯನ್ನು ಕೃತಕವಾಗಿ ಹಬ್ಬಿಸಿ, ಕಂಗೆಟ್ಟ ಜನರ ಆರ್ತನಾದದ ಸೆರಗಿನಲ್ಲಿ ನಿಂತು ಮೊದಿಯ ಮೇಲೆ ಕಲ್ಲೆಸೆಯುತ್ತಿದ್ದರು. ಆ ಸಂದರ್ಭದಲ್ಲಿ ಉಂಟಾದ ಗೊಂದಲಗಳಿಂದ ಬೇಸತ್ತು ಮೋದಿ ಒತ್ತಡ ತಡೆಯಲಾಗದೇ ತಪ್ಪುಗಳ ಮೇಲೆ ತಪ್ಪು ಮಾಡುತ್ತಾರೆ ಎಂದು ಅವರು ಕನಸು ಕಾಣುತ್ತಲಿದ್ದರು. ಒಳಗಿರುವ ದೇಶಭಕ್ತಿ ಮತ್ತು ರಾಷ್ಟ್ರನಿರ್ಮಾಣದ ತುಡಿತದ ಸಾಮಥ್ರ‍್ಯ ಎಂಥದ್ದೆಂದರೆ ಯಾವಾಗಲೂ ಮಾಡುತ್ತಿದ್ದ ಕೆಲಸಕ್ಕಿಂತಲೂ ಹೆಚ್ಚು ಕೆಲಸ ಮಾಡಿ ಆ ಮನುಷ್ಯ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಅಚ್ಚರಿಗೆ ದೂಡಿಬಿಟ್ಟ. ಅಂದಿನ ದಿನಗಳಲ್ಲಿ ಮೋದಿಯವರ ಗುಜರಾತಿನ ಚಟುವಟಿಕೆಗಳನ್ನು ಆಡಿಕೊಳ್ಳುತ್ತಿದ್ದ ಕಾಂಗ್ರೆಸ್ಸಿಗರ ಪುಂಗಿ ಇಂದು ಪರಿಪೂರ್ಣ ನಿಂತೇಹೋಗಿದೆ. ಇದನ್ನು ನಾನು ಹೇಳಬೇಕಿಲ್ಲ, ಸ್ವತಃ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಪ್ರಕಟಿಸಿರುವ ವರದಿ ಹೇಳುತ್ತಿದೆ. ಅಮೇರಿಕಾ ನೆಲೆ ಹೊಂದಿರುವ ಈ ಡಾಟಾ ಇಂಟೆಲಿಜೆನ್ಸ್ ಕಂಪೆನಿ ಪ್ರತಿದಿನ ಹನ್ನೊಂದು ಸಾವಿರಕ್ಕೂ ಹೆಚ್ಚು ಜನರ ಸಂದರ್ಶನ ನಡೆಸುತ್ತದೆ. ಅಮೇರಿಕಾ ಒಂದರಲ್ಲಿಯೇ ನಾಲ್ಕು ಸಾವಿರಕ್ಕೂ ಹೆಚ್ಚು ದಾಖಲು ಮಾಡಿಕೊಂಡ ಜನರ ವಿಚಾರಣೆ ನಡೆಸುತ್ತದೆ. ಅದರ ಆಧಾರದ ಮೇಲೆಯೇ ಹೊರಬಿದ್ದಿರುವ ಈ ವರದಿಯ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನರ ಆದರಕ್ಕೆ ಒಳಗಾಗಿರುವ ನಾಯಕ ನರೇಂದ್ರಮೋದಿಯೇ. ೨೦೨೦ರ ಜನವರಿಯಿಂದ ೨೦೨೧ರ ನವೆಂಬರ್ನವರೆಗೂ ನರೇಂದ್ರಮೋದಿಯವರ ಮೆಚ್ಚುಗೆಯ ಅಂಶಗಳು ಜನರಿಂದ ಮಾಸಿಯೇ ಇಲ್ಲ. ಎರಡನೇ ಅಲೆಯ ವೇಳೆಗೆ ಸ್ವಲ್ಪ ಕುಸಿದಿರುವಂತೆ ಕಂಡಿತ್ತಾದರೂ ಈಗ ಮತ್ತೆ ಇದು ಶೇಕಡಾ ೭೦ನ್ನು ದಾಟಿದೆ. ಸ್ವತಃ ಅಮೇರಿಕಾದ ಅಧ್ಯಕ್ಷ ಬೈಡೆನ್ ಋಣಾತ್ಮಕವಾದ ರೇಟಿಂಗ್ ಅನ್ನು ಪಡೆದಿದ್ದು ಮೋದಿ ಜಾಗತಿಕವಾಗಿ ಸಿಕ್ಸರ್ಗಳ ಮೇಲೆ ಸಿಕ್ಸರ್ ಬಾರಿಸುತ್ತಲೇ ಇದ್ದಾರೆ. ಕಾಂಗ್ರೆಸ್ಸಿಗರದ್ದು ಈಗ ಒಂದೇ ಕಣ್ಣಿನ ರೋದನ!

ಎರಡನೇ ಅಲೆಯ ನಂತರ ಪ್ರತಿಪಕ್ಷಗಳಿಗಿದ್ದ ಏಕೈಕ ಮಂತ್ರ ಪೆಟ್ರೋಲ್-ಡೀಸೆಲ್ನ ಬೆಲೆ ಏರಿಕೆಯದ್ದು ಮಾತ್ರ. ಸಾಕಷ್ಟು ದಿನಗಳ ಕಾಲ ಅದರ ಕುರಿತಂತೆ ತಲೆಕೆಡಿಸಿಕೊಳ್ಳದ ಮೋದಿ ಜಿಎಸ್ಟಿ ತೆರಿಗೆ ಹಣ ಹೆಚ್ಚು-ಕಡಿಮೆ ಹಳೆಯದರ ಗರಿಷ್ಠ ಮಟ್ಟವನ್ನು ಮುಟ್ಟುತ್ತಿದ್ದಂತೆ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಜನರಿಗೆ ನೆಮ್ಮದಿ ತಂದಿದ್ದಾರೆ. ಮೋದಿಯಿಂದ ಈ ನಡೆಯನ್ನು ನಿರೀಕ್ಷಿಸದಿದ್ದ ಕಾಂಗ್ರೆಸ್ಸಿಗೆ ಈಗ ಧರ್ಮಸಂಕಟ. ಬಿಜೆಪಿ ಶಾಸಿತ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾಕಷ್ಟು ಇಳಿಕೆ ಕಂಡಿದ್ದು ಪ್ರತಿಪಕ್ಷಗಳ ಮೇಲೆ ಎಲ್ಲಿಲ್ಲದ ಒತ್ತಡ ಹಬ್ಬಿಬಿಟ್ಟಿದೆ. ಇಂಧನದ ಬೆಲೆ ಹೆಚ್ಚಾಗಿದೆ. ಅದಕ್ಕೆ ಮೋದಿಯೇ ಕಾರಣ ಎಂದು ಪ್ರಚಾರ ಮಾಡಿದ ಪ್ರತಿಪಕ್ಷಗಳಿಗೆ ಈಗ ಬಿಜೆಪಿಯೇತರ ರಾಜ್ಯಗಳಲ್ಲಿ ಅದು ಕಡಿತವಾಗದಿರುವುದಕ್ಕೆ ಪ್ರತಿಪಕ್ಷಗಳೇ ಕಾರಣ ಎಂಬ ಸಂದೇಶವನ್ನು ಸದ್ದಿಲ್ಲದೇ ರವಾನಿಸಿಬಿಟ್ಟಿದ್ದಾರೆ. ಈ ಒತ್ತಡದಿಂದ ಸುಧಾರಿಸಿಕೊಂಡು ಹೊರಬರಲು ಸಾಕಷ್ಟು ಕಾಲವೇ ಬೇಕು. ಹಾಗಂತ ಮೋದಿ ಇವಿಷ್ಟೇ ಚಟುವಟಿಕೆಗಳಲ್ಲಿ ಮೀಸಲಾಗಿಲ್ಲ. ಶಾಂತವಾಗಿ ಭಾರತವನ್ನು ಆಂತರಿಕವಾಗಿ ಕಟ್ಟುವ ಮತ್ತು ಹೊರ ಜಗತ್ತಿನಲ್ಲಿ ಭಾರತದ ಛವಿಯನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಜಾಗತಿಕ ನಾಯಕರು ಮೋದಿಯೊಂದಿಗೆ ನಡೆದುಕೊಂಡ ರೀತಿಯನ್ನು ಗಮನಿಸಿದರೆ ಭಾರತ ಅವರಿಗೆಲ್ಲ ಎಷ್ಟು ಅನಿವಾರ್ಯವಾಗಿದೆ ಎಂಬುದನ್ನು ಬಿಂಬಿಸುವಂತಿತ್ತು. ಮನಮೋಹನ ಸಿಂಗರೇ ಮಾತನಾಡಿಸಿದರೂ ತಲೆಕೆಡಿಸಿಕೊಳ್ಳದಿದ್ದ ನಾಯಕರೆಲ್ಲ ಮೋದಿಯ ಮೈಮೇಲೆ ಬಿದ್ದು ಮಾತನಾಡಿಸುತ್ತಾರೆ. ಇಂಗ್ಲೆಂಡಿನ ಪ್ರಧಾನಿಯಂತೂ ಜಾಗತಿಕ ವೇದಿಕೆಯ ಮೇಲೆ ಮೋದಿಯನ್ನು ಹೊಗಳಿದ ರೀತಿ ಎಂಥವನಿಗೂ ಅಚ್ಚರಿ ತರುವಂಥದ್ದು. ಇವೆಲ್ಲವೂ ಸುಮ್ಮ-ಸುಮ್ಮನೆ ಆಗುವಂಥದ್ದಲ್ಲ. ಅದರ ಹಿಂದಿನ ಪರಿಶ್ರಮ ಮತ್ತು ಪರದೆಯ ಹಿಂದೆ ಅವರು ಮಾಡಬಹುದಾಗಿರುವ ಕೂಟನೀತಿಗಳೂ ಕಾರಣವೇ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹೀಗೆ ಭಾರತ ಮುನ್ನಡೆದರೆ ಅಮೇರಿಕಾದ ಬಿಗ್ ಬಿ ಅಥವಾ ದೊಡ್ಡಣ್ಣ ಎಂಬ ಪಟ್ಟವನ್ನು ಕಸಿದುಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ. ಅತಿಶಯೋಕ್ತಿ ಎನಿಸಿದರೆ ಮುಂದೆ ಹೇಳಲಿರುವ ಕೆಲವು ಸಂಗತಿಗಳನ್ನು ಗಮನಿಸಿ.

ಮೊನ್ನಿನ ಅಂತರ್ರಾಷ್ಟ್ರೀಯ ಸಭೆಯಲ್ಲಿ ಹವಾಮಾನ ಬದಲಾವಣೆಯ ಕುರಿತಂತೆ ಜಗತ್ತಿನ ಗಮನ ಸೆಳೆದಿದ್ದು ಭಾರತವೇ. ೨೦೭೦ರ ವೇಳೆಗೆ ಜಗತ್ತನ್ನು ವಾಸಯೋಗ್ಯವಾಗಿಸುವ ಹೊಣೆಗಾರಿಕೆ ತಮ್ಮೆಲ್ಲರದ್ದೂ ಎಂದು ಹೇಳಿದ ಮೋದಿ ಅದಕ್ಕೆ ಮೊದಲ ಹೆಜ್ಜೆ ತಾವೇ ಇಡುವುದಾಗಿ ಮಾತುಕೊಟ್ಟು ಭಾರತದ ನಿಶ್ಚಿತ ಗುರಿಯನ್ನು ಘೋಷಿಸಿಬಿಟ್ಟರು. ಹಾಗಂತ ಇದು ಸೋತವನ ದನಿಯಂತಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಇಂಗಾಲವನ್ನು ಹೊರಹಾಕುವ ರಾಷ್ಟ್ರವಾದರೂ ಅದನ್ನೂ ಕಡಿತಗೊಳಿಸುವ ಭರವಸೆ ನೀಡುತ್ತಿದ್ದೇವೆ ಎಂಬುದನ್ನು ನೆನಪಿಸಿಯೇ ಈ ಕೆಲಸ ಮಾಡಲಾಯ್ತು. ಅಷ್ಟೇ ಅಲ್ಲ, ಮುಂದುವರೆದ ರಾಷ್ಟ್ರಗಳು ವಾತಾವರಣವನ್ನು ಹಾಳುಗೆಡವಿದ್ದರ ಪರಿಣಾಮವಾಗಿ ಸಣ್ಣ-ಪುಟ್ಟ ದ್ವೀಪ ರಾಷ್ಟ್ರಗಳು ದುಃಖಕಾರಿ ಸನ್ನಿವೇಶದಲ್ಲಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ ಮೋದಿ ಈ ರೀತಿಯ ಬಡ ದ್ವೀಪ ರಾಷ್ಟ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಭಾರತ ಹೊರಲಿದೆ ಎಂದು ಹೇಳಲು ಮರೆಯಲಿಲ್ಲ. ಇದು ವಸುಧೈವ ಕುಟುಂಬಕಂ ಎಂಬ ಭಾರತದ ನೀತಿಗೆ ಪೂರಕವಾಗಿಯೇ ಇದೆ. ವಾಸ್ತವವಾಗಿ ಸಿರಿವಂತ ರಾಷ್ಟ್ರಗಳು ಈ ಬಡ ರಾಷ್ಟ್ರಗಳ ಕುರಿತಂತೆ ಕಾಳಜಿ ವಹಿಸಬೇಕಿತ್ತು. ಮೋದಿ ಅದನ್ನು ತನ್ನ ಹೆಗಲಿಗೆ ವರ್ಗಾಯಿಸಿಕೊಳ್ಳುವುದರ ಮೂಲಕ ಭಾರತದ ದೃಷ್ಟಿ ಎತ್ತಲಿದೆ ಎಂಬುದನ್ನು ಸೂಚ್ಯವಾಗಿ ವಿವರಿಸಿದರು. ಹಾಗಂತ ಇದು ಬರಿ ಶಾಂತಿಯ ಕಾಲದ ಕೆಲಸವೇನೂ ಅಲ್ಲ. ಬುದ್ಧನ ಶಾಂತಿಮಂತ್ರವನ್ನು ಜಪಿಸುತ್ತಲೇ ಮೋದಿ ಕೃಷ್ಣನ ಯುದ್ಧತಂತ್ರವನ್ನು ತಮ್ಮದಾಗಿಸಿಕೊಂಡುಬಿಟ್ಟಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ತೆಕ್ಕೆಗೆ ಹಾಕಿಕೊಂಡ ನಂತರ ಪಾಕಿಸ್ತಾನದ ಮೆರೆದಾಟ ಕೈಮೀರಿ ಹೋಗಿತ್ತು. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಸಹನೆಯ ಮಿತಿ ತಪ್ಪಿದೆ. ಈಗ ಇರುವ ಪರಿಹಾರ ಎರಡೇ. ಮೊದಲನೆಯದು ನೇರ ಯುದ್ಧಕ್ಕಿಳಿಯುವುದು ಅಥವಾ ಪಾಕಿಸ್ತಾನವನ್ನು ಒಳಗಿನಿಂದಲೇ ಬೆಂದು, ಬಸವಳಿಯುವಂತೆ ಮಾಡುವುದು. ಎರಡಕ್ಕೂ ಬೇಕಾದ ಸಿದ್ಧತೆ ಭಾರತ ಮಾಡುತ್ತಿದೆ. ಕಾಕತಾಳೀಯವೆನಿಸಿದರೂ ಕಳೆದ ಕೆಲವಾರು ದಿನಗಳಿಂದ ಪಾಕಿಸ್ತಾನದೊಳಗೆ ನೆಮ್ಮದಿಯೇ ಇಲ್ಲ. ಅಲ್ಲಿನ ತೆಹರೀಕ್-ಎ-ಲಬ್ಬಾಯ್ಕ್ ಪಾಕಿಸ್ತಾನ ದಿನ ಬೆಳಗಾದರೆ ಸರ್ಕಾರದ ವಿರುದ್ಧ ಮುರಕೊಂಡು ಬೀಳುತ್ತಿದೆ. ಅದರ ಒತ್ತಡಕ್ಕೆ ಮಣಿದು ಅನೇಕ ಬಂಧಿತ ಜಿಹಾದಿ ಸೈನಿಕರನ್ನು ಪಾಕಿಸ್ತಾನ ಸರ್ಕಾರ ಬಿಡಬೇಕಾಗಿ ಬಂದಿದೆ.

ಯಾವ ತಾಲಿಬಾನೀ ಸರ್ಕಾರದ ಅಹಂಕಾರದ ಮೇಲೆ ಭಾರತವನ್ನು ಅಲುಗಾಡಿಸುವ ಮಾತುಗಳನ್ನು ಪಾಕಿಸ್ತಾನ ಆಡುತ್ತಿತ್ತೋ ಈಗ ಅದೇ ತಾಲಿಬಾನ್ ಪಾಕಿಸ್ತಾನಕ್ಕೆ ಮುಳುವಾಗುವಂತೆ ಕಾಣುತ್ತಿದೆ. ಏಕಾಏಕಿ ಇವೆಲ್ಲ ಆಗಲು ಕಾರಣವೇನು? ಯಾರಿಗೂ ಅಂದಾಜಾಗುತ್ತಿಲ್ಲ. ಆದರೆ ಒಂದಂತೂ ಸತ್ಯ. ಪಾಕಿಸ್ತಾನ ತಂಟೆ ಮಾಡಲು ಬಂದರೆ ಅದನ್ನು ನಾಲ್ಕು ಚೂರು ಮಾಡುವುದು ನಿಶ್ಚಿತ ಎಂದು ಹೇಳಿದ್ದ ಅಜಿತ್ ದೋವೆಲ್ರ ಮಾತನ್ನು ನೆನಪಿಸಿಕೊಳ್ಳಬೇಕು ಅಷ್ಟೇ! ಪಾಕಿಸ್ತಾನದ ವಿರುದ್ಧ ಯುದ್ಧಕ್ಕೂ ಭಾರತ ಪೂರ್ಣ ತಯಾರಾಗಿರುವಂತೆ ಕಾಣುತ್ತದೆ. ತೈವಾನಿನ ಮೇಲೆ ಏರಿಹೋಗಿ ಅದನ್ನು ನುಂಗಿ ನೀರ್ಕುಡಿಯಬೇಕೆಂಬ ಚೀನಾದ ಹೆಬ್ಬಯಕೆಯನ್ನು ತಡೆಯಲು ಸದ್ಯಕ್ಕೆ ಸಾಧ್ಯವಿರೋದು ಭಾರತಕ್ಕೆ ಮಾತ್ರ. ಇನ್ನೆಲ್ಲ ರಾಷ್ಟ್ರಗಳೂ ಮನಸ್ಸು ಮಾಡಿದರೂ ಭೌಗೋಳಿಕವಾಗಿ ಕೈಗೆ ಸಿಗದಷ್ಟು ದೂರದಲ್ಲಿವೆ. ಭಾರತ ಚೀನಾಕ್ಕೆ ಹೊಂದಿಕೊಂಡ ತನ್ನ ಗಡಿಯೊಳಗೆ ಚಟುವಟಿಕೆಯನ್ನು ತೀವ್ರಗೊಳಿಸಿ ಅದರ ಗಮನ ಅತ್ತ ಹರಿಯದಂತೆ ಮಾಡುವ ಸಾಮಥ್ರ‍್ಯ ಹೊಂದಿದೆ. ಮೊದಲೆಲ್ಲ ಚೀನಾ ಈ ಕೆಲಸ ಮಾಡುತ್ತಿತ್ತು. ಭಾರತ ಪಾಕಿಸ್ತಾನದ ಮೇಲೆ ಏರಿ ಹೋಗುವಂತೆ ಕಂಡಾಗಲೆಲ್ಲ ಅರುಣಾಚಲ ಪ್ರದೇಶದಲ್ಲಿ ಕಿರಿಕಿರಿ ಶುರುಮಾಡುತ್ತಿತ್ತು. ಈ ಬಾರಿ ಆ ಕೆಲಸವನ್ನು ನಾವೇ ಮಾಡುತ್ತಿದ್ದೇವೆ. ಇತ್ತೀಚೆಗೆ ಪ್ರಯೋಗ ಮಾಡಿದ ಖಂಡಾಂತರ ಕ್ಷಿಪಣಿಗಳು ಈ ಹಿನ್ನೆಲೆಯಲ್ಲಿ ಬಹು ಮಹತ್ವವಾದವು. ಗಡಿರಾಜ್ಯಗಳಿಗೆ ಉಪರಾಷ್ಟ್ರಪತಿಗಳು ಭೇಟಿಕೊಟ್ಟಿದ್ದು ಈ ಹಿನ್ನೆಲೆಯಿಂದ ಬಹು ಮಹತ್ವದ ಸಂಗತಿ. ಸ್ವತಃ ನರೇಂದ್ರಮೋದಿ ಪಾಕಿಸ್ತಾನಕ್ಕೆ ಹೊಂದಿಕೊಂಡ ಗಡಿಯಲ್ಲಿ ದೀಪಾವಳಿ ಆಚರಿಸುವ ಮೂಲಕ ಕೊಟ್ಟದ್ದು ಗಂಡುಗಲಿತ್ವದ ಸಂದೇಶ. ಮನೆಯಿಂದ ಹೊರಬರಲು ಹೆದರುತ್ತಿದ್ದ ಹಿಂದಿನ ಕೆಲವು ಪ್ರಧಾನಿಗಳು, ಸಚಿವರುಗಳ ಮಧ್ಯೆ ಮೋದಿ ಬಲು ವಿಭಿನ್ನ.

ಮೋದಿಯ ಸಾಹಸಗಾಥೆ ಇಲ್ಲಿಗೇ ನಿಲ್ಲುವುದಿಲ್ಲ. ಕೆಲವಾರು ತಿಂಗಳುಗಳ ಹಿಂದೆ ಆಟದ ಸಾಮಾನುಗಳಲ್ಲಿ ಭಾರತೀಯತೆಯನ್ನು ತುಂಬುವ ಕರೆಯನ್ನು ಅವರು ಕೊಟ್ಟಿದ್ದು ನಿಮಗೆ ನೆನಪಿರಬೇಕು. ಇಂದು ಅದರ ಪ್ರಯತ್ನವಾಗಿ ಚಟುವಟಿಕೆಗಳು ಗರಿಗೆದರಿಬಿಟ್ಟಿವೆ. ಭಾರತೀಯ ಪೌರಾಣಿಕ ಚಿತ್ರಣ ಕೊಡಬಲ್ಲ ಆಟಿಕೆಗಳು ತಯಾರಾಗಿ ಮಾರುಕಟ್ಟೆಗೆ ಬರುತ್ತಿವೆ. ಮುಂದಿನ ಯುಗದ ಅವಶ್ಯಕತೆಗಳಿಗೆಂದೇ ಮೋದಿ ಅದಾಗಲೇ ೨೨ ಜನರ ತಂಡವೊಂದನ್ನು ನಿಮರ್‌uಟಿಜeಜಿiಟಿeಜಣ ಮಾಡಿ ೬ಜಿ ತಂತ್ರಜ್ಞಾನದ ಕುರಿತಂತೆ ತೀವ್ರಗತಿಯ ಕೆಲಸವನ್ನು ಆರಂಭಿಸಿಬಿಟ್ಟಿದ್ದಾರೆ. ೫ಜಿ ತರಂಗಗಳನ್ನು ಹರಾಜು ಕೂಗಿ ಭಾರತವನ್ನು ಅದಕ್ಕೆ ಸಿದ್ಧಗೊಳಿಸುವಲ್ಲಿ ಹೆಣಗಾಡುತ್ತಿರುವ ನಾವು ಅದಾಗಲೇ ೬ಜಿ ತಂತ್ರಜ್ಞಾನದ ಕುರಿತಂತೆ ಆಲೋಚನೆ ಆರಂಭಿಸಿಬಿಟ್ಟಿರುವುದು ಮೆಚ್ಚಬೇಕಾದ ಸಂಗತಿಯೇ. ಇದು ಬರಲಿರುವ ದಿನಗಳಲ್ಲಿ ನಾವು ನೇತೃತ್ವ ವಹಿಸಬೇಕಾಗಿರುವ ರೀತಿ ಎಂಥದ್ದು ಎಂಬುದನ್ನು ನಿಸ್ಸಂಶಯವಾಗಿ ನಿರ್ಧರಿಸಲಿದೆ. ಮೋದಿಯವರು ಜಾರಿಗೆ ತಂದಿರುವ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ ಯೋಜನೆ ನಿಜಕ್ಕೂ ಮಹತ್ವಪೂರ್ಣವಾದ್ದು. ಅದಾಗಲೇ ಅನೇಕ ನಿರ್ಧಾರಿತ ಗುರಿಗಳನ್ನು ಈ ಯೋಜನೆಯಡಿ ಹಾಕಿಕೊಂಡಿರುವ ಸರ್ಕಾರ ಏರ್ ಕಂಡೀಷನರ್, ಫ್ರಿಡ್ಜ್, ವಾಷಿಂಗ್ ಮೆಷಿನ್ಗಳೇ ಮೊದಲಾದ ವೈಟ್ ಗೂಡ್ಸ್ಗಳಲ್ಲದೇ ಎ???ಡಿ ಲೈಟುಗಳಿಗಾಗಿ ಈ ಯೋಜನೆಯನ್ನು ವಿಸ್ತರಿಸಿದೆ. ಈ ಯೋಜನೆಯ ಪ್ರಕಾರ ನಿರ್ಧಾರಿತ ಅವಧಿಯೊಳಗೆ ಉತ್ಪಾದನೆಯನ್ನು ಮಾಡಿ ಮುಗಿಸಿದರೆ ಅದಕ್ಕೆ ಸಾಕಷ್ಟು ರಿಯಾಯಿತಿಯನ್ನು ಸರ್ಕಾರವೇ ನೀಡುತ್ತದೆ. ಇದು ಆಯಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರುವಂತೆ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಯಾವುದನ್ನು ಇಷ್ಟು ದಿನ ಚೀನಾದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತೋ ಈಗ ಭಾರತವೇ ಅದನ್ನು ಉತ್ಪಾದಿಸಲಿದೆ. ಚೀನಾವನ್ನು ಈ ವಿಚಾರಗಳಲ್ಲಿ ಸ್ಥಾನಪಲ್ಲಟಗೊಳಿಸುವುದು ಸುಲಭವಲ್ಲವಾದರೂ ಈ ವೇಗದಲ್ಲಿ ಹೋದರೆ ಅಸಾಧ್ಯವಂತೂ ಅಲ್ಲ. ಅದಾಗಲೇ ಶ್ರೀಲಂಕಾ ಚೀನಾದ ರಸಗೊಬ್ಬರಗಳಲ್ಲಿ ವಿಷಕಾರಿ ಅಂಶಗಳಿವೆ ಎಂಬುದನ್ನು ಅರಿತು ಕೊನೆಯ ಕ್ಷಣದಲ್ಲಿ ದೊಡ್ಡದ್ದೊಂದು ಸರಕನ್ನು ನಿರಾಕರಿಸಿಬಿಟ್ಟಿದೆ. ಆಗ ಅದರ ನೆರವಿಗೆ ಬಂದಿದ್ದು ಸ್ವತಃ ಭಾರತವೇ. ಭಾರತೀಯ ವಾಯುಸೇನೆ ಒಂದು ಲಕ್ಷ ಕೆಜಿಯಷ್ಟು ನ್ಯಾನೊ ಸಾರಜನಕ ರಸಗೊಬ್ಬರಗಳನ್ನು ಏರ್ಲಿಫ್ಟ್ ಮಾಡಿ ಶ್ರೀಲಂಕಾಕ್ಕೆ ಮುಟ್ಟಿಸಿದೆ. ಇದು ಚೀನಾದ ವಿಸ್ತರಣಾ ನೀತಿಗೆ ಬಲುದೊಡ್ಡ ಹೊಡೆತವೇ! ಇಷ್ಟೇ ಅಲ್ಲದೇ ಇತ್ತೀಚೆಗೆ ಚೀನಾದ ಕಸ್ಟಮ್ ವಿಭಾಗ ಕೊಟ್ಟಿರುವ ಹೇಳಿಕೆಯನ್ನು ಒಪ್ಪುವುದೇ ಆದರೆ ೩೨ಕ್ಕೂ ಹೆಚ್ಚು ರಾಷ್ಟ್ರಗಳು ಚೀನಾಕ್ಕೆ ಕೊಟ್ಟಿದ್ದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಿವೆ. ಈ ವಿಶೇಷ ಸ್ಥಾನಮಾನದ ಆಧಾರದ ಮೇಲೆ ಚೀನಾಕ್ಕೆ ತೆರಿಗೆ ರಹಿತ ವ್ಯಾಪಾರ ಮಾಡುವ ಅವಕಾಶಗಳಿದ್ದವು. ಇನ್ನು ಮುಂದೆ ಇರಲಾರದು. ೨೭ ಯುರೋಪಿಯನ್ ಯುನಿಯನ್ ರಾಷ್ಟ್ರಗಳು ಈ ಸಾಲಿನಲ್ಲಿರುವುದು ಚೀನಾದ ಪಾಲಿಗೆ ಒಳ್ಳೆ ಸುದ್ದಿಯಲ್ಲ.

ಇದರೊಟ್ಟಿಗೆ ನರೇಂದ್ರಮೋದಿಯವರು ಅಹ್ಮದಾಬಾದ್ನಿಂದ ಮುಂಬೈನವರೆಗೂ ಬುಲೆಟ್ ಟ್ರೆöÊನಿನ ನಿರ್ಮಾಣಕ್ಕೆ ಬೇಕಾದ ತಯಾರಿಯನ್ನು ತೀವ್ರಗೊಳಿಸಿರುವುದು ಪ್ರತಿಪಕ್ಷಗಳಿಗೆ ಬೆಂಕಿ ಹಚ್ಚಿಕೊಳ್ಳಲು ಸಾಕು. ಚೆನ್ನಾಗಿ ಉರಿಯಲೆಂದು ಪೆಟ್ರೋಲ್ ಬೇರೆ ಕಡಿಮೆ ಬೆಲೆಗೆ ಕೊಡುತ್ತಿದ್ದಾರಲ್ಲ, ಸಹಿಸಿಕೊಳ್ಳುವುದು ಹೇಗೆ? ಒಂದನ್ನಂತೂ ನೀವು ಗಮನಿಸಲೇಬೇಕು ಎರಡನೇ ಅಲೆ ಎಂದು ಬೊಬ್ಬಿಟ್ಟರು, ಮೋದಿಯೇ ಕಾರಣ ಎಂದರು. ಭಾರತ ಆ ಅಲೆಯನ್ನು ಗೆದ್ದಾಗ ಅನಿವಾರ್ಯವಾಗಿ ಮೋದಿಯೇ ಗೆದ್ದರು ಎಂದು ಒಪ್ಪಿಕೊಳ್ಳಬೇಕಾಯ್ತು. ಪೆಟ್ರೋಲ್ ಬೆಲೆ ಏರಿಕೆಗೆ ಮೋದಿಯೇ ಕಾರಣ ಎಂದರು, ಅದು ಇಳಿದಾಗ ಅನಿವಾರ್ಯವಾಗಿ ಅದಕ್ಕೂ ಮೋದಿಯೇ ಕಾರಣ ಎಂದು ಒಪ್ಪಿಕೊಳ್ಳಬೇಕಾಯ್ತು. ನಿಂದಕರು ಮೋದಿಗೆಂದು ರಾತ್ರಿ ಹಳ್ಳ ತೋಡಿ, ಬೆಳಿಗ್ಗೆ ಹೋಗಿ ತಾವೇ ಹಳ್ಳದೊಳಗೆ ಬೀಳುತ್ತಿದ್ದಾರೆ. ಅವರು ಗಲಾಟೆ ಮಾಡುವ ಪ್ರತಿ ಸಂಗತಿಯೂ ಮೋದಿಯ ಪಾಲಿಗೆ ಹೂವಿನ ಹಾಸಿಗೆಯಾಗುತ್ತಿದೆ. ನೀವು ಒಪ್ಪಿಕೊಳ್ಳಿ, ಬಿಡಿ. ಮೋದಿ ಗೆಲ್ಲುತ್ತಾರೆಂದರೆ ಭಾರತ ಗೆಲ್ಲುತ್ತದೆ ಎಂದೇ ಅರ್ಥ.