Wednesday, September 14, 2022

Attack on Osirak Nuclear Plant

ಒಸಿರಾಕ್ ಅಣುಸ್ಥಾವರದ ಮೇಲಿನ ದಾಳಿ


 ಐತಿಹಾಸಿಕವಾಗಿ ಯಹೂದಿಗಳು ವಿಶ್ವದೆಲ್ಲೆಡೆ ಮಾಧ್ಯಮ, ಹಣಕಾಸು ವ್ಯವಹಾರ ಮತ್ತು ರಾಜಕೀಯ ವಲಯಗಳಲ್ಲಿ ಪ್ರಭಾವಗಳಿಸಿದ್ದ ಒಂದು ಜನಾಂಗ. ಅದೇ ಯೂರೋಪಿಯನ್ ಕ್ರಿಶ್ಚಿಯನ್ನರಿಗೆ ಅರಗಿಸಿಕೊಳ್ಳಲಾರದ ವಿಷಯ. ಹೇಗಾದರೂ ಮಾಡಿ ಇವರನ್ನು ಯೂರೋಪಿನಿಂದ ಹೊಡೆದೋಡಿಸುವ ಹುನ್ನಾರ ಅಲ್ಲಲ್ಲಿ ನಡೆಯುತ್ತಲೇ ಇತ್ತು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಹಿಟ್ಲರ್ ಯಹೂದಿಗಳ ಮೇಲೆ ನರಮೇಧ ಯಾಗವನ್ನೇ ನಡೆಸಿಬಿಟ್ಟ. ಹೀಗೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಯಾರೂ ಅವರ ಸಹಾಯಕ್ಕೆ ಮುನ್ನುಗ್ಗಲಿಲ್ಲ. ಅವರಿಗೆ ತಮ್ಮದೇ ಆದ ದೇಶವೆನ್ನುವುದೇ ಇರಲಿಲ್ಲ. ಅವರ ದೇಶ ಇಸ್ರೇಲ್.. ಅಸ್ಥಿತ್ವಕ್ಕೆ ಬಂದದ್ದು ೧೯೪೮ರಲ್ಲಿ. ಅಷ್ಟರಲ್ಲಾಗಲೇ ಸುಮಾರು ೬೦ ಲಕ್ಷ ಯಹೂದಿಗಳನ್ನು ಜರ್ಮನಿಯಲ್ಲಿ ಮತ್ತು ಜರ್ಮನಿಯ ಆಡಳಿತಕ್ಕೊಳಪಟ್ಟ ಇತರೆ ಯೂರೋಪಿನ ದೇಶಗಳಲ್ಲಿ ಕೊಲ್ಲಲಾಯಿತು. ೧೯೪೮ ರಲ್ಲಿ ಇಸ್ರೇಲಿಗೆ ಬಂದ ಯಹೂದಿಗಳು ಪ್ರತೀಕಾರದ ಸೇಡಿನಿಂದ ಕುದಿಯುತ್ತಿದ್ದ ಎರಡನೇ ತಲೆಮಾರಿನವರು. 

ಅಸಲಿಗೆ ಇಸ್ರೇಲೆಂದರೆ ಎಷ್ಟಿದೆ? ಬೆಂಗಳೂರಿನಿಂದ ದಾವಣಗೆರೆಯಷ್ಟು, ಕರ್ನಾಟಕದ ಮೂರನೇ ಒಂದು ಭಾಗ! ಆದರೆ ಅದನ್ನು ಸುತ್ತುವರೆದಿರುವ ಏಳು ಮುಸ್ಲಿಂ ದೇಶಗಳಿಗೆ ಇಸ್ರೇಲ್ ಎಂದರೆ ಸಿಂಹಸ್ವಪ್ನ. ವಿಶ್ವದಲ್ಲೇ ಅತ್ಯಂತ ಸಾಹಸಿ ದೇಶ. ಇಲ್ಲಿರುವ ಅತ್ಯಾಧುನಿಕ ಯುಧ್ಧ ವಿಮಾನಗಳು,ಯುಧ್ಧ ಸಾಮಗ್ರಿಗಳು ಭಾರತದಲ್ಲಿಯೂ ಇಲ್ಲ. ಹಾಗಾದರೆ ಇವರ ಭೂಸೇನೆ, ವಾಯುಸೇನೆ ಅಷ್ಟು ದೊಡ್ಡದೇ? ಉಹುಂ ಇಲ್ಲವೇ ಇಲ್ಲ.. ಯಾಕೆಂದರೆ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸೈನಿಕ. ಡಾಕ್ಟರ್, ಇಂಜಿನಿಯರ್, ಲಾಯರ್, ಕ್ಲರ್ಕ್, ಕ್ಷೌರಿಕ ಎಲ್ಲರಿಗೂ ತಮ್ಮ ಮೂಲ ಕಸುಬಿನ ಜೊತೆ ಮಿಲಿಟರಿ ತರಬೇತಿ ಕಡ್ಡಾಯ. ‘ಡಿಕ್ರೀ - ೮ ‘ ಎನ್ನುವ ರಹಸ್ಯ ಸಂದೇಶದ ಮೂಲಕ ಇಂತಹ ಸ್ಥಳಕ್ಕೆ ಬರಬೇಕೆಂಬ ಆದೇಶ ಸಿಗುತ್ತದೆ. ಅಲ್ಲಿಂದ ಅವರಿಗೆ ಕೊಟ್ಟ ಕಾರ್ಯಾಚರಣೆ ಮುಗಿಯುವತನಕ ಅವರು ಸೈನಿಕ, ಅದು ಮುಗಿದ ಮೇಲೆ ವಾಪಸ್ ತಮ್ಮ ತಮ್ಮ ಕಸುಬಿಗೆ. 

೮೦ ರ ದಶಕದಲ್ಲಿ ಇರಾಕಿನ ಐಲು ದೊರೆ ಸದ್ದಾಂ ಹುಸೇನ್, ಇಸ್ರೇಲಿನ ಅಸ್ತಿತ್ವವನ್ನು ಸಹಿಸಲಾಗದೆ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾನೆ. ಫ್ರಾನ್ಸ್ ದೇಶದಿಂದ ಅಣುಬಾಂಬು ತಯಾರಿಸುವ ಒಂದು  ಪರಮಾಣು ಸ್ಥಾವರವನ್ನು ಖರೀದಿಸುತ್ತಾನೆ. ಬಾಗ್ದಾದ್ ನ ಹೊರವಲಯದಲ್ಲಿ ಒಸಿರಾಕ್ ಎನ್ನುವ ಪ್ರದೇಶದಲ್ಲಿ ಈ ರಿಯಾಕ್ಟರನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗುತ್ತದೆ. 

“ನಮ್ಮ ಅಣು ಬಾಂಬು ತಯಾರಾಗುತ್ತಿದೆ...ಯಹೂದಿಗಳೇ ಇನ್ನೊಂದು ಮಾರಣ ಹೋಮಕ್ಕೆ ಸಿದ್ದರಾಗಿರಿ..ಒಂದೊಂದು ಅಣು ಬಾಂಬಿಗೂ ೫೦೦೦೦ ಇಸ್ರೇಲಿಯರನ್ನು ಕೊಲ್ಲುವ ಸಾಮರ್ಥ್ಯವಿದೆ”

ಎಂದು ವಿಶ್ವದೆಲ್ಲೆಡೆ ಕೊಚ್ಚಿಕೊಳ್ಳಲು ಶುರು ಮಾಡುತ್ತಾನೆ. ಇಸ್ರೇಲ್, ಫ್ರಾನ್ಸ್ ದೇಶಕ್ಕೆ ಮನವಿ ಮಾಡಿಕೊಳ್ಳುತ್ತದೆ, ದಯವಿಟ್ಟು ಈ  ಅಣು ಸ್ಥಾವರವನ್ನು ಇರಾಕಿಗೆ ಮಾರಬೇಡಿ ಎಂದು. ಆದರೆ ಈ ಗುಳ್ಳೇನರಿಯಂತ ಯೂರೋಪಿನ ದೇಶಗಳನ್ನು ನಂಬಲಾಗದೆಂದು ಮನವರಿತುಕೊಂಡು ಈ ಸಮಸ್ಯೆಯ ಪರಿಹಾರಕ್ಕೆ ತನ್ನ ತಯಾರಿಯನ್ನು ನಡೆಸತೊಡಗಿತು. 

     ಅಂದಿನ ಇಸ್ರೇಲಿನ ಪ್ರಧಾನಿ ಮತ್ತು ವಾಯುಸೇನೆಯ ಅಧ್ಯಕ್ಷ, ಇವರಿಬ್ಬರಿಗೇ ಮಾತ್ರ ಗೊತ್ತಿರುವ ಒಂದು ರಣತಂತ್ರ ನಿರ್ಮಿತವಾಗುತ್ತದೆ ಅದರ ಹೆಸರೇ “ ಆಪರೇಷನ್ ಒಪೇರ”. ಈ ಯೋಜನೆಯ ಪ್ರಕಾರ ಅಲ್ಲಿ ಇರಾಕಿನಲ್ಲಿ ನಿರ್ಮಾಣವಾಗುತ್ತಿರುವ  ಅಣು ಸ್ಥಾವರದ ಅದೇ ಗಾತ್ರದ  ಮರಳಿನ ಮಾದರಿಯನ್ನು ಸಿನಾಯಿ ಮರುಭೂಮಿಯಲ್ಲಿ ನಿರ್ಮಿಸಲಾಗುತ್ತದೆ. ಯುಧ್ಧವಿಮಾನದ ಹಾರಾಟದಲ್ಲಿ ಅತಿ ಕುಶಲತೆಯನ್ನು ಪಡೆದ ಸುಮಾರು ೨೦ ಪೈಲಟ್ಟುಗಳನ್ನು ಈ ತರಬೇತಿಗೆ ನಿಯಮಿಸಲಾಗುತ್ತದೆ. ಎಂಟು ಈ-೧೬ ಮತ್ತು ಆರು ಈ-೧೫ ವಿಮಾನಗಳನ್ನು ಈ "ಆಪರೇಶನ್ ಒಪೇರ" ದಲ್ಲಿ ಬಳಸಲಾಗುತ್ತದೆ. ಪೈಲಟ್ಟುಗಳಿಗೆ ಎಷ್ಟು ಬೇಕೊ ಅಷ್ಟು ವಿಷಯವನ್ನು ಮಾತ್ರ ತಿಳಿಸಿರುತ್ತಾರೆ. ಒಂದು ಗೋಲಾಕಾರವಾಗಿ ಕಾಣುವ ಈ  ಕೃತಕ ಸ್ಥಾವರದ ಮೇಲಷ್ಟೇ ಬಾಂಬುಗಳ ದಾಳಿ ನಡೆಸಬೇಕು. ಪ್ರತಿಯೊಬ್ಬ ಪೈಲಟ್ಟಿಗೆ  ಗುರುತು ಹಾಕಿಕೊಟ್ಟ ಜಾಗಕ್ಕೆ ಮಾತ್ರ ಬಾಂಬ್ ಹಾಕಬೇಕು ಎನ್ನುವ ನಿರ್ದೇಶವಿರುತ್ತದೆ. ಭೂಮಿಯಿಂದ ನೂರು ಅಡಿ ಮೇಲೆ ಅದೂ ೧೨೦೦ ಕಿಮೀ ವೇಗದಲ್ಲಿ ಸರಿ ಸುಮಾರು ಒಂದೂವರೆ ಘಂಟೆ  ವಿಮಾನ ಹಾರಿಸುವುದು ಸಾಮಾನ್ಯದ ವಿಷಯವಲ್ಲ, ಅದರ ತರಬೇತಿಯೂ ನಡೆಯುತ್ತದೆ. ಇನ್ನು ಹೆಚ್ಚಿನ ಅಪಾಯಕಾರಿ ವಿಷಯವೆಂದರೆ ಇರಾಕಿನ ಈ ಸ್ಥಾವರವನ್ನು ತಲುಪಲು ಈ ಹದಿನಾಲ್ಕು ವಿಮಾನಗಳು ಇಸ್ರೇಲಿನ ಬದ್ದ ವೈರಿಗಳಾದ ಜೋರ್ಡನ್, ಸೌದಿ ಅರೇಬಿಯ ಮತ್ತು ಇರಾಕ್ ದೇಶಗಳ ಮೇಲೆ ಹಾರಿ ಹೋಗಬೇಕು.  ವಿಮಾನಗಳು ರಾಡಾರುಗಳಿಗೆ

ಕಾಣಿಸಿಕೊಳ್ಳಬಾರದೆಂದರೆ ಹೀಗೇ ಭೂಮಿಯನ್ನು ತಬ್ಬಿಕೊಂಡು ಹೋಗಬೇಕು. ಅದರ ತರಬೇತಿಯೂ ನಿರಂತರವಾಗಿ ನಡೆಯುತ್ತದೆ. 

  ಜೂನ್ ೭,೧೯೮೧, ಅಂದು ಭಾನುವಾರ ಸಂಜೆ "ಒಸಿರಾಕ್ ರೈಡ್" ನ ಕಾರ್ಯಾಚರಣೆ ಶುರುವಾಗುತ್ತದೆ. ಭಾನುವಾರ ಎಲ್ಲಾ ಕಡೆ ಒಂದು ವಿಶ್ರಾಮದ ವಾತಾವರಣವಿರುವುದರಿಂದ ಈ ದಿನವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಒಂದೂವರೆ ಗಂಟೆಗಳ ಹಾರಾಟದ ನಂತರ ಇರಾಕನ್ನು ತಲುಪಿದಾಗ ಅಲ್ಲಿಯ ಸೈನಿಕರ ಶಿಫ್ಟ್ ಬದಲಾಯಿಸುವ ಸಮಯ, ವಿರಾಮದ ಮಾತು ಕಥೆಯ ಸಮಯ , ಈ ಯುಧ್ಧ ವಿಮಾನಗಳನ್ನು ರಡಾರಿನಲ್ಲಿ ಕಂಡರೂ ಕೂಡಲೇ ಅವರು ಪ್ರತಿಕ್ರಿಯಿಸುವ ಮುನ್ನವೇ ತಮ್ಮ ಕೆಲಸ ಮುಗಿಸಿ ಬಿಡುವ ಒಂದು  ಸಂಕ್ಷಿಪ್ತವಾದ ಯೋಜನೆ. ಒಂದೊಂದು ವಿಮಾನವೂ ಸುಮಾರು ಎರಡು ಟನ್ನುಗಳಷ್ಟು ಬಾಂಬುಗಳನ್ನು ಹೊತ್ತುಕೊಂಡಿರುತ್ತದೆ. ಈ ಎಲ್ಲಾ ವಿಮಾನಗಳನ್ನು ಗಡಿಪ್ರದೇಶದ ಒಂದು ರಹಸ್ಯ ವಾಯುನೆಲೆಗೆ ಸಾಗಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಇಂಧನವನ್ನು ತುಂಬಲಾಗುತ್ತದೆ. ಅಗತ್ಯವಿದ್ದರೆ ಆಕಾಶದಲ್ಲಿ ಇಂಧನ ತುಂಬಲು ಕೆಂಪು ಸಮುದ್ರದ ಮೇಲೆ ಇಂಧನದ ಟ್ಯಾಂಕರ್ ವಿಮಾನ ಒಂದು ಗುಸ್ತು ಹೊಡೆಯುತ್ತಾ ಹಾರಾಡುತ್ತಿರುವ ವ್ಯವಸ್ಥೆ ಮಾಡಲಾಗುತ್ತದೆ. ನಾಲ್ಕು ನಾಲ್ಕು ಗುಂಪಿನ ಯುಧ್ಧ ವಿಮಾನಗಳ ಜಿoಡಿmಚಿಣioಟಿ ಸಾಯಂಕಾಲದ ಸಮಯಕ್ಕೆ ಅಲ್ಲಿಂದ ನಿರ್ಗಮಿಸಬೇಕು ಎಂದು ನಿರ್ಧರಿಸಲಾಗುತ್ತದೆ.

     ಪೈಲಟ್ಟುಗಳಿಗೆ ಒಂದು ಗಂಟೆಯ ಸಮಯವಿದೆ. ಯಾರಿಗಾದರೂ ಈ ಕೊನೆಯ ಗಳಿಗೆಯಲ್ಲಿ ತಾವು ಕೈಗಳ್ಳುತ್ತಿರುವ missioಟಿ ನಲ್ಲಿ ಏನಾದರೂ ಸಂದೇಹವಿದ್ದರೆ ಪರಿಹರಿಸಿಕೊಳ್ಳಲು..ಏಕೆಂದರೆ ಮುಂದಿನ ಮೂರು ನಾಲ್ಕು ತಾಸು ಸಂಪೂರ್ಣ ನಿಶಬ್ದ..ಯಾರೂ ಮಾತನಾಡುವ ಹಾಗಿಲ್ಲ. ಅomಠಿಟeಣe ಡಿಚಿಜio siಟeಟಿಛಿe!. ಎಲ್ಲರೂ ಶಾಂತವಾಗೇ ಇರುತ್ತಾರೆ ಮತ್ತು ತಮ್ಮೊಳಗೇ ಆತ್ಮಾವಲೊಕನ ಮಾಡಿಕೊಳ್ಳತ್ತಾರೆ. ಏನೇ ಆಗಲಿ ಇಸ್ರೇಲಿಗಳ ಮೇಲೆ ಇನ್ನೊಂದು ಮಾರಣಹೋಮವಾಗಲು ಬಿಡಬಾರದು.

ಈ ಆಕ್ರಮಣದ ತಂಡದ ಮುಖಂಡ ಕಮಾಂಡರ್ ಜೀ಼ವ್ ರಜ಼್ ಬಹಳ ದೈವೀಭಕ್ತ. ನಾಝಿಗಳ ನರಮೇಧದಲ್ಲಿ ಸತ್ತು ಹೋದ ಅಜ್ಜನಿಗೆ ಮನಸ್ಸಿನಲ್ಲೇ ನಮನ ಸಲ್ಲಿಸಿ;

 'ಅಜ್ಜಾ ಇದು ನಿನ್ನ ಸಾವಿನ ಪ್ರತೀಕಾರಕ್ಕೆ...ಆಶೀರ್ವದಿಸು’

 ಎಂದು ಎದ್ದು ವಿಮಾನದ ಕಡೆ ತೆರಳುತ್ತಾನೆ, ಇನ್ನುಳಿದ ಪೈಲಟ್ಟುಗಳೂ ತಮ್ಮ ಕಮಾಂಡರನ್ನೇ ಹಿಂಬಾಲಿಸುತ್ತಾರೆ. ಹದಿನಾಲ್ಕು ಜೆಟ್ ವಿಮಾನಗಳ ಕಿವಿಗಡಚಿಕ್ಕುವ ಶಬ್ದ ಇಸ್ರೇಲಿನ ಆ ರಹಸ್ಯ ವಾಯುನೆಲೆಯನ್ನಾವರಿಸುತ್ತದೆ. ತ್ವರಿತ ಗತಿಯಿಂದ ಹಾರಾಟಕ್ಕೆ ಸಿಧ್ಧವಾಗುತ್ತವೆ. ಅಂತಿಮವಾಗಿ ವಿಮಾನದ ಪರಿಶೀಲನೆ ನಡೆಸಿ ಶಿಸ್ತಿನ ಒಂದು ಸಲ್ಯೂಟ್ ಹೊಡೆದ ಇಂಜಿನಿಯರುಗಳು ಗದ್ಗದರಾಗುತ್ತಾರೆ..ಎಲ್ಲರೂ ಮರಳಿಬರುತ್ತಾರಾ?

    ಎರಡು ನಿಮಿಷದಲ್ಲೇ ಚಕಚಕನೆ ಡೈಮಂಡ್ ವಿನ್ಯಾಸದಲ್ಲಿ ಒಂದುಗೂಡಿ ನೆಲದಿಂದ ಕೇವಲ ನೂರು ಅಡಿಗಳಷ್ಟು ಮೇಲೆ ಒಂದು ಸಾವಿರ ಕಿಮೀ ವೇಗದಲ್ಲಿ ಇಸ್ರೇಲಿ ಆಕಾಶದಿಂದ ಜೋರ್ಡಾನಿನ ಆಕಾಶವನ್ನು ಪ್ರವೇಶಿಸುತ್ತವೆ...ಅಲ್ಲೆ ಕಾದಿರುತ್ತದೆ ಮೊದಲನೆ ಗಂಡಾಂತರ.

ಜೋರ್ಡಾನಿನ ದೊರೆ ತನ್ನ ವೈಭವೋತೇಪ ಹಡಗಿನಲ್ಲಿ ಆ ಭಾನುವಾರ ತನ್ನ ಪರಿವಾರ ಸಮೇತ ಮೋಜಿನಲ್ಲಿ ಮೈಮರೆತಿರುವಾಗ, ಗುಂಡಿಗೆಯನ್ನೇ ಅಲ್ಲಾಡಿಸಿದ ಈ ಜೆಟ್ ವಿಮಾನಗಳ ಶಬ್ದ ಕೇಳಿ ತತ್ತರಿಸಿ ಹೋಗುತ್ತಾನೆ. ವಿಮಾನಗಳು ಎಷ್ಟು ಕೆಳಗೆ ಹಾರುತ್ತಿದ್ದವೆಂದರೆ ಹಡಗಿನಲ್ಲಿದ್ದ ಎಲ್ಲರಿಗೂ ವಿಮಾನದ ಮೇಲಿದ್ದ ಇಸ್ರೇಲಿ ಲಾಂಛನಗಳು ಕಂಡವು. ನನ್ನ ದೇಶದ ಮೇಲೆ ಇಸ್ರೇಲಿ ವಿಮಾನಗಳು....ದೊರೆಗೆ ಶಾಕ್.  ಜಗತ್ತಿನಲ್ಲೇ ಅತ್ಯಾಧುನಿಕ ಯುಧ್ಧ ವಿಮಾನಗಳ ದಂಡು ಈ ಪರಿ ಪೂರ್ವ ದಿಕ್ಕಿನಲ್ಲಿ ಅಂದರೆ ಕೆಲವೇ ನಿಮಿಷಗಳಲ್ಲಿ ಸೌದಿ ಅರೇಬಿಯದ ಕಡೆ....ಆದರೆ ಅಲ್ಲೇಕೆ? ಉಹುಂ...ಇದೇನೊ ದೊಡ್ಡ ಮಟ್ಟದ ದಾಳಿ. ಅನುಮಾನವೇ ಇಲ್ಲ ಇದು ಇರಾಕಿನ ಮೇಲೇ ದಾಳಿಮಾಡಲು ಹೊರಟ ವಿಮಾನಗಳು ಎಂದು ಊಹಿಸುತ್ತಾನೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ದೊರೆ ಕೂಡಲೇ ಹಡಗಿನ ಸಂಪರ್ಕಾಧಿಕಾರಿಯನ್ನು ಕರೆದು ಇರಾಕಿಗೆ ಈ ವಿಮಾನಗಳ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ತ್ವರಿತವಾಗಿ ಕಳುಹಿಸಲು ಆದೇಶಿಸುತ್ತಾನೆ.

ಈ ಹದಿನಾಲ್ಕು ಯುಧ್ಧವಿಮಾನಗಳು ಒಂದೇ ದೇಹದ ವಿವಿಧ ಅಂಗಗಳಂತೆ ವೇಗವಾಗಿ ಇರಾಕಿನ ದಿಕ್ಕಿನಲ್ಲಿ ಹಾರಿಸುತ್ತಿದ್ದ ಈ  ಪೈಲಟ್ಟುಗಳು ಮಾಡಬೇಕಾದ ಕೆಲಸ ಮಾತ್ರ ವಿಭಿನ್ನ. ಈ ಸಾಹಸ ತಂಡದ ಅತಿ ಹಿಂದೆ ಇದ್ದ ಎರಡು ಈ-೧೫ ವಿಮಾನಗಳ ಕೆಲಸವೇನೆಂದರೆ, ಹದ್ದಿನ ಕಣ್ಣಗಳಿಂದ ಸುತ್ತಲಿನ ಆಕಾಶವನ್ನು ಶತ್ರುಗಳ ಯುಧ್ಧವಿಮಾನದ ಚಲನವಲನದ ಬಗ್ಗೆ ವೀಕ್ಷಿಸುವುದು. ಹಾಗೇನಾದರೂ  ಅರಬ್ಬರ ವಿಮಾನಗಳು ಕಂಡುಬಂದಲ್ಲಿ ಅವುಗಳ ಹಿಂದೆಬಿದ್ದು ಅವುಗಳನ್ನು ನಿಷ್ಕ್ರಿಯೆಗೊಳಿಸುವುದು. 

ಇನ್ನೆರಡು ಏರೋಪ್ಲೇನುಗಳ ಕೆಲಸವೆಂದರೆ ರಡಾರುಗಳನ್ನು ಮಧ್ಯ ಮಧ್ಯ ಕೆಕ್ಕರು ಬಿಕ್ಕರು ಮಾಡಿ ಇಡುವುದು. ಇನ್ನಿಬ್ಬರು ಕೆಳಗಿನಿಂದ ಗನ್ನುಗಳ ಫೈರಿಂಗ್ ಏನಾದರೂ ಶುರುವಾದರೆ ಅವರನ್ನು ನಿಷ್ಕ್ರಿಯೆಗೊಳಿಸುವುದು. ಈ ಚಕ್ರವ್ಯೂಹದ ನಡು ಮಧ್ಯದಲ್ಲಿರುವ ಆರು ಈ-೧೬ ವಿಮಾನಗಳೇ ಆ ಅಣು ಕೇಂದ್ರದ ಮೇಲೆ ಬರೋಬ್ಬರಿ ತಲಾ ಎರಡೆರಡು ಟನ್ ಮಿಸೈಲುಗಳ ದಾಳಿ ಮಾಡಬೇಕಾಗಿರುವುದು. ಯುಧ್ಧವಿಮಾನಗಳು ಯಾವಾಗಲೂ ಒಂದು ವಿನ್ಯಾಸವನ್ನು ರಚಿಸಿಕೊಂಡು ಹಾರುತ್ತವೆ. ಈ ತಂಡ ತರಬೇತಿ ಸಮಯದಲ್ಲಿ ಒಂದು ಹೊಸದೇ ವಿನ್ಯಾಸವನ್ನು ಅವಿಷ್ಕಾರಗೊಳಿಸಿತು. ಈ ವಿನ್ಯಾಸವನ್ನು  ರಡಾರಿನಲ್ಲಿ ನೋಡಿದವರಿಗೆ ಒಂದು ದೊಡ್ಡ ಪ್ರಯಾಣಿಕರ ವಿಮಾನ ಜಂಬೊ ಜೆಟ್ಟಿನಂತೆ ಕಾಣುತ್ತಿತ್ತು, ಯುಧ್ಧವಿಮಾನದಂತಲ್ಲ!

ಸೌದಿ ಅರೇಬಿಯಾದ ವಿಮಾನಯಾನ ನಿಯಂತ್ರಕರೊಂದಿಗೆ ಇಸ್ರೇಲ್ ಕಮಾಂಡರ್ ಜೀ಼ವ್ ರಜ಼್ ಅರೇಬಿ ಭಾಷೆಯಲ್ಲಿ ಸಲೀಸಾಗಿ ಸಂಭಾಷಿಸಿ ನಮಗೆ ಇರಾಕಿನ ಬಾಗ್ದಾದಿಗೆ ಡೈರೆಕ್ಟ್ ರೂಟಿಂಗ್ ಕೊಡಿ ಎಂಬ ಕೋರಿಕೆಗೆ ಅರಬ್ಬೀ ನಿಯಂತ್ರಕರು ಅನುಮತಿಯನ್ನೂ ನೀಡಿದರು!

     ಈ ತೊಂಬತ್ತು ನಿಮಿಷಗಳ ನಿಶಬ್ದ ವಾಯುಯಾನದಲ್ಲಿ ಹೆಲ್ಮಟ್ಟುಗಳ ಮೇಲೆ ಬರೆದಿರುವ ಹೆಸರುಗಳನ್ನು ಓದುವಷ್ಟು ಹತ್ತಿರಿದಲ್ಲಿದ್ದರೂ ಮಾತಾಡುವ ಹಾಗಿಲ್ಲ,ಅದಕ್ಕೇ ಆಗಾಗ ಎಲ್ಲಾ ಸರಿ ಇದೆ ಎನ್ನುವಂತೆ ತಲೆಯಾಡಿಸುತ್ತಿದ್ದರು. 

ಎಲ್ಲಾ ...ಸರಿಯಿತ್ತಾ?

ಕೆಲವೇ ನಿಮಿಷಗಳಲ್ಲಿ ಇರಾಕಿನ ಗಡಿಯನ್ನು ದಾಟಿ, ಬಾಗ್ದಾದ್ ಇನ್ನೇನು ಹದಿನೈದು ಮೈಲುಗಳಿದೆ ಎನ್ನುವಷ್ಟರಲ್ಲಿ ಪ್ಲಾನಿನ ಪ್ರಕಾರ ಎಲ್ಲರೂ ಚದರಿಕೊಂಡು ಒಂದೊಂದು ದಿಕ್ಕಿಗೊಬ್ಬರಂತೆ ಹಾರುತ್ತಾ ಮೇಲೇರತೊಡಗಿದರು. ಆಗ ಕಾಣಿಸಿತು ನೋಡಿ ಅಣು ಕೇಂದ್ರದ ಅರ್ಧ ಗೋಲಾಕಾರದ ಗೋಪುರ ! ಇಸ್ರೇಲಿಯರ ಸರ್ವನಾಶದ ಅಣುಬಾಂಬಿನ ತವರು. ಮೊದಲು ಡೈವ್ ಹೊಡೆದು ಅಣುಸ್ಥಾವರದ ಮಧ್ಯದ ಭಾಗಕ್ಕೆ ಬಾಂಬು ಹಾಕಿದ್ದು ಕಮಾಂಡರ್ ಜೀ಼ವ್ ರಜ಼್, ಇನ್ನೊಮ್ಮೆ;

'ಅಜ್ಜಾ ಇದು ನಿನಗೆ' ಎನ್ನುತ್ತಾ. 

ಹತ್ತು ಸೆಕೆಂಡಿನ ಅಂತರದಲ್ಲಿ ಇನ್ನೊಂದು...ಮತ್ತೊಂದು, ಹೀಗೆ ಕೇವಲ ಎಂಬತ್ತು ಸೆಕೆಂಡಿನಲ್ಲಿ ಆ ಅಣುಸ್ಥಾವರದ ಅವಶೇಷವೂ ಉಳಿಯದಂತೆ, ಈ ಭೂಪಟದಿಂದಲೇ ಶಾಶ್ವತವಾಗಿ ಅಳಿಸಿಹೋಯಿತು ಇರಾಕಿನ ಒಸಿರಾಕ್ ಪರಮಾಣು ಸ್ಥಾವರ. ಹಿಂದಿನಿಂದ ಬಂದ ಎರಡು ಈ-೧೫ ವಿಮಾನಗಳು ಒಂದಿಂಚೂ ಬಿಡದೆ ಚಕಚಕನೆ ಫೋಟೊ ತೆಗೆದುಬಿಟ್ಟವು. ಕೂಡಲೇ ಎಲ್ಲಾ ವಿಮಾನಗಳು ನಾಲ್ಕು ನಿಮಿಷದಲ್ಲಿ ನಲವತ್ತು ಸಾವಿರ ಅಡಿಗೆ ಜಿಗಿದವು. ಅಲ್ಲಿಂದ ಪುನಃ ಮೂರು ಶತ್ರುದೇಶದ ಆಕಾಶವನ್ನು ಸೀಳಿಕೊಂಡು ವಾಪಸ್ ಇಸ್ರೇಲಿಗೆ!. ಸುರಕ್ಷಿತವಾಗಿ ತಲುಪಿದ ಈ ಆಕ್ರಮಣದ ತಂಡದ ನಾಯಕ ಮೌನವನ್ನು ಮುರಿದಿದ್ದು ಯಹೂದಿಗಳ ಪ್ರಾರ್ಥನೆಯೊಂದಿಗೆ, ಆ ಪ್ರಾರ್ಥನೆ ಮುಗಿದನಂತರವೇ ಅವರು ಪೈಲಟ್ಟುಗಳ ಭಾಷೆಯಲ್ಲಿ ಮಾತಾಡಲು ಶುರುಮಾಡಿಕೊಂಡಿದ್ದು. 

 ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಇಸ್ರೇಲಿನ ಪ್ರಧಾನಿ ಖುದ್ದಾಗಿ ಬರುತ್ತಾರೆ ಈ ಗಂಡುಗಲಿಗಳನ್ನು ಭೇಟಿಮಾಡಲು. ಅರ್ಧ ಗಂಟೆಯ ನಂತರ ನಡೆದ ಪತ್ರಿಕಾ ಸಮ್ಮೇಳನದಲ್ಲಿ ಧ್ವಂಸಗೊಂಡ ಒಸಿರಾಕಿನ ಅಣುಸ್ಥಾವರದ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಡೀ ಪ್ರಪಂಚವೇ ಬೆಕ್ಕಸ ಬೆರಗಾಗುತ್ತವೆ. ಮಸ್ಲೀಮ್ ದೇಶಗಳು ಅವಮಾನದಿಂದ ಕುದ್ದು ಹೋಗುತ್ತವೆ. ಅಮೆರಿಕವೇನೋ ಮೇಲ್ನೋಟಕ್ಕೆ ವಿಶ್ವಸಂಸ್ಥೆಯಲ್ಲಿ ವಿರೋಧ ವ್ಯಕ್ತಪಡಿಸುತ್ತದಾದರೂ ಒಳಗೊಳಗೆ ಇಸ್ರೇಲಿಯರಿಗೆ ದೊಡ್ಡ ಧನ್ಯವಾದಗಳನ್ನು ಹೇಳುತ್ತದೆ.      ಈoಡಿಣuಟಿe ಜಿಚಿvoಡಿs ಣhe bಡಿಚಿve ಎನ್ನುವ ಹಾಗೆ, ಜೋರ್ಡಾನಿನ ದೊರೆ ಕಳುಹಿಸಿದ ಎಚ್ಚರಿಕೆಯ ಸಂದೇಶ ಇರಾಕನ್ನು ತಲುಪುವುದೇ ಇಲ್ಲ. ಟನ್ನುಗಟ್ಟಲೇ ಬಾಂಬು ಅಣು ಸ್ಥಾವರದ ಮೇಲೆ ಸುರಿದರೂ ಇರಾಕಿನ ನಾಗರೀಕರಿಗೆ ಕಿಂಚಿತ್ತೂ ಹಾನಿಯಾಗುವುದಿಲ್ಲ. ಎಲ್ಲದಿಕ್ಕಿಂತ ಮುಖ್ಯವಾಗಿ ದಾಳಿಯ ಸಮಯ..ಇನ್ನು ಕೇವಲ  ಹತ್ತು ದಿನಗಳಲ್ಲಿ  ಅಣು ಬಾಂಬುಗಳನ್ನು ತಯಾರಿಸುವ ಸಾಮರ್ಥ್ಯ ಪಡೆಯಲಿದ್ದ ಈ ಅಣುಸ್ಥಾವರವನ್ನು ನಾಶಮಾಡಿದ್ದು...ವಿಷದ ಮೊಳಕೆಯನ್ನು ಹೊಸಕಿ ಹಾಕಿದ್ದು. ಮತ್ತೊಮ್ಮೆ ಇಸ್ರೇಲಿನ ಈ ಸಾಹಸಗಾಥೆ ಹಲವಾರು ಮಿಲಿಟರಿ ಕಾಲೇಜುಗಳ ಪಠ್ಯಕ್ರಮಕ್ಕೆ ಸೇರ್ಪಡೆಗೊಂಡಿತು. 

-ವಿಂಗ್ ಕಮಾಂಡರ್ ಸುದರ್ಶನ್

Moolmandir in Kashi during Modi Era?

ಮೋದಿ ಅವಧಿಯಲ್ಲೇ ಕಾಶಿಯಲ್ಲೂ ಮೂಲಮಂದಿರ?

ಏನೇ ಹೇಳಿ, ನರೇಂದ್ರಮೋದಿ ವಾರಣಾಸಿಯ ಸಾಂಸದರಾಗಿದ್ದು ಸಾರ್ಥಕವಾಯ್ತು. ಯಾವುದನ್ನು ಅಹಲ್ಯಾಬಾಯಿ ಹೋಳ್ಕರ್ ಕೂಡ ಸಾಧಿಸುವಲ್ಲಿ ಪೂರ್ಣ ಪ್ರಮಾಣದ ಜಯ ಗಳಿಸಿರಲಿಲ್ಲವೋ ನರೇಂದ್ರಮೋದಿ ಅದನ್ನೂ ದಕ್ಕಿಸಿಕೊಳ್ಳುವಂತೆ ಕಾಣುತ್ತಿದೆ. ಇತಿಹಾಸ ಇವರನ್ನು ಈ ದೇಶದ ಹಿಂದುತ್ವದ ಸಂರಕ್ಷಕ ಎಂದು ಖಂಡಿತವಾಗಿಯೂ ಸುದೀರ್ಘಕಾಲ ಸ್ಮರಿಸಿಕೊಳ್ಳುತ್ತದೆ. ಇವಿಷ್ಟನ್ನೂ ಈಗೇಕೆ ಹೇಳಬೇಕಾಯ್ತೆಂದರೆ ಕಾಶಿಯಲ್ಲಿ ನಿಧಾನವಾಗಿ ಜ್ಞಾನವಾಪಿ ಮಸೀದಿಯನ್ನು ಮರಳಿ ಪಡೆದುಕೊಳ್ಳುವ ಪ್ರಯತ್ನ ಆರಂಭವಾಗಿಬಿಟ್ಟಿದೆ. ನಿಮಗೆ ಗೊತ್ತಿರುವಂತೆ ಕಾಶಿ ವಿಶ್ವನಾಥನ ಮೂಲ ಮಂದಿರ ಈ ಮಸೀದಿಯ ಸ್ಥಳದಲ್ಲೇ ಇದ್ದದ್ದು. ೧೬೬೯ರಲ್ಲಿ ಔರಂಗಜೇಬ ಇದನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿಸಿ ಜ್ಞಾನವಾಪಿ ಮಸೀದಿ ಎಂದೇ ಕರೆಯುವ ಧಾರ್ಷ್ಟ್ಯವನ್ನೂ ತೋರಿದ. ಅದು ಮುಸಲ್ಮಾನರ ಸಹಜ ಧಾರ್ಷ್ಟ್ಯತೆ. ಬಾಬರ್ನ ಸೇನಾಪತಿ ಮೀರ್ ಬಾಕಿ ರಾಮಮಂದಿರವನ್ನು ಕೆಡವಿದ ನಂತರ ಅಲ್ಲಿ ಕಟ್ಟಿದ ಮಸೀದಿಗೆ ಜನ್ಮಸ್ಥಾನ್ ಮಸೀದಿ ಎಂದು ಹೆಸರಿಡುತ್ತಾನೆ, ಈತ ಜ್ಞಾನವಾಪಿ ಮಸೀದಿ ಎನ್ನುತ್ತಾನೆ. ನಿಮ್ಮ ಮಂದಿರವನ್ನು ಕೆಡವಿ ನಿಮ್ಮ ದೇವರುಗಳನ್ನು ನಿಸ್ಸಹಾಯಕಗೊಳಿಸಿ ಈ ಕಟ್ಟಡಗಳನ್ನು ಕಟ್ಟಲಾಗಿದೆ ಎಂದು ಸದಾ ನೆನಪಿಸುವ ಪ್ರಯತ್ನ ಅದು!

ಕಾಶಿ ಹಿಂದೂಗಳಲ್ಲಿ ಯಾವ ಮತ-ಪಂಥದವನೇ ಇರಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಹೋಗಲು ಬಯಸುವ ತಾಣ. ಕಾಶಿಗೆ ಹೋಗಲಿಲ್ಲವೆಂದು ಬೇಸರಿಸಿಕೊಳ್ಳುವವರಿಗೆಂದೇ ದೇಶದ ಅಸಂಖ್ಯ ಸ್ಥಳಗಳಲ್ಲಿ ಕಾಶಿ ವಿಶ್ವೇಶ್ವರ ದೇವಾಲಯಗಳಿವೆ. ಊರಿನ ಯಾರೋ ಹಿರಿಯರು ಕಾಶಿಯಿಂದ ಲಿಂಗವನ್ನು ತಂದು ಪ್ರತಿಷ್ಠಾಪಿಸಿ ವಿಶ್ವನಾಥನ ದರ್ಶನ ಇಲ್ಲಿಯೇ ಮಾಡಿರೆಂದು ಹೇಳಿದ ನೆನಪಿಗಾಗಿ ಅದು. ಕಾಶಿಯ ವಿಶ್ವನಾಥನ ದರ್ಶನ ಪುಣ್ಯದ ಒಂದಂಶವಾದರೆ ಕಾಶಿಯಲ್ಲಿ ಪ್ರಾಣತ್ಯಾಗ ಮಾಡುವುದಕ್ಕೂ ಅಷ್ಟೇ ಬೆಲೆಯಿದೆ. ಇದು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಆಧ್ಯಾತ್ಮ ಸಾಧನೆಯನ್ನು ಬಯಸಿ ಬರುವ ಪ್ರತಿಯೊಬ್ಬರೂ ಒಂದಿಲ್ಲ ಒಂದು ಸಂದರ್ಭದಲ್ಲಿ ಕಾಶಿಗೆ ಭೇಟಿ ನೀಡಿಯೇ ನೀಡುತ್ತಾರೆ. ಹಿಂದೂಗಳ ಜೀವನದ ಅವಿಭಾಜ್ಯ ಅಂಗವಾಗಿರುವ ಕಾಶಿಯ ಮೇಲೆ ಸಾಮಾನ್ಯ ಶಕವರ್ಷ ೧೧೯೪ರಲ್ಲಿ ಮೊಹಮ್ಮದ್ ಘೋರಿಯ ಸೇನಾನಾಯಕ ಕುತುಬ್-ಉದ್-ದೀನ್ ಐಬಕ್ ಮೊದಲ ಬಾರಿಗೆ ಉರುಳಿಸಿದ ಎಂದು ಇತಿಹಾಸ ಹೇಳುತ್ತದೆ. ಇಸ್ಲಾಂ ಆಕ್ರಮಣಕಾರಿಗಳದ್ದು ಹೋದೆಡೆಯಲ್ಲೆಲ್ಲಾ ಇದೇ ಪದ್ಧತಿ. ಜನರನ್ನು ಬಲಾತ್ಕಾರದಿಂದ ಮತಾಂತರಿಸುವುದು, ಅವರ ಪೂಜಾಸ್ಥಾನಗಳನ್ನು ಧ್ವಂಸಗೊಳಿಸಿ ಇಸ್ಲಾಂ ಪ್ರದೇಶವನ್ನಾಗಿ ನಿರ್ಮಾಣ ಮಾಡಿರುವ ಸಂತಸದಿಂದ ಬೀಗುವುದು. ನಮ್ಮ ಇತಿಹಾಸಕಾರರಲ್ಲಿ ಕೆಲವರು ಇದಕ್ಕೂ ಇಸ್ಲಾಂಗೂ ಸಂಬಂಧವೇ ಇಲ್ಲವೆಂತಲೂ ಮಂದಿರಗಳಲ್ಲಿರುವ ಸಂಪತ್ತನ್ನು ಲೂಟಿ ಮಾಡಲು ಮಂದಿರ ಧ್ವಂಸಗೊಳಿಸಲಾಗುತ್ತಿತ್ತೆಂತಲೂ ತೇಪೆ ಹಚ್ಚಲು ಪ್ರಯತ್ನಿಸುತ್ತಾರೆ. ಹಾಗಿದ್ದಮೇಲೆ ಮಂದಿರವನ್ನು ಲೂಟಿ ಮಾಡಿ ಅದನ್ನು ಉರುಳಿಸಬೇಕಾದ ಅಗತ್ಯ ಬರುತ್ತಿರಲಿಲ್ಲ. ಅಲ್ಲಿರುವ ಮೂರ್ತಿಯನ್ನು ಧ್ವಂಸಗೊಳಿಸಿ ಅವಶೇಷಗಳನ್ನು ತುಳಿದು ಸಂಭ್ರಮಿಸುವ ವಿಕೃತ ಮನಸ್ಥಿತಿಯೂ ಬೇಕಿರಲಿಲ್ಲ. ಕೊನೆಗೆ ಇಲ್ಲಿದ್ದದ್ದು ಮೂಲತಃ ಮಂದಿರವೆಂದು ಗೊತ್ತಾದಾಗಲೂ ಅದನ್ನು ಮರಳಿ ಹಿಂದೂಗಳಿಗೆ ಕೊಡುವುದಿಲ್ಲ ಎಂದು ಇಂದಿನವರು ಹಠ ಮಾಡುವ ಅಗತ್ಯವೂ ಇರಲಿಲ್ಲ. ಎಲ್ಲವೂ ಮತದ ಅಫೀಮು ಸೇವಿಸಿದವರ ಘೋರಕೃತ್ಯಗಳು ಅಷ್ಟೇ.

ಆದರೆ ಕಾಶಿ ಅದೆಷ್ಟು ಪವಿತ್ರವಾಗಿತ್ತೆಂದರೆ ಕುತುಬ್-ಉದ್-ದೀನ್ ಐಬಕ್ ಇದನ್ನು ಉರುಳಿಸಿದ ಕೆಲವೇ ವರ್ಷಗಳಲ್ಲಿ ವ್ಯಾಪಾರಿಯೊಬ್ಬ ಇದನ್ನು ಮರು ನಿರ್ಮಿಸಿದನಂತೆ. ಅದಾದ ೨೦೦ ವರ್ಷಗಳ ಕಾಲ ಅಬಾಧಿತವಾಗಿ ಜನರಿಗೆ ಆಧ್ಯಾತ್ಮಿಕ ಅನುಭೂತಿ ನೀಡುತ್ತಿದ್ದ ವಿಶ್ವನಾಥ ಮತ್ತೆ ೧೫ನೇ ಶತಮಾನದಲ್ಲಿ ಇಬ್ರಾಹಿಂ ಲೋಧಿಯ ಆಕ್ರಮಣಕ್ಕೆ ತುತ್ತಾದ. ಮಂದಿರ ಮತ್ತೆ ಕೆಡವಲಾಯ್ತು. ಅನೇಕ ದಶಕಗಳ ನಂತರ ರಾಜಾ ಮಾನ್ಸಿಂಗರು ಇದನ್ನು ಮರುನಿರ್ಮಾಣ ಮಾಡಿದರು. ಮತ್ತೆ ಜನ ಶ್ರದ್ಧೆಯಿಂದಲೂ ಭಕ್ತಿಯಿಂದಲೂ ಮಂದಿರಕ್ಕೆ ಭೇಟಿಕೊಡುತ್ತಾ ಹಿಂದೂಧರ್ಮದ ಮೂಲಸತ್ವ್ತವನ್ನು ಭದ್ರಗೊಳಿಸುತ್ತಾ ನಡೆದರು. ಇಡಿಯ ಭಾರತವನ್ನು ತನ್ನ ಅವಧಿಯಲ್ಲಿ ಪೂರ್ಣ ಇಸ್ಲಾಮೀಕರಣಗೊಳಿಸಬೇಕೆಂಬ ತುಡಿತದಿಂದ ಕಾರ್ಯ ನಿರ್ವಹಿಸುತ್ತಿದ್ದ ಮತಾಂಧ ಔರಂಗಜೇಬ ಇದನ್ನು ಕೆಡವಿದ್ದು ಆಗಲೇ.  ಅಲ್ಲಿಯೇ ಮಸೀದಿಯನ್ನು ನಿರ್ಮಿಸಿದ. ಅದೇ ವಿಶ್ವನಾಥ ಮಂದಿರದ ಅವಶೇಷಗಳನ್ನು ಬಳಸಿ ಕಟ್ಟಿದ ಈ ಮಸೀದಿ ಮುಸಲ್ಮಾನರ ಪಾಲಿಗೆ ಪವಿತ್ರ ಮಸೀದಿ ಏನೂ ಆಗಿರಲಿಲ್ಲ. ಕಾಫಿರರು ಪೂಜೆ ಸಲ್ಲಿಸುತ್ತಿದ್ದ ಕಟ್ಟಡಗಳ ಅವಶೇಷಗಳಿಂದ ಕಟ್ಟಿದ ಮಸೀದಿ ಪವಿತ್ರವಾಗುವುದು ಹೇಗೆ ಸಾಧ್ಯ ಹೇಳಿ? ಕುರಾನ್ ಕೂಡ ಅದನ್ನು ಒಪ್ಪುವುದಿಲ್ಲ. ಆದರೂ ಹಿಂದೂಗಳಿಗೆ ಅವಮಾನ ಮಾಡಲು, ವಿಶ್ವನಾಥನ ಅಸಹಾಯಕತೆಯನ್ನು ತೋರ್ಪಡಿಸಲು ಅವರಿಗೆ ಅದು ಬೇಕಾಗಿತ್ತು. ಮುಂದೆ ಅಹಲ್ಯಾಬಾಯಿ ಹೋಳ್ಕರ್ ಒಂದು ಶತಮಾನದ ನಂತರ ತಂಟೆಯೇ ಬೇಡವೆಂದು ಮಸೀದಿಯ ಪಕ್ಕದಲ್ಲಿ ಸುಂದರವಾದ ಮಂದಿರವೊಂದನ್ನು ಕಟ್ಟಿ ಅದನ್ನು ರಾಷ್ಟ್ರಕ್ಕೆ ಸಮರ್ಪಿಸಿದಳು. ಆ ತಾಯಿಯನ್ನು ಎಷ್ಟು ಸ್ಮರಿಸಿಕೊಂಡರೂ ಕಡಿಮೆಯೇ. ಮುಸಲ್ಮಾನರ ಆಕ್ರಮಣಕ್ಕೆ ತುತ್ತಾಗಿದ್ದ ಅನೇಕ ಮಂದಿರಗಳನ್ನು ಪುನರ್ ನಿರ್ಮಿಸಿ ಆಕೆ ರಾಷ್ಟ್ರಕ್ಕೆ ಸಮರ್ಪಿಸಿದಳು. 

ಬಹುಶಃ ಆಧುನಿಕ ಅಹಲ್ಯಬಾಯಿ ಹೋಳ್ಕರ್ ಎಂದು ಭಾವಿಸಬಹುದಾದ ನರೇಂದ್ರಮೋದಿ ತಾವು ಸಂಸದರಾದ ಮೇಲೆ ಶತಾಯ-ಗತಾಯ ಶ್ರಮಿಸಿ ತಮ್ಮದ್ದೇ ಸರ್ಕಾರವನ್ನು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ತಂದರು. ಯೋಗಿ ಆದಿತ್ಯನಾಥರಂತಹ ಖಡಕ್ಕು ಮನುಷ್ಯನ ಕೈಯ್ಯಲ್ಲಿ ರಾಜ್ಯವನ್ನು ಸಂಭಾಳಿಸಲು ಕೊಟ್ಟರು. ಕಾಶಿಯ ಸ್ವರೂಪ ಬದಲಾಯಿಸುವುದು ಅವರ ಮುಂದಿರುವ ಸವಾಲಾಗಿತ್ತು. ಯೋಗಿ ಆದಿತ್ಯನಾಥರು ೨೦೧೭ರಲ್ಲಿಯೇ ಇದಕ್ಕೆ ಬೇಕಾದ ಚಟುವಟಿಕೆ ಆರಂಭಿಸಿಬಿಟ್ಟರು. ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ ಮಂದಿರ ಮಸೀದಿಯ ಎದುರಿಗೆ ಕುಬ್ಜವಾಗಿ ಕಾಣುತ್ತಿತ್ತಲ್ಲದೇ ಸುತ್ತಲೂ ಮನೆಗಳ ರಾಶಿಯಿಂದಾಗಿ ಮಂದಿರವನ್ನು ಹುಡುಕಬೇಕಾದ ಸ್ಥಿತಿಯಿತ್ತು. ಯೋಗಿ ಈ ಮನೆಗಳನ್ನು ಊಹಿಸಲಾಗದ ಬೆಲೆಕೊಟ್ಟು ಸರ್ಕಾರದ ಮೂಲಕ ಕೊಂಡುಕೊಂಡರು. ಮೂಲ ಮಂದಿರದ ಸುತ್ತಮುತ್ತಲೂ ಇದ್ದ ಕೆಲವು ಮಂದಿರಗಳನ್ನು ತೆಗೆದು ವಿಶ್ವನಾಥ ಮಂದಿರಕ್ಕೆ ಉಸಿರಾಡಲು ಬೇಕಾದಷ್ಟು ಜಾಗವನ್ನು ಕೊಡಿಸಿದರು. ೨೦೧೯ರಲ್ಲಿ ಈ ವಿಶ್ವಾಸದ ಆಧಾರದ ಮೇಲೆಯೇ ಮೋದಿ ಕಾಶಿ ಕಾರಿಡಾರ್ನ ಘೋಷಣೆ ಮಾಡಿದ್ದು. ಮೊನ್ನೆ ಇತ್ತೀಚೆಗೆ ಈ ಕಾರಿಡಾರ್ ನಿರ್ಮಾಣವಾಗಿ ಸಮಾಜಕ್ಕೆ ಸಮರ್ಪಣೆಯಾದಾಗ ದೇಶದ ಮತ್ತು ಜಗತ್ತಿನ ಮೂಲೆ-ಮೂಲೆಯಲ್ಲಿರುವ ಹಿಂದೂಗಳ ಆನಂದಕ್ಕೆ ಮಿತಿಯೇ ಇರಲಿಲ್ಲ. ಈಗ ಮಸೀದಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಕಾಣುತ್ತಿತ್ತು. ಜೊತೆಗೆ ಮೂಲ ಮಂದಿರದ ಭಾಗವಾಗಿದ್ದ ನಂದಿ ಇಷ್ಟು ದಿನ ಮಸೀದಿಯ ಭಾಗವಾಗಿದ್ದು ಕಾರಿಡಾರ್ನ ಕಾರಣದಿಂದಾಗಿ ಮಂದಿರದ ಭಾಗವಾಯ್ತು. ಪ್ರತಿ ಯಾತ್ರಿಕನೂ ವಿಶ್ವನಾಥನ ದರ್ಶನದ ನಂತರ ಈಗ ನಂದಿಯ ದರ್ಶನ ಪಡೆದೇ ಬರುತ್ತಾನೆ. ಆ ನಂದಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ ಮಂದಿರದೆಡೆಗೆ ತಿರುಗಿರದೇ ಜ್ಞಾನವಾಪಿ ಮಸೀದಿಯೆಡೆಗೆ ಮುಖಮಾಡಿ ನಿಂತಿರುವುದು ಆಕ್ರಮಣದ ಅಷ್ಟೂ ಕಥೆಯನ್ನು ವಿವರಿಸುತ್ತದೆ. ಶತಾಯ-ಗತಾಯ ವಿಶ್ವನಾಥ ಮಂದಿರವನ್ನು ಮರಳಿ ಪಡೆಯಬೇಕೆನ್ನುವ ಇಚ್ಛೆಯನ್ನು ಪ್ರತಿಯೊಬ್ಬ ಭಕ್ತನಲ್ಲಿಯೂ ಜಾಗೃತಗೊಳಿಸುತ್ತದೆ. 

ರಾಮಮಂದಿರವನ್ನು ಮರಳಿ ಪಡೆದಮೇಲೆ ಹಿಂದೂಗಳಲ್ಲಿ ಈ ಮಂದಿರವನ್ನೂ ಮರಳಿ ಪಡೆಯುವ ಆಸಕ್ತಿ ತೀವ್ರವಾಯ್ತು. ೧೯೯೧ರಲ್ಲಿ ಪಂಡಿತ್ ಸೋಮನಾಥ್ ವ್ಯಾಸ್ ಈ ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ೧೯೯೧ರಲ್ಲಿ ಕಾಂಗ್ರೆಸ್ಸು ಈ ಎಲ್ಲ ಗಲಾಟೆಗಳನ್ನು ನಿಯಂತ್ರಿಸಲೆಂದೇ ಪ್ಲೇಸಸ್ ಆಫ್ ವರ್ಶಿಪ್ ???ಕ್ಟ್ ಜಾರಿಗೆ ತಂದು ಎಲ್ಲ ಪೂಜಾಸ್ಥಳಗಳೂ ೧೯೪೭, ಆಗಸ್ಟ್ ೧೫ಕ್ಕೆ ಹೇಗಿದ್ದವೋ ಹಾಗೆಯೇ ಇರಬೇಕು. ಅದನ್ನು ಬದಲಾಯಿಸುವಂತಿಲ್ಲ ಎಂದುಬಿಟ್ಟಿತು. ಇದು ಕಾಶಿ ಮತ್ತು ಮಥುರಾವನ್ನು ಮುಸಲ್ಮಾನರಿಗೇ ಉಳಿಸಿಕೊಡುವ ಸ್ಪಷ್ಟ ಪಿತೂರಿಯಾಗಿತ್ತು. ಇದರ ಆಧಾರದ ಮೇಲೆಯೇ ಅಲಹಾಬಾದ್ ಉಚ್ಚ ನ್ಯಾಯಾಲಯ ಈ ಬಗೆಯ ಎಲ್ಲ ಪಿಟೀಶನ್ನುಗಳನ್ನು ಮೂಲೆಗುಂಪು ಮಾಡಿತು. ರಾಮಮಂದಿರ ನಿರ್ಣಯದ ನಂತರ ವಕೀಲ ರಸ್ತೋಗಿ ಮತ್ತೆ ವಿಚಾರಣೆಗೆ ಎತ್ತಿಕೊಳ್ಳುವಂತೆ ಮನವಿ ಮಾಡಿದರು. ಜ್ಞಾನವಾಪಿ ಮಸೀದಿ ಕಾನೂನು ಬಾಹಿರವಾಗಿರುವುದರಿಂದ ಅದನ್ನು ಮರಳಿ ಹಿಂದೂಗಳಿಗೆ ಬಿಟ್ಟುಕೊಡಬೇಕೆಂಬುದು ಅವರ ವಾದ. ಸ್ವತಃ ಕಾಶಿಯ ನ್ಯಾಯಾಲಯ ಈ ವಾದವನ್ನು ಪುರಸ್ಕರಿಸಿ ಪುರಾತತ್ವ ಇಲಾಖೆಗೆ ಉತ್ಖನನ ನಡೆಸಿ ವರದಿ ಕೊಡುವಂತೆ ಕೇಳಿಕೊಂಡಿತು. ಮಸೀದಿ ಕಮಿಟಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಇದರ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಹೋಗಿ ಕಾಂಗ್ರೆಸ್ಸು ತಂದ ೧೯೯೧ರ ಕಾನೂನನ್ನೇ ಮುಂದಿಟ್ಟುಕೊಂಡು ತಡೆಯಾಜ್ಞೆ ಪಡೆದವು. ಆದರೆ ರಾಮಮಂದಿರದ ವಿಚಾರ ಚರ್ಚೆಯಾಗುವ ವೇಳೆಯಲ್ಲಿ ಕಾಂಗ್ರೆಸ್ ತಂದ ಈ ಕಾನೂನಿನ ಕುರಿತಂತೆಯೇ ಸಾಕಷ್ಟು ಚಚರ್‌uಟಿಜeಜಿiಟಿeಜಯಾಗಿದ್ದು ಒಂದು ಹಂತದಲ್ಲಿ ಮುಖ್ಯ ನಾಯಾಧೀಶರಾದ ಎಸ್.ಎ. ಬೋಗ್ಡೆ ಈ ಕಾನೂನಿನ ವ್ಯಾಪ್ತಿ, ವಿಸ್ತಾರವನ್ನೇ ಪ್ರಶ್ನಿಸಿಬಿಟ್ಟಿದ್ದರು. ಸರಿಸುಮಾರು ಇದೇ ಹೊತ್ತಿನಲ್ಲಿ ದೆಹಲಿ ಮೂಲದ ರಾಖಿ ಸಿಂಗ್ ನೇತೃತ್ವದಲ್ಲಿ ಐದು ಮಂದಿ ವಾರಣಾಸಿ ನ್ಯಾಯಾಲಯಕ್ಕೆ ಮನವಿ ಕೊಟ್ಟಿದ್ದರು. ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿರುವ ಶೃಂಗಾರ ಗೌರಿ, ಗಣೇಶ, ಹನುಮಂತ ಮತ್ತು ನಂದಿಯ ಪೂಜೆಗೆ ಅವಕಾಶ ಕೊಡಬೇಕೆಂದು ಮತ್ತು ವಿರೋಧಿ ಗುಂಪು ಈ ವಿಚಾರಣೆಯ ಅವಧಿಯಲ್ಲಿ ಈ ಮೂರ್ತಿಗಳನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕೆಂದೂ ಕೇಳಿಕೊಂಡಿದ್ದರು. ಈ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದವು. ಮೊನ್ನೆ ಏಪ್ರಿಲ್ ೨೬ಕ್ಕೆ ಅಲ್ಲಿನ ನ್ಯಾಯಾಧೀಶರಾದ ರವಿಕುಮಾರ್ ದಿವಾಕರ್ ಈ ಮಸೀದಿಯ ಆವರಣದಲ್ಲಿರುವ ಶೃಂಗಾರ ಗೌರಿಯೇ ಮೊದಲಾದ ಮಂದಿರಗಳ ವಿಡಿಯೊ ಚಿತ್ರೀಕರಣ ಮಾಡಬೇಕೆಂದು ಆದೇಶ ನೀಡಿದರು. ಆದೇಶ ನೀಡುವಾಗ ಮುಸಲ್ಮಾನರ ಈದ್ ಅನ್ನು ತೊಂದರೆಗೊಳಪಡಿಸದಂತೆ, ಅದು ಮುಗಿದ ನಂತರ ಮೇ ೧೦ರೊಳಗೆ ವಿಚಾರಣೆಗೆ ವಿಡಿಯೊದೊಂದಿಗೆ ಹಾಜರಾಗಬೇಕೆಂದು ಹೇಳಿದರು. ಈ ಹಿನ್ನೆಲೆಯಲ್ಲಿಯೇ ಮಸೀದಿಯ ನಿರ್ವಹಣಾ ಸಮಿತಿ ರಂಪಾಟ ಆರಂಭಿಸಿಬಿಟ್ಟಿತು. ಎಸ್.ಎಮ್ ಯಾಸಿನ್ 'ನಾವು ಮಸೀದಿಯೊಳಗೆ ಯಾರನ್ನೂ ಬಿಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಉಂಟಾಗಬಹುದಾದ ಪರಿಣಾಮವನ್ನೆದುರಿಸಲು ಸಜ್ಜಾಗಿರುತ್ತೇವೆ' ಎಂದುಬಿಟ್ಟ. ಇದು ಸ್ಥಳೀಯ ಮುಸಲ್ಮಾನರನ್ನು ಭಡಕಾಯಿಸುವ ಯತ್ನ. ಆಗ ಇತರೆ ಮುಸಲ್ಮಾನರ ಕೂಗು ಆರಂಭವಾಯ್ತು. ಮುಸಲ್ಮಾನರಲ್ಲದವರನ್ನು ಮಂದಿರ ಪ್ರವೇಶಿಸಲು ಬಿಡಲಾರೆವು ಎನ್ನಲಾರಂಭಿಸಿದರು. ವಾಸ್ತವವಾಗಿ ಈ ಜಾಗವೂ ಮುಸಲ್ಮಾನರದ್ದಲ್ಲ, ಕಟ್ಟಡವೂ ಅವರದ್ದಲ್ಲ. ಬೇರೆಯವರ ಕಟ್ಟಡವನ್ನು ಬಲವಂತದಿಂದ ಕಸಿದು, ನುಗ್ಗಿ ನಿಜವಾದ ಮಾಲಿಕನಿಗೆ ಒಳ ಬಿಡಲಾರೆವು ಎಂಬ ಧಾರ್ಷ್ಟ್ಯವಿದೆಯಲ್ಲ ಇದು ಅವರಿಗೆ ಸಹಜ ಸಿದ್ಧವಾದ್ದು. ಆದರೆ ಅಲ್ಲಿರುವುದು ಬೊಮ್ಮಾಯಿಯ ಸರ್ಕಾರವಲ್ಲ, ಯೋಗಿಯ ಸರ್ಕಾರ ಎಂಬುದನ್ನು ಮುಸಲ್ಮಾನರು ಒಂದು ಕ್ಷಣ ಮರೆತಿದ್ದರು ಅಷ್ಟೇ! ಮೊದಲಿಗೆ ಮುಸಲ್ಮಾನರನ್ನು ನ್ಯಾಯಾಲಯದ ಆದೇಶ ಪಾಲಿಸಲು ಓಲೈಸುವ ಯತ್ನ ಮಾಡಿದ ಸರ್ಕಾರ ಕೇಳವುದಿಲ್ಲವೆಂದು ಗೊತ್ತಾದಾಗ ಭರ್ಜರಿ ಪೊಲೀಸರನ್ನು ಕಾವಲಿಗೆ ಹಾಕಿತು. ಮುಸಲ್ಮಾನರು ತೆಪ್ಪಗಾದರು. 

ಶುಕ್ರವಾರವೇ ವಿಡಿಯೊ ಚಿತ್ರೀಕರಣ ಮಾಡುವ ಆದೇಶ ದಕ್ಕಿದ್ದರಿಂದ ಅಂದು ನಮಾಜಿಗೆ ಬರುವ ದೊಡ್ಡ ಸಂಖ್ಯೆಯ ಮುಸಲ್ಮಾನರನ್ನು ಎದುರಿಸಬೇಕೆಂದೂ ಅವರಿಗೆ ಗೊತ್ತಿತ್ತು. ಆರಂಭದಲ್ಲಿ ಸ್ವಲ್ಪ ಅರಚಾಟ ನಡೆಸಿದ ಮಂದಿ ಪೊಲೀಸರ ಕೈಲಿದ್ದ ವಿಡಿಯೊ ಕ್ಯಾಮೆರಾಗಳನ್ನು ನೋಡಿ ತೆಪ್ಪಗಾದರು. ಮುಖ್ಯಮಂತ್ರಿಗಳು ಹುಡು-ಹುಡುಕಿ ಮನೆಗಳನ್ನು ಬುಲ್ಡೋಜ್ ಮಾಡಿಬಿಟ್ಟಾರು ಎಂಬ ಭಯ ಅವರಿಗೆ. ಕಾಶಿಯಲ್ಲಿರುವ ಬಹುತೇಕ ಮನೆಗಳು ಕಾನೂನು ಬಾಹಿರ ನಿರ್ಮಿತಿಗಳೇ. ಒಡೆದರೆ ಯಾರೂ ಕೇಳುವವರೂ ಇಲ್ಲ. ಸಹಜವಾಗಿಯೇ ಇವರ ನಡುವೆಯೇ ನ್ಯಾಯಾಲಯ ನೇಮಿಸಿದ್ದ ವಕೀಲರು ಜ್ಞಾನವಾಪಿ ಮಸೀದಿಯ ವಿಡಿಯೊ ಚಿತ್ರೀಕರಣ ಆರಂಭಿಸಿದರು. ಮರುದಿನವೂ ಇದು ಮುಂದುವರೆದಿದೆ. ೧೦ನೇ ತಾರೀಖಿನಿಂದ ವಿಚಾರಣೆ ಆರಂಭವಾಗಬೇಕಿದೆ ಅಷ್ಟೇ.

ವಿಚಾರಣೆಯ ಫಲಿತಾಂಶ ಹೇಗೇ ಇರಲಿ. ಆದರೆ ಸತ್ಯವನ್ನು ಮುಲಾಜಿಲ್ಲದೇ ಹೇಳುವ, ಆಚರಣೆಗೆ ತರುವ ಧೈರ್ಯವಂತೂ ಈಗ ಭಾರತೀಯ ಸಮಾಜಕ್ಕೆ ಬಂದಿದೆ. ಆದರೆ ನನಗಿರುವ ಪ್ರಶ್ನೆ ಸಂವಿಧಾನಕ್ಕೆ ಬದ್ಧರೆಂದು ಪದೇ ಪದೇ ಹೇಳಿಕೊಳ್ಳುವ ಮುಸಲ್ಮಾನರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿರುವುದಾದರೂ ಏಕೆ? ಮಸೀದಿ ಮಂದಿರ ಒಡೆದು ನಿರ್ಮಿಸಿದ್ದಲ್ಲವೆನ್ನುವುದಾದರೆ ವಿಡಿಯೊ ಚಿತ್ರೀಕರಣ ನಡೆಯಲಿ ಬಿಡಿ, ಹೆದರಿಕೆ ಏಕೆ? ಒಡೆದು ನಿರ್ಮಿಸಿದ್ದೇ ನಿಜ ಎನ್ನುವುದಾದರೆ ಸೌಹಾರ್ದತೆಯ ಕಾರಣಕ್ಕೆ ಅದನ್ನು ಬಿಟ್ಟುಕೊಡುವ ಜವಾಬ್ದಾರಿ ಮುಸಲ್ಮಾನರದ್ದಲ್ಲವೇನು? ಮತ್ತು ಈ ರೀತಿ ಮಂದಿರದ ಅವಶೇಷಗಳೊಂದಿಗೆ ಕಟ್ಟಿದ ಮಸೀದಿ ಪ್ರಾರ್ಥನೆಗೆ ಯೋಗ್ಯವಲ್ಲವೆಂದು ಅವರ ಮತಗ್ರಂಥವೇ ಹೇಳುತ್ತದಲ್ಲ, ಮತ್ತೇಕೆ ಅದನ್ನು ಉಳಿಸಿಕೊಂಡಿದ್ದಾರೆ? ೩೬ ಸಾವಿರ ದೇವಾಲಯಗಳನ್ನು ಮುಸಲ್ಮಾನರು ಕೆಡವಿದ್ದಾರೆ ಅಥವಾ ಮಸೀದಿಯಾಗಿ ಪರಿವರ್ತಿಸಿದ್ದಾರೆ. ಹಿಂದೂಗಳು ಪ್ರೀತಿಯಿಂದ ಕೇಳಿರುವುದು ಅಯೋಧ್ಯೆ, ಕಾಶಿ ಮತ್ತು ಮಥುರಾ ಮಾತ್ರ. ಅದನ್ನೂ ನ್ಯಾಯಾಲಯದಲ್ಲಿ ಬಡಿದಾಡಿಯೇ ಪಡೆದುಕೊಳ್ಳಬೇಕೆನ್ನುವುದಾದರೆ ೩೬ ಸಾವಿರ ಮಂದಿರಕ್ಕೂ ಕೈ ಹಾಕೋಣ. ಏನಂತೀರಿ?

ಅಂದಹಾಗೆ, ನೂರು ವರ್ಷಗಳ ಹಿಂದೆ ಕೆನಡಾಕ್ಕೆ ಕದ್ದೊಯ್ಯಲ್ಪಟ್ಟಿದ್ದ ಅನ್ನಪೂರ್ಣೆಯೂ ಕಾಶಿಗೆ ಮರಳಿ ಬಂದಿದ್ದಾಳೆ. ಅನ್ನಪೂರ್ಣೆ ಕಾಶಿಯ ಸಮೃದ್ಧಿಯ ಸಂಕೇತ. ಅಂದರೆ, ಕಾಶಿಗೆ ಆ ಸಮೃದ್ಧಿ ಮರುಕಳಿಸಿದೆ ಅಂತ ಅರ್ಥ. ಹೀಗಾಗಿಯೇ ಕನಸುಗಳ ಭೂಮಿಕೆ ವಿಸ್ತಾರವಾಗಿದೆ. ಭವ್ಯವಾಗಿರುವ ಮೂಲ ಕಾಶಿ ದೇವಾಲಯ ಬಲುಬೇಗ ನಿರ್ಮಾಣಗೊಂಡರೆ ಅಚ್ಚರಿ ಪಡಬೇಡಿ!